ನೋಗರಾಜ್‌ ಖ್ಯಾತಿಯ ದಾನಿಶ್ ಸೇಠ್‌ಗೆ ದರ್ಶನ್ ಜೊತೆ ಊಟ ಮಾಡುವ ಬಯಕೆ: ಯಾವಾಗ ಈಡೇರುತ್ತೆ ಆಸೆ?

ಸ್ಯಾಂಡಲ್‌ವುಡ್‌ನಲ್ಲಿ ಸಂಕ್ರಾಂತಿಯಲ್ಲಿ ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹಾಗಂತ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ನೋಡುವುದಕ್ಕೆ ಆಗುತ್ತಿಲ್ಲ ಅಂತ ನಿರಾಶಾರಾಗುವುದು ಬೇಡ. ಯಾಕಂದ್ರೆ, ಜನರನ್ನು ನಕ್ಕು ನಗಿಸುವುದಕ್ಕೆ ಮತ್ತೊಮ್ಮೆ 'ಹಂಬಲ್ ಪೊಲಿಟಿಷಿಯನ್ ನೋಗರಾಜ್‌' ವೆಬ್ ಸಿರೀಸ್‌ ಅನ್ನು ಹೊತ್ತು ಆರ್‌ಸಿಬಿಯ ಮಿಸ್ಟರ್‌ ನ್ಯಾಗ್ಸ್ ಓಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. 10 ಎಪಿಸೋಡ್‌ನಲ್ಲಿನಲ್ಲಿ ಈ ಸೀರಿಸ್ ಬಿಡುಗಡೆಯಾಗುತ್ತಿದೆ. ಈ ವೇಳೆ ದಾನಿಶ್ ಸೇಠ್ ದರ್ಶನ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ದಾನಿಶ್ ಸೇಠ್ ಯಾರಿಗೆ ಗೊತ್ತಿಲ್ಲಾ? ಆರ್‌ಸಿಬಿ ಅಭಿಮಾನಿಗಳಿಗೆ ಮಿಸ್ಟರ್ ನ್ಯಾಗ್ಸ್ ಗೊತ್ತು. ಸಿನಿಪ್ರಿಯರಿಗೆ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಆಗಿ ಪರಿಚಯ ಇರುತ್ತೆ. ಕಂಗ್ಲಿಷ್ ಮಾತಾಡುತ್ತಾ ಕಾಮಿಡಿ ಕಚಗುಳಿ ಇಡುವ ಈ ಅದ್ಭುತ ಪ್ರತಿಭೆ ದಾನಿಶ್ ಸೇಠ್. ಇವರಿಗೆ ದರ್ಶನ್ ಜೊತೆ ಊಟ ಮಾಡಬೇಕು ಅನ್ನುವ ಆಸೆಯಂತೆ. ಅಲ್ಲದೆ ದರ್ಶನ್ ಪುತ್ರ ವಿನೀಶ್ ದಾನಿಶ್ ಸೇಠ್‌ಗೆ ಪೋನ್ ಮಾಡಿದ್ದರಂತೆ. ಈ ವಿಷಯವನ್ನು ಎಕ್ಸ್‌ಕ್ಲ್ಯೂಸಿವ್ ಆಗಿ ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

