30 ವರ್ಷದ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ್ದ ಶಕೆರೆ ಖಲೀಲಿ ಕೊಲೆ ಪ್ರಕರಣ: ಪ್ರೈಂ ವಿಡಿಯೋದಲ್ಲಿ ರಹಸ್ಯ ಬಯಲು
ಸುಮಾರು 30 ವರ್ಷಗಳ ಹಿಂದೆ ಶಕೆರೆ ಖಲೀಲಿ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಶ್ರೀಮಂತ ಮನೆತನ ಶಕೆರೆ ಖಲೀಲಿ ರಿಯಲ್ ಎಸ್ಟೇಟ್ ಡೆವೆಲಪರ್ ಆಗಿದ್ದರು. ಜೊತೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. 1991ರಲ್ಲಿ ಒಂದು ದಿನ ಈಕೆ ಇದ್ದಕ್ಕಿದ್ದ ಹಾಗೆ ಕಾಣೆಯಾಗುತ್ತಾರೆ. ಅಲ್ಲಿಂದ ತನಿಖೆ ಆರಂಭಗೊಂಡು 3 ವರ್ಷಗಳ ಬಳಿಕ ಆರೋಪಿ ಸಿಕ್ಕಿಬೀಳುತ್ತಾನೆ.
ಶಕೆರೆ ಖಲೀಲಿ ಕಾಣೆಯಾದಲ್ಲಿಂದ ಆಕೆಯ ಎರಡನೇ ಗಂಡ ಸ್ವಾಮಿ ಶ್ರದ್ಧಾನಂದನ ಮೇಲೆ ಅನುಮಾನದ ಹುತ್ತ ಬೆಳೆದುಕೊಂಡಿತ್ತು. ಕರ್ನಾಟಕ ಪೊಲೀಸರು ಸುಮಾರು ಮೂರು ವರ್ಷಗಳ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಿದ್ದರು. ಇದೇ ಪ್ರಕರಣವನ್ನು ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 21ರಿಂದ ಪ್ರಸಾರ ಮಾಡಲಾಗುತ್ತಿದೆ.
ಭಾರತದಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಹೊಂದಿರೋ ಅಮೆಜಾನ್ ಪ್ರೈಮ್ ವಿಡಿಯೋ ಇದೇ ಮೊದಲ ಬಾರಿಗೆ ಅಪರಾಧಗಳ ಕುರಿತಾದ ಡಾಕ್ಯೂಮೆಂಟರಿ ಸಿರೀಸ್ ಅನ್ನು ಪ್ರಸಾರ ಮಾಡುತ್ತಿದೆ. ಸ್ಕ್ರಿಪ್ಟ್ ರಹಿತ, ತನಿಖೆಯನ್ನೇ ಆಧರಿಸಿದ ಈ ಸಿರೀಸ್ 90ರ ದಶಕದಲ್ಲಿ ನಡೆದ ಶೆಕೆರೆ ಖಲೀಲಿ ಅವರ ಭಯಾನಕ ಕೊಲೆಯ ಸಂಪೂರ್ಣ ವಿವರವನ್ನು ಹೊತ್ತು ಬರುತ್ತಿದೆ.
ಅಮೆಜಾನ್ ಪ್ರೈಂನಲ್ಲಿ ಇದೇ ಶಕೆರೆ ಖಲೀಲಿ ಕೊಲೆ ಪ್ರಕರಣದ ಡಾಕ್ಯು-ಸಿರೀಸ್ 'ಡ್ಯಾನ್ಸಿಂಗ್ ಆನ್ ದಿ ಗ್ರೇವ್' ಪ್ರಸಾರ ಮಾಡುವುದಾಗಿ ಅನೌನ್ಸ್ ಮಾಡಿದೆ. ಈ ಸಿರೀಸ್ ಅನ್ನು ಪ್ಯಾಟ್ರಿಕ್ ಗ್ರಹಮ್ ಬರೆದು ನಿರ್ದೇಶನ ಮಾಡಿದ್ದಾರೆ. ಕನಿಶ್ಕ್ ಸಿಂಗ್ ದೇವ್ ಈ ಸಿರೀಸ್‌ನಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದಾರೆ.

