ಓಟಿಟಿಯಲ್ಲಿ ರಿಲೀಸ್ ಆಗೇ ಬಿಡ್ತು 'ಮಿರ್ಜಾಪುರ್ ಸೀಸನ್ 3'; ಈ ವೆಬ್ ಸೀರಿಸ್ ಅನ್ನು ಯಾಕೆ ನೋಡ್ಬೇಕು?

ಓಟಿಟಿ ಪ್ರಿಯರು ಕಾತುರದಿಂದ ಕಾದು ಕೂತಿರುವ ವೆಬ್ ಸೀರಿಸ್ 'ಮಿರ್ಜಾಪುರ್ ಸೀಸನ್ 3'. ಈ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್‌ ಕಳೆದ ಎರಡೂ ಸೀಸನ್‌ಗೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಸೀಸನ್ 3 ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದ ತಂಡ ಇಂದು (ಜುಲೈ 5) ಈ ವೆಬ್ ಸೀರಿಸ್ ಅನ್ನು ರಿಲೀಸ್ ಮಾಡಿದೆ.

2018ರಲ್ಲಿ 'ಮಿರ್ಜಾಪುರ್' ಮೊದಲ ಸೀಸನ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿತ್ತು. ಬಾಲಿವುಡ್‌ನ ಜನಪ್ರಿಯರ ನಟರಾದ ಪಂಕಜ್ ತ್ರಿಪಾಠಿ, ಅಲಿ ಫಜಲ್ ಈ ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು. ಆದರೆ, ಮಿರ್ಜಾಪುರ್ ಸೀಸನ್ 2ನಲ್ಲಿ ಕೆಲವರು ಪ್ರಮುಖ ಪಾತ್ರಗಳನ್ನು ಸಾಯಿಸಲಾಗಿತ್ತು. ಈ ಕಾರಣಕ್ಕೆ ಮೂರನೇ ಸೀಸನ್‌ನಲ್ಲಿ ಕಥೆ ಹೇಗೆ ಸಾಗುತ್ತೆ ಅನ್ನೋದು ಕುತೂಹಲ ಓಟಿಟಿ ಪ್ರಿಯರಲ್ಲಿ ಇದೆ. ಅದಕ್ಕೀಗ ತೆರೆಬಿದ್ದಿದೆ. ಹಾಗಿದ್ದರೆ, ಈ ವೆಬ್ ಸೀರಿಸ್‌ನಲ್ಲಿ ಯಾರೆಲ್ಲ ಇದ್ದಾರೆ? ಮೂರನೇ ಸೀಸನ್‌ನ ಹೈಲೈಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Mirzapur seaon 3 Amazon prime release

'ಮಿರ್ಜಾಪುರ್' ವೆಬ್ ಸೀರಿಸ್ ಉತ್ತರ ಪ್ರದೇಶದ ಭೂಗತ ಲೋಕದ ಚಿತ್ರಣವನ್ನು ಬಿಚ್ಚಿಟ್ಟಿತ್ತು. ಈ ವೆಬ್ ಸೀರಿಸ್‌ನ ಮೊದಲ ಎರಡೂ ಸೀರಿಸ್‌ಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ಪವರ್‌ಗಾಗಿ ಹೋರಾಟ, ಅಲ್ಲಿನ ಅಪರಾಧಗಳು, ಮಾಫಿಯಾ ಲೋಕವನ್ನು ತೋರಿಸಲಾಗಿತ್ತು. ಈ ವೆಬ್ ಸೀರಿಸ್‌ನ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ನಟಿಸುತ್ತಿದ್ದಾರೆ. ಕಳೆದ ಎರಡು ಸೀಸನ್‌ಗಳಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಮೂರನೇ ಸೀಸನ್‌ನಲ್ಲೂ ಅದು ಮುಂದುವರೆದಿದೆ.

