"30 ದಿನಗಳ ಟ್ರಯಲ್ ಪೀರಿಯಡ್‌ಗೆ ನನಗೊಬ್ಬ ತಂದೆ ಬೇಕು": ಮಗನ ವಿಚಿತ್ರ ಆಸೆ ತೆರೆಮೇಲೆ ಪರದಾಟ!
ಜಿಯೋ ಸಿನಿಮಾ ಓಟಿಟಿಯಲ್ಲಿ ನಿಧಾನವಾಗಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ದಿನದಿಂದ ದಿನಕ್ಕೆ ಓಟಿಟಿ ಪ್ರಿಯರಿಗಾಗಿ ಹೊಸ ಹೊಸ ಕಂಟೆಂಟ್‌ಗಳನ್ನು ನೀಡುತ್ತಿದೆ. ಇದರಲ್ಲಿ ಜನಪ್ರಿಯ ನಟಿ ಜೆನಿಲಿಯಾ ನಟಿಸಿರುವ 'ಟ್ರಯಲ್ ಪೀರಿಯಡ್' ಕೂಡ ಒಂದು.
'ಟ್ರಯಲ್ ಪೀರಿಯಡ್' ಸಿನಿಮಾ ಅಸಂಪ್ರದಾಯಿಕ ಕೌಟುಂಬಿಕ ಸಂಬಂಧವೊಂದರ ಸುತ್ತ ಹೆಣೆಯಲಾಗಿರುವ ಸಿನಿಮಾ. ಇದು ಜಿಯೋ ಸಿನಿಮಾ ಓಟಿಟಿ ವೇದಿಕೆಯಲ್ಲಿ ಪ್ರೀಮಿಯರ್ ಆಗುತ್ತಿದೆ. ಜೆನಿಲಿಯಾ ಬಹಳ ದಿನಗಳ ಬಳಿಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇನ್ನು ಜೆನಿಲಿಯಾ ಜೊತೆ ಮಾನವ್ ಕೌಲ್ ಕೂಡ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಅಲೆಯಾ ಸೆನ್ ನಿರ್ದೇಶಿಸಿದ್ದು, ಶಕ್ತಿ ಕಪೂರ್, ಶೀಬಾ ಚಡ್ಡಾ, ಗಜರಾಜ್ ರಾವ್ ಮತ್ತು ಝಿಡಾನೆ ಬ್ರೇಜ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮುಂಬೈ ಅಂತಹ ನಗರಗಳಲ್ಲಿ ಜನರು ಆಧುನಿಕತೆಗೆ ಒಗ್ಗಿಕೊಂಡು ಬದುಕುತ್ತಿದ್ದು, ಅಂತಹವರ ಭಾವನಾತ್ಮಕ ಸಂಬಂಧ ಪಯಣವೇ ಈ 'ಟ್ರಯಲ್ ಪೀರಿಯಡ್'.
ಕಥೆ ಕಡೆ ಬರೋದಾದರೆ, ಜೆನಿಲಿಯಾ ಇಲ್ಲಿ ಆನಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿಂಗಲ್ ಮದರ್. ಈಕೆಗೆ ಒಬ್ಬ ಮಗ. ಈತನ ಆಸೆಯನ್ನು ವಿಚಿತ್ರ ಆಸೆಯನ್ನು ಈಡೇರಿಸುವುದಕ್ಕೆ ಪಡುವ ಪರದಾಟವನ್ನು ಹಾಸ್ಯಾಸ್ಪದವಾಗಿ, ಭಾವನಾತ್ಮಕವಾಗಿ ಹೇಳಲಾಗಿದೆ. ಮಗ, ಮೂವತ್ತು ದಿನಗಳ 'ಟ್ರಯಲ್ ಪೀರಿಯಡ್'ಗೆ ನನಗೊಬ್ಬ ತಂದೆ ಬೇಕು ಎಂದು ಬೇಡಿಕೆ ಇಡುತ್ತಾನೆ. ಆಗ ತಾಯಿ ಆನಾಳ ಬದುಕಿನಲ್ಲಿ ಏನಾಗುತ್ತೆ ಅನ್ನೋದೇ ಕಥೆ.
