Diwali 2024: ಬೆಳಕಿನ ಹಬ್ಬಕ್ಕೆ ಓಟಿಟಿಯಲ್ಲಿ ವೀಕ್ಷಿಸಬಹುದಾದ ಕನ್ನಡ ಸಿನಿಮಾಗಳ ಪಟ್ಟಿ; ಇದರಲ್ಲಿ ನಿಮ್ಮ ಫೇವರಿಟ್ ಯಾವುದು?

ಕನ್ನಡ ಚಿತ್ರರಂಗದಲ್ಲಿ ಇದೂವರೆಗೂ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗಿವೆ. ಅವರು ಥಿಯೇಟರ್‌ನಲ್ಲಿ ಅಷ್ಟೇ ಅಲ್ಲ. ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಅಮೆಜಾನ್ ಪ್ರೈಂ ವಿಡಿಯೋ, ಡಿಸ್ನಿ ಹಾಟ್‌ಸ್ಟಾರ್, ಜೀ 5, ಜೀ ಸಿನಿಮಾಗಳಲ್ಲಿ ಕಾಂಪಿಟೇಷನ್‌ಗೆ ಬಿದ್ದು ಸಿನಿಮಾವನ್ನು ಸ್ಟ್ರೀಮಿಂಗ್ ಮಾಡುತ್ತಿವೆ. ಈ ಸಿನಿಮಾಗಳನ್ನು ಕನ್ನಡಿಗರು ಇನ್ನೂ ನೋಡಿಲ್ಲ ಅಂತಾದರೆ, ಇದು ಒಳ್ಳೆಯ ಸಿನಿಮಾ.

ಬೆಳಕಿನ ಹಬ್ಬ ದೀಪಾವಳಿಯಂದು ಮನೆಯಲ್ಲೇ ಇರಬೇಕಾ? ಹೊರಗಡೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲವೇ. ಹಾಗಿದ್ದರೆ, ಓಟಿಟಿಯಲ್ಲಿ ನೋಡಬಹುದಾದ ಕನ್ನಡದ ನೂರಾರು ಸಿನಿಮಾಗಳು ಓಟಿಟಿ ಪ್ಲಾಟ್‌ ಫಾರ್ಮ್‌ನಲ್ಲಿ ಲಭ್ಯವಿದೆ. ಬೆಳಕಿನ ಹಬ್ಬವನ್ನು ಮನೆಯಲ್ಲೇ ಆಚರಿಸಬೇಕು ಅಂದುಕೊಂಡವರಿಗೆ ಬೆಸ್ಟ್ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

ಓಟಿಟಿಯಲ್ಲಿ ಇರುವ ಕನ್ನಡದ ಬೆಸ್ಟ್ ಬ್ಲಾಕ್‌ಬಸ್ಟರ್ ಸಿನಿಮಾಗಳು, ಕಲ್ಟ್ ಕ್ಲಾಸಿಕ್ಸ್, ಇನ್ನೂ ನೋಡಿರದ ಮಾಸ್ಟರ್ ಪೀಸ್‌ಗಳು ಲಭ್ಯವಿದೆ. ಅವುಗಳಲ್ಲಿ ಬೆಸ್ಟ್ 5 ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಬಹುದು. ಹಾಗಿದ್ದರೆ, ಯಾವ್ಯಾವ ಸಿನಿಮಾಗಳು, ಯಾವ್ಯಾವ ಓಟಿಟಿ ವೇದಿಕೆಯಲ್ಲಿ ಲಭ್ಯವಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

Diwali 2024 Best 5 Kannada movies to watch on Prime Video Disney Hotstar Zee 5 Jio Cinema

