ಬಿಗ್‌ಬಾಸ್ ಸೀಸನ್ 10 ಆಯ್ತು, ಸೆಲೆಬ್ರೆಟಿ ಕ್ರಿಕೆಟ್ ಲೀಗ್ 10 ಶುರು; ಯಾವಾಗ? ಎಲ್ಲಿ?

ಸಿನಿಮಾ ಪ್ರೇಮಿಗಳು ಇಷ್ಟ ಪಡುವ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಮತ್ತೆ ಆರಂಭ ಆಗುತ್ತಿದೆ. ಕಳೆದ ಬಾರಿಯಂತೆ ಸೆಲೆಬ್ರೆಟಿಗಳು ವಾರಾಂತ್ಯದಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ. ಕ್ರೀಡೆ ಹಾಗೂ ಮನರಂಜನೆ ಎರಡೂ ಒಟ್ಟಿಗೆ ಸಿಗುವ ಸಿಸಿಎಲ್ ಸೀಸನ್ 10 ಮಸ್ತ್ ಎಂಟರ್‌ಟೈನ್ಮೆಂಟ್ ಕೊಡುವುದಕ್ಕೆ ಸಜ್ಜಾಗಿದೆ.

ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL) ಸೀಸನ್ 10 ನಾಲ್ಕು ವಾರಾಂತ್ಯದಲ್ಲಿ ಜರುಗಲಿದೆ. ಈ ನಾಲ್ಕು ವಾರಗಳಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ, ಭೋಜ್‌ಪುರಿ ಹಾಗೂ ಪಂಜಾಬ್ ತಂಡಗಳು ಭಾಗವಹಿಸಲಿವೆ. ಈ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾ ನೇರ ಪ್ರಸಾರ ಮಾಡುವುದಕ್ಕೆ ಮುಂದಾಗಿದೆ.

Jio Cinema will be the live partner for the Celebrity Cricket League 10

2011ರಲ್ಲಿ ಶುರುವಾಗಿದ್ದ ಸೆಲೆಬ್ರೆಟಿ ಕ್ರಿಕೆಟ್ ಲೀಗ್ 10ನೇ ಸೀಸನ್‌ವರೆಗೂ ಬಂದು ನಿಂತಿದೆ. ಸೀಸನ್‌ನಿಂದ ಸೀಸನ್‌ಗೆ ಸಿಸಿಎಲ್ ವೀಕ್ಷಿಸುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಕ್ರಿಕೆಟ್ ಹಾಗೂ ಸಿನಿಮಾ ತಾರೆಯರನ್ನು ಒಟ್ಟಿಗೆ ನೋಡಲು ಅವಕಾಶವಿರುವ ಈ ಪಂದ್ಯಾವಳಿ ಟಿವಿ ಹಾಗೂ ಡಿಜಿಟಲ್‌ ಮಾಧ್ಯಮದ ಮೂಲಕ ಕಳೆದ ವಾರ ಪ್ರಸಾರವಾಗಿತ್ತು. ಕಳೆದ ಸೀಸನ್‌ ಅನ್ನು ದೇಶದಾದ್ಯಂತ ಸುಮಾರು 250 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದರು.

ಸಿಸಿಎಲ್ ಸೀಸನ್ 10ರಲ್ಲಿ ಭಾರತದ ಒಟ್ಟು ಎಂಟು ಪ್ರಮುಖ ಚಿತ್ರರಂಗ ಪ್ರತಿನಿಧಿಸಲಿದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ, ಬೆಂಗಾಲಿ ಮತ್ತು ಪಂಜಾಬ್‌ ತಂಡಗಳು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಹಾಗೇ ಬೇರೆ ಬೇರೆ ಚಿತ್ರರಂಗದಿಂದ ಇನ್ನೂರಕ್ಕೂ ಅಧಿಕ ಜನಪ್ರಿಯ ತಾರೆಗಳು ಮನರಂಜನೆಯ ರಸದೂಟವನ್ನು ನೀಡಲು ಸಜ್ಜಾಗಿದ್ದಾರೆ.

