Martin Ott Release; ಧ್ರುವ ಸರ್ಜಾ 'ಮಾರ್ಟಿನ್' ಓಟಿಟಿ ರಿಲೀಸ್ ಯಾವಾಗ? ಎಲ್ಲಿ ನೋಡಬಹುದು?
ಕನ್ನಡ ಚಿತ್ರರಂಗದ ಅತೀ ದುಬಾರಿ ಸಿನಿಮಾ 'ಮಾರ್ಟಿನ್' ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಕ್ಸಸ್ ಕಾಣುತ್ತೆ ಅನ್ನುವ ನಂಬಿಕೆ ಇತ್ತು. ದಸರಾ ಹಬ್ಬಕ್ಕೆಂದು ರಿಲೀಸ್ ಆಗಿದ್ದ ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಕಂಡಿತ್ತು. ಅತೀ ಹೆಚ್ಚು ನಿರೀಕ್ಷೆಯೊಂದಿಗೆ ತೆರೆಕಂಡಿದ್ದ ಈ ಸಿನಿಮಾ ತೆರೆಕಂಡಿತ್ತು. ಮೊದಲ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಐದನೇ ದಿನದ ವೇಳೆ ಇಳಿಕೆ ಕಾಣುವುದಕ್ಕೆ ಶುರುವಾಗಿತ್ತು.
ಧ್ರುವ ಸರ್ಜಾ ಹಾಗೂ ಎ ಪಿ ಅರ್ಜುನ್ ಕಾಂಬಿನೇಷನ್ ಇದ್ದಿದ್ದರಿಂದ ಈ ವರ್ಷ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ಅದರಲ್ಲೂ ಆರಂಭದಲ್ಲಿ ರಿಲೀಸ್ ಮಾಡಿದ್ದ ಒಂದು ಟೀಸರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲಿಂದ ನಿರೀಕ್ಷೆಗಳನ್ನು ಹುಟ್ಟಾಕುತ್ತಲೇ ಬಂದಿತ್ತು. ಅಷ್ಟಕ್ಕೂ ಈ ಸಿನಿಮಾವನ್ನು ಯಾಕೆ ಇಷ್ಟ ಪಡಲಿಲ್ಲ? ಚಿತ್ರತಂಡ ಎಲ್ಲಿ ಎಡವಿತು? ಅನ್ನೋದು ಇನ್ನೂ ಚರ್ಚೆಯಾಗುತ್ತಲೇ ಇದೆ.

'ಮಾರ್ಟಿನ್' ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡವರು ಓಟಿಟಿ ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ. ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡಿದ್ದ ಈ ಸಿನಿಮಾ ಓಟಿಟಿಯ ಯಾವ ವೇದಿಕೆಯಲ್ಲಿ ರಿಲೀಸ್ ಆಗುತ್ತೆ? ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಓಟಿಟಿಯಲ್ಲಿ 'ಮಾರ್ಟಿನ್'?
'ಮಾರ್ಟಿನ್' ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ರಿಲೀಸ್ ಮಾಡಿದ್ದು ನಿರ್ಮಾಪಕ ಉದಯ್ ಕೆ ಮೆಹ್ತಾ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ವ್ಯಾಪಾರ ಮುಗಿಸಿದ್ದರು ಅನ್ನೋ ಮಾತು ಓಡಾಡಿದ್ದವು. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ ಓಟಿಟಿ ಸೇರಿದಂತೆ ಸ್ಯಾಟಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದವು. ಜೀ 5 ಓಟಿಟಿಗೆ ವೇದಿಕೆಗೆ ಈ ಸಿನಿಮಾ ಸೇಲ್ ಆಗಿದ್ದು, ಶೀಘ್ರದಲ್ಲಿ ಮಾರ್ಟಿನ್ ರಿಲೀಸ್ ಆಗುತ್ತಿದೆ ಎನ್ನಲಾಗಿದೆ.
ಯಾವುದೇ ಹೊಸ ಸಿನಿಮಾ ರಿಲೀಸ್ ಆದರೂ, ದಿಢೀರನೇ ಓಟಿಟಿಗೆ ರಿಲೀಸ್ ಮಾಡುವುದಿಲ್ಲ. ಕನಿಷ್ಠ ಅಂದರೂ ಒಂದೂವರೆಯಿಂದ ಎರಡು ತಿಂಗಳು ಗ್ಯಾಪ್ ಕೊಟ್ಟಿ ರಿಲೀಸ್ ಮಾಡುತ್ತಾರೆ. ಸದ್ಯ ವರದಿಯಾಗಿರುವ ಪ್ರಕಾರ 'ಮಾರ್ಟಿನ್' ಸಿನಿಮಾ ಇದೇ ನವೆಂಬರ್ 23ರಿಂದ ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದು, ವೀಕ್ಷಕರು ಇಲ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಾರಾ? ಅನ್ನೋದು ಸ್ಟ್ರೀಮಿಂಗ್ ಆದ ಬಳಿಕ ಗೊತ್ತಾಗಲಿದೆ.

'ಮಾರ್ಟಿನ್' ಕಥೆಯೇನು?
ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲೆಫ್ಟಿನೆಂಟ್ ಅರ್ಜುನ್ ಸೆಕ್ಸೆನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಿಂದ ಪಾಕಿಸ್ತಾನಕ್ಕೆ ತನ್ನ ಐಡೆಂಟಿಟಿಯನ್ನು ಹುಡುಕಿಕೊಂಡು ಹೋಗುವ ಧ್ರುವ ಸರ್ಜಾಗೆ ಬ್ಲ್ಯಾಕ್ ಮಾರ್ಕೆಟ್ ಲೋಕ ತೆರೆದುಕೊಳ್ಳುತ್ತೆ. ಅಲ್ಲಿಂದ ಸಿನಿಮಾದ ಕಥೆ ಒಂದೊಂದಾಗಿಯೇ ತೆರೆದುಕೊಳ್ಳುತ್ತಾ ಹೋಗುತ್ತೆ.
ಧ್ರುವ ಸರ್ಜಾ ಎರಡು ಶೇಡ್‌ಗಳಲ್ಲಿ ಮಿಂಚಿದ್ದು ಅವರ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. ಈ ಸಿನಿಮಾಗೆ ರವಿ ಬಸ್ರುರು ಹಿನ್ನೆಲೆ ಸಂಗೀತವನ್ನು ನೀಡಿದ್ದು, ಸತ್ಯ ಹೆಗ್ಡೆ ಛಾಯಾಗ್ರಹಣವಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದ್ದು, ಓಟಿಟಿಯಲ್ಲಿ ಕ್ಲಿಕ್ ಆಗುತ್ತಾ? ಅನ್ನೋದನ್ನು ನೋಡಬೇಕಿದೆ.
Disclaimer: ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಓಟಿಟಿ ವೇದಿಕೆ ಅಧಿಕೃತವಾಗಿ ಖಚಿತ ಪಡಿಸಬೇಕಿದೆ.


Click it and Unblock the Notifications