ನಾನು ದರ್ಶನ್ ಸರ್ ಅನ್ನು ಭೇಟಿ ಮಾಡಿಲ್ಲ

ನಾನು ದರ್ಶನ್ ಸರ್ ಅನ್ನು ಭೇಟಿ ಮಾಡಿಲ್ಲ

ದ್ಯಾನಿಶ್‌ ಸೇಠ್‌ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ, ಇವರಿಗೆ ಸ್ಯಾಂಡಲ್‌ವುಡ್‌ನ ಡಿ ಬಾಸ್ ಭೇಟಿ ಮಾಡಬೇಕು ಅನ್ನುವ ಆಸೆ. ಅವರೊಂದಿಗೆ ಊಟ ಮಾಡಬೇಕು ಅನ್ನುವ ಆಸೆ. ಈ ಮಾತನ್ನು ಸ್ವತಃ ದ್ಯಾನಿಶ್ ಸೇಠ್ ಅವರೇ ಫಿಲ್ಮಿ ಬೀಟ್ ಜೊತೆ ಶೇರ್ ಮಾಡಿಕೊಂಡಿದ್ದಾರೆ. "ನಾನು ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಒಬ್ಬರನ್ನು ಮಾತ್ರ ಇವತ್ತಿನವರೆಗೂ ಮೀಟ್ ಮಾಡಿಲ್ಲ. ಆದರೆ, ಅವರ ಪ್ರೀತಿಯ ಮಗ ನನಗೆ ಕಾಲ್ ಮಾಡಿ ನನ್ನ ಜೊತೆ ಮಾತಾಡಿದ್ದಾನೆ. ಯಾರು ಅಂತ ಗೆಸ್ ಮಾಡಿ.. ಯೆಸ್.. ದರ್ಶನ್ ಸರ್‌ನ ನಾನು ಮೀಟ್ ಮಾಡಿಲ್ಲ. ಇವತ್ತಿನ ವರೆಗೂ ಅವರನ್ನು ಮೀಟ್ ಮಾಡಿಲ್ಲ. ದರ್ಶನ್ ಅವರನ್ನು ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ನೋಡಿದರೆ, ಪ್ರಾಣಿಗಳ ಜೊತೆ ಅವರ ವ್ಯಕ್ತಿತ್ವ ಮೂರು ಬಟನ್ ಓಪನ್‌ ಶರ್ಟ್‌ನಲ್ಲಿ, ನನಗೆ ಅನಿಸುವ ಪ್ರಕಾರ ಅವರನ್ನು ಮಾತಾಡಿಸುವುದು ತುಂಬಾ ಇಂಟ್ರೆಸ್ಟಿಂಗ್ ಅಂತ ಅನಿಸುತ್ತೆ." ಎಂದು ಫಿಲ್ಮಿ ಬೀಟ್ ವಿಶೇಷ ಸಂದರ್ಶನದಲ್ಲಿ ದಾನಿಶ್ ಸೇಠ್ ತಿಳಿಸಿದ್ದಾರೆ.

ದರ್ಶನ್ ಊಟಕ್ಕೆ ಕರೆದರೆ ಹೋಗುತ್ತೇನೆ

ದರ್ಶನ್ ಊಟಕ್ಕೆ ಕರೆದರೆ ಹೋಗುತ್ತೇನೆ

"ದರ್ಶನ್ ಸರ್‌ನ ಮೀಟ್ ಮಾಡುವುದಕ್ಕೆ ಆಸೆ ಇದೆ ಅಂತ ಹೇಳಿದ್ದೆ. ಅವರನ್ನೇ ಮೀಟ್ ಮಾಡಬೇಕು ಅನ್ನುವ ಆಸೆ. ಅವರೇನಾದರೂ ಡಿನ್ನರ್‌ಗೆ ಕರೆದರೆ ನಾನು ತುಂಬಾ ಖುಷಿಯಾಗಿ ಹೋಗುತ್ತೇನೆ. ನಾನು ಸುದೀಪ್ ಸರ್ ಜೊತೆ ಡಿನ್ನರ್ ಮಾಡಿದ್ದೇನೆ. ಆ ವೇಳೆ ವಿಮಾನ ಹತ್ತುವ ಆತುರದಲ್ಲಿದ್ದೆ. ಆಗ ಅವರು ಮಾತು ನಿಲ್ಲಿಸುವ ಮೊದಲು ಊಟ ಮಾಡು ಎಂದಿದ್ದರು. ನಾನು ಭಯ ಪಟ್ಟುಕೊಂಡು ತಿಂದುಬಿಟ್ಟೆ. ಯಶ್ ಜೊತೆ, ಪುನೀತ್ ಅಣ್ಣನ ಜೊತೆ ಹಲವು ಬಾರಿ ಡಿನ್ನರ್ ಮಾಡಿದ್ದೇನೆ. ಆದರೆ, ದರ್ಶನ್ ಸರ್ ಜೊತೆ ಎಂದೂ ಊಟ ಮಾಡಿಲ್ಲ." ಎಂದು ದಾನಿಶ್ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ವಿನೀಶ್ ನನಗೆ ಫೋನ್ ಮಾಡಿ ಮಾತಾಡಿದ್ದರು

