ಜೂನ್ ತಿಂಗಳಲ್ಲಿ ಈ ಸೌತ್ ಇಂಡಿಯನ್ ಸಿನಿಮಾ, ವೆಬ್‌ ಸೀರಿಸ್‌ಗಳನ್ನು ನೋಡಿ; ಎಲ್ಲಿ? ಯಾವಾಗ? ಇಲ್ಲಿದೆ ಡಿಟೈಲ್ಸ್

ಓಟಿಟಿ ವೀಕ್ಷಕರಿಗೆ ವಾರಕ್ಕೊಂದಿಷ್ಟು ಸಿನಿಮಾಗಳು ಸಿಕ್ಕೇ ಸಿಗುತ್ತವೆ. ಓಟಿಟಿ ವೇದಿಕೆಗಳು ಹೊಸ ಸರಕುಗಳನ್ನು ತೆಗೆದುಕೊಂಡು ಬರುತ್ತಲೇ ಇರುತ್ತವೆ. ಅದರಲ್ಲೂ ಜಿಯೋ ಹಾಟ್‌ಸ್ಟಾರ್‌ನಂತಹ ಓಟಿಟಿ ವೇದಿಕೆಗಳು ಜೂನ್‌ ತಿಂಗಳಲ್ಲಿ ಅದ್ಭುತ ಕಂಟೆಂಟ್‌ಗಳನ್ನು ವೀಕ್ಷಕರ ಮುಂದೆ ಇಡುತ್ತಿದೆ. ಈ ತಿಂಗಳು ಭರಪೂರ ಮನರಂಜನೆ ನೀಡುವುದಕ್ಕೆ ಮುಂದಾಗಿದೆ.

ಜೂನ್ 2026ರ ಜೂನ್ ತಿಂಗಳು ದಕ್ಷಿಣ ಭಾರತದ ಸಿನಿಪ್ರಿಯರಿಗೆ ಜಿಯೋಹಾಟ್‌ಸ್ಟಾರ್‌ನಲ್ಲಿ ಭರಪೂರ ಮನರಂಜನೆಯನ್ನು ಹೊತ್ತು ತಂದಿದೆ. ಡ್ರಾಮಾ, ಕಾಮಿಡಿ, ಸಸ್ಪೆನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ ಕಥೆಗಳನ್ನು ವೀಕ್ಷಕರಿಗೆ ತೋರಿಸುವುದಕ್ಕೆ ಮುಂದಾಗಿದೆ. ವೀಕೆಂಡ್‌ನಲ್ಲಿ ಮನೆ ಮಂದಿಯೆಲ್ಲ ಒಟ್ಟಿಗೆ ಕೂತು ನೋಡುವುದಕ್ಕೆ ಸೂಕ್ತವಾದ ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳ ಪಟ್ಟಿ ಇಲ್ಲಿದೆ.

Dridam to Lingam June 2026 South Indian entertainment for fans on JioHotstar

1. ದೃಢಂ (Dridam)-12 ಜೂನ್ 2026

ಭಾಷೆ: ಮಲಯಾಳಂ (ಕ್ರೈಮ್ ಥ್ರಿಲ್ಲರ್ )
ಸ್ಟಾರ್‌ಕಾಸ್ಟ್: ಶೇನ್ ನಿಗಮ್, ದಿನೇಶ್ ಪ್ರಭಾಕರ್, ಕೃಷ್ಣ ಪ್ರಭಾ, ಮ್ಯಾಥ್ಯೂ ವರ್ಗೀಸ್ ಮತ್ತು ಸಾನಿಯಾ ಫಾತಿಮಾ.

ಸ್ಟೋರಿ:'ದೃಢಂ' ಇದೊಂದು ಇನ್ವೆಸ್ಟಿಗೇಟಿವ್ ಸ್ಟೋರಿ ಹೊಂದಿರುವ ಮಲಯಾಳಂ ಸಿನಿಮಾ. ತನ್ನ ಮೊದಲ ಪೋಸ್ಟಿಂಗ್‌ನಲ್ಲಿಯೇ ಯುವ ಪೊಲೀಸ್ ಅಧಿಕಾರಿ ಅಪರಾಧ ಹಾಗೂ ರಹಸ್ಯಗಳ ಬಲೆಯಲ್ಲಿ ಸಿಕ್ಕಿಕೊಳ್ಳುತ್ತಾನೆ ಎಂಬುವುದೇ ಈ ಸಿನಿಮಾದ ಕಥೆ. ಸಖತ್ ಟ್ವಿಸ್ಟ್‌ಗಳಿರುವ ಈ ಸಿನಿಮಾ 'ದೃಢಂ' ಜೂನ್ 12 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

