ಈ ವಾರ ನೀವು ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳ ಪಟ್ಟಿ ಇಲ್ಲಿದೆ : ಯಾವ ಚಿತ್ರ ಟ್ರೆಂಡಿಂಗ್‌ನಲ್ಲಿದೆ?

ವೀಕೆಂಡ್ ಬಂತು ಅಂದರೆ ಫುಲ್ ಫ್ರೀ. ಭಾನುವಾರ ಮನೆಯಿಂದ ಹೊರ ಹೋಗಲು ಸಾಧ್ಯವಿಲ್ಲ ಎಂತಾದರೆ, ಮನೆಯಲ್ಲೇ ಒಟಿಟಿಯಲ್ಲಿ ಕೂತು ನೋಡಬಹುದಾದ ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ವಾರ ಒಟಿಟಿಯಲ್ಲಿ ಕೆಲವು ಸಿನಿಮಾಗಳನ್ನು ನೋಡಬಹುದು. ಸ್ಮಾಲ್ ಬಜೆಟ್ ಸಿನಿಮಾಗಳಿಂದ ದೊಡ್ಡ ಬಜೆಟ್ ಸಿನಿಮಾಗಳ ವರೆಗೂ ಒಟಿಟಿಯಲ್ಲಿ ಹೊಸ ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿವೆ.

ಲವ್ ಸ್ಟೋರಿ ಇಷ್ಟ ಪಡುವವರಿಗೆ ಲವ್ ಸ್ಟೋರಿ, ಕ್ರೈಂ ಇಷ್ಟ ಪಡುವವರಿಗೆ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್, ಫ್ಯಾಮಿಲಿ ಸ್ಟೋರಿ ಬೇಕು ಅನ್ನುವವರಿಗೆ ಫ್ಯಾಮಿಲಿ ಸ್ಟೋರಿ ಇವೆ. ಹೀಗಾಗಿ ಈ ವಾರ ಕೂಡ ಒಟಿಟಿಯಲ್ಲಿ ಕೆಲವು ಹೊಸ ಸಿನಿಮಾಗಳನ್ನು ನೋಡಲು ಒಟಿಟಿ ವೇದಿಕೆ ಅನುವು ಮಾಡಿಕೊಟ್ಟಿದೆ. ಹಾಗಿದ್ದದರೆ. ಈ ವಾರ ನೀವು ನೋಡಬಹುದಾದ ಹೊಸ ಸಿನಿಮಾಗಳ ಪಟ್ಟಿ ಇಲ್ಲಿದೆ.

'100'

'100'

ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿದ ಸಿನಿಮಾ '100' ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ನೋಡಿದವರು ಉತ್ತಮ ಪ್ರತಿಕ್ರಿಯೆಯನ್ನೂ ನೀಡಿದ್ದರು. ಇದೇ ಸಿನಿಮಾ ಈಗಾಗಲೇ ಜೀ 5 ನಲ್ಲಿ ಬಿಡುಗಡೆಯಾಗಿದ್ದು, ಚಿತ್ರಮಂದಿರದಲ್ಲಿ ಹೋಗಿ ಸಿನಿಮಾ ನೋಡದೆ ಇರುವವರು ಒಟಿಟಿಯಲ್ಲಿ 100 ಚಿತ್ರವನ್ನು ನೋಡಬಹುದಾಗಿದೆ.

 'ಹೀರೋ'

'ಹೀರೋ'

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಂಬಂಧಿ ಅಶೋಕ್ ಗಲ್ಲಾ ನಟನೆಯ ಸಿನಿಮಾ 'ಹೀರೋ' ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಆದರೆ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೆಚ್ಚಿನ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈಗ ಒಟಿಟಿಗೆ ಲಗ್ಗೆ ಇಟ್ಟಿದೆ. ಶ್ರೀರಾಮ್ ಆದಿತ್ಯ ನಿರ್ದೇಶನದ 'ಹೀರೋ' ಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಿದೆ.

 'ಗೆಹರಾಯಿಯಾ'

'ಗೆಹರಾಯಿಯಾ'

ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಹಾಗೂ ಅನನ್ಯಾ ಪಾಂಡೆ ಅಭಿನಯದ ಸಿನಿಮಾ 'ಗೆಹರಾಯಿಯಾ'. ಈ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ ಈಗಾಗಲೇ ಒಟಿಟಿಯಲ್ಲಿ ತೆರೆಕಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಪ್ರೇಕ್ಷಕರನ್ನು ಸೆಳೆದಿರುವ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಸಿನಿಮಾ ಕುತೂಹಲ ಕೆರಳಿಸಿದೆ.

 'ಮಹಾನ್'

'ಮಹಾನ್'

ಚಿಯಾನ್ ವಿಕ್ರಂ ಹಾಗೂ ಪುತ್ರ ಧ್ರುವ ವಿಕ್ರಂ ನಟನೆಯ ತಮಿಳು ಸಿನಿಮಾ 'ಮಹಾನ್'. ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ ಈ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿಲ್ಲ. ನೇರವಾಗಿ ಒಟಿಟಿಯಲ್ಲೇ ತೆರೆಕಂಡಿರುವ ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಜನರು ಒಟಿಟಿಯಲ್ಲಿ ವಿಕ್ರಮ್ ನೋಡುವುದಕ್ಕೆ ಸಿನಿಮಾ ನೋಡುತ್ತಿದ್ದಾರೆ. ಈ ವಾರ ಸಿನಿಪ್ರಿಯರಿಗೆ ಈ ಸಿನಿಮಾ ಉತ್ತಮ ಆಯ್ಕೆ ಆಗಲಿದೆ.

 'ಭಾಮಕಲಾಪಂ'

'ಭಾಮಕಲಾಪಂ'

ಪ್ರಿಯಾಮಣಿ ಅಭಿನಯದ 'ಭಾಮಕಲಾಪಂ' ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಥ್ರಿಲ್ಲರ್ ಡ್ರಾಮ ಸ್ಟೋರಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಸಿನಿಮಾ ನೋಡುಗರನ್ನು ಹಿಡಿದಿಡುತ್ತದೆ ಎಂದು ವಿಮರ್ಶಕರು ಹೇಳುತ್ತಿದ್ದಾರೆ. ಈ 'ಭಾಮಕಲಾಪಂ' ಸಿನಿಮಾ ಆಹಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

 'ಮಲ್ಲಿ ಮೊದಲಾಯಿಂದಿ'

'ಮಲ್ಲಿ ಮೊದಲಾಯಿಂದಿ'

ಸುಮಂತ್ ಅಕ್ಕಿನೇನಿ ನಟನೆಯ ಸಿನಿಮಾ 'ಮಲ್ಲಿ ಮೊದಲಾಯಿಂದಿ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ವಿಚ್ಛೇದನ ಪಡೆದ ವ್ಯಕ್ತಿ ತನ್ನ ಎರಡನೇ ಹಂತದ ಜೀವನವನ್ನು ನಡೆಸಲು ಪರದಾಡುವ ಸನ್ನಿವೇಶವನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಸಿನಿಮಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜೀ 5 ನಲ್ಲಿ ಸಿನಿಮಾ ಬಿಡುಗಡೆಯಾಗಿದೆ.

More from Filmibeat

English summary
Here is the list of titles that have premiered on OTT this week. Mahesh Babu’s nephew, Ashok Galla acted Hero, Deepika Padukone Gehraiyaan, Chiyaan Vikram Mahaan, Priyamani's Bhamakalapam, Sumanth Akkineni Starrer Malli Modalaindi and also Ramesh Aravind 100 movie can be watch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X