ಸಮಂತಾ-ವರುಣ್ ನಡುವೆ ಕಿಸ್ಸಿಂಗ್, ಹಸಿಬಿಸಿ ದೃಶ್ಯ? ಅಕ್ಕಿನೇನಿ ಅಭಿಮಾನಿಗಳ ಎದೆಯಲ್ಲಿ ಡವಡವ.. ಮ್ಯಾಟರ್ ಏನು?

ಸಮಂತಾ ಸಿನಿಮಾ ಜರ್ನಿಯನ್ನು ನೋಡಿದವರಿಗೆ ಆಕೆ ಹಸಿಬಿಸಿ ದೃಶ್ಯಗಳಲ್ಲಿ ತೀರಾ ಅಪರೂಪ. ಕಿಸ್ಸಿಂಗ್ ಸೀನ್, ಬೆಡ್ ರೂಮ್‌ ಸೀನ್‌ಗಳಲ್ಲಿ ಕಂಡಿದ್ದೇ ಇಲ್ಲ. ಆದ್ರೀಗ ವೆಬ್ ಸೀರಿಸ್‌ವೊಂದರಲ್ಲಿ ಸಮಂತಾ ಪ್ರಯಣದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಕಳೆದೆರಡು ದಿನಗಳಿಂದ ಹರಿದಾಡುತ್ತಿರುವ ವದಂತಿ.

'ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದರು. ಈಗ ಮತ್ತೆ ಅದೇ ನಿರ್ದೇಶಕರು 'ಸಿಟಾಡೆಲ್' ವೆಬ್ ಸೀರಿಸ್‌ಗೆ ಮುಂದಾಗಿದ್ದಾರೆ. ಇದರಲ್ಲಿ ಕಿಸ್ಸಿಂಗ್ ಹಾಗೂ ಪ್ರಯಣದ ದೃಶ್ಯಗಳಲ್ಲಿ ನಟಿಸಲು ಸ್ಯಾಮ್ ಒಪ್ಪಿಗೆ ಸೂಚಿಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

Did Samantha agreed to lip lock and intimate scenes with Varun Dhawan in Indian version of Citadel?

ಸಮಂತಾ ಹಾಗೂ ವರುಣ್ ಧವನ್ ಕಿಸ್ಸಿಂಗ್ ಹಾಗೂ ಪ್ರಯಣದ ದೃಶ್ಯಗಳ ಬಗ್ಗೆ ಈಗಾಗಲೇ ಬಗೆ ಬಗೆಯ ವರದಿಗಳು ಬಂದಿವೆ. ಈ ಎದ್ದಿರೋ ಪ್ರಶ್ನೆ ಏನಂದ್ರೆ, ಈ ವೆಬ್‌ ಸೀರಿಸ್‌ನಲ್ಲಿ ಇಬ್ಬರ ನಡುವೆ ಕಿಸ್ಸಿಂಗ್ ಹಾಗೂ ಪ್ರಣಯದ ದೃಶ್ಯಗಳು ಇರುತ್ತಾ? ನೆಟ್ಟಿಗರಿಂದ ಮತ್ತೆ ಟೀಕೆಗೆ ಒಳಗಾಗುತ್ತಾರಾ? ಅಸಲಿ ಮ್ಯಾಟರ್ ಏನು ಅಂತ ತಿಳಿಯೋಕೆ ಮುಂದೆ ಓದಿ.

ಏನಿದು ಸಮಂತಾ ಕಿಸ್ಸಿಂಗ್ ಮ್ಯಾಟರ್?

