IMDbಯ ಟ್ರೆಂಡಿಂಗ್ ತಾರೆಯರ ಪಟ್ಟಿ ರಿಲೀಸ್: 'ಪಠಾಣ್' ದಾಖಲೆ ಬರೆದರೂ ಶಾರುಖ್ ನಂ 1 ಸ್ಟಾರ್ ಅಲ್ಲ!

ಸಿನಿಮಾ, ಟಿವಿ ಶೋ ಹಾಗೂ ಓಟಿಟಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ನೀಡುವ ಜಾಲತಾಣ IMDb. ಇಲ್ಲಿ ಪ್ರತಿವಾರ ಟ್ರೆಂಡಿಂಗ್‌ನಲ್ಲಿರೋ ತಾರೆಯರ ಪಟ್ಟಿ ರಿಲೀಸ್ ಆಗುತ್ತೆ. ಅದರಂತೆ ಫೆಬ್ರವರಿ ತಿಂಗಳ ಮೂರನೇ ವಾರದ ಟ್ರೆಂಡಿಂಗ್‌ನಲ್ಲಿರೋ 20 ಮಂದಿ ಭಾರತದ ಸ್ಟಾರ್‌ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.

IMDb ರಿಲೀಸ್ ಮಾಡಿದ ಈ ಪಟ್ಟಿಯಲ್ಲಿ ಭಾರತದ ಸಿನಿಮಾಗಳು, ವೆಬ್‌ ಸಿರೀಸ್, ಸಿನಿಮಾ ಸ್ಟಾರ್‌ಗಳು, ನಿರ್ಮಾಪಕರು ಟ್ರೆಂಡಿಂಗ್‌ನಲ್ಲಿದ್ದಾರೆ. ಈ ವಾರ ಯಾರೆಲ್ಲಾ,ಯಾವ್ಯಾವ ಕಾರಣಕ್ಕೆ ಟ್ರೆಂಡಿಂಗ್‌ನಲ್ಲಿದ್ದಾರೆ ಅನ್ನೋ ಕಾರಣದ ಜೊತೆ ಪಟ್ಟಿಯನ್ನು ರಿಲೀಸ್ ಮಾಡಿದೆ.

Imdb Popular Indian 20 Celebrities Treanding week Of feb 20th List Is Here

ವಿಶೇಷ ಅಂದ್ರೆ, ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿರೋ ಸಿನಿಮಾ 'ಪಠಾಣ್'. ಶಾರುಖ್ ಖಾನ್ ಕಮ್‌ಬ್ಯಾಕ್ ಮಾಡಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡಿದ್ದರೂ, ಶಾರುಖ್ ಖಾನ್ ಈ ಪಟ್ಟಿಯಲ್ಲಿ ನಂ 1 ಸ್ಥಾನದಲ್ಲಿ ಇಲ್ಲ. 'ಪಠಾಣ್' ಕ್ರೇಜ್ ಹೆಚ್ಚಿರುವ ಬೆನ್ನಲ್ಲೇ ಶಾರುಖ್ ಖಾನ್ ನಂ 1 ನಟ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಚ್ಚರಿ ಎಂಬಂತೆ ನಟಿ ರಾಶಿ ಖನ್ನ ಬಾಲಿವುಡ್‌ ಕಿಂಗ್ ಖಾನ್ ಅನ್ನೂ ಹಿಂದಿಕ್ಕಿ ಮುನ್ನುಗ್ಗಿದ್ದಾರೆ. ಇದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದ್ಹಾಗೆ, IMDbಗೆ ವಿಶ್ವದಾದ್ಯಂತ ಸುಮಾರು 200 ಮಿಲಿಯನ್ ಜನರು ಭೇಟಿ ನೀಡುತ್ತಾರೆ. ಈ ಆಧಾರದ ಮೇಲೆ ಯಾವ ನಟ, ನಿರ್ಮಾಪಕ, ನಿರ್ದೇಶಕ ಟ್ರೆಂಡಿಂಗ್‌ನಲ್ಲಿದ್ದಾರೆ ಅನ್ನೋದನ್ನು ನಿರ್ಧಾರ ಮಾಡಲಾಗಿದೆ."ಪ್ರತಿಭಾವಂತ ಕಲಾವಿದರು, ನಿರ್ದೇಶಕರು ಹಾಗೂ ಸಿನಿಮಾ ನಿರ್ಮಾಪಕರು ಭಾರತದ ಗಡಿ, ಭಾಷೆಗಳನ್ನೂ ಮೀರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಸೆಲೆಬ್ರೆಡಿಗಳ ಬಗ್ಗೆ ಐಎಂಡಿಬಿ ಹಲವು ಆಸಕ್ತಿಕರ ವಿಷಯಗಳನ್ನು ಜಗತ್ತಿನ ಮೂಲೆ ಮೂಲೆಯಲ್ಲಿರೋ ವೀಕ್ಷಕರಿಗೆ ನೀಡುವುದಕ್ಕೆ ಪ್ರಯತ್ನಿಸುತ್ತಿದೆ." ಎಂದು ಐಎಂಡಿಬಿಯ ಭಾರತದ ಮುಖ್ಯಸ್ಥೆ ಯಾಮಿನಿ ಪಟೋಡಿಯಾ ಮಾಹಿತಿ ನೀಡಿದ್ದಾರೆ. ಸದ್ಯ ಫೆಬ್ರವರಿ 3ನೇ ವಾರ ರಿಲೀಸ್ ಮಾಡಿರುವ ಟಾಪ್‌ 20 ಯಲ್ಲಿರುವ ಸೆಲೆಬ್ರೆಟಿಗಳ ಪಟ್ಟಿ ಹೀಗಿದೆ.

