ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್ ಸಿರೀಸ್, ಟಾಕ್ ಶೋಗಳು ಯಾವುವು?
ಕೊರೊನಾ ಕಾಲದಲ್ಲಿ ಜನರ ಕೈ ಹಿಡಿದಿದ್ದು ಒಟಿಟಿ. ಅದರಲ್ಲೂ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ಯಾವ ಹೊಸ ಸಿನಿಮಾ ರಿಲೀಸ್ ಆಗುತ್ತೆ ಅಂತ ಕಾದು ಕೂತಿರುತ್ತಾರೆ. ಈ ವಾರದಿಂದ ಕೊರೊನಾ ಸ್ವಲ್ಪ ತಗ್ಗಿದ್ದು, ಕರ್ನಾಟಕ ಹಾಗೂ ಹಲವು ರಾಜ್ಯಗಳಲ್ಲಿ ಚಿತ್ರಮಂದಿರ ಶೇ.100ರಷ್ಟು ಓಪನ್ ಆಗಿದೆ. ಹೀಗಾಗಿ ಜನರು ಚಿತ್ರಮಂದಿರದ ಕಡೆ ಹೋಗುತ್ತಾರಾ? ಇಲ್ಲ ಒಟಿಟಿ ಕಡೆ ಮುಖ ಮಾಡುತ್ತಾರಾ? ಅನ್ನುವ ಕುತೂಹಲ ದುಪ್ಪಟ್ಟಾಗಿದೆ.
ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಿದ್ದರೂ, ಜನರು ಚಿತ್ರಮಂದಿರಕ್ಕೆ ಹೋಗುತ್ತಾರಾ? ಎನ್ನುವ ಆತಂಕ ಸಿನಿಮಾ ಮಂದಿಯಲ್ಲಿದೆ. ಹೀಗಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಕೆಲವು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ವಾರ ಜನರಿಗೆ ಮನರಂಜನೆ ನೀಡಲೆಂದೇ ಕೆಲವು ಅದ್ಭುತ ಸಿನಿಮಾಗಳು ವೆಬ್ ಸಿರೀಸ್‌ಗಳು ಒಟಿಟಿಯಲ್ಲಿ ಪ್ರದರ್ಶನ ಕಾಣಲು ಸಜ್ಜಾಗಿದೆ.

ಬಾಲಕೃಷ್ಣ ಮಹೇಶ್ ಬಾಬು ಶೋ
ಲೆಜೆಂಡ್ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋ 'ಅನ್‌ಸ್ಟಾಪಬಲ್' ಮೊದಲ ಸಂಚಿಕೆಯ ಕೊನೆಯ ಎಪಿಸೋಡ್ ಪ್ರದರ್ಶನ ಕಾಣುತ್ತಿದೆ. ಈ ಶೋನಲ್ಲಿ ಬಾಲಕೃಷ್ಣ ಅತಿಥಿಯಾಗಿ ಸೂಪರ್‌ಸ್ಟಾರ್ ಮಹೇಶ್ ಬಾಬು ಭಾಗವಹಿಸಿದ್ದಾರೆ. ಆಹಾ ಒಟಿಟಿಯಲ್ಲಿ ಇಂದು( ಫೆಬ್ರವರಿ 4) ರಾತ್ರಿ 8 ಗಂಟೆಯಿಂದ ಪ್ರಸಾರ ಆಗುತ್ತಿದೆ. ಮಹೇಶ್ ಬಾಬು ಎಪಿಸೋಡ್ ಬಾಲಕೃಷ್ಣ ನಿರೂಪಣೆಯ ಟಾಕ್ ಶೋದ ಕೊನೆಯ ಸಂಚಿಕೆಯಾಗಿದೆ. ತೆಲುಗು ವೀಕ್ಷಕರು ಈ ಎಪಿಸೋಡ್‌ಗಾಗಿ ಕಾದು ಕೂತಿದ್ದರು.

'ಒನ್ ಕಟ್ ಟು ಕಟ್'
ಮಿಸ್ಟರ್ ನೋಗ್‌ರಾಜ್ ಖ್ಯಾತಿಯ ದಾನಿಶ್ ಸೇಠ್ ನಟನೆಯ 'ಒನ್ ಕಟ್ ಟು ಕಟ್' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ದಾನಿಶ್ ಸೇಠ್ ಹಾಗೂ ಪುನೀತ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ದಾನಿಶ್ ಸೇಠ್ ಈ ಸಿನಿಮಾ ಕ್ರಾಫ್ಟ್ ಮಾಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಲೂಪ್ ಲಪೇಟ'
ಬಾಲಿವುಡ್ ನಟಿ ತಾಪ್ಸಿ ಪನ್ನು ಅಭಿನಯದ 'ಲೂಪ್ ಲಪೇಟ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಕ್ರೀಡೆಗೆ ಸಂಬಂಧಿಸಿದ ಸಿನಿಮಾ ಆಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

'ರಾಕೆಟ್ ಬಾಯ್ಸ್'
ಸೋನಿ ಲೈವ್‌ನಲ್ಲಿ ವೀಕ್ಷಕರಿಗೆ ಆಸಕ್ತಿದಾಯಕ ಸಂಚಿಕೆಯೊಂದು ಬಿಡುಗಡೆಯಾಗಿದೆ. ಈ ಸಿನಿಮಾ ಸಂಚಿಕೆ ನೋಡಿದವರು ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಅದುವೇ 'ರಾಕೆಟ್ ಬಾಯ್ಸ್'. ಸತ್ಯ ಘಟನೆಗಳನ್ನು ಇಟ್ಟುಕೊಂಡು ಸಿರೀಸ್ ಅನ್ನು ಚಿತ್ರೀಕರಿಸಲಾಗಿದೆ. ಹೋಮಿ ಬಾಬಾ ಹಾಗೂ ವಿಕ್ರಮ್ ಸಾರಾಭಾಯಿ ಈ ಇಬ್ಬರು ಅದ್ಭುತ ವಿಜ್ಞಾನಿಗಳ ಲೈಫ್ ಜರ್ನಿಯನ್ನು ಈ ಸಂಚಿಕೆಯಲ್ಲಿ ತೋರಿಸಲಾಗಿದೆ.

'ದಿ ಗ್ರೇಟ್ ಇಂಡಿಯನ್ ಮರ್ಡರ್'
ಫೆಬ್ರವರಿ 04 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಹೊಸ ವೆಬ್ ಸಿರೀಸ್‌ವೊಂದು ಬಿಡುಗಡೆಯಾಗಿದೆ. ಅದೇ 'ದಿ ಗ್ರೇಟ್ ಇಂಡಿಯನ್ ಮರ್ಡರ್'. ಇದು ಭಾರತದಲ್ಲಿ ಸಿಂಗಲ್ ಮರ್ಡರ್ ಆದ ಕೆಲವು ಕೇಸ್‌ಗಳನ್ನು ವಿಭಿನ್ನ ಆಯಾಮಗಳಲ್ಲಿ ಚಿತ್ರೀಸಲಾಗಿದೆ. ಸುಧಾ ಹಾಗೂ ಸೂರಜ್ ಎಂಬ ಎರಡು ಪಾತ್ರಗಳು ತನಿಖೆ ಮೂಲಕ ಮರ್ಡರ್ ಕೇಸ್‌ಗಳನ್ನು ಹ್ಯಾಂಡಲ್ ಮಾಡುವ ಸಿರೀಸ್ ಇದಾಗಿದೆ.


Click it and Unblock the Notifications











