ಕೊರಿಯನ್ ಡ್ರಾಮಾಗಳನ್ನು ಹುಚ್ಚರಂತೆ ಇಷ್ಟಪಡೋರಿಗೆ ಸವಾಲು: ಈ 8 ಹಾರರ್ ಕಾಮಿಡಿ ಡ್ರಾಮಗಳನ್ನು ನೋಡಿದ್ದೀರಾ?

ಕೊರಿಯನ್ ಡ್ರಾಮಾಗಳು ಈಗಂತೂ ಯುವ ಪೀಳಿಗೆ ಹಾಗೂ ಮಹಿಳೆಯ ಕ್ರೇಜ್ ಆಗಿಬಿಟ್ಟಿದೆ. ಭಾಷೆ ಅರ್ಥ ಆಗುತ್ತೋ ಇಲ್ವವೋ ಗೊತ್ತಿಲ್ಲ. ಆದರೆ, ಕೆ ಡ್ರಾಮಾಗಳು ಅಂದರೆ, ಪ್ರಾಣವನ್ನೇ ಬಿಡುತ್ತಾರೆ. ಕೊರಿಯನ್ ಸಿನಿಮಾಗಳು, ಸೀರಿಸ್‌ಗಳು ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆಯುತ್ತಿವೆ. ಅದರಲ್ಲೂ ಮಹಿಳೆಯರಿಗೆ ಕೆ-ಡ್ರಾಮಾಗಳು ಹುಚ್ಚು ಹಿಡಿಸಿ ಬಿಟ್ಟಿವೆ. ಲವ್ ಸ್ಟೋರಿ, ಕಾಮಿಡಿ, ಫಾಂಟಸಿ ಕಥೆಗಳನ್ನು ಸಂಸಾರವನ್ನೇ ಮರೆತು ನೋಡುವಷ್ಟು ಬ್ಯುಸಿಯಾಗಿದ್ದಾರೆ.

ನೀವೂ ಕೊರಿಯನ್ ಸೀರಿಸ್ ಅನ್ನು ನೋಡುವುದಕ್ಕೆ ಆರಂಭಿಸಿದ್ದರೆ, ಲವ್ ಸ್ಟೋರಿಯನ್ನು ಬಿಟ್ಟು ಹಾರರ್ ಕಾಮಿಡಿಯನ್ನು ಇಷ್ಟ ಪಡುವವರಾಗಿದ್ದರೆ, ಇಲ್ಲಿವೆ ಕೆಲವು ಕಂಟೆಂಟ್. ಹಾರರ್ ಜೊತೆಗೆ ಕಾಮಿಡಿ ಎಲಿಮೆಂಟ್ಸ್‌ ಇರುವ ಕೆಲವು ಕೆ-ಡ್ರಾಮಾಗಳ ಪಟ್ಟಿ ಇಲ್ಲಿದೆ. ಇವು ವೀಕ್ಷಕರಲ್ಲಿ ಕುತೂಹಲವನ್ನು ಮೂಡಿಸುವುದರಲ್ಲಿ ಖಂಡಿತಾ ಹಿಂದೆ ಬೀಳುವುದಿಲ್ಲ. ಆ 8 ಕೆ-ಡ್ರಾಮಾಗಳ ಬಗ್ಗೆ ಡಿಟೈಲ್ಸ್ ಇಲ್ಲಿವೆ.

Discover the eight best horror-comedy K-dramas that blend laughs with scares perfect for fans

ಬ್ರಿಂಗ್ ಇಟ್ ಆನ್, ಘೋಸ್ಟ್: ಇದು ಹ್ಯುನ್ ಜಿ ಎಂಬ 19 ವರ್ಷದ ಯುವತಿಯ ಹಿನ್ನೆಲೆಯುಳ್ಳ ಕಥೆ. ಹ್ಯುನ್ ಜಿ ಸತ್ತ ಬಳಿಕ ಅವಳು ಆತ್ಮವಾಗಿ ಬದಲಾಗುತ್ತಾಳೆ. ಆ ನಂತರ ಬೊಂಗ್ ಪಾಲ್ ಎಂಬ ವ್ಯಕ್ತಿ ದೆವ್ವ ಬಿಡಿಸಲು ಮುಂದಾಗುತ್ತಾನೆ. ಆ ಮೇಲೆ ಏನೆಲ್ಲ ಆಗುತ್ತೆ? ಅತೃಪ್ತ ಪ್ರೇತಾತ್ಮಗಳಿಗೆ ಮುಕ್ತಿ ನೀಡುವುದಕ್ಕೆ ಇವರು ಎಷ್ಟೆಲ್ಲ ಕಷ್ಟ ಪಡುತ್ತಾರೆ ಅನ್ನೋದನ್ನು 'ಬ್ರಿಂಗ್ ಇಟ್ ಆನ್, ಘೋಸ್ಟ್' ನಲ್ಲಿ ನೋಡಬಹುದು.