ಅಂದ್ಹಾಗೆ ಇದೇ ಏಪ್ರಿಲ್ 21 ರಿಂದ ಭಾರತ ಸೇರಿದಂತೆ ಸುಮಾರು 240 ದೇಶಗಳಲ್ಲಿ 'ಡ್ಯಾನ್ಸಿಂಗ್ ಆನ್ ದಿ ಗ್ರೇವ್' ಪ್ರೀಮಿಯರ್ ಆಗಲಿದೆ. ಇದೇ ಮೊದಲ ಬಾರಿಗೆ ಭಾರತದ ಸ್ಥಳೀಯ ಮಟ್ಟದ ಕಂಟೆಂಟ್ ಅನ್ನು ಪ್ರೈಂ ವಿಡಿಯೋ ಡಾಕ್ಯೂಮೆಂಟರಿ ಸಿರೀಸ್ ಪ್ರಕಾರ ಪ್ರೀಮಿಯರ್ ಮಾಡುವುದಕ್ಕೆ ಮುಂದಾಗಿದೆ.
ಈ ಸಿರೀಸ್‌ನಲ್ಲಿ ಕೆಲವು ಹಳೆಯ ವಿಡಿಯೋ, ಹೊಸ ಕ್ಲಿಪ್ಪಿಂಗ್‌ಗಳು, ಸಂದರ್ಶನಗಳು 'ಡ್ಯಾನ್ಸಿಂಗ್ ಆನ್ ದಿ ಗ್ರೇವ್'ನಲ್ಲಿ ಪ್ರಸಾರ ಆಗಲಿದೆ. ಶಕೆರೆ ಖಲೀಲಿ ಹಠಾತ್ ಕಣ್ಮರೆಯಾಗಿದ್ದು, ಬಳಿಕ ಭೀಕರ ಕೊಲೆಯಾಗಿದ ವಿವರಗಳನ್ನು ಈ ಸಿರೀಸ್ ಬಿಚ್ಚಿಡಲಿದೆ. ಈ ಘಟನೆಯ ಸುತ್ತಲಿನ ಪ್ರಮುಖ ವ್ಯಕ್ತಿಗಳ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಸೆರೆಹಿಡಿಯಲಾಗಿದೆ. ಈ ಕೊಲೆ ಪ್ರಕರಣ ತನಿಖೆಯ ರೂಪದಲ್ಲಿ ಸುಮಾರು 4 ಭಾಗಗಳಲ್ಲಿ ರಿಲೀಸ್ ಆಗಲಿದೆ.
ಇದು ಕೊಲೆ ಪ್ರಕರಣ 30 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಡ್ಯಾನ್ಸಿಂಗ್ ಆನ್ ದಿ ಗ್ರೇವ್' ಸಿರೀಸ್‌ನಲ್ಲಿ ಆರೋಪಿಯ ದೃಶ್ಯಗಳು ಹಾಗೂ ಕೆಲವು ಇಂಟ್ರೆಸ್ಟಿಂಗ್ ವಿವರಗಳನ್ನು ಸೇರಿಸಲಾಗಿದೆ. ಕೆಲವು ಬಾರಿ ವಾಸ್ತವವು ಕಥೆಗಿಂತ ವಿಚಿತ್ರವಾಗಿರುತ್ತವೆ. ಈ ಡಾಕ್ಯೂಮೆಂಟರಿಯಲ್ಲಿ ಕೊಲೆಯ ಪ್ರಕರಣದ ಸುತ್ತಮುತ್ತ ಮಜಲುಗಳನ್ನು ಅನಾವರಣ ಮಾಡಲಾಗಿದೆ. ಸಾಮಾಜಿಕ ವ್ಯವಸ್ಥೆ, ಸಿದ್ಧಾಂತ ಮತ್ತು ಅಂದಿನ ಜನರ ಮನಸ್ಥಿತಿಯನ್ನೂ ಹೇಳಲಾಗಿದೆ.
