ಜಿಯೊ ಸಿನಿಮಾದಲ್ಲಿ 'ಹೌಸ್ ಆಫ್ ಡ್ರ್ಯಾಗನ್' ಸೀಸನ್ 2: ಕನ್ನಡದಲ್ಲೂ ನೋಡಬಹುದು

ಒಟಿಟಿಯಲ್ಲಿ ವಾರಕ್ಕೊಂದು ಹೊಸ ವೆಬ್ ಸೀರಿಸ್ ಅನ್ನು ಸ್ಟ್ರೀಮಿಂಗ್ ಆಗುತ್ತಲೇ ಇರುತ್ತೆ. ಕಾಂಪಿಟೇಷನ್‌ಗೆ ಬಿದ್ದು ಹೊಸ ಸಿನಿಮಾ, ವೆಬ್ ಸೀರಿಸ್ ಪ್ರೇಕ್ಷಕರನ್ನು ರಂಜಿಸುವುದಕ್ಕೆ ವೀಕೆಂಡ್‌ನಲ್ಲಿ ಕಾದು ಕೂತಿರುತ್ತೆ. ಈಗ ಜಿಯೋ ಸಿನಿಮಾ ಕೂಡ ಪೈಪೋಟಿಗೆ ಇಳಿದಿದ್ದು ಜನಪ್ರಿಯ ವೆಬ್ ಸೀರಿಸ್ 'ಹೌಸ್ ಆಫ್ ಡ್ರ್ಯಾಗನ್' ಸೀಸನ್ 2 ಸ್ಟ್ರೀಮಿಂಗ್ ಮಾಡುವುದಕ್ಕೆ ನಿರ್ಧರಿಸಿದೆ.

ಎಚ್.ಬಿ.ಒ.ದ ಜನಪ್ರಿಯ ಸೀರಿಸ್ 'ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್ 2 ಜಿಯೋ ಸಿನಿಮಾದಲ್ಲಿ ಪ್ರಸಾರ ಆಗಲಿದೆ. ಆಕ್ಷನ್, ಅಡ್ವೆಂಚರ್, ಫ್ಯಾಂಟಸಿ ಸೀರಿಸ್ ಅನ್ನು ನೋಡಲು ಇಚ್ಚಿಸುವ ವೀಕ್ಷಕರಿಗಾಗಿಯೇ ಈ ಸೀರಿಸ್ ಅನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಈ ವೆಬ್ ಸಿರೀಸ್‌ನ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ.

Jio Cinema House of the Dragon Season 2

ಅಂದ್ಹಾಗೆ, ಈ ಅಂತರಾಷ್ಟ್ರೀಯ ಗುಣಮಟ್ಟದ ವೆಬ್ ಸೀರಿಸ್ ಜಿಯೊ ಸಿನಿಮಾದ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುತ್ತಿದೆ. 'ಹೌಸ್ ಆಫ್ ದಿ ಡ್ರ್ಯಾಗನ್' ಸೀಸನ್ 2 ಮತ್ತೊಂದು ವಿಶೇಷ ಅಂದರೆ, ಇದು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಪ್ರಸಾರ ಆಗುತ್ತಿದೆ. ಜೂನ್ 17ರಿಂದ ಜಿಯೋ ಸಿನಿಮಾದಲ್ಲಿ ಈ ಸೀರಿಸ್ ಅನ್ನು ನೋಡಬಹುದಾಗಿದೆ. ಪ್ರತಿ ಸೋಮವಾರ ಅಮೆರಿಕ ಸೇರಿದಂತೆ ಎಲ್ಲಾ ದೇಶಗಳಲ್ಲಿ ಕಂತುಗಳಾಗಿ ಪ್ರಸಾರ ಆಗಲಿದೆ.

