'ಹೌಸ್ ಆಫ್ ದಿ ಡ್ರ್ಯಾಗನ್' 3ನೇ ಸೀಸನ್‌ನ 4ನೇ ಎಪಿಸೋಡ್ ಬಂದೇ ಬಿಡ್ತು; ಎಲ್ಲಿ ನೋಡಬಹುದು?

ಓಟಿಟಿಯಲ್ಲಿ ಅತೀ ಹೆಚ್ಚು ಕುತೂಹಲದಿಂದ ಎದುರು ನೋಡುತ್ತಿದ್ದ ವೆಬ್ ಸೀರಿಸ್ ಕೊನೆಗೂ ಬಂದೇ ಬಿಟ್ಟಿದೆ. 'ಹೌಸ್ ಆಫ್ ದಿ ಡ್ರ್ಯಾಗನ್' ಸೀಸನ್ 3ರ 4ನೇ ಎಪಿಸೋಡ್ ಸ್ಟ್ರೀಮಿಂಗ್ ಆಗುತ್ತಿದೆ. 4ನೇ ಎಪಿಸೋಡ್‌ನಲ್ಲಿ ಯುದ್ಧಭೂಮಿಯ ಅಬ್ಬರದಿಂದ ಹೊರಬಂದ ಮೇಲೆ ಗ್ರೀನ್ಸ್ ಮತ್ತು ಬ್ಲಾಕ್ಸ್ ತಂಡಗಳ ಮೇಲಿನ ವೈಯಕ್ತಿಕ ಹಾಗೂ ರಾಜಕೀಯ ಪರಿಣಾಮಗಳನ್ನು ಇಲ್ಲಿ ತೋರಿಸಲಾಗಿದೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಹೌಸ್ ಆಫ್ ದಿ ಡ್ರ್ಯಾಗನ್' 3ನೇ ಸೀಸನ್‌ನ 4ನೇ ಎಪಿಸೋಡ್ ಪ್ರಸಾರ ಆಗುತ್ತಿದೆ. ಇದರಲ್ಲಿ ದುಃಖ, ಅಪರಾಧ ಪ್ರಜ್ಞೆಗಳು ಒಟ್ಟಿಗೆ ಮುಖಾಮುಖಿಯಾಗುತ್ತವೆ. ಹೀಗಾಗಿ ಕಥೆಯು ಇಡೀ ವೆಸ್ಟೆರೋಸ್ ಸಾಮ್ರಾಜ್ಯಕ್ಕೆ ಸಾಗುತ್ತದೆ. ಈ ಎಪಿಸೋಡ್ 3ನೇ ಸೀಸನ್‌ನ ದ್ವಿತೀಯಾರ್ಧಕ್ಕೆ ಭರ್ಜರಿ ಮುನ್ನುಡಿ ಬರೆಯುತ್ತಿದೆ. ಹೀಗಾಗಿ 4ನೇ ಎಪಿಸೋಡ್ ತುಂಬಾನೇ ಸ್ಪೆಷಲ್ ಎನ್ನಬಹುದು.

House of the Dragon Season 3 Episode 4 exploring political fallout streaming on JioHotstar

ಇನ್ನು 'ಹೌಸ್ ಆಫ್ ದಿ ಡ್ರ್ಯಾಗನ್'ನ ಕಥೆಯ ಕಡೆಗೆ ಗಮನ ಹರಿಸುವುದಾರೇ, ರಹೇನ್ಯರಾ ತಾರ್ಗೇರಿಯನ್ ತನ್ನ ವೈಯಕ್ತಿಕ ಜೀವನದ ದೊಡ್ಡ ದುರಂತದಿಂದ ನೊಂದಿದ್ದು, ಇಷ್ಟೆಲ್ಲ ದುಃಖದ ನಡುವೆಯೂ ರಾಣಿಯಾಗಿ ಆಡಳಿತ ನಡೆಸಬೇಕಾಗಿದೆ. ಟಂಬಲ್ಟನ್ ಮೇಲೆ ಆಕ್ರಮಣದ ಪ್ರಶ್ನೆಗಳಿಂದ ಹಿಡಿದು, ಹೊಸ 'ಮಾಸ್ಟರ್ ಆಫ್ ಕಾಯಿನ್' ನೇಮಕ ಮಾಡುವವರೆಗೆ ಪ್ರತಿಯೊಂದು ನಿರ್ಧಾರವೂ ಆಕೆಯ ನಾಯಕತ್ವವನ್ನು ಪರೀಕ್ಷೆಗೆ ಒಳಪಡುವಂತೆ ಮಾಡಿದೆ. ಇತ್ತ ರಾಣಿಗೆ ಆಪ್ತರಾಗಿದ್ದವರೇ ರಹಸ್ಯಗಳನ್ನು ಮುಚ್ಚಿಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ, ಆಕೆಯ ಆಡಳಿತಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ.