ವಿನೀಶ್ ನನಗೆ ಫೋನ್ ಮಾಡಿ ಮಾತಾಡಿದ್ದರು

"ನಾನು ಅವರ ಮಗನೊಂದಿಗೆ ಮಾತಾಡಿದ್ದೇನೆ. ದರ್ಶನ್ ಮಗ ತುಂಬಾ ಮುದ್ದಾಗ ಹುಡುಗ, ತುಂಬಾ ಮುದ್ದಾಗಿ ಮಾತಾನಾಡಿದ್ದ. ಯಾರೋ ಕಾಲ್ ಮಾಡಿ ಈತರ ದರ್ಶನ್ ಸರ್ ಮಗ ನಿಮ್ಮೊಂದಿಗೆ ಮಾತಾಡಬೇಕಂತೆ ಅಂತ. ನನ್ನೊಂದಿಗೆ ತುಂಬಾ ಮುದ್ದಾಗಿ ಫನ್ನಿಯಾಗಿ ಮಾತನಾಡಿದ. ಆಗ ನಾನು ಕೇಳಿದೆ ನಿಮ್ಮ ಮನೆಯಲ್ಲೇ ಅಷ್ಟು ದೊಡ್ಡ ಸ್ಟಾರ್ ಇದ್ದಾರೆ. ನೀವ್ಯಾಕೆ ನಿಮ್ಮ ಮನೆಯಿಂದ ಆಚೆ ನೋಡುತ್ತಿದ್ದೀರಾ. ಮನೆಯೊಳಗೆ ನೋಡಿ ಅಂತ. ಆಗ ವಿನೀಶ್ ಖುಷಿಪಟ್ಟರು." ಎಂದು ನೋಗರಾಜ್ ಖ್ಯಾತಿಯ ದಾನಿಶ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ಲಾರಾ ಭೇಟಿ ಮಾಡಬೇಕೆಂಬ ಆಸೆ

ಲಾರಾ ಭೇಟಿ ಮಾಡಬೇಕೆಂಬ ಆಸೆ

ದಾನಿಶ್ ಸೇಠ್ ಸಿನಿಮಾ ಜೊತೆಗೆ ಕ್ರಿಕೆಟ್‌ ತಾರೆಯರ ಜೊತೆನೂ ನಂಟು ಇದೆ. ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಭೇಟಿ ಮಾಡುವ ಆಸೆ ಹೇಗಿದೆಯೋ ಹಾಗೇ ಕ್ರಿಕೆಟ್ ಜಗತ್ತಿನಲ್ಲಿಯೂ ಒಬ್ಬರನ್ನು ಭೇಟಿ ಮಾಡಬೇಕೆನ್ನುವ ಆಸೆ ಇದೆಯಂತೆ. ಅವರು ಮತ್ಯಾರೂ ಅಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ರಿಕೆಟ್ ಲೆಜೆಂಡ್ ಬ್ರಿಯಾನ್ ಲಾರಾ. ಎರಡು ಆಸೆಗಳನ್ನು ಹಂಬಲ್ ಪೊಲಿಟಿಷಿನ್ ನೋಗರಾಜ್ ಇಷ್ಟ ಪಟ್ಟಿದ್ದು, ಸದ್ಯ ಕಂಗ್ಲಿಷ್ ವೆಬ್ ಸಿರೀಸ್ ಪ್ರಚಾರದ ಮೂಡ್‌ನಲ್ಲಿ ಇದ್ದಾರೆ.

More from Filmibeat

English summary
Humble Politician Nograj Danish Sait want have food with Darshan. He met Yash, Puneeth Rajkumar and super star of sandalwood but not Darshan said Danish Sait.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X