ಜಾರ್ಜ್ ಆರ್ ಆರ್ ಮಾರ್ಟಿನ್ ಅವರ 'ಫೈರ್ ಅಂಡ್ ಬ್ಲಡ್ ಕಥೆಯನ್ನು ಈ ವೆಬ್ ಸೀರಿಸ್ ಆಧರಿಸಿದೆ. ಇದು ಹೌಸ್ ಟಾರ್ಗೇರಿಯನ್ ಕಥೆಯನ್ನು ಹೇಳುತ್ತಿದ್ದು, ಈ ರಾಜ ಕುಟುಂಬದಲ್ಲಿ ನಡೆದ ಅಧಿಕಾರದ ಸಂಘರ್ಷಗಳ ಬಳಿಕ ಈ ರಾಜಮನೆತನ ಹೇಗೆ ರಾಜಕೀಯ ಒಳಸಂಚು ಹಾಗೂ ಕೌಟುಂಬದಲ್ಲಿಯೇ ಇರುವ ಶತ್ರುಗಳನ್ನು ಎದುರಿಸಿ ಮುನ್ನಡೆಯುತ್ತದೆ? ಹಾಗೆಯೇ ಉಕ್ಕಿನ ಸಿಂಹಾಸನವನ್ನು ಮರಳಿ ಪಡೆಯಲು ಆಂತರಿಕ ಯುದ್ಧವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ತೋರಿಸಲಾಗುತ್ತೆ.

Jio Cinema House of the Dragon Season 2

ಈ ವೆಬ್ ಸೀರಿಸ್‌ನಲ್ಲಿ ಪ್ರಮುಖವಾಗಿ ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿ'ಅರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್-ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ತಾರಾಗಣ ಹೊಂದಿದೆ. ಹಾಗೆಯೇ ಹ್ಯಾರಿ ಕೊಲೆಟ್, ಬೆಥನಿ ಅಂಟೋನಿಯ, ಫೋಬ್ ಕ್ಯಾಂಪ್ ಬೆಲ್, ಫಿಯಾ ಸಬನ್, ಜೆಫರ್ಸನ್ ಹಾಲ್ ಮತ್ತು ಮ್ಯಾಥ್ಯೂ ನೀಧಂ, ಅನುಬಕರ್ ಸಲೀಂ, ಗೇಯ್ಲ್ ರಂಕಿನ್, ಫ್ರೆಡ್ಡೀ ಫಾಕ್ಸ್, ಸಿಮನ್ ರಸೆಲ್ ಬೀಲ್, ಕ್ಲಿಂಟನ್ ಲಿಬರ್ಟಿ, ಜೆಮೀ ಕೆನ್ನಾ, ಕಿಯೆರನ್ ಬ್ಯೂ, ಟಾಮ್ ಬೆನೆಟ್, ಟಾಮ್ ಟೇಲರ್ ಮತ್ತು ವಿನ್ಸೆಂಟ್ ರೆಗಾನ್ ಕೂಡ ನಟಿಸಿದ್ದಾರೆ.

'ಹೌಸ್ ಆಫ್ ಡ್ರ್ಯಾಗನ್ ಸೀಸನ್ 2' ಕೇವಲ ಇಂಗ್ಲಿಷ್ ಭಾಷೆಯಲ್ಲಷ್ಟೇ ಅಲ್ಲ ಸ್ಥಳೀಯ ಭಾಷೆಗಳಲ್ಲೂ ನೋಡಬಹುದಾಗಿದೆ. ಆದರೆ, ಉಚಿತವಾಗಿ ಈ ಸೀರಿಸ್ ಲಭ್ಯವಿಲ್ಲ. ಜಿಯೊ ಸಿನಿಮಾ ಪ್ರೀಮಿಯಂನಲ್ಲಿ ಹಣ ಪಾವತಿ ಮಾಡಿ ಈ ವೆಬ್ ಸೀರಿಸ್ ಅನ್ನು ನೋಡಬಹುದಾಗಿದೆ. ಕೇವಲ ತಿಂಗಳಿಗೆ ರೂ. 29ರಲ್ಲಿ ಒಂದು ಡಿವೈಸ್‌ ಹಾಗೂ ಏಕಕಾಲಕ್ಕೆ ನಾಲ್ಕು ಸ್ಕ್ರೀನ್‌ಗಳಿಗೆ ತಿಂಗಳಿಗೆ ರೂ.89ರಲ್ಲಿ ನೀಡುತ್ತಿದೆ.

More from Filmibeat

English summary
Jio Cinema is streaming the famous House of the Dragon Season 2 Here is the OTT release date
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X