Ganesh Chaturthi 2025: ಮನೆಗೆ ಬಂದ ಗಣೇಶನೊಂದಿಗೆ ಕೂತು ವಿಘ್ನ ನಿವಾರಕನ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಿ
ಮತ್ತೊಮ್ಮೆ ಗಣೇಶ್ ಹಬ್ಬ ಬಂದಿದೆ. ಇಡೀ ದೇಶಾದಾದ್ಯಂತ ಗೌರಿ-ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅದರಲ್ಲೂ ಗಣೇಶ ಹಬ್ಬ ಅಂದರೆ ಮನೆಯಲ್ಲಿ ಇರುವ ಮಕ್ಕಳಿಗಂತೂ ಅದೇನೋ ಸಂಭ್ರಮ. ಇನ್ನು ಮನೆಗೆ ಬಂದ ಗಣೇಶನಿಗೆ ಪೂಜೆ-ಪುನಸ್ಕಾರಗಳು, ಇಷ್ಟದ ತಿಂಡಿ-ತಿನಿಸುಗಳನ್ನು ಮಾಡಿ ಆಚರಣೆ ಮಾಡುತ್ತಾರೆ. ಹಬ್ಬದ ಮೂಡ್ನಲ್ಲಿ ಇರುವವರು ಮಕ್ಕಳ ಫೇವರಿಟ್ ಗಣೇಶನ ಕುರಿತಾದ ಸಿನಿಮಾ ಹಾಗೂ ಶೋಗಳನ್ನು ಓಟಿಟಿಯಲ್ಲಿ ನೋಡಬಹುದು.
ಮಕ್ಕಳಿಗೆ ಗಣೇಶನ ಕುರಿತ ಕತೆಯನ್ನು ಹೇಳುವುದಕ್ಕೆ, ತೋರಿಸುವುದಕ್ಕೆ ಇದು ಒಳ್ಳೆಯ ಸಮಯ. ಗಣೇಶ ಹಬ್ಬದ ಮೂಡಿನಲ್ಲಿರುವ ಮಕ್ಕಳು ಕೂಡ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಬೇರೆ ಬೇರೆ ಓಟಿಟಿ ವೇದಿಕೆಗಳಲ್ಲಿ ಲಭ್ಯವಿರುವ ಗಣೇಶನ ಕುರಿತ ಸಿನಿಮಾ ಹಾಗೂ ಶೋಗಳ ಲಿಸ್ಟ್ ಇಲ್ಲಿದೆ.

ಬಾಲ ಗಣೇಶ (Animated)
ಬಾಲ ಗಣೇಶ ಅನಿಮೇಷನ್ ಸಿನಿಮಾ ಮಕ್ಕಳ ಸರ್ವಕಾಲಿಕ ಫೇವರಿಟ್ ಸಿನಿಮಾ. ಈ ಸಿನಿಮಾ ಗಣೇಶನ ಬಾಲ್ಯದ ಕುರಿತ ಕಥೆಯನ್ನು ಹೇಳುತ್ತವೆ. ಪೌರಾಣಿಕ ಕಥೆಯ ಜೊತೆಗೆ ಮಕ್ಕಳಿಗೆ ಎಂಟರ್‌ಟೈನಿಂಗ್ ಆಗಿ, ಕಲರ್‌ಫುಲ್ ಆಗಿ ಹೇಳಲಾಗಿದೆ. ಹೀಗಾಗಿ ಮಕ್ಕಳು ಈ ಬಾಲ ಗಣೇಶನನ್ನು ಇಷ್ಟ ಪಟ್ಟು ನೋಡುತ್ತಾರೆ. ಇದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ.
ಶ್ರೀ ವಿನಾಯಕ
'ಶ್ರೀ ವಿನಾಯಕ' ಇದೊಂದು 70 ದಶಕದಲ್ಲಿ ಬಂದಿರುವ ಪೌರಾಣಿಕ ಸಿನಿಮಾ. ಇದು ಗಣೇಶನ ಹುಟ್ಟ, ಅವನ ಸಾಹಸ ಹಾಗೂ ಬುದ್ದಿವಂತಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಟ್ರೆಡಿಷನಲ್ ಸಿನಿಮಾಗಳನ್ನು ನೋಡುವುದಕ್ಕೆ ಇಷ್ಟ ಪಡುವ ಕುಟುಂಬಗಳಿಗೆ ಇದು ಬೆಸ್ಟ್ ಸಿನಿಮಾ. ಅದರಲ್ಲೂ ಗಣೇಶ್ ಹಬ್ಬದ ಸಂಭ್ರಮದಲ್ಲಿ ಈ ಸಿನಿಮಾವನ್ನು ಮಕ್ಕಳೊಂದಿಗೆ ಕೂತು ನೋಡಬಹುದು. 'ಶ್ರೀ ವಿನಾಯಕ' 1977ರಲ್ಲಿ ರಿಲೀಸ್ ಆಗಿದ್ದು, ಇದು ಸನ್ ನೆಕ್ಸ್ಟ್‌ನಲ್ಲಿ ಲಭ್ಯವಿದೆ.
ಬಾಲ ಗಣೇಶ (TV Series)
ಹಿಂದೂ ಪುರಾಣದಲ್ಲಿ ಗಣೇಶನ ಕುರಿತು ನೂರೆಂಟು ಕಥೆಗಳು ನೋಡುವುದಕ್ಕೆ ಸಿಗುತ್ತವೆ. ಗಣೇಶನ ಕುರಿತ ಸಣ್ಣ ಸಣ್ಣ ಕಥೆಗಳು ನೋಡುಗನಲ್ಲಿ ಭಕ್ತಿಯ ಸಾರವನ್ನು ಹೆಚ್ಚಿಸುತ್ತದೆ. ಈ ಟಿವಿ ಸೀರಿಸ್‌ನಲ್ಲಿ ಗಣೇಶ ಕುರಿತ ಸಣ್ಣ ಕಥೆಗಳನ್ನು ಹೇಳಲಾಗಿದೆ. ಗಣೇಶನ ಸಾಹಸಗಳು, ಶಿಕ್ಷಣ, ಹಾಸ್ಯವನ್ನು ತೋರಿಸಲಾಗಿದೆ. ಗಣೇಶ ಹಬ್ಬಕ್ಕೆ ಈ ಟಿವಿ ಸೀರಿಸ್ ಅನ್ನು ನೋಡುವುದಕ್ಕೆ ಒಳ್ಳೆಯ ಸಮಯ. ಇದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ಜಗಪತಿ ಗಣೇಶನ್ (Tamil)
ಲಾರ್ಡ್ ಗಣೇಶನ ಕುರಿತು ಪ್ರಾದೇಶಿಕ ಭಾಷೆಯಲ್ಲೂ ಸಾಕಷ್ಟು ಸಿನಿಮಾಗಳಾಗಿವೆ. ಅದರಲ್ಲೊಂದು ತಮಿಳಿನಲ್ಲಿ ನಿರ್ಮಾಣಗೊಂಡಿರುವ 'ಗಜಪತಿ ಗಣೇಶನ್'. ಇದರಲ್ಲಿ ಹಿಂದೂ ಸಂಸ್ಕೃತಿ, ಭಕ್ತಿ ಗೀತೆಗಳನ್ನು ನೋಡಬಹುದಾಗಿದೆ. ಗಣೇಶ ಹಬ್ಬದ ಈ ಸಂದರ್ಭದಲ್ಲಿ ಫ್ಯಾಮಿಲಿ ಜೊತೆ ಕೂತು 'ಜಗಪತಿ ಗಣೇಶನ್' ಸಿನಿಮಾವನ್ನು ನೋಡಬಹುದು. ಈ ಸಿನಿಮಾ ಜೀ 5 ಹಾಗೂ ಸನ್ ನೆಕ್ಸ್ಟ್‌ನಲ್ಲಿ ಲಭ್ಯವಿದೆ.
ಲಾರ್ಡ್ ಗಣೇಶ (Animated Short Stories)
ಓಟಿಟಿಗಳ ಜೊತೆ ಜೊತೆಗೆ ಯೂಟ್ಯೂಬ್‌ನಲ್ಲಿಯೂ ಗಣೇಶನ ಕುರಿತ ಕೆಲವು ಸಿನಿಮಾಗಳ ಹಾಗೂ ಸೀರಿಸ್‌ಗಳನ್ನು ನೋಡಬಹುದು. ಅದರಲ್ಲಿ 'ಲಾರ್ಡ್ ಗಣೇಶ' ಕೂಡ ಒಂದು. ಇದೊಂದು ಸಣ್ಣ ಕತೆಗಳ ಆನಿಮೇಟೆಡ್ ಸೀರಿಸ್ ಆಗಿದ್ದು, ಮಕ್ಕಳಿಗೆ ಮಾಹಿತಿ ನೀಡುವುದಕ್ಕೆ ಬೆಸ್ಟ್ ಸೀರಿಸ್ ಎಂದು ಹೇಳಬಹುದು. ಇದು ಯೂಟ್ಯೂಬ್‌ನಲ್ಲಿ ಲಭ್ಯವಿದೆ.
ಮೈ ಫ್ರೆಂಡ್ ಗಣೇಶ
ಹಾಗೇ ಇದೇ ಯೂಟ್ಯೂಬ್‌ನಲ್ಲಿಯೇ ಇನ್ನೊಂದು ಸೀರಿಸ್ ಲಭ್ಯವಿದೆ. ಅದುವೇ 'ಮೈ ಫ್ರೆಂಡ್ ಗಣೇಶ'. ಮಕ್ಕಳು ಇಷ್ಟಪಟ್ಟು ನೋಡುವ ಗಣೇಶ ಕುರಿತ ಸೀರಿಸ್‌ಗಳಲ್ಲಿ ಇದೂ ಕೂಡ ಒಂದು. ಇದು ಹಲವು ಸೀಕ್ವೆಲ್‌ಗಳಲ್ಲಿ ಲಭ್ಯವಿದೆ.


Click it and Unblock the Notifications