" ಡಾಕ್ಯೂಮೆಂಟರಿ ಸಿರೀಸ್ ಬಗ್ಗೆ ಜನರಲ್ಲಿ ಆಸಕ್ತಿಯಿದೆ. ಅದಲ್ಲೂ ವಿಶೇಷವಾಗಿ ಅಪರಾಧ ಜಗತ್ತಿನಲ್ಲಿ ರಹಸ್ಯಗಳನ್ನು ತಿಳಿದುಕೊಳ್ಳುವ ಕುತೂಹಲ ಅವರಲ್ಲಿದೆ. ಭಾರತದಲ್ಲಿ ಸತ್ಯ ಘಟನೆಯನ್ನು ಆಧರಿಸಿದ ಅಪರಾಧದ ತನಿಖೆಯನ್ನು ಜನರ ಮುಂದಿಡುವುದು. ಡ್ಯಾನ್ಸಿಂಗ್ ಆನ್ ದಿ ಗ್ರೇವ್ ಇಂತಹದ್ದೇ ಒಂದು ಪ್ರಯತ್ನ. ಇದನ್ನು ನಾವು ಜನರ ಮುಂದಿಡಲು ಉತ್ಸುಕರಾಗಿದ್ದೇವೆ" ಎಂದು ಪ್ರೈಮ್ ವೀಡಿಯೋದ ಇಂಡಿಯಾ ಒರಿಜಿನಲ್ಸ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಹೇಳಿದ್ದಾರೆ.
"ಈ ಡಾಕ್ಯು ಸಿರೀಸ್ ನಿರ್ಮಾಣ ಮಾಡಿದ್ದೇ ಸಖತ್ ಇಂಟ್ರೆಸ್ಟಿಂಗ್. ಇದರಲ್ಲಿ ವಿವರವಾದ ಮತ್ತು ಸಮಗ್ರವಾದ ಸಂಶೋಧನೆ ಇದೆ. ಈ ಕೊಲೆ ಪ್ರಕರಣವನ್ನು ತನಿಖೆ ಮಾಡಿ ನಿರ್ಮಾಣ ಮಾಡಲಾಗಿದೆ. ಇಂಡಿಯಾ ಟು ಡೇ ಒರಿಜಿನಲ್ಸ್ ಪ್ರೊಡಕ್ಷನ್ ಜೊತೆಗೆ ಸೇರಿಕೊಂಡಿದ್ದಕ್ಕೆ ನಮಗೆ ಖುಷಿಯಿದೆ. 'ಡ್ಯಾನ್ಸಿಂಗ್ ಆನ್ ದಿ ಗ್ರೇವ್' ಮೂಲಕ ಒಬ್ಬರೂ ಒಂದೇ ಧ್ಯೇಯದಿಂದ ಕೆಲಸ ಮಾಡಿದ್ದೇವೆ." ಎಂದು ಅಪರ್ಣಾ ಪುರೋಹಿತ್ ಹೇಳಿದ್ದಾರೆ.
ಹೈ ಪ್ರೊಫೈಲ್ ಮತ್ತು ಶ್ರೀಮಂತ ಮನೆತನದ ಶಕೆರೆ ಖಲೀಲಿ ಕೊಲೆಯ ಕುರಿತ ಸಿರೀಸ್ 4 ಭಾಗಗಳಲ್ಲಿ ಪ್ರಸಾರ ಆಗುತ್ತಿದೆ. 'ಡ್ಯಾನ್ಸಿಂಗ್ ಆನ್ ದಿ ಗ್ರೇವ್' ಈಗಾಗಲೇ ಗಮನ ಸೆಳೆದಿದ್ದು, ಇದನ್ನು ಇಂಡಿಯಾ ಟುಡೇ ಒರಿಜಿನಲ್ಸ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಪ್ಯಾಟ್ರಿಕ್ ಗ್ರಹಮ್ ನಿರ್ದೇಶಿಸಿದ್ದಾರೆ. ಭಾರತ ಹಾಗೂ 240 ದೇಶಗಲ್ಲಿ ಏಪ್ರಿಲ್ 21 ರಿಂದ ಪ್ರದರ್ಶನಗೊಳ್ಳಲಿದೆ.


Click it and Unblock the Notifications