ಫೆಬ್ರವರಿ 3ನೇ ವಾರ ಟ್ರೆಂಡಿಂಗ್‌ನಲ್ಲಿರುವ ತಾರೆಯರು ಇವರೇ

1. ರಾಶಿ ಖನ್ನಾ
2. ಶಾರುಖ್‌ ಖಾನ್‌
3. ವಿಜಯ್ ಸೇತುಪತಿ
4. ರೆಜಿನಾ ಕ್ಯಾಸೆಂಡ್ರಾ
5. ಆದಿತ್ಯ ಛೋಪ್ರಾ
6. ದೀಪಿಕಾ ಪಡುಕೋಣೆ
7. ಖಾದರ್‍‌ ಖಾನ್
8. ಭುವನ್‌ ಅರೋರಾ
9. ಅನುಪಮ್‌ ಖೇರ್‍‌
10. ಕಿಯಾರಾ ಅಡ್ವಾನಿ
11. ಅಯೆಷಾ ಕಂಗಾ
12. ಐಶ್ವರ್ಯಾ ರೈ ಬಚ್ಚನ್‌
13. ಶಾಹೀದ್‌ ಕಪೂರ್‍‌
14. ಕುಬ್ರಾ ಸೇಟ್‌
15. ರಾಮ್‌ ಚರಣ್‌ ತೇಜಾ
16. ಅಂಜಲಿ ಶಿವರಾಮನ್‌
17. ಸಲ್ಮಾನ್‌ ಖಾನ್‌
18. ಯಶ್‌ ಛೋಪ್ರಾ
19. ಕೃಷ್ಣ ಡಿಕೆ
20. ನೋರಾ ಫತೇಹಿ

Imdb Popular Indian 20 Celebrities Treanding week Of feb 20th List Is Here

ಈ ಪಟ್ಟಿಯ ಸಿದ್ಧವಾಗಿದ್ದು ಹೇಗೆ? ಮಾನದಂಡವೇನು?

IMDb ಈ ಪಟ್ಟಿಯನ್ನು ಹೇಗೆ ಆಯ್ಕೆ ಮಾಡಿದೆ ಎನ್ನುವುದನ್ನು ಈಗಾಗಲೇ ಹೇಳಿದೆ. ಇದರೊಂದಿಗೆ ಸಿನಿಮಾಗಿಂತ ಹೆಚ್ಚು ವೆಬ್‌ ಸಿರೀಸ್‌ ಮೇಲೆ ಜನರು ಆಸಕ್ತಿ ತೋರಿದ್ದಾರೆ ಅನ್ನೋ ಅಂಶದ ಮೇಲೆ ಬೆಳಕು ಚೆಲ್ಲಿದೆ. IMDb ಪಟ್ಟಿ ಮಾಡಿರುವಂತೆ ಈ ವಾರ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಅಮೆಜಾನ್ ಪ್ರೈಂನ 'ಫರ್ಜಿ' ಸಿರೀಸ್, ನೆಟ್‌ಫ್ಲಿಕ್ಸ್‌ನ 'ದಿ ರೋಮ್ಯಾಂಟಿಕ್ಸ್‌', 'ಕ್ಲಾಸ್‌'ನಲ್ಲಿ ಕಾಣಿಸಿಕೊಂಡವರೇ ಹೆಚ್ಚಿದ್ದಾರೆ. ಇದರೊಂದಿಗೆ ಶಾರುಖ್ ಖಾನ್ ಸಿನಿಮಾ 'ಪಠಾಣ್' ನಂತ್ರ ಸ್ಥಾನದಲ್ಲಿದೆ. ಹೀಗಾಗಿ ಸಿನಿಮಾ ಥಿಯೇಟರ್‌ನಲ್ಲಿ ದಾಖಲೆ ಬರೆದಿದ್ದರೂ, ಇನ್ನೂ ವೆಬ್ ಸಿರೀಸ್ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ ಅನ್ನೋದಂತೂ ಸ್ಪಷ್ಟ

