ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತ 'ಮಹಾವತಾರ್ ನರಸಿಂಹ' ಓಟಿಟಿಗೆ ಬರೋದ್ಯಾವಾಗ? ಬಾಕ್ಸಾಫೀಸ್‌ನಲ್ಲೂ ಕಲೆಕ್ಷನ್ ಚಿಂದಿ!
ಭಾರತೀಯ ಚಿತ್ರರಂಗದಲ್ಲಿ ಸದಾ ಪ್ರಯೋಗಗಳು ಆಗುತ್ತಲೇ ಇರುತ್ತವೆ. ರೆಗ್ಯೂಲರ್ ಲವ್ ಸ್ಟೋರಿ, ಆಕ್ಷನ್ ಸಿನಿಮಾಗಳ ಮಧ್ಯೆ 'ಮಹಾವತಾರ್ ನರಸಿಂಹ'ದಂತಹ ಸಿನಿಮಾಗಳು ಎಂಟ್ರಿ ಕೊಟ್ಟು ಹೊಸ ಟ್ರೆಂಡ್ ಅನ್ನು ಹುಟ್ಟಾಕುತ್ತವೆ. ಕರ್ನಾಟಕದಲ್ಲಿ 'ಸು ಫ್ರಮ್ ಸೋ' ದರ್ಬಾರ್ ಮಾಡುತ್ತಿದ್ದರೆ, ಭಾರತದಾದ್ಯಂತ ಅನಿಮೆಟೆಡ್ ಪೌರಾಣಿಕ ಸಿನಿಮಾ 'ಮಹಾವತಾರ್ ನರಸಿಂಹ' ಸೌಂಡು ಮಾಡುತ್ತಿದೆ.
'ಮಹಾವತಾರ್ ನರಸಿಂಹ' ಪೌರಾಣಿಕ ಅದರಲ್ಲೂ ಆಮಿಮೆಟೆಡ್ ಸಿನಿಮಾ ಆಗಿದ್ದರಿಂದ ಪೋಷಕರು ಮಕ್ಕಳಿಗೆ ಈ ಸಿನಿಮಾವನ್ನು ತೋರಿಸಲು ಆಸಕ್ತಿ ತೋರುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡ ವರ್ಷನ್‌ಗೆ ಆರಂಭ ಮೂರು ದಿನಗಳು ಉತ್ತಮ ಪ್ರಕ್ರಿಯೆ ಸಿಕ್ಕಿರಲಿಲ್ಲ. ಮೊದಲ ವೀಕೆಂಡ್ ಮುಗಿದ ಬಳಿಕ ದಿಢೀರನೇ ಗಳಿಕೆಯಲ್ಲಿ ಏರಿಕೆಯಾಗಿದೆ. ಕನ್ನಡ ಅಷ್ಟೇ ಅಲ್ಲ, ಹಿಂದಿ ಹಾಗೂ ತೆಲುಗು ಭಾಷೆಯಲ್ಲೂ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ.

ಈ ಅನಿಮೆಟೆಡ್ ಸಿನಿಮಾಗೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಸಖತ್ ಆಗಿಯೇ ಸಿಗುತ್ತಿದೆ. ಈ ಮಧ್ಯೆ 'ಮಹಾವತಾರ್ ನರಸಿಂಹ' ಓಟಿಟಿಗೆ ಯಾವಾಗ ಬರುತ್ತೆ? ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದರಿಂದ ಶೀಘ್ರದಲ್ಲಿ ಓಟಿಟಿಗೆ ಬರೋದು ಅನುಮಾನ. ಹಾಗಿದ್ದರೆ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾದ ಓಟಿಟಿ ರಿಲೀಸ್ ಯಾವಾಗ? ಬಾಕ್ಸಾಪೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಬಾಕ್ಸಾಫೀಸ್‌ನಲ್ಲಿ ನರಸಿಂಹನ ಮಹಾವತಾರ!