ವಿಲೇಜ್ ಕಾಮಿಡಿ-ತಿಥಿ

ಯಾವುದೇ ಸೂಪರ್‌ಸ್ಟಾರ್ ಇಲ್ಲ. ಅನುಭವಿ ಕಲಾವಿದರಿಲ್ಲ. ಇಲ್ಲಿ ಹಳ್ಳಿಯ ಜನರೇ ಕಲಾವಿದರು. ಅವರದ್ದೇ ಭಾಷೆಯಲ್ಲಿ, ಅವರದ್ದೇ ನಟನೆಯಲ್ಲಿ ಅವರದ್ದೇ ಕಥೆಯನ್ನು ಹೇಳಿದ್ದ ಸಿನಿಮಾ 'ತಿಥಿ'. ಈ ಸಿನಿಮಾ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಮೆಚ್ಚುಗೆ ಪಡೆದಿತ್ತು. ಆಮಿರ್ ಖಾನ್, ಕಿರಣ್ ರಾವ್ ಅಂತಹ ದಿಗ್ಗಜರ ಮನಗೆದ್ದಿದ್ದ ಸಿನಿಮಾ. ಈ ವಿಲೇಜ್ ಕಾಮಿಡಿಯನ್ನು ಬಹುತೇಕ ಮಂದಿ ಥಿಯೇಟರ್‌ನಲ್ಲಿ ನೋಡಿರಲಿಕ್ಕಿಲ್ಲ. ಹಬ್ಬದ ಸಂಭ್ರಮದಲ್ಲಿ ಈ ವಿಡಂಬನಾತ್ಮಕ ಕಾಮಿಡಿ ಸಿನಿಮಾ ನೋಡಲು ಬಯಸಿದ್ದಲ್ಲಿ ಯೂಟ್ಯೂಬ್‌ನಲ್ಲಿ ಲಭ್ಯವಿದೆ.

Diwali 2024 Best 5 Kannada movies to watch on Prime Video Disney Hotstar Zee 5 Jio Cinema

'ಬಘೀರ' ಮೂಡ್ನಲ್ಲಿ 'ಉಗ್ರಂ'

ಪ್ರಶಾಂತ್ ನೀಲ್ ನಿರ್ದೇಶಿಸಿದ 'ಉಗ್ರಂ' ಸಿನಿಮಾ ಬಗ್ಗೆ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. 'ಕೆಜಿಎಫ್', 'ಸಲಾರ್‌'ಗಿಂತಲೂ 'ಉಗ್ರಂ' ಸಿನಿಮಾ ಬಗ್ಗೆ ಜನರು ಈಗ ಮಾತಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ 'ಬಘೀರ' ಸಿನಿಮಾ ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ಶ್ರೀಮುರಳಿ ನಟಿಸಿದ್ದ 'ಉಗ್ರಂ' ಸಿನಿಮಾವನ್ನು ಜೀ 5ನಲ್ಲಿ ನೋಡಬಹುದು. 'ಬಘೀರ' ಸಿನಿಮಾದ ಮೂಡ್‌ನಲ್ಲಿ ಇರುವವರು ಈ ವಾರ ಥಿಯೇಟರ್‌ಗೆ ಹೋಗಲು ಸಾಧ್ಯವಿಲ್ಲ ಎಂತಾದರೆ, 'ಉಗ್ರಂ' ಓಟಿಟಿಯಲ್ಲಿ ಲಭ್ಯವಿದೆ.

Diwali 2024 Best 5 Kannada movies to watch on Prime Video Disney Hotstar Zee 5 Jio Cinema

'ಉಳಿದವರು ಕಂಡಂತೆ'

ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ 'ಉಳಿದವರು ಕಂಡಂತೆ' ಕನ್ನಡದ ಬೆಸ್ಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ ನಟಿಸಿರುವ ಈ ಸಿನಿಮಾವನ್ನು ಜನರು ಥಿಯೇಟರ್‌ನಲ್ಲಿ ನೋಡಿದ್ದು ಕಡಿಮೆ. ಆದರೆ, ಸಿನಿಮಾ ತೆರೆಕಂಡ ಕೆಲವು ವರ್ಷಗಳ ಬಳಿಕ ಪ್ರೇಕ್ಷಕರ ಫೇವರಿಟ್ ಸಿನಿಮಾ ಆಗಿತ್ತು. ಮತ್ತೆ ಈಗ ಸಿನಿಮಾ ನೋಡಬೇಕು ಅನ್ನುವವರು 'ಉಳಿದವರು ಕಂಡಂತೆ' ಯನ್ನು ನೋಡಬಹುದು. ಈ ಸಿನಿಮಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ.