ಅಮೆಜಾನ್ ಪ್ರೈಮ್‌ ವಿಡಿಯೋದ ವೆಬ್ ಸಿರೀಸ್ 'ಫರ್ಜಿ'ಯ 6 ಮಂದಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಶಿ ಖನ್ನಾ 1ನೇ ಸ್ಥಾನದಲ್ಲಿದ್ದರೆ, ವಿಜಯ್ ಸೇತುಪತಿ 3ನೇ ಸ್ಥಾನದಲ್ಲಿದ್ದಾರೆ. ಹಾಗೇ ಶಾಹೀದ್‌ ಕಪೂರ್, ರೆಜಿನಾ ಕ್ಯಾಸೆಂಡ್ರಾ, ಭುವನ್‌ ಅರೊರಾ, ಕುಬ್ರಾ ಸೇಟ್‌ ಕೂಡ ಈ ಪಟ್ಟಿಯಲ್ಲಿದ್ದಾರೆ. ಇವರೊಂದಿಗೆ ರೈಟರ್, ಡೈರೆಕ್ಟರ್ ಕೃಷ್ಣ ಡಿ ಕೆ ಕೂಡ ಟ್ರೆಂಡಿಂಗ್ ಪಟ್ಟಿಯಲ್ಲಿದ್ದಾರೆ. ಯಶ್‌ ರಾಜ್‌ ಫಿಲ್ಮ್ಸ್ ಸಂಸ್ಥೆಯ ಆದಿತ್ಯ ಛೋಪ್ರಾ 'ದಿ ರೋಮ್ಯಾಂಟಿಕ್ಸ್‌'ನಲ್ಲಿ ನೀಡಿದ ಅಪರೂಪದ ಸಂದರ್ಶನದಿಂದ 5ನೇ ಸ್ಥಾನದಲ್ಲಿದ್ದಾರೆ. ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಬರೆದ 'ಪಠಾಣ್‌' ಸಿನಿಮಾದ ಸ್ಟಾರ್ ಶಾರುಖ್‌ ಖಾನ್‌ 2ನೇ ಸ್ಥಾನದಲ್ಲಿದ್ದಾರೆ. ದೀಪಿಕಾ ಪಡುಕೋಣೆ 6ನೇ ಸ್ಥಾನದಲ್ಲಿದ್ದಾರೆಂದು IMDb ಹೇಳಿಕೊಂಡಿದೆ.

IMDb ಪ್ರತಿ ಸೋಮವಾರ ಈ ಪಟ್ಟಿಯನ್ನು ನವೀಕರಿಸುತ್ತೆ. ತಿಂಗಳಿಗೆ ವಿಶ್ವದಾದ್ಯಂತ ಸುಮಾರು 200 ಮಿಲಿಯನ್‌ಗಿಂತಲೂ ಅಧಿಕ ವಿಸಿಟರ್‌ಗಳನ್ನು ಆಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಪಟ್ಟಿಯನ್ನು ನಿರ್ಧಾರ ಮಾಡುತ್ತೆ. ಮುಂದಿನವಾರ ಟ್ರೆಂಡಿಂಗ್‌ನಲ್ಲಿರುವ ಹೊಸ ಪಟ್ಟಿಯನ್ನು ಸಿದ್ಧ ಪಡಿಸುತ್ತೆ. ಈ ವಾರದ ಪಟ್ಟಿಯಲ್ಲಿ ಕನ್ನಡದ ಒಬ್ಬರೇ ಒಬ್ಬ ನಟ ಕೂಡ ಇಲ್ಲದೆ ಇರೋದು ಕನ್ನಡಿಗರಿಗೆ ಬೇಸರ ತರಿಸಿದೆ. ಆದರೆ, ಮುಂದಿನ ವಾರವಾದರೂ, ಯಾರಾದರೂ ಒಬ್ಬ ಕನ್ನಡದ ನಟ ಟ್ರೆಂಡಿಂಗ್‌ನಲ್ಲಿ ಇರುತ್ತಾರಾ? ಅನ್ನೋದನ್ನು ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.

More from Filmibeat

English summary
Imdb Popular Indian 20 Celebrities Treanding week Of feb 20th List Is Here. Raashi Khanna No1. Shah Rukh Khan No 2. Here is the full list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X