2. ಕೆನಾಥ ಕಾಣೋಮ್ (Kenatha Kaanom) - 15 ಜೂನ್ 2026

ಭಾಷೆ: ತಮಿಳು (ಕಾಮಿಡಿ-ಡ್ರಾಮಾ)
ಸ್ಟಾರ್‌ಕಾಸ್ಟ್: ಯೋಗಿ ಬಾಬು, ಲವ್ಲಿನ್ ಚಂದ್ರಶೇಖರ್, ರೈಚಲ್ ರೆಬೆಕ್ಕಾ ಮತ್ತು ಜಾರ್ಜ್ ಮರ್ಯಾನ್.

ಸ್ಟೋರಿ: 'ಕೆನಾಥ ಕಾಣೋಮ್' ತಮಿಳಿನ ಹಾಸ್ಯ ನಟ ಯೋಗಿ ಬಾಬು ನಟಿಸಿರುವ ಹಾಸ್ಯಮಯ ಸಿನಿಮಾ. ತಮಿಳುನಾಡಿನ ಗ್ರಾಮೀಣ ಭಾಗದ ಹಿನ್ನೆಲೆಯನ್ನು ಹೊಂದಿರುವ ತಮಿಳು ಸಿನಿಮಾವಿದು. ಬರಗಾಲ ಪೀಡಿತ ಹಳ್ಳಿಯೊಂದರಲ್ಲಿ ನೀರಿನ ಹುಡುಕಾಟ ಹೇಗೆ ಅನಿರೀಕ್ಷಿತ ಆಲೋಚನೆ ಮಾಡುವಂತೆ ಮಾಡುತ್ತದೆ. ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತೆ ಎಂಬುದನ್ನು ಈ ಸಿನಿಮಾದಲ್ಲಿ ಹಾಸ್ಯಭರಿತವಾಗಿ ತೋರಿಸಲಾಗಿದೆ. ನೈಜ ಕಥೆಗೆ ವಿಡಂಬನೆ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಸೇರಿಸಲಾಗಿದೆ. ಈ ಸಿನಿಮಾ ಜೂನ್ 15 ರಂದು ಪ್ರೀಮಿಯರ್ ಆಗಲಿದೆ.

3. ಸೇವ್ ದಿ ಟೈಗರ್ಸ್-ಸೀಸನ್ 3 (Save The Tigers Season 3) - 19 ಜೂನ್ 2026

ಭಾಷೆ: ತೆಲುಗು (ಕಾಮಿಡಿ-ಡ್ರಾಮಾ ವೆಬ್ ಸೀರಿಸ್)
ಸ್ಟಾರ್‌ಕಾಸ್ಟ್: ಪ್ರಿಯದರ್ಶಿ ಪುಲಿಕೊಂಡ, ಅಭಿನವ್ ಗೋಮಟಂ, ಕೃಷ್ಣ ಚೈತನ್ಯ, ಜೋರ್ದಾರ್ ಸುಜಾತಾ, ಪಾವನಿ ಗಂಗಿರೆಡ್ಡಿ, ದೇವಯಾನಿ ಶರ್ಮಾ ಮತ್ತು ವೆನ್ನೆಲ ಕಿಶೋರ್.

ಸ್ಟೋರಿ: 'ಸೇವ್ ದಿ ಟೈಗರ್ಸ್' ವೆಬ್ ಸೀರಿಸ್‌ನ 3ನೇ ಸೀಸನ್ ಇದೇ ಜೂನ್ 19ರಂದು ಸ್ಟ್ರೀಮಿಂಗ್ ಆಗಲಿದೆ. ವೈವಾಹಿಕ ಜೀವನದ ಏರಿಳಿತಗಳು ಮತ್ತು ದೈನಂದಿನ ಗೊಂದಲಗಳನ್ನು ಎದುರಿಸುವ ಮೂವರು ವಿವಾಹಿತ ಸ್ನೇಹಿತರ ಮೋಜಿನ ಪ್ರಯಾಣ ಈ ಸೀಸನ್‌ ನೋಡಬಹುದಾಗಿದೆ. ತೆಲುಗಿನ ಹಾಸ್ಯ ನಟ ವೆನ್ನೆಲ ಕಿಶೋರ್ 3ನೇ ಸೀಸನ್‌ಗೆ ಸೇರ್ಪಡೆಯಾಗಿದ್ದಾರೆ. ಹಾಸ್ಯ ಮತ್ತು ಕೌಟುಂಬಿಕ ಸನ್ನಿವೇಶಗಳ ಮಿಶ್ರಣವಿರುವ ಈ ಸೀರಿಸ್ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