ಎ ಕೊರಿಯನ್ ಒಡಿಸ್ಸಿ: ಹಾರರ್ ಕಾಮಿಡಿಯನ್ನು ಇಷ್ಟ ಪಡುವವರಿಗೆ 'ಎ ಕೊರಿಯನ್ ಒಡಿಸ್ಸಿ' ಕಿಕ್ ಕೊಡಬಹುದು. ಭೂಮಿ ಮೇಲೆ ಅಜೇಯನಾಗುವುದಕ್ಕೆ ಬಂದಿದ್ದ ಓ-ಗಾಂಗ್ ಎಂಬುವವನ ಸುತ್ತ ಸುತ್ತುತ್ತದೆ. ಆತ ಒಮ್ಮೆ ದೆವ್ವಗಳನ್ನು ನೋಡಬಲ್ಲ ಮಹಿಳೆಯೊಬ್ಬಳನ್ನು ಭೇಟಿಯಾಗುತ್ತಾನೆ. ಆಗ ಸಿಯೋನ್ ಮಿ ಎಂಬ ಮಹಿಳೆ ಓ-ಗಾಂಗ್‌ನನ್ನು ಅವಮಾನ ಮಾಡಿದಾಗ ಕಥೆ ತಿರುವುಗಳನ್ನು ಪಡೆದುಕೊಳ್ಳುತ್ತೆ.

ಸೆಲ್ ಯುವರ್ ಹಾಂಟೆಡ್ ಹೌಸ್: ಹಾರರ್-ಕಾಮಿಡಿ ಜಾನರ್‌ನಲ್ಲಿ ಮನರಂಜನೆಯನ್ನು ನೀಡುವುದರಲ್ಲಿ ಕೊರಿಯನ್‌ಗಳು ಎಕ್ಸ್‌ಪರ್ಟ್. ಇದರಲ್ಲಿ ಹಾಸ್ಯ ಹಾಗೂ ಹಾರರ್ ಎರಡನ್ನೂ ಅದ್ಭುತವಾಗಿ ಸೇರಿಸಿ ನಿರ್ಮಿಸಲಾಗಿದ್ದು, ಇದು ಕೊರಿಯಾದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ. ಇದರಲ್ಲಿ ನಟಿಸಿದ ಪ್ರಮುಖ ಪಾತ್ರಧಾರಿಗಳು ಕೂಡ ಮೆಚ್ಚುಗೆ ಗಳಿಸಿದ್ದರು.

ಜಾಂಬಿ ಡಿಟೆಕ್ಟಿವ್: ಜಾಂಬಿ ಕತೆಗಳು ವಿದೇಶಿದಲ್ಲಿ ಕ್ರೇಜ್ ಅನ್ನು ಪಡೆದುಕೊಂಡಿವೆ. ಅದರಲ್ಲೂ ಹಾಲಿವುಡ್‌ ಸಿನಿಮಾಗಳಲ್ಲಿಯೇ ಹೆಚ್ಚು ನೋಡಬಹುದು. ಆದರೆ, ಕೊರಿಯನ್‌ ಫಿಲ್ಮ್‌ ಮೇಕರ್ಸ್ ತಾವೇನು ಕಮ್ಮಿಯಿಲ್ಲ ಎಂದು ತೋರಿಸಿದ್ದಾರೆ. ಶಿಮ್ ಜೇ-ಹ್ಯುನ್ ನಿರ್ದೇಶಿಸಿದ, 'ಜಾಂಬಿ ಡಿಟೆಕ್ಟಿವ್' ಸಿನಿಮಾ ಪ್ರಿಯರಿಗೆ ಕಿಕ್ ಕೊಟ್ಟಿದೆ. ನಿಗೂಢವಾಗಿ ಸಾವನ್ನಪ್ಪಿದ ಮಿನ್-ಹೋ (ಚೋಯ್) ಎಂಬಾತ ಜಾಂಬಿಯಾಗಿ ಬದಲಾಗುತ್ತಾನೆ. ತನ್ನ ಹಿಂದಿನ ಜನ್ಮದ ರಹಸ್ಯವನ್ನು ಭೇದಿಸುವುದಕ್ಕೆ ಆತ ಮನುಷ್ಯನಂತೆ ವರ್ತಿಸುವುದಕ್ಕೆ ಆರಂಭಿಸುತ್ತಾನೆ. ಅದಕ್ಕಾಗಿ ತರಬೇತಿಯನ್ನು ಪಡೆಯುತ್ತಾನೆ. ಆಮೇಲೆ ಏನೆಲ್ಲ ಆಗುತ್ತೆ ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ.

