ಓಟಿಟಿಯ ₹125 ಕೋಟಿ ಆಫರ್ ತಿರಸ್ಕರಿಸಿ ಯುಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದ ಆಮಿರ್ ಖಾನ್ ದುಡಿದಿದ್ದೆಷ್ಟು?

'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಖಾನ್ 'ಸಿತಾರೆ ಜಮೀನ್ ಪರ್' ಸಿನಿಮಾಗೆ ಕೈ ಹಾಕಿದ್ದರು. ಥಿಯೇಟರ್‌ನಲ್ಲಿ ಈ ಸಿನಿಮಾ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆಮಿರ್ ಖಾನ್‌ಗೆ 'ಸಿತಾರೆ ಜಮೀನ್ ಪರ್' ಕೈ ಹಿಡಿದಿತ್ತು. ಆದರೆ, ಹೊಸ ಹೊಸ ಸಾಹಸಗಳನ್ನು ಮಾಡುವ ಆಮಿರ್ ಖಾನ್ ಈ ಬಾರಿ ಇಂತಹದ್ದೇ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕಿದ್ದರು. ಅದು ಓಟಿಟಿಗೆ ಸಿನಿಮಾವನ್ನು ರಿಲೀಸ್ ಮಾಡದೆ ಯೂಟ್ಯೂನ್‌ನಲ್ಲಿ ಪೇ ಪರ್ ವ್ಯೂ ಆಧಾರದ ಮೇಲೆ ರಿಲೀಸ್ ಮುಂದಾಗಿದ್ದಾರೆ.

ಓಟಿಟಿಗಿಂತ ಯೂಟ್ಯೂಬ್ ನೋಡುವವರ ಸಂಖ್ಯೆ ಹೆಚ್ಚಿದ್ದು, ಓಟಿಟಿ ಆಫರ್‌ ಅನ್ನು ತಿರಸ್ಕರಿಸಿ, ಯೂಟ್ಯೂಬ್‌ನಲ್ಲಿಯೇ ರಿಲೀಸ್ ಮಾಡಿದ್ದರು. ಒಮ್ಮೆ ಈ ಸಿನಿಮಾವನ್ನು ನೋಡುವುದಕ್ಕೆ 100 ರೂಪಾಯಿ ಚಾರ್ಜ್ ಮಾಡಿದ್ದರು. ಇದಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ. ಓಟಿಟಿಗಿಂತಲೂ ಯೂಟ್ಯೂಬ್‌ನಲ್ಲಿಯೇ ಹೆಚ್ಚು ಗಳಿಸಿದರೇ? ಇದೆಲ್ಲವನ್ನು ಇತ್ತೀಚೆಗೆ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

Did Aamir Khan Succeed in Releasing Sitare Zameen Par on YouTube Against OTT Platforms

ಆಮಿರ್ ಖಾನ್ ಸಿನಿಮಾ ಸಿತಾರೆ ಜಮೀನ್ ಪರ್ ಸಿನಿಮಾವನ್ನು ಖರೀದಿ ಮಾಡುವುದಕ್ಕೆ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಮುಂದೆ ಬಂದಿದ್ದವು. ಈ ಸಿನಿಮಾವನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುವುದಕ್ಕೆ ₹125 ಕೋಟಿ ಆಫರ್ ಮಾಡಿದ್ದವು. ಆದರೆ, ಇದನ್ನು ತಿರಸ್ಕರಿಸಿ ಆಮಿರ್ ಖಾನ್ ಯೂಟ್ಯೂಬ್‌ನಲ್ಲಿ 'ಪೇ ಪರ್ ವ್ಯೂ' ಲೆಕ್ಕಾಚಾರದ ಮೇಲೆ ಅಪ್‌ಲೋಡ್ ಮಾಡಿದ್ದರು. ಆಗ ಆಮಿರ್ ಖಾನ್ ನಡೆಯನ್ನೂ ಚಿತ್ರರಂಗದವರೇ ಆಡಿಕೊಂಡಿದ್ದರು. ಈಗ ಆಮಿರ್ ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಮಾಡಿದ್ದರ ಹಿನ್ನೆಲೆ ಹಾಗೂ ಅದರಿಂದ ಗಳಿಸಿದ್ದನ್ನು ರಿವೀಲ್ ಮಾಡಿದ್ದಾರೆ.

