Martin OTT:ಧ್ರುವ ಸರ್ಜಾ ಸಿನಿಮಾ ಓಟಿಟಿ ರಿಲೀಸ್ ಯಾವಾಗ? ಎಲ್ಲಿ ನೋಡಬಹುದು?
ಧ್ರುವ ಸರ್ಜಾ ನಟಿಸಿದ 'ಮಾರ್ಟಿನ್' ಸಿನಿಮಾ ಸೆಪ್ಟೆಂಬರ್ 29ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗಿದೆ. ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಕನ್ನಡದ ಬಿಗ್ ಬಜೆಟ್ ಸಿನಿಮಾ 'ಮಾರ್ಟಿನ್' ಪಕ್ಕಾ ಆಕ್ಷನ್ ಥ್ರಿಲ್ಲರ್. ಎ ಪಿ ಅರ್ಜುನ್ ನಿರ್ದೇಶನದ ಈ ಸಿನಿಮಾ ಕಳೆದ ಎರಡು ದಿನಗಳಿಂದ ಸಖತ್ ಸದ್ದು ಮಾಡುತ್ತಿದೆ.
ದಸರಾ ಹಬ್ಬಕ್ಕೆ ರಿಲೀಸ್ ಆಗಿರುವ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಸಕ್ಸಸ್ ಕೊಡುತ್ತಾ? ಅಂತ ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಾ? ಅಂತ ಎದುರು ನೋಡುತ್ತಿದ್ದಾರೆ. ಮೊದಲ ದಿನ ಸಿನಿಮಾ ಕಲೆಕ್ಷನ್ ಉತ್ತಮವಾಗಿದೆ. ಇನ್ನು ವೀಕೆಂಡ್‌ನಲ್ಲಿ 'ಮಾರ್ಟಿನ್' ಸಿನಿಮಾದ ಕಲೆಕ್ಷನ್ ಸಖತ್ ಆಗಿ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

ಇದೇ ವೇಳೆ ಕನ್ನಡದ ಸಿನಿ ಪ್ರಿಯರು 'ಮಾರ್ಟಿನ್' ಸಿನಿಮಾ ಯಾವಾಗ ಓಟಿಟಿಗೆ ಬರಬಹುದು ಎಂದು ಕುತೂಹಲದಿಂದ ನೋಡುತ್ತಿದ್ದಾರೆ. 'ಮಾರ್ಟಿನ್' ಬಿಡುಗಡೆಗೂ ಮುನ್ನ ಡಿಜಿಟಲ್ ಹಕ್ಕುಗಳ ಮಾರಾಟ ಆಗಿದೆ. ಹಾಗಿದ್ದರೆ, 'ಮಾರ್ಟಿನ್' ಸಿನಿಮಾ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗುತ್ತೆ? ಯಾವಾಗ ರಿಲೀಸ್ ಆಗುತ್ತೆ? ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ತಿಳಿಯಲು ಮುಂದೆ ಓದಿ.
'ಮಾರ್ಟಿನ್' ಯಾವ ಓಟಿಟಿಯಲ್ಲಿ ರಿಲೀಸ್?
'ಮಾರ್ಟಿನ್' ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ ಸಿನಿಮಾ ಬಿಡುಗಡೆಗೂ ಮುನ್ನವೇ ಓಟಿಟಿ ಡೀಲ್ ಮುಗಿಸಿದ್ದಾರೆ ಎನ್ನಲಾಗಿದೆ. ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಈಗಾಗಲೇ ಸೇಲ್ ಮಾಡಲಾಗಿದೆ. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, 'ಮಾರ್ಟಿನ್' ಸಿನಿಮಾ ಒಟಿಟಿ ಹಕ್ಕು ಮಾರಾಟ ಆಗಿದೆ. ಮೂಲಗಳ ಪ್ರಕಾರ, 'ಮಾರ್ಟಿನ್' ಸಿನಿಮಾ ಜೀ ನೆಟ್‌ವರ್ಕ್‌ಗೆ ಮಾರಾಟ ಮಾಡಲಾಗಿದೆ.
'ಮಾರ್ಟಿನ್' ಸಿನಿಮಾದ ಟಿವಿ ಹಾಗೂ ಓಟಿಟಿ ಹಕ್ಕುಗಳನ್ನು ಜೀ ಖರೀದಿ ಮಾಡಿದೆ ಎನ್ನಲಾಗಿದೆ. ಥಿಯೇಟರ್‌ನಲ್ಲಿ ಪ್ರದರ್ಶನ ನಿಲ್ಲಿಸುತ್ತಿದ್ದಂತೆ 'ಮಾರ್ಟಿನ್' ಸಿನಿಮಾವನ್ನು ಜೀ 5ನಲ್ಲಿ ಬಿಡುಗಡೆ ಮಾಡಲಾಗುತ್ತೆ ಎನ್ನಲಾಗಿದೆ. ಸಾಮಾನ್ಯವಾಗಿ 6 ರಿಂದ 8 ವಾರಗಳ ಅಂತರದಲ್ಲಿ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುತ್ತವೆ. ಅದರಂತೆ ಈ ಸಿನಿಮಾ ಕೂಡ ಒಂದೂವರೆ ಎರಡು ತಿಂಗಳ ಅಂತರದಲ್ಲಿ ರಿಲೀಸ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

11 ಭಾಷೆಗಳಲ್ಲಿ 'ಮಾರ್ಟಿನ್'
'ಮಾರ್ಟಿನ್' ಸಿನಿಮಾ ಆರಂಭದ ಹಂತದಲ್ಲಿ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದೆ. ಇದರೊಂದಿಗೆ ಎರಡನೇ ಹಂತದಲ್ಲಿ ಬಂಗಾಳಿ, ಅರೇಬಿಯಾ, ಕೊರಿಯನ್, ಚೈನೀಸ್, ಸ್ಪಾನೀಶ್, ರಷ್ಯಯನ್ ಹಾಗೂ ಜಪಾನ್ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಅರ್ಜುನ್ ಸರ್ಜಾ ಹೆಣೆದಿರುವ ಕಥೆಗೆ ಎ ಪಿ ಅರ್ಜುನ್ ನಿರ್ದೇಶನ ಮಾಡಿದ್ದರು. ಉದಯ್ ಕೆ ಮೆಹ್ತಾ ನಿರ್ದೇಶಿಸಿದ ಈ ಸಿನಿಮಾವನ್ನು ಕನ್ನಡದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡಿದ್ದರೆ, ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ಡಿಸ್ಟ್ರಿಬ್ಯೂಟ್ ಮಾಡಿದೆ. ಸದ್ಯ ಕನ್ನಡದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ತೆಲುಗು ಹಾಗೂ ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕಾರಣಕ್ಕೆ ಓಟಿಟಿಯಲ್ಲಿ ಬೇಗನೇ ಸಿನಿಮಾ ರಿಲೀಸ್ ಆಗೋದು ಡೌಟ್.
Disclaimer: ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಓಟಿಟಿ ವೇದಿಕೆ ಅಧಿಕೃತವಾಗಿ ಖಚಿತ ಪಡಿಸಬೇಕಿದೆ.


Click it and Unblock the Notifications