ಹೋಟೆಲ್ ಡೆಲ್ ಲೂನಾ: 2019ರಲ್ಲಿ ರಿಲೀಸ್ ಆಗಿದ್ದ ಈ ಕೆ ಡ್ರಾಮಾ ಅತಿ ಹೆಚ್ಚು ಮಂದಿ ವೀಕ್ಷನೆ ಮಾಡಿವೆ ಎನ್ನಲಾಗಿದೆ. ಇಲ್ಲಿ ದೆವ್ವಗಳು ಮತ್ತು ಮನುಷ್ಯರು ಒಟ್ಟಿಗೆ ವಾಸಿಸುವ ಒಂದು ಅಲೌಕಿಕ ಹೋಟೆಲ್‌ನ ಕಥೆಯನ್ನು 'ಹೋಟೆಲ್ ಡೆಲ್ ಲೂನಾ' ಹೊಂದಿದೆ.

ದಿ ಘೋಸ್ಟ್ ಡಿಟೆಕ್ಟಿವ್: ಖಾಸಗಿ ಪತ್ತೇದಾರ ಮತ್ತು ಆತನ ಸಹಾಯಕಿಯ ಸುತ್ತ ನಡೆಯುವ ಕಥೆಯೇ ದಿ ಘೋಸ್ಟ್ ಡಿಟೆಕ್ಟಿವ್. ಆ ಸಹಾಯಕಿಯು ತನ್ನ ಸಹೋದರಿಯ ಸಾವಿನ ಸೀಕ್ರೆಟ್ ಅನ್ನು ಬಯಲಿಗೆ ಎಳೆಯುವುದನ್ನು ಪ್ರಯತ್ನಿಸುತ್ತಿರುತ್ತಾಳೆ.

ದಿ ಅನ್‌ಕ್ಯಾನಿ ಕೌಂಟರ್: ಇದೂ ಕೂಡ ಹಾರರ್ ಕಮ್ ಕಾಮಿಡಿ ಕೆ ಡ್ರಾಮಾ. ಹಾರರ್, ಕಾಮಿಡಿ ಜೊತೆ ಅಲೌಕಿಕ ವಿಷಯಗಳನ್ನು ಇಷ್ಟಪಡುವವರಿಗೆ ಈ ಕೆ-ಡ್ರಾಮಾ ಇಷ್ಟ ಆಗುತ್ತೆ. ಒಂದವೇ ಅಂಟಿಸಿ ಬಿಡೋಣ.

ಮಾಸ್ಟರ್ಸ್ ಸನ್: ತೇ ಗಾಂಗ್ ಸಿಲ್ ಎಂಬ ಮಹಿಳೆ ದೆವ್ವಗಳನ್ನು ನೋಡುವ ಸಾಮರ್ಥ್ಯವನ್ನು ಹೊಂದಿರುತ್ತಾಳೆ. ಆದರೆ ಮುಂದಿನ ದಿನಗಳಲ್ಲಿ ಸಹಾಯ ಮಾಡುವಂತೆ ಇಷ್ಟ ಬೇಡಿಕೆಗಳೇ ಆಕೆಯ ಜೀವನವನ್ನು ದುಸ್ತರ ಮಾಡಿಬಿಡುತ್ತವೆ. ನಂತರ ಆಕೆ ಜೊ ಜೂಂಗ್ ವಾನ್ ಎಂಬಾತನನ್ನು ಭೇಟಿಯಾಗುತ್ತಾಳೆ ಮುಂದೇನಾಗುತ್ತೆ ಅನ್ನೋದೇ ಕಥೆ.

More from Filmibeat

English summary
Discover the eight best horror-comedy K-dramas that blend laughs with scares, perfect for fans.
Read more about: korea series drama
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X