ಮುಂಬೈ ಹೀರೋಸ್ ತಂಡಕ್ಕೆ ರಿತೇಶ್ ದೇಶಮುಖ್ ನಾಯಕನಾಗಿದ್ದರೆ, ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಹಾಗೇ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಮಾಲೀಕರಾಗಿದ್ದಾರೆ. 'ತೆಲುಗು ವಾರಿಯರ್ಸ್‌'ಗೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ರೆ, ವಿಕ್ಟರಿ ವೆಂಕಟೇಶ್ ಬ್ರ್ಯಾಂಡ್ ಅಂಬಾಸಿಡರ್. ಮೋಹನ್‌ಲಾಲ್‌ ಸಹ ಮಾಲೀಕರಾಗಿರುವ 'ಕೇರಳ ಸ್ಟ್ರೈಕರ್ಸ್‌' ತಂಡಕ್ಕೆ ನಾಯಕನಾಗಿ ಇಂದ್ರಜಿತ್ ತಂಡವನ್ನು ಮುನ್ನಡೆಸಲಿದ್ದಾರೆ.

ಇನ್ನು 'ಕರ್ನಾಟಕ ಬುಲ್ಡೋಜರ್ಸ್‌' ತಂಡಕ್ಕೆ ಕಿಚ್ಚ ಸುದೀಪ್‌ ನಾಯಕನಾಗಿ ಮುಂದುವರೆದಿದ್ದಾರೆ. ಇತ್ತೀಚೆಗಷ್ಟೇ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಅನ್ನು ಯಶಸ್ವಿಯಾಗಿ ಮುಗಿಸಿರುವ ಸುದೀಪ್‌ ಸಿಸಿಎಲ್‌ 10ಕ್ಕೆ ರೆಡಿಯಾಗುತ್ತಿದ್ದಾರೆ. ಹಾಗೇ 'ಭೋಜಪುರಿ ದಬಾಂಗ್ಸ್‌' ತಂಡಕ್ಕೆ ಮನೋಜ್‌ ತಿವಾರಿ ನಾಯಕ. 'ಪಂಜಾಬ್‌ ದೆ ಶೇರ್' ತಂಡಕ್ಕೆ ಸೋನು ಸೂದ್‌ ಕ್ಯಾಪ್ಟನ್. ಬೋನಿ ಕಪೂರ್ ಮಾಲೀಕರಾಗಿರುವ 'ಬೆಂಗಾಲ್ ಟೈಗರ್ಸ್‌' ತಂಡಕ್ಕೆ ಜಿಸ್ಸು ಸೆನ್‌ಗುಪ್ತ ನಾಯಕರಾಗಿದ್ದಾರೆ.

"ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಎಂಬುದು ಕ್ರೀಡೆ ಮತ್ತು ಮನರಂಜನೆ ಎರಡೂ ಜಗತ್ತುಗಳನ್ನು ಒಂದೆಡೆ ಸೇರಿಸುತ್ತಿದ್ದು, ಇಂಡಿಯಾವನ್ನು ರಂಜಿಸುವ ಉದ್ದೇಶದಿಂದ ಸಿಸಿಎಲ್‌ ಜೊತೆಗೆ ಕೈಜೋಡಿಸುತ್ತಿದ್ದೇವೆ." ಎಂದು ಜಿಯೋ ಸಿನಿಮಾದ ಬ್ಯುಸಿನೆಸ್‌ ಹೆಡ್‌ ಫರ್ಜಾದ್ ಪಾಲಿಯಾ ಹೇಳಿದ್ದಾರೆ. ಹಾಗೇ "ಸಿಸಿಎಲ್ ಹತ್ತನೇ ಸೀಸನ್‌ ಅನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೊ ಸಿನಿಮಾ ಜೊತೆಗೆ ಕೈಜೋಡಿಸಿದ್ದೇವೆ" ಎಂದು ಸಿಸಿಎಲ್ ಸಂಸ್ಥಾಪಕರಾದ ವಿಷ್ಣು ಇಂದುರಿ ಅಭಿಪ್ರಾಯ ಪಟ್ಟಿದ್ದಾರೆ.

ಕ್ರೀಡೆ ಮತ್ತು ಮನರಂಜನೆಯ ಎರಡರ ಸಮಾಗಮ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ (ಸಿಸಿಎಲ್) 10ನೇ ಸೀಸನ್‌ ಫೆಬ್ರುವರಿ 23 ರಿಂದ ಆರಂಭ ಆಗಲಿದ್ದು, ಜಿಯೋ ಸಿನಿಮಾ ನೇರ ಪ್ರಸಾರ ಮಾಡುತ್ತಿದೆ.

More from Filmibeat

English summary
Celebrity Cricket League season 10 stars from feb 23rd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X