4. 'ಠುಕ್ರ ಕೆ ಮೇರಾ ಪ್ಯಾರ್'- ಸೀಸನ್ 2 (Thukra Ke Mera Pyaar Season 2) - 19 ಜೂನ್ 2026

ಭಾಷೆ: ಹಿಂದಿ (ರೋಮ್ಯಾಂಟಿಕ್ ಡ್ರಾಮಾ ವೆಬ್ ಸೀರಿಸ್)
ಸ್ಟಾರ್‌ಕಾಸ್ಟ್: ಸಂಚಿತಾ ಬಶು, ಧವಳ್ ಠಾಕೂರ್, ಅನಿರುದ್ಧ್ ದವೆ, ಪಲಕ್ ಜೈನ್ ಮತ್ತು ಪುನೀತ್ ಸಿಂಗ್.

ಸ್ಟೋರಿ: 'ಠುಕ್ರ ಕೆ ಮೇರಾ ಪ್ಯಾರ್' ಈ ಹಿಂದಿ ವೆಬ್‌ ಸೀರಿಸ್ ಈ ಬಾರಿ ಪ್ರೀತಿ, ದ್ರೋಹ ಮತ್ತು ಸೇಡಿನ ಕಥೆಯೊಂದಿಗೆ ಮತ್ತೆ ಮರಳುತ್ತಿದೆ. ಈ ರೋಮ್ಯಾಂಟಿಕ್ ಡ್ರಾಮಾದ 2ನೇ ಸೀಸನ್ ಮತ್ತಷ್ಟು ರೋಮಾಂಚಕ ಎಂದು ಹೇಳಲಾಗಿದೆ. ಭೂತಕಾಲದ ಪ್ರೀತಿ ಹೇಗೆ ಅಧಿಕಾರದ ಸಂಘರ್ಷ ಮತ್ತು ರಾಜಕೀಯದ ತಿರುವುಗಳಾಗಿ ಬದಲಾಗುತ್ತೆ ಎಂಬುದನ್ನು ಈ ಸೀಸನ್‌ನಲ್ಲಿ ತೋರಿಸಲಾಗಿದೆ. ಜೂನ್ 19 ರಂದು ಈ ವೆಬ್ ಸೀರಿಸ್ ಬಿಡುಗಡಯಾಗಲಿದೆ.

5. ಲಿಂಗಂ (Lingam) - 26 ಜೂನ್ 2026

ಭಾಷೆ: ತಮಿಳು (ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್)
ಸ್ಟಾರ್‌ಕಾಸ್ಟ್: ಕತಿರ್, ದಿವ್ಯಾ ಭಾರತಿ, ಪೂರ್ಣಿಮಾ ರವಿ, ಸತ್ಯ ಮತ್ತು ಬೋಸ್ ವೆಂಕಟ್.

ಸ್ಟೋರಿ: 'ಲಿಂಗಂ' ಇದು ತಮಿಳಿನ ವೆಬ್ ಸೀರಿಸ್. ಆಕ್ಷನ್ ಮತ್ತು ಎಮೋಷನ್‌ಗಳಿಂದ ಕೂಡಿದ ಈ ವೆಬ್ ಸೀರಿಸ್, ಸುಳ್ಳು ಅಪರಾಧದ ಆರೋಪಕ್ಕೆ ಒಳಗಾದ ಯುವ ಕಬಡ್ಡಿ ಆಟಗಾರನೊಬ್ಬನ ಜೀವನ ಹೇಗೆ ಕತ್ತಲೆಯತ್ತ ತಿರುಗುತ್ತದೆ ಎಂಬುವುದನ್ನು ತೋರಿಸಲಾಗಿದೆ. ಸಸ್ಪೆನ್ಸ್, ರಗಡ್ ಆಗಿ ಕಥೆ ಹೇಳುವ ಶೈಲಿ ಹಾಗೂ ಪವರ್‌ಫುಲ್ ಅಭಿನಯ ಹೊಂದಿರುವ 'ಲಿಂಗಂ' ಜೂನ್ 26 ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

English summary
Dridam to Lingam June 2026 South Indian entertainment for fans on Jio Hotstar. This month’s drama, humour, thrill subjects to lined up.
Read more about: movie web series bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X