ಈ ಎಪಿಸೋಡ್ ಡೀಮನ್ ತಾರ್ಗೇರಿಯನ್ ಜೀವನದಲ್ಲಿ ಒಂದು ಭಾವನಾತ್ಮಕ ತಿರುವು ನೋಡುವುದಕ್ಕೆ ಸಿಗುತ್ತೆ. ಡೀಮನ್ ತನ್ನ ಮಗಳು ರಹೇನಾಳನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾನೆ. ಆಗ ಮಗಳ ಮೇಲಿನ ಪ್ರೀತಿ ಅರಿವಿಗೆ ಬರುತ್ತೆ. ಕರ್ತವ್ಯ ಹಾಗೂ ತಂದೆಯ ಜವಾಬ್ದಾರಿಯ ನಡುವೆ ಸಿಲುಕಿ ಒದ್ದಾಡುತ್ತಿರುವ ಡೀಮನ್ ಈ ಭೀಕರ ಯುದ್ಧದಿಂದ ತಾನೇನು ಕಳೆದುಕೊಂಡೆ ಅನ್ನೋದನ್ನು ಅರಿಯುತ್ತಾನೆ. ಇಲ್ಲಿಯವರೆಗೆ ಕ್ರೂರಿ ಎನಿಸಿದ್ದ ಡೀಮನ್‌ ಈಗ ಮೃದು ಸ್ವಭಾವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ.

'ಹೌಸ್ ಆಫ್ ದಿ ಡ್ರ್ಯಾಗನ್' ಕಥೆಯಲ್ಲಿ ಕರಾಳ ತಿರುವೊಂದಿದೆ. ಕ್ರೂರ ಸ್ವಭಾವ ಹೊಸ ನಾಯಕ ಪ್ರಮುಖವಾದ ಕೋಟೆಯನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಅಷ್ಟೇ ಅಲ್ಲದೆ, ತಾರ್ಗೇರಿಯನ್ ಕುಟುಂಬದ ಅತ್ಯಂತ ಕಿರಿಯ ಸದಸ್ಯನನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಾನೆ. ಇದು ರಹೇನ್ಯರಾ ಆಡಳಿತಕ್ಕೆ ದೊಡ್ಡ ಅಪಾಯ ಎದುರಾಗುವ ಮುನ್ಸೂಚನೆ ನೀಡಿದೆ.

ಈ ಎಪಿಸೋಡ್‌ನಲ್ಲಿ ಕುಟುಂಬದ ರಹಸ್ಯಗಳಿಂದ ಹಿಡಿದು, ಸಿಂಹಾಸನದಿಂದ ದೂರವಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬಯಸುವ ವ್ಯಕ್ತಿಯವರೆಗೆ, ಹಲವು ರಹಸ್ಯ ಸತ್ಯಗಳನ್ನು ಹೊರಹಾಕುತ್ತಾ ಸಾಗುತ್ತೆ. ಸಂಬಂಧಗಳು, ನಂಬಿಕೆಗಳು ಮುರಿದು ಹೋಗುತ್ತಿವೆ. 'ಡ್ಯಾನ್ಸ್ ಆಫ್ ದಿ ಡ್ರ್ಯಾಗನ್ಸ್' ಯುದ್ಧವು ಕೇವಲ ಮೈದಾನದಲ್ಲಷ್ಟೇ ಅಲ್ಲ, ತೆರೆಯ ಮರೆಯ ನೆರಳಿನಲ್ಲೂ ಭೀಕರವಾಗಿ ನಡೆಯುತ್ತಿದೆ ಎಂಬುದನ್ನು 'ಹೌಸ್ ಆಫ್ ದಿ ಡ್ರ್ಯಾಗನ್'3ಯ 4ನೇ ಎಪಿಸೋಡ್‌ನಲ್ಲಿ ಸಾಬೀತು ಮಾಡುತ್ತಿದೆ.

4ನೇ ಎಪಿಸೋಡ್‌ನಲ್ಲಿ ಕೇವಲ ಯುದ್ಧದ ಅಬ್ಬರ ಅಷ್ಟೇ ಇಲ್ಲ. ಯುದ್ಧದಿಂದಾಗುವ ಭೀಕರ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತಿದೆ. ದುಃಖ, ಅಧಿಕಾರದ ಆಸೆ, ರಹಸ್ಯ ಸತ್ಯಗಳು ಸಿಂಹಾಸನಕ್ಕಾಗಿ ಮಾಡುತ್ತಿರುವ ಹೋರಾಟವನ್ನು ಹೇಗೆ ಬದಲಾಯಿಸುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. ಹೊಸ ಪಾತ್ರಗಳ ಪ್ರವೇಶದ ಜೊತೆಗೆ ಹಳೆಯ ಗಾಯಗಳು ಕಥೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತವೆ. 4ನೇ ಎಪಿಸೋಡ್ ಮುಂದಿನ ಸಂಚಿಕೆಗಳ ನೋಡುವಂತೆ ಮಾಡುತ್ತದೆ. 'ಹೌಸ್ ಆಫ್ ದಿ ಡ್ರ್ಯಾಗನ್' ಸೀಸನ್ 3ರ ಹೊಸ ಎಪಿಸೋಡ್‌ಗಳನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

English summary
House of the Dragon Season 3, Episode 4 exploring the personal and political fallout streaming on JioHotstar.
Read more about: web series
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X