'ಮಿರ್ಜಾಪುರ್' ಸೀಸನ್ 2 ನಲ್ಲಿ ಕೆಲವು ಪಾತ್ರಗಳಿಗೆ ಸರ್ಜರಿ ಮಾಡಲಾಗಿತ್ತು. ಈ ವೆಬ್‌ ಸೀರಿಸ್‌ನ ಮತ್ತೊಂದು ಪ್ರಮುಖ ಪಾತ್ರ ಮುನ್ನ ತ್ರಿಪಾಠಿಯನ್ನು ಕೊನೆಯಲ್ಲಿ ಸಾಯಿಸಲಾಗಿತ್ತು. ಹೀಗಾಗಿ ಗ್ಯಾಂಗ್‌ಗಳ ನಡುವಿನ ದ್ವೇಷ ಹೇಗೆ ಮುಂದುವರೆಯುತ್ತೆ ಅನ್ನುವ ಕುತೂಹಲ ಓಟಿಟಿ ಪ್ರಿಯರಲ್ಲಿ ಇತ್ತು. ಅದಕ್ಕೀಗ 'ಮಿರ್ಜಾಪುರ್ 3' ತೆರೆ ಎಳೆದಿದೆ.
'ಮಿರ್ಜಾಪುರ 3' ವೆಬ್ ಸೀರಿಸ್‌ನ ಲೀಡ್ ರೋಲ್‌ನಲ್ಲಿ ನಟಿಸಿರುವ ಅಲಿ ಫಜಲ್ ಇಲ್ಲಿ ಗುಡ್ಡು ಪಂಡಿತ್ ಆಗಿ ಮುಂದುವರೆದಿದ್ದಾರೆ. ಹಾಗೇ ಬೀನಾ ತ್ರಿಪಾಠಿ ಪಾತ್ರದಲ್ಲಿ ರಸಿಕಾ ದುಗಲ್ ಪಾತ್ರವನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

ಈ ಸೀರಿಸ್‌ನಲ್ಲಿ ವಿಜಯ್ ವರ್ಮಾ, ಶ್ವೇತಾ ತ್ರಿಪಾಠಿ ಶರ್ಮಾ, ಹರ್ಷಿತಾ ಗೌರ್, ಪ್ರಿಯಾಂಶು ಪೈನ್ಯುಲ್ಲಿ, ರಾಜೇಶ್, ಇಶಾ ತಲ್ವಾರ್, ಅಂಜುಮ್ ಶರ್ಮಾ, ಶೀಬಾ ಚಡ್ಡಾ ಸೇರಿದಂತೆ ಹಲವು ಪ್ರಮುಖ ಪಾತ್ರಗಳಿವೆ. ಅಲ್ಲದೆ ಮೂರನೇ ಸೀಸನ್‌ನಲ್ಲಿ ಇನ್ನೂ ಹಲವು ಹೊಸ ಪಾತ್ರಗಳನ್ನು ಸೇರಿಸಲಾಗಿದೆ. ವಿಶೇಷ ಅಂದರೆ, ಮತ್ತೊಂದು ಜನಪ್ರಿಯ ವೆಬ್ ಸೀರಿಸ್ 'ಪಂಚಾಯತ್'ನ ಹೀರೊ ಜಿತೇಂದ್ರ ಕುಮಾರ್ ಈ ಸೀರಿಸ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದೆರಡು ಸೀರಿಸ್‌ಗಳಿಗೆ ಸಿಕ್ಕಿರುವ ಜನ ಮನ್ನಣೆಯಿಂದ 'ಮಿರ್ಜಾಪುರ್ 3' ಮೇಲೂ ನಿರೀಕ್ಷೆಗಳು ಹೆಚ್ಚಿತ್ತು. ಹೀಗಾಗಿ ಪ್ರೊಡಕ್ಷನ್ ಹೆಚ್ಚು ಮಹತ್ವನ್ನು ನೀಡಲಾಗಿದೆ. ಪ್ರತಿಯೊಂದು ಎಪಿಸೋಡ್ 45 ನಿಮಿಷಗಳ ಆಸು ಪಾಸಿನಲ್ಲಿದ್ದು, ವೀಕ್ಷಕರಿಗೆ ಮನರಂಜನೆ ನೀಡುವುದಕ್ಕೆ ಶತ ಪ್ರಯತ್ನ ಮಾಡಲಾಗಿದೆ. ಈ ಸೀರಿಸ್ ಅನ್ನು ಗುರುಮೀತ್ ಸಿಂಗ್ ಹಾಗೂ ಆನಂದ್ ಐಯ್ಯರ್ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Famous ott show Mirzapur season 3 released in amazon prime video Cast Plot and other details
Read more about: ott web series ಓಟಿಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X