'ಸಿಟಾಡೆಲ್' ಇಂಗ್ಲಿಷ್ ವರ್ಷನ್ ಈಗಾಗಲೇ ಅಮೆಜಾನ್ ಪ್ರೈಂನಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ರಿಚರ್ಡ್ ನಡುವೆ ಕಿಸ್ಸಿಂಗ್ ಹಾಗೂ ಹಸಿಬಿಸಿ ದೃಶ್ಯಗಳಿವೆ. ಈಗ ಇದೇ ಟೈಟಲ್‌ ಇಟ್ಟು ಭಾರತದಲ್ಲೂ ವೆಬ್ ಸೀರಿಸ್ ರೆಡಿಯಾಗುತ್ತಿದೆ. 'ಫ್ಯಾಮಿಲಿ ಮ್ಯಾನ್' ನಿರ್ದೇಶಕರು ಈ ಸೀರಿಸ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಸೀರಿಸ್‌ನಲ್ಲಿ ಸಮಂತಾ ರುತ್ ಪ್ರಭು ಹಾಗೂ ಬಾಲಿವುಡ್ ನಟ ವರುಣ್ ಧವನ್ ನಟಿಸುತ್ತಿದ್ದಾರೆ. ಸದ್ಯ ಈ ವೆಬ್ ಸೀರೀಸ್‌ ಶೂಟಿಂಗ್ ನಡೆಯುತ್ತಿದೆ. ಇದರಲ್ಲೂ ಪ್ರಿಯಾಂಕಾ-ರಿಚರ್ಡ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳಂತೆ, ಸಮಂತಾ-ವರುಣ್ ಧವನ್ ನಡುವೆ ಇರುತ್ತೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸದ್ಯ ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಇದೇ ಮ್ಯಾಟರ್ ಚರ್ಚೆಯಾಗುತ್ತಿದೆ.

Did Samantha agreed to lip lock and intimate scenes with Varun Dhawan in Indian version of Citadel?

ಸಮಂತಾ ಬೋಲ್ಡ್ ಸೀನ್‌ಗಳಿಗೆ ವಿರೋಧ

ಈ ಹಿಂದೆ 'ಫ್ಯಾಮಿಲಿ ಮ್ಯಾನ್ 2' ವೆಬ್‌ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆಗಿನ್ನೂ ಸಮಂತಾ ಮಾಜಿ ಪತಿ ನಾಗಚೈತನ್ಯರಿಂದ ವಿಚ್ಛೇದನ ಪಡೆದಿರಲಿಲ್ಲ. ಆ ದೃಶ್ಯಗಳೇ ಇಬ್ಬರನ್ನು ಬೇರೆ ಮಾಡಿದ್ದು ಅನ್ನೋ ಸುದ್ದಿಗಳೂ ಓಡಾಡಿತ್ತು. ಈ ದೃಶ್ಯಗಳಿಗೆ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಅದೇ 'ಫ್ಯಾಮಿಲಿ ಮ್ಯಾನ್ 2' ಸೀರಿಸ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ 'ಸಿಟಾಡೆಲ್‌' ಭಾರತೀಯ ವರ್ಷನ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸೀರಿಸ್‌ನಲ್ಲಿ ಸಮಂತಾ, ಪ್ರಿಯಾಂಕಾ ಚೋಪ್ರಾರಂತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಈ ಸುದ್ದಿ ಹೊರಬಂದಲ್ಲಿಂದ ಅಕ್ಕಿನೇನಿ ಕುಟುಂಬದ ಅಭಿಮಾನಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ. ಕೆಲವರ ಕಣ್ಣುಗಳು ಕೆಂಪಾಗಿವೆ.

ಏನಂತಿದೆ ವೆಬ್ ಸೀರಿಸ್ ಟೀಮ್ ?

ಸಮಂತಾ ಹಾಗೂ ವರುಣ್ ಧವನ್ ನಡುವೆ ಕಿಸ್ಸಿಂಗ್ ದೃಶ್ಯಗಳು ಇರುತ್ತವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇನ್ನೊಂದು ಕಡೆ ಸಮಂತಾ ವೆಬ್ ಸೀರಿಸ್, ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವ 'ಸಿಟಾಡೆಲ್' ರಿಮೇಕ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಯೊಬ್ಬರು ಸಮಂತಾಗೆ "ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವ ಸಿಟಾಡೆಲ್‌ಗೂ, ನಿಮ್ಮ ಸಿಟಾಡೆಲ್‌ಗೂ ಏನಾದರೂ ಸಂಬಂಧವಿದೆಯೇ?" ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಮಂತಾ " ಇಲ್ಲಾ ಇದು ರಿಮೇಕ್ ಅಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಕಿಸ್ಸಿಂಗ್ ಹಾಗೂ ಬೆಡ್ ರೂಮ್ ದೃಶ್ಯಗಳು ಇರುತ್ತವೆಯೇ? ಅನ್ನೋ ಪ್ರಶ್ನೆಗೆ ಉತ್ತರ ಇನ್ನೂ ಸಿಗಬೇಕಿದೆ.

More from Filmibeat

English summary
Did Samantha agreed to lip lock and intimate scenes with Varun Dhawan in Indian version of Citadel?, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X