INDIAN-2 OTT : 'ಇಂಡಿಯನ್-2' ಓಟಿಟಿ ರಿಲೀಸ್ ಡೇಟ್ ಘೋಷಣೆ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ತೆರೆಮೇಲೆ ಸಿನಿಮಾ ಮ್ಯಾಜಿಕ್ ಮಾಡಲಿಲ್ಲ. ಶಂಕರ್- ಕಮಲ್ ಕಾಂಬಿನೇಷನ್ ವರ್ಕ್ ಆಗಲಿಲ್ಲ. ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ತೆರೆಗೆ ತಂದು ಚಿತ್ರತಂಡ ಸೋಲುಂಡಿದೆ.
ಬಾಕ್ಸಾಫೀಸ್‌ನಲ್ಲಿ 'ಇಂಡಿಯನ್-2' ಹೀನಾಯವಾಗಿ ಸೋತಿದೆ. ಸದ್ಯ ಓಟಿಟಿ ಸ್ಟ್ರೀಮಿಂಗ್‌ಗಾಗಿ ಸಿನಿರಸಿಕರು ಕಾಯುವಂತಾಗಿದೆ. 1996ರಲ್ಲಿ ಬಂದಿದ್ದ 'ಇಂಡಿಯನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಭ್ರಷ್ಟಾಚಾರದ ವಿರುದ್ಧ ಸೇನಾಪತಿ ತಾತನ ಹೋರಾಟ ನೋಡಿ ಪ್ರೇಕ್ಷಕರ ಮೈ ಜುಮ್ ಎನಿಸಿತ್ತು. 28 ವರ್ಷಗಳ ಬಳಿಕ ಅದೇ ಕಥೆಯನ್ನು ಮುಂದುವರೆಸಿ ಇಂದಿನ ಭ್ರಷ್ಟಾಚಾರದ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ.

ಮತ್ತೆ ಸೇನಾಪತಿಯಾಗಿ ಹಲವು ಗೆಟಪ್‌ಗಳಲ್ಲಿ ಕಮಲ್ ಹಾಸನ್ ಪ್ರೇಕ್ಷಕರ ಮುಂದೆ ಬಂದಿದ್ದರು. ಜುಲೈ 12ಕ್ಕೆ ತೆರೆಕಂಡ ಸಿನಿಮಾ ಮೊದಲ ಶೋನಿಂದಲೇ ನೆಗೆಟಿಕ್ ಟಾಕ್ ಪಡೆದುಕೊಂಡಿತ್ತು. ಬಳಿಕ ಸಿನಿಮಾ ಮೇಲೇಳಲೇ ಇಲ್ಲ. ಒಟ್ಟೊಟ್ಟಿಗೆ ಸರಣಿಯ ಎರಡು ಹಾಗೂ ಮೂರನೇ ಸಿನಿಮಾವನ್ನು ಶಂಕರ್ ಸೆರೆ ಹಿಡಿದಿದ್ದಾರೆ. ಮುಂದಿನ ವರ್ಷ 'ಇಂಡಿಯನ್-3' ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಆದರೆ ಎರಡನೇ ಭಾಗಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡಕ್ಕೆ ಶಾಕ್ ತಂದಿದೆ.
ಶಂಕರ್ ನಿರ್ದೇಶನದ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಅದೇ ಕಾರಣಕ್ಕೆ ತಮ್ಮದೇ ಸೂಪರ್ ಹಿಟ್ ಸಿನಿಮಾ ಕಥೆಯನ್ನೇ ಮುಂದುವರೆಸುವ ಸಾಹಸ ಮಾಡಿದ್ದರು. ಆದರೆ ಈ ಪ್ರಯತ್ನದಲ್ಲೂ ಸೋತಿದ್ದಾರೆ. 'ವಿಕ್ರಂ' ಚಿತ್ರದಲ್ಲಿ ನಟಿಸಿ ಮತ್ತೆ ಭರ್ಜರಿ ಕಂಬ್ಯಾಕ್ ಮಾಡಿದ್ದ ಕಮಲ್ ಇದೀಗ ಮತ್ತೆ ಸೋಲಿನ ಕಹಿ ಉಂಡಿದ್ದಾರೆ. 'ಇಂಡಿಯನ್-2' ಸಿನಿಮಾ ಸೆಟ್ಟೇರಿದ ದಿನದಿಂದಲೂ ನಾನಾ ಸಂಕಷ್ಟ ಎದುರಾಗಿತ್ತು. ಎಲ್ಲವನ್ನೂ ಮೀರಿ ಸಿನಿಮಾ ತೆರೆಗೆ ಬಂದಿತ್ತು.
'ಇಂಡಿಯನ್-2' ಓಟಿಟಿ ಸಮಸ್ಯೆ
ದೊಡ್ಡ ಸಿನಿಮಾಗಳನ್ನು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಮುಗಿಬಿದ್ದು ಕೊಂಡುಕೊಳ್ಳುತ್ತವೆ. 'ಇಂಡಿಯನ್-2' ಹೈಪ್ ನೋಡಿ ನೆಟ್‌ಫ್ಲಿಕ್ಸ್ ಸಂಸ್ಥೆ ಭಾರೀ ಮತ್ತೊಕ್ಕೆ ರೈಟ್ಸ್ ಕೊಂಡುಕೊಂಡಿತ್ತು. ಅಂದಾಜು 120 ಕೋಟಿ ರೂ.ಗೆ ಡೀಲ್ ಆಗಿತ್ತು ಎನ್ನಲಾಗ್ತಿದೆ. ಆದರೆ ಸಿನಿಮಾ ಹೀನಾಯವಾಗಿ ಸೋತಿದ್ದರಿಂದ ನೆಟ್‌ಫ್ಲಿಕ್ಸ್ ಅಷ್ಟು ಹಣ ಕೊಡಲು ಹಿಂದೇಟು ಹಾಕುತ್ತಿದೆ ಎನ್ನಲಾಗ್ತಿದೆ. ಇದೀಗ 60 ಕೋಟಿ ರೂ.ಗೆ ಡೀಲ್ ಕುದುರಿಸುವ ಬಗ್ಗೆ ಗುಸುಗುಸು ಶುರುವಾಗಿದೆ.

