ಯುವಕರು ಹೃದಯಾಘಾತಕ್ಕೆ ಏಕೆ ಬಲಿಯಾಗುತ್ತಿದ್ದಾರೆ? ಈ ಡಾಕ್ಯೂಮೆಂಟರಿಯಲ್ಲಿದೆ ಉತ್ತರ

ಹೃದಯಾಘಾತ ಭಾರತದ ಯುವ ಸಮುದಾಯವನ್ನು ಕಾಡುತ್ತಿರುವ ಪ್ರಶ್ನೆ. 30 ಹಾಗೂ 40ನೇ ವಯಸ್ಸಿನಲ್ಲಿ ಯುವ ಸಮುದಾಯ ಹೃದಯಾಘಾತದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ದಿಢೀರನೇ ಹೃದಯಾಘಾತದ ಕೇಸ್‌ಗಳು ಹೆಚ್ಚಾಗುತ್ತಿವೆ. ಇದು ಭಾರತವನ್ನು ಆತಂಕಕ್ಕೆ ತಳ್ಳುತ್ತಿದೆ. ಹಾಗಂತ ಕೇವಲ ಭಾರತದಲ್ಲಷ್ಟೇ ಅಲ್ಲ. ವಿಶ್ವದಾದ್ಯಂತ ಹೃದಯಾಘಾತಕ್ಕೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗಿದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಡಾಕ್ಯೂಮೆಂಟರಿಯನ್ನು ನಿರ್ಮಾಣ ಮಾಡಲಾಗಿದೆ. ಅದುವೇ 'ದಿ ಬ್ರೌನ್ ಹಾರ್ಟ್'. ಈ ಡಾಕ್ಯೂಮೆಂಟರಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮೇ 3 ರಂದು ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಇದರ ಟ್ರೈಲರ್ ರಿಲೀಸ್ ಆಗಿದ್ದು, ವಿಶ್ವದ ಖ್ಯಾತ ಹೃದ್ರೋಗ ತಜ್ಞರು ಈ ಡಾಕ್ಯೂಮೆಂಟರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ನಾಸಿರುದ್ದೀನ್ ಷಾ ಕೂಡ ಈ ಡಾಕ್ಯೂಮೆಂಟರಿಯ ಪ್ರಮುಖ ಭಾಗವಾಗಿದ್ದಾರೆ. ಹಾಗಿದ್ದರೆ 'ದಿ ಬ್ರೌನ್ ಹಾರ್ಟ್'ನಲ್ಲಿ ಏನೇನಿರುತ್ತೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

Jio hotstar s documentary-drama The Brown Heart tackles increasing cases of heart attacks in India

'ದಿ ಬ್ರೌನ್ ಹಾರ್ಟ್'ನಲ್ಲಿ ಏನೇನಿದೆ?

ಭಾರತೀಯ ಯುವ ಸಮುದಾಯವನ್ನು ಕಾಡುತ್ತಿರುವ ಹೃದಯಾಘಾತದ ಬಗ್ಗೆ ಈ ಡಾಕ್ಯೂಮೆಂಟರಿ ಬೆಳಕನ್ನು ಚೆಲ್ಲುತ್ತದೆ. ಇದು ಯುವ ಸಮುದಾಯವನ್ನು ಎಚ್ಚರಿಸುವ ಡಾಕ್ಯೂಮೆಂಟರಿ ಎಂದು ಹೇಳಲಾಗುತ್ತಿದೆ. ಇದನ್ನು ಅಮೆರಿಕ ಮೂಲದ ವೈದ್ಯರಾದ ಡಾ.ನಿರ್ಮಲ್ ಮತ್ತು ರೇಣು ಜೋಷಿ ನಿರ್ಮಾಣ ಮಾಡಿದ್ದಾರೆ. ಆರೋಗ್ಯವಾಗಿರುವ ಯುವಕರಲ್ಲಿ ಹೃದಯಾಘಾತ ಯಾಕೆ ಸಂಭವಿಸುತ್ತೆ? ಎನ್ನುವುದನ್ನು ಈ ಡಾಕ್ಯೂಮೆಂಟರಿಯಲ್ಲಿ ತಿಳಿಸಲಾಗಿದೆ. ಸುಮಾರು 40 ಮಂದಿ ವೈದ್ಯರು ಈ ಡಾಕ್ಯೂಮೆಂಟರಿಯಲ್ಲಿ ಹೃದಯಾಘಾತಕ್ಕೆ ಕಾರಣವನ್ನು ವಿವರಿಸಿದ್ದಾರೆ.

ಭಾರತ, ಅಮೆರಿಕ ಹಾಗೂ ಯುಕೆಯಲ್ಲಿನ ಜನಪ್ರಿಯ ವೈದ್ಯರು, ಹೃದಯಘಾತದಿಂದ ಬದುಕುಳಿದವರು, ಪ್ರೀತಿ ಪಾತ್ರರನ್ನು ಕಳೆದುಕೊಂಡವರನ್ನು ಮಾತಾಡಿಸಲಾಗಿದೆ. ಅಲ್ಲದೆ, ಜನಪ್ರಿಯ ವೈದ್ಯರು ಹಾಗೂ ಸಿನಿಮಾ ಪರ್ಸನಾಲಿಟಿಗಳು ಈ 'ದಿ ಬ್ರೌನ್ ಹಾರ್ಟ್' ಡಾಕ್ಯೂಮೆಂಟರಿಯಲ್ಲಿ ಆರೋಗ್ಯ, ಒತ್ತಡ ಸೇರಿದಂತೆ ಹಲವು ಪ್ರಮುಖ ಅಂಶಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಹೀಗೆ ಇಂತಹ ಹಲವು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಡಾಕ್ಯೂಮೆಂಟರಿಗಳನ್ನು ನೋಡಬಹುದು.

ಆಲ್‌ ದಟ್ ಬ್ರೀಥ್ಸ್

'ಆಲ್‌ ದಟ್ ಬ್ರೀಥ್