Diwali 2024 Best 5 Kannada movies to watch on Prime Video Disney Hotstar Zee 5 Jio Cinema

'ಭೈರತಿ ರಣಗಲ್' ಮೂಡಿನಲ್ಲಿ 'ಮಫ್ತಿ'

ಶಿವರಾಜ್‌ಕುಮಾರ್ ನಟಿಸಿರುವ 'ಭೈರತಿ ರಣಗಲ್' ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಈ ಗುಂಗಿನಲ್ಲಿ ಇರುವವರಿಗೆ ಶಿವಣ್ಣ ಹಾಗೂ ಶ್ರೀಮುರಳಿ ನಟಿಸಿರುವ ಸಿನಿಮಾ 'ಮಫ್ತಿ' ನೋಡಬೇಕು ಅಂತ ಅನಿಸಬಹುದು. ಈ ಸಿನಿಮಾ ನೋಡುಬೇಕು ಅನ್ನುವವರಿಗೆ 'ಮಫ್ತಿ' ಜೀ 5ನಲ್ಲಿ ಲಭ್ಯವಿದೆ. ಮತ್ತೆ ಶಿವಣ್ಣನ ಖದರ್ ಅನ್ನು ನೋಡಿ ಎಂಜಾಯ್ ಮಾಡಬಹುದು.

Diwali 2024 Best 5 Kannada movies to watch on Prime Video Disney Hotstar Zee 5 Jio Cinema

ಯುವಕರ ಫೇವರಿಟ್ 'ಕಿರಿಕ್ ಪಾರ್ಟಿ'

ಇನ್ನು ಯುವಕರನ್ನು ಸೆಳೆದ ಸಿನಿಮಾ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ಓಟಿಟಿಯಲ್ಲಿ ಲಭ್ಯವಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ರಕ್ಷಿತ್, ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಯುವಕರು ಲೈಕ್ಸ್ ಮಾಡಿದ ಈ ಸಿನಿಮಾ ಜಿಯೋ ಸಿನಿಮಾದಲ್ಲಿ ಲಭ್ಯವಿದೆ.

ಈ ಐದು ಸಿನಿಮಾಗಳೊಂದಿಗೆ ಇನ್ನೂ ಕೆಲವು ಓಟಿಟಿಯಲ್ಲಿ ಲಭ್ಯವಿದೆ. 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ & ಬಿ' ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ. 'ಕಾಂತಾರ' ನೆಟ್‌ಫ್ಲಿಕ್ಸ್ ಹಾಗೂ ಪ್ರೈಂ ವಿಡಿಯೋದಲ್ಲಿ ಲಭ್ಯ. ಕೆಜಿಎಫ್ ಚಾಪ್ಟರ್ 1 & 2 ಅಮೆಜಾನ್ ಪ್ರೈಂ ವಿಡಿಯೋದಲ್ಲಿದ್ದರೆ, 'ಗರುಡ ಗಮನ ವೃಷಭ ವಾಹನ' ಜೀ 5ನಲ್ಲಿ, 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಡಿಸ್ನಿಹಾಟ್‌ಸ್ಟಾರ್‌ನಲ್ಲಿ ನೋಡಬಹುದು.

More from Filmibeat

English summary
Diwali 2024: Best 5 Kannada movies to watch on Prime Video, Disney Hotstar, Zee 5, Jio Cinema;
Read more about: kannada movies ott filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X