'ಸಿತಾರೆ ಜಮೀನ್ ಪರ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಜನರು ದೊಡ್ಡ ಪ್ರಮಾಣದಲ್ಲಿ ಬಂದು ಥಿಯೇಟರ್‌ನಲ್ಲಿ ನೋಡಲಿಲ್ಲ. ಇತ್ತ ಓಟಿಟಿ ವೇದಿಕೆಗಳು ಎಂಟು ವಾರಗಳಲ್ಲಿ ಅಗ್ರಿಮೆಂಟ್‌ ಮುಂದಾಗಿದ್ದವು. ಈ ಟ್ರೆಂಡ್ ಅನ್ನು ಮುರಿಯಬೇಕು ಅಂತ ಆಮಿರ್ ಖಾನ್ ನಿರ್ಧರಿಸಿದ್ದರು. 100 ರೂಪಾಯಿಗೆ ಯೂಟ್ಯೂಬ್‌ನಲ್ಲಿ ಸಿನಿಮಾ ತೋರಿಸುವುದಕ್ಕೆ ನಿರ್ಧರಿಸಿದ್ದರು. ಆ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಆಮಿರ್ ಖಾನ್ ಪ್ರಕಾರ ಮೌತ್ ಪಬ್ಲಿಸಿಟಿಯಿಂದ ಸಿಗುತ್ತಿದ್ದ 'ಸಿತಾರೆ ಜಮೀನ್ ಪರ್' ಹಾಗೂ ಕಿರಣ್ ರಾವ್ ನಿರ್ದೇಶಿಸಿದ 'ಲಾಪತಾ ಲೇಡೀಸ್' ಅಂತಹ ಸಿನಿಮಾಗಳನ್ನು ಜನರು ಥಿಯೇಟರ್‌ನಲ್ಲಿ ನೋಡುತ್ತಿಲ್ಲ. ಓಟಿಟಿಗೆ ಬರುವವರೆಗೂ ಕಾಯುತ್ತಿದ್ದಾರೆ. ಕೋವಿಡ್ ಬಳಿಕ ಇಂತಹದ್ದೊಂದು ಪದ್ಧತಿ ಹುಟ್ಟಿಕೊಂಡಿದೆ. ಇತ್ತ ಓಟಿಟಿ ವೇದಿಕೆಗಳು ಥಿಯೇಟರ್‌ನಲ್ಲಿ ರಿಲೀಸ್ ಆದ ಎಂಟು ವಾರಕ್ಕೆ ಸಿನಿಮಾ ಸ್ಟ್ರೀಮಿಂಗ್ ಮಾಡುವುದಕ್ಕೆ ಒತ್ತಡ ಹಾಕುತ್ತಿವೆ. ಇದು ಆಮಿರ್ ಖಾನ್ ಅನ್ನು ಕಾಡುತ್ತಿತ್ತು. " ಈ ಕ್ಷಣಕ್ಕೆ ಇದರ ಅವಶ್ಯಕತೆಯಿದೆ ಅಂತ ಅನಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಇದು ಸಿನಿಮಾ ಮಂದಿಯನ್ನು ಕಾಡುತ್ತೆ" ಎಂದು ಆಮಿರ್ ಹೇಳಿದ್ದಾರೆ.

ಆಮಿರ್ ಖಾನ್‌ಗೆ ಯೂಟ್ಯೂಬ್‌ನಿಂದ ಲಾಭ ಬಂತಾ? ಈ ಪ್ರಶ್ನೆಗೂ ಉತ್ತರಿಸಿದ್ದಾರೆ. ಓಟಿಟಿಯಲ್ಲಿ ಸಿಗುವ ಹಣಕ್ಕೂ ಯೂಟ್ಯೂಬ್‌ನಿಂದ ಬರುವ ಹಣಕ್ಕೂ ಸಾಕಷ್ಟು ಅಂತರವಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಯೂಟ್ಯೂಬ್‌ನಲ್ಲಿ ದುಡ್ಡು ಕೊಟ್ಟು ಈ ಸಿನಿಮಾ ನೋಡುವವರ ಸಂಖ್ಯೆ 20ಕ್ಕೂ ಅಧಿಕ ಪಟ್ಟು ಹೆಚ್ಚಾಗಿದೆ ಎಂದೂ ಹೇಳಿದ್ದಾರೆ. ಆದರೆ, ಇದು ₹125 ಕೋಟಿಗಿಂತ ಬಹಳ ದೂರವಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಇದರಿಂದ ಹಣ ಬರುತ್ತೆ ಅಂತಲೂ ಹೇಳಿದ್ದಾರೆ. ಇನ್ನೊಂದು ಕಡೆ ಈಗ ಓಟಿಟಿಗೆ ಸಿನಿಮಾ ಕೊಡುವುದಕ್ಕೆ ಈಗ ರೆಡಿಯಿರುವುದಾಗಿಯೂ ಹೇಳಿಕೊಂಡಿದ್ದಾರೆ.

More from Filmibeat

English summary
Aamir Khan surprised fans by releasing Sitare Zameen Par on YouTube instead of OTT platforms. Did this bold move succeed against streaming giants? Check here for full details on the film’s release and audience response.
Read more about: aamir khan youtube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X