ಮಗನ ಬೇಡಿಕೆ ಈಡೇರಿಸುವ ಸಲುವಾಗಿ ಪಟ್ಟ ಪ್ರಯತ್ನದಲ್ಲಿ ಪ್ರಜಾಪತಿ ದ್ವಿವೇದಿಯ ಎಂಟ್ರಿ ಆಗುತ್ತೆ. ಪ್ರಜಾಪತಿ ಯ ಸ್ವಭಾವ ಆನಾ ಹಾಗೂ ಮಗನ ನಿರೀಕ್ಷೆಗೆ ಸಂಪೂರ್ಣ ತದ್ವಿರುದ್ಧ. ಇಂತಹ ಸ್ಥಿತಿಯಲ್ಲಿ ಈ ಮೂವರ ನಡುವೆ ನಡೆಯುವ ಸನ್ನಿವೇಶಗಳೇ 'ಟ್ರಯಲ್ ಪೀರಿಯಡ್'.
ಜಿಯೊ ಸ್ಟೂಡಿಯೊಸ್ ಪ್ರಸ್ತುತಪಡಿಸುತ್ತಿರೋ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಹಾಸ್ಯ ಪ್ರಧಾನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಿರ್ದೇಶಕಿ ಅಲೆಯಾ ಸೆನ್ ಕಥೆಗೆ ಜೆನಿಲಿಯಾ ಫಿದಾಗಿದ್ದರು. ಜೆನಿಲಿಯಾ ಪ್ರಕಾರ, "ಟ್ರಯಲ್ ಪೀರಿಯಡ್ ತಾಯ್ತನದ ಕಥೆ. ಹೆಣ್ಣೊಬ್ಬಳ ಭಾವನಾತ್ಮಕ ಕಥೆ. ಇದು ಕಾಲೇಜ್ ಸ್ಟೋರಿಯಲ್ಲ. ಆದರೆ, ತಾಯಿಯ ಬದುಕಿನಲ್ಲಿ ನಡೆಯುವ ಪ್ರೇಮಕಥೆ." ಎಂದು ಜೆನಿಲಿಯಾ ಡಿಸೋಜಾ ಹೇಳಿದ್ದಾರೆ.
ಮಾನವ್ ಕೌಲ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಟ್ರಯಲ್ ಪೀರಿಯಡ್' ಹಾಸ್ಯದ ಜೊತೆಗೆ ಭಾವನಾತ್ಮಕ ಸನ್ನಿವೇಶಗಳು ಇವೆ. "ಮನುಷ್ಯನ ಸಂಬಂಧಗಳ ಅಸಂಪ್ರದಾಯಿಕ ಮಜಲುಗಳನ್ನು ಶೋಧಿಸುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದೆ. ಇಂದಿನ ಜೆನ್ ಆಲ್ಫಾ ತಲೆಮಾರಿನ ಮಕ್ಕಳ ಆಲೋಚನೆಯಲ್ಲಿ ಫಿಲ್ಟರ್ ಇರುವುದಿಲ್ಲ. ಅವರು ಡಿಮ್ಯಾಂಡ್ ಮಾಡುವ ಸಂಗತಿಗಳೂ ಅನಿರೀಕ್ಷಿತ. ಈ ಪೀಳಿಗೆಯ ಮಗುವೊಂದು ಅಮ್ಮನ ಬಳಿ 'ಬಾಡಿಗೆ ತಂದೆ'ಯನ್ನು ಕೇಳಿದಾಗ ಏನಾಗುತ್ತೆ? ಇದೇ ಕಥೆ." ಎಂದು ಕುತೂಹಲ ಕೆರಳಿಸುತ್ತಾರೆ ನಿರ್ದೇಶಿಕಿ ಅಲೆಯಾ ಸೆನ್.
ಅಂದ್ಹಾಗೆ, ಈ ವಿಶಿಷ್ಟ ಪರಿಕಲ್ಪನೆಯ ಸಿನಿಮಾ. ವೀಕ್ಷಕರನ್ನು ನಗಿಸಲಿದೆ, ಭಾವುಕತೆಯ ಅಲೆಯಲ್ಲಿ ತೇಲಿಸಲಿದೆ. 'ಟ್ರಯಲ್ ಪೀರಿಯಡ್' ಸಿನಿಮಾ ಇದೇ ಜುಲೈ 21ಕ್ಕೆ ಜಿಯೋ ಸಿನಿಮಾದಲ್ಲಿ ಪ್ರೀಮಿಯರ್ ಆಗಲಿದೆ.


Click it and Unblock the Notifications