ಶಿಲ್ಪ ಧವನ್, ಕುಶಾಲ್ ದೇಸಾಯಿ ಹಾಗೂ ಚೈತನ್ಯ ದೇಸಾಯಿ ಮೂವರು ಸೇರಿ ನಿರ್ಮಿಸಿರುವ 'ಮಹಾವತಾರ್ ನರಸಿಂಹ' ಅನಿಮೆಟೆಡ್ ಸಿನಿಮಾಗೆ ಕನ್ನಡದ ಹೊಂಬಾಳೆ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಒಳ್ಳೆಯ ಸಿನಿಮಾಗಳನ್ನು ಸಿನಿಪ್ರಿಯರಿಗೆ ನೀಡುತ್ತಾ ಬಂದಿರುವ ಈ ಸಂಸ್ಥೆ ಮತ್ತೊಂದು ಮಾಸ್ಟರ್‌ಪೀಸ್ ಅನ್ನು ಪ್ರೇಕ್ಷಕರಿಗೆ ಕೊಟ್ಟಿದೆ. ಜುಲೈ 25ಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರತದಾದ್ಯಂತ ಸುಮಾರು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುತ್ತಿದೆ. ವಿಶೇಷ ಅಂದರೆ, ವೀಕ್ ಡೇಸ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆ.
ಹಿಂದಿ, ತೆಲುಗಿನಲ್ಲಿ ಭರ್ಜರಿ ರೆಸ್ಪಾನ್ಸ್
'ಮಹಾವತಾರ್ ನರಸಿಂಹ' ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಈ ಐದು ಭಾಷೆಗಳಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಕಳೆದ ಐದು ದಿನಗಳಲ್ಲಿ ಹಿಂದಿ ಭಾಷೆಯಿಂದ ₹20 ಕೋಟಿ, ತೆಲುಗು ಭಾಷೆಯಿಂದ ₹7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಭಾರತದಾದ್ಯಂತ ಈ ಅನಿಮೆಟೆಡ್ ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಓಟಿಟಿ ರಿಲೀಸ್ ಯಾವಾಗ?
ಸಾಮಾನ್ಯವಾಗಿ ಯಾವುದೇ ಸಿನಿಮಾ ರಿಲೀಸ್ ಆದರೂ, ಓಟಿಟಿಗೆ ಲಗ್ಗೆ ಇಡುವುದಕ್ಕೆ 60 ದಿನಗಳ ಅಂತರವಿರುತ್ತೆ. ಆದರೆ, 'ಮಹಾವತಾರ್ ನರಸಿಂಹ' ಥಿಯೇಟರ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿರುವುದರಿಂದ ಓಟಿಟಿ ರಿಲೀಸ್ ತಡವಾಗಬಹುದೆಂದು ಅಂದಾಜಿಸಲಾಗಿದೆ. ಆದರೂ ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡಬಹುದೆಂಬ ನಿರೀಕ್ಷೆಯಿದೆ. ಆದರೆ, ನಿರ್ಮಾಣ ಸಂಸ್ಥೆ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಓಟಿಟಿ ಪ್ಲಾಟ್‌ಫಾರ್ಮ್ ಯಾವುದು?
ಇನ್ನು 'ಮಹಾವತಾರ್ ನರಸಿಂಹ' ಸಿನಿಮಾದ ಡಿಜಿಟಲ್ ಬ್ಯುಸಿನೆಸ್ ಬಗ್ಗೆನೂ ಅಧಿಕೃತ ಮಾಹಿಲ್ಲ. ಹೀಗಾಗಿ ಯಾವ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗುತ್ತೆ ಅನ್ನೋದು ಗೊತ್ತಿಲ್ಲ. ಅಮೆಜಾನ್ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್ ಈ ಮೂರರಲ್ಲಿ ಯಾವುದರಲ್ಲಾದರೂ ಸ್ಟ್ರಿಮಿಂಗ್ ಆಗಬಹುದೆಂಬ ನಿರೀಕ್ಷೆಯಿದೆ. ಅತಿ ಹೆಚ್ಚು ಗಳಿಕೆ ಕಂಡ ಸದ್ಯ ಭಾರತದ ಆನಿಮೆಡ್ ಸಿನಿಮಾ ಮುಂದಿನ ದಿನಗಳಲ್ಲಿ ಯಾವ ಮಟ್ಟಿಗೆ ಸದ್ದು ಮಾಡುತ್ತೋ ನೋಡಬೇಕಿದೆ.


Click it and Unblock the Notifications











