Dhurandhar:'ಧುರಂಧರ್ 2'ಗೂ ಮುನ್ನ ಕಟ್ ಮಾಡದ 'ಧುರಂಧರ್' ನೋಡಿ; ಎಲ್ಲಿ? ಯಾವಾಗ?
ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ 'ಧುರಂಧರ್' ಹಾಗೂ 'ಧುರಂದರ್ 2' ಓಟಿಟಿ ರಿಲೀಸ್‌ಗೆ ಪೈಪೋಟಿ ಹೆಚ್ಚಾಗಿದೆ. ಎರಡು ಓಟಿಟಿ ದೈತ್ಯ ಕಾಂಪಿಟೇಷನ್‌ಗೆ ಬಿದ್ದಿವೆ. ಒಂದ್ಕಡೆ ನೆಟ್‌ಫ್ಲಿಕ್ಸ್, ಇನ್ನೊಂದು ಕಡೆ ಜಿಯೋಹಾಟ್‌ಸ್ಟಾರ್ ಎರಡೂ ಪ್ಲಾಟ್‌ಫಾರ್ಮ್‌ಗಳು ಒಂದೇ ದಿನ 'ಧುರಂಧರ್' ಸಿನಿಮಾವನ್ನು ಸ್ಟ್ರೀಮಿಂಗ್ ಮಾಡುವುದಕ್ಕೆ ಮುಂದೆ ಬಂದಿದೆ.
ರಣ್‌ವೀರ್ ಸಿಂಗ್, ಅಕ್ಷಯ್ ಖನ್ನ, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಧುರಂಧರ್' ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. 'ಧುರಂಧರ್ 2' ಅಂತೂ ಬಾಲಿವುಡ್ ಅನ್ನು ಮತ್ತೆ ಉತ್ತುಂಗಕ್ಕೆ ಏರಿಸಿತ್ತು. ಯಾರೂ ನಿರೀಕ್ಷೆ ಮಾಡದಷ್ಟು ಯಶಸ್ಸು ಕಂಡಿರುವ ಈ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ವೇದಿಕೆ ಸಜ್ಜಾಗಿದೆ.

ಇನ್ನೇನು 'ಧುರಂಧರ್ 2' ಓಟಿಟಿಯಲ್ಲಿ ರಿಲೀಸ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಎರಡೂ ಓಟಿಟಿ ವೇದಿಕೆಗಳು ವೀಕ್ಷಕರಿಗೆ ಸರ್ಪ್ರೈಸ್ ಕೊಟ್ಟಿವೆ. 'ಧುರಂಧರ್ 2'ಗೂ ಮುನ್ನ 'ಧುರಂಧರ್' ಅನ್ ಕಟ್ ವರ್ಷನ್ ಅನ್ನು ಸ್ಟ್ರೀಮಿಂಗ್ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದೆ. ಜಿಯೋಹಾಟ್‌ಸ್ಟಾರ್ ಕೂಡ 'ಧುರಂಧರ್' ಅನ್‌ಕಟ್ ಅನ್ನು ಸ್ಟ್ರೀಮಿಂಗ್ ಮಾಡುತ್ತಿರುವುದಾಗಿ ಘೋಷಣೆ ಮಾಡಿದೆ.
ಜಿಯೋ ಸ್ಟುಡಿಯೋ, ಬಿ62 ಸ್ಟುಡಿಯೋ ಪ್ರೊಡಕ್ಷನ್ ಜೊತೆ ಆದಿತ್ಯ ಧರ್ ನಿರ್ಮಿಸಿ, ನಿರ್ದೇಶಿಸಿರುವ 'ಧುರಂಧರ್' ಮೇ 22 ರಂದು ಓಟಿಟಿಗೆ ಲಗ್ಗೆ ಇಡುತ್ತಿದೆ. ಈಗಾಗಲೇ ಓಟಿಟಿಯಲ್ಲಿ ಲಭ್ಯವಿರುವ ಸಿನಿಮಾವನ್ನು ಮತ್ಯಾಕೆ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಅದಕ್ಕೊಂದು ಕಾರಣವಿದೆ. 'ಧುರಂಧರ್' ಸಿನಿಮಾದ 'ರಾ' ಹಾಗೂ ಅನ್‌ಕಟ್ ವರ್ಷನ್ ಅನ್ನು ತನ್ನ ವೇದಿಕೆಯಲ್ಲಿ ವೀಕ್ಷಕರಿಗೆ ತೋರಿಸುವುದಕ್ಕೆ ಹೊರಟಿದೆ.
'ಧುರಂಧರ್' ಸಿನಿಮಾ ಸುಮಾರು 3 ಗಂಟೆ 34 ನಿಮಿಷಗಳಷ್ಟು ರನ್ ಟೈಮ್ ಇದೆ. ಇನ್ನು ಅನ್‌ಕಟ್ ವರ್ಷನ್ ಅಂದರೆ, ಸಿನಿಮಾ ಎಷ್ಟು ಉದ್ದ ಇರಬಹುದು? ಅನ್ನೋದು ವೀಕ್ಷಕರು ಊಹಿಸುತ್ತಿದ್ದಾರೆ. ಅನ್‌ಕಟ್ ವರ್ಷನ್ ರನ್ ಟೈಮ್ ಎಷ್ಟು ಅನ್ನೋದನ್ನು ಜಿಯೋಹಾಟ್‌ಸ್ಟಾರ್ ಇನ್ನೂ ರಿವೀಲ್ ಮಾಡಿಲ್ಲ. ಆದರೆ, ಇನ್ನೂ ರಗಡ್ ದೃಶ್ಯಗಳನ್ನು ಈ ಸಿನಿಮಾದಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. 'ಧುರಂಧರ್' ಪ್ರಪಂಚವನ್ನು ಇನ್ನೂ ಆಳವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.
ರಣ್‌ವೀರ್ ಸಿಂಗ್, ಅಕ್ಷಯ್ ಖನ್ನ ಈಗಾಗಲೇ ಥಿಯೇಟರ್‌ಗಳಲ್ಲಿ ಮೋಡಿ ಮಾಡಿದ್ದಾರೆ. ಇಬ್ಬರ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಓಟಿಟಿಯಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ? ಈಗಾಗಲೇ ಸಿನಿಮಾ ನೋಡಿರುವವರು ರಗಡ್ ದೃಶ್ಯಗಳನ್ನು ಗುರುತಿಸುತ್ತಾರಾ? ಇಲ್ಲ ಇದೇ ಮೊದಲ ಬಾರಿಗೆ ಸಿನಿಮಾ ನೋಡುತ್ತಿರುವವರಿಗೆ ಯಾವ ರೀತಿ ಅನುಭವ ನೀಡುತ್ತೆ? ಅನ್ನೋದು ಕುತೂಹಲ ಸೃಷ್ಟಿಸಿದೆ.
ಕೊಯ್‌ಮೊಯ್ ವರದಿ ಪ್ರಕಾರ, 'ಧುರಂಧರ್' ಥಿಯೇಟರ್‌ಗಳಲ್ಲಿ 1,354.84 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್‌ನಲ್ಲಿದೆ. ಆದಿತ್ಯ ಧರ್ ಅವರ ನಿರ್ದೇಶನವನ್ನು ಮೆಚ್ಚಿಕೊಂಡಿದ್ದ ಜನರು 'ಧುರಂಧರ್ 2'ಗೆ ಕಾದು ಕೂತಿದ್ದರು. ಇದೂ ಕೂಡ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದೆ. ಈಗ ಓಟಿಟಿಯಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ.
'ಧುರಂಧರ್' ಅನ್‌ಕಟ್ ವರ್ಷನ್ ಓಟಿಟಿಗೆ ಲಗ್ಗೆ ಇಡುತ್ತಿದ್ದಂತೆ 'ಧುರಂಧರ್ 2' ಓಟಿಟಿ ರಿಲೀಸ್ ಬಗ್ಗೆ ಚರ್ಚೆಯಾಗುತ್ತಿದೆ. ಈಗಾಗಲೇ ಜಿಯೋಹಾಟ್‌ಸ್ಟಾರ್ ತನ್ನ ಇನ್‌ಸ್ಟಾಂ ಪೇಜ್‌ನಲ್ಲಿ 'ಧುರಂದರ್ 2' ಓಟಿಟಿಗೂ ರಿಲೀಸ್ ಬಗ್ಗೆ ಅಪ್‌ಡೇಟ್ ಕೊಟ್ಟಿದೆ. ಮುಂದಿನ ಜೂನ್ 4 ರಂದು ಸಂಜೆ 7 ಗಂಟೆಯಿಂದ ಪ್ರೀಮಿಯರ್ ಆಗುತ್ತಿದ್ದು, ಜೂನ್ 5ರಿಂದ ಸ್ಟ್ರೀಮಿಂಗ್ ಆಗುತ್ತಿದೆ.


Click it and Unblock the Notifications
