James Wan:ಹಾರರ್ ಸಿನಿಮಾಗೆ ಹೆಸರಾದ ಜೇಮ್ಸ್ ವ್ಯಾನ್ ನಿರ್ದೇಶಿಸಿದ ಟಾಪ್ 5 ಸಿನಿಮಾ ಈ ಓಟಿಟಿ ವೇದಿಕೆಗಳಲ್ಲಿ ಲಭ್ಯ

ಹಾರರ್ ಹಾಗೂ ಸಸ್ಪೆನ್ಸ್ ಸಿನಿಮಾಗಳ ಡೈರೆಕ್ಟರ್ ಜೇಮ್ಸ್ ವ್ಯಾನ್. ಸಿನಿ ಪ್ರೇಮಿಗಳಿಗೆ ಭಯ ಹುಟ್ಟಿಸುವ 47 ವರ್ಷದ ಈ ನಿರ್ದೇಶಕ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹಾರರ್ ಕತೆಗಳನ್ನು ವಿಶಿಷ್ಟವಾಗಿ ಹೇಳುವ ಜೇಮ್ಸ್ ವ್ಯಾನ್ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಕುತೂಹಲ ಕೆರಳಿಸುವ ಹಾರರ್ ಸಿನಿಮಾ 'ಸಾ' ಮೂಲಕ ನಿರ್ದೇಶಕಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ 2004ರಲ್ಲಿ ತೆರೆಕಂಡು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

ಜೇಮ್ಸ್ ವ್ಯಾನ್ ಆಕ್ಷನ್, ಹಾರರ್ ಮತ್ತು ಸೈನ್ಸ್ ಫಿಕ್ಷನ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇವುಗಳಲ್ಲಿ ಇವರು ನಿರ್ದೇಶಿಸಿದ ಹಾರರ್ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ವಿಶ್ವದಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ನೀವೇನಾದರೂ ಜೇಮ್ಸ್ ವ್ಯಾನ್ ಫ್ಯಾನ್ ಆಗಿದ್ದರೆ, ಓಟಿಟಿಯಲ್ಲಿ ಅವರು ನಿರ್ದೇಶಿಸಿದ ಈ ಟಾಪ್ 5 ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು.

In which OTT platforms are streaming these top 5 must-watch movies directed by James Wan

ಆ ಐದು ಸಿನಿಮಾಗಳು ಯಾವುವು? ಯಾವ್ಯಾವ ವೇದಿಕೆಗಳಲ್ಲಿ ಲಭ್ಯವಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಜಿಯೋಸಿನಿಮಾದಲ್ಲಿ ಅಕ್ವಮ್ಯಾನ್ (2023)

'ಅಕ್ವಮ್ಯಾನ್ ಮತ್ತು ಲಾಸ್ಟ್ ಕಿಂಗ್ಡಂ' ಇದು 2023ರ ಬ್ಲಾಕ್ ಬಸ್ಟರ್ ಸಿನಿಮಾ. ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಇದು 2023ರ ಅಮೆರಿಕನ್ ಸೂಪರ್ ಹೀರೋ ಸಿನಿಮಾ ಆಗಿದ್ದು, ಜೇಮ್ಸ್ ವ್ಯಾನ್ ನಿರ್ದೇಶಿಸಿದ್ದಾರೆ. ಡಿಸಿ ಸ್ಟುಡಿಯೋಸ್ ನಿರ್ಮಾಣ, ಅಟಾಮಿಕ್ ಮಾನ್ಸ್ಟರ್, ದಿ ಸರ್ಫನ್ ಕಂಪನಿ ಮತ್ತು ಡೊಮೈನ್ ಎಂಟರ್ಟೈನ್ ಮೆಂಟ್‌ನ ಈ ಸಿನಿಮಾವು 205 ಮಿಲಿಯನ್ ಡಾಲರ್ ಬಜೆಟ್‌ನಲ್ಲಿ ನಿರ್ಮಾಣ ಆಗಿತ್ತು. ಹಾಲಿವುಡ್‌ನ ಸ್ಟಾರ್ ನಟ ಜೇಸನ್ ಮೊಮೋ ಆರ್ಥರ್ ಕರಿ ಇಲ್ಲಿ ಅಕ್ವಾಮ್ಯಾನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜಿಯೋ ಸಿನಿಮಾದಲ್ಲಿ ಲಭ್ಯವಿದೆ.

ಅಮೆಜಾನ್ ಪ್ರೈಮ್‌ನಲ್ಲಿ 'ಡೆಡ್ ಸೈಲೆನ್ಸ್'

'ಡೆಡ್ ಸೈಲೆನ್ಸ್' ಸಿನಿಮಾ ಸೂಪರ್ ನ್ಯಾಚುರಲ್ ಹಾರರ್ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತೆ. ಜೇಮ್ಸ್ ವ್ಯಾನ್ ನಿರ್ದೇಶನದ ಈ ಅಮೆರಿಕನ್ ಸಿನಿಮಾದಲ್ಲಿ ರಯಾನ್ ಕ್ವಾಂಟೆನ್ ನಟಿಸಿದ್ದಾರೆ. ಈ ಸಿನಿಮಾ ಹೀರೊ ಪತ್ನಿ ನಿಗೂಢವಾಗಿ ಕಣ್ಮರೆಯಾಗುತ್ತಾರೆ. ಆ ನಂತರ ಆಕೆಯನ್ನು ಹುಡುಕಿಕೊಂಡು ಹೋಗುವ ಕಥೆ. ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಇದೆ.

ನೆಟ್ ಫ್ಲಿಕ್ಸ್ ನಲ್ಲಿ 'ಇನ್ಸಿಡಿಯಸ್ 1'

'ಇನ್ಸಿಡಿಯಸ್ ಚಾಪ್ಟರ್ 1' ಇದೊಂದು ಸೂಪರ್ ನ್ಯಾಚುರಲ್ ಹಾರರ್ ಕ್ಲಾಸಿಕ್ ಸಿನಿಮಾ. ಪ್ಯಾಟ್ರಿಕ್ ವಿಲ್ಸನ್, ರೋಸ್ ಬೈರ್ನೆ ಮತ್ತು ಬಾರ್ಬರಾ ಹರ್ಷೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು 'ಇನ್ಸಿಡಿಯಸ್' ಫ್ರಾಂಚೈಸಿಯ ಮೊದಲ ಸರಣಿ. ಸಿನಿಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಂಪತಿಯ ಪುತ್ರ ನಿಗೂಢವಾಗಿ ಕೋಮಾ ಸ್ಥಿತಿ ತಲುಪುತ್ತಾನೆ. ಇದನ್ನು ಭೇದಿಸುವ ಕಥೆಯೇ 'ಇನ್ಸಿಡಿಯಸ್ 1'.

ನೆಟ್ ಫ್ಲಿಕ್ಸ್‌ನಲ್ಲಿ 'ಕಾಂಜ್ಯೂರಿಂಗ್ 1'

2013ರಲ್ಲಿ 'ದಿ ಕಾಂಜ್ಯೂರಿಂಗ್' ಸಿನಿಮಾ ರಿಲೀಸ್ ಆಗುತ್ತಿತ್ತು. ಈ ಸಿನಿಮಾಗೆ ವಿಶ್ವದಾದ್ಯಂತ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಅಮೆರಿಕನ್ ಸಿನಿಮಾದ ಯಶಸ್ಸು ಹಲವು ಸರಣಿಗಳನ್ನೇ ಹುಟ್ಟು ಹಾಕಿತ್ತು. ಅಲ್ಲದೆ ಹಾರರ್ ಸಿನಿಮಾಗಳ ನಿರ್ಮಾಣಕ್ಕೆ ಕಾರಣವಾಗಿತ್ತು. 'ಕಾಂಜ್ಯೂರಿಂಗ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ಝೀ5 ನಲ್ಲಿ 'ಫಾಸ್ಟ್ ಅಂಡ್ ಫ್ಯೂರಿಯಸ್ 7'

ಕೇವಲ ಭಯ ಹುಟ್ಟಿಸುವ ಅಥವಾ ಸೈನ್ಸ್ ಫಿಕ್ಷನ್ ಸಿನಿಮಾಗಳಷ್ಟೇ ಅಲ್ಲ. ಜಗತ್ತೇ ಬೆಚ್ಚಿಬೀಳುವ ಆಕ್ಷನ್ ಸಿನಿಮಾಗಳನ್ನು ಜೇಮ್ಸ್ ವ್ಯಾನ್ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ 'ಫಾಸ್ಟ್ ಅಂಡ್ ಫ್ಯೂರಿಯಸ್ 7' ಸಿನಿಮಾ ಕೂಡ ಒಂದು. ಇದು ಫಾಸ್ಟ್ ಅಂಡ್ ಫ್ಯೂರಿಯಸ್‌ನ 7ನೇ ಸರಣಿಯಾಗಿದೆ. ಇದರಲ್ಲಿ ವಿನ್ ಡೀಸೆಲ್, ಪಾಲ್ ವಾಕರ್(ಅವರ ಕೊನೆಯ ಸಿನಿಮಾ), ಡ್ವಾಯ್ನೆ ಜಾನ್ಸನ್, ಡ್ವಾಯ್ನೆ ಜಾನ್ಸನ್, ಮಿಷೆಲ್ ರೋಡ್ರಿಗಸ್, ಟೈರೀಸ್ ಗಿಬ್ಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಝೀ5 ನಲ್ಲಿ ಲಭ್ಯವಿದೆ.

More from Filmibeat

English summary
James Wan top 5 movie in OTT platforms:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X