ಆಗಸ್ಟ್ 9ಕ್ಕೆ ಓಟಿಟಿಗೆ ಎಂಟ್ರಿ
ಸಾಮಾನ್ಯವಾಗಿ ಯಾವುದೇ ಸಿನಿಮಾ ತೆರೆಗೆ ಬಂದ 45 ದಿನಗಳ ಬಳಿಕ ಓಟಿಟಿಗೆ ಬರುತ್ತದೆ. ಆದರೆ 'ಇಂಡಿಯನ್-2' ಸಿನಿಮಾ ಬಹಳ ಬೇಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರುತ್ತದೆ ಎನ್ನಲಾಗಿತ್ತು. ಆಗಸ್ಟ್ 15ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಚರ್ಚೆ ನಡೀತಿತ್ತು. ಆದರೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಅದಕ್ಕಿಂತ ಮುನ್ನ ಅಂದರೆ ಆಗಸ್ಟ್ 9ಕ್ಕೆ ರಿಲೀಸ್ ಮಾಡಲು ಮುಂದಾಗಿದ್ದಾರೆ. ನೆಟ್‌ಫ್ಲಿಕ್ಸ್ ಅಧಿಕೃತವಾಗಿ ರಿಲೀಸ್ ಡೇಟ್ ಘೋಷಿಸಿದೆ. ಅಂದರೆ ತಿಂಗಳಿಗೂ ಮುನ್ನ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
'ಇಂಡಿಯನ್-2' ಹಾಗೂ 'ಇಂಡಿಯನ್-3' ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋತರೂ ಡಿಜಿಟಲ್ ರೈಟ್ಸ್‌ನಿಂದಲೇ ಲೈಕಾ ಸಂಸ್ಥೆಗೆ ಒಳ್ಳೆ ಹಣ ಬಂದಿದೆ ಎನ್ನಲಾಗಿತ್ತು. ಇದೀಗ ಓಟಿಟಿ ಡೀಲ್‌ನಲ್ಲೂ ರಾಜಿ ಮಾಡಿಕೊಳ್ಳುವಂತಾಗಿದೆ. ದಕ್ಷಿಣದ 4 ಭಾಷೆಗಳಲ್ಲಿ ಮುಂದಿನ ವಾರ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ. ಹಿಂದೆ ವರ್ಷನ್ ಕೊಂಚ ತಡವಾಗಬಹುದು.


Click it and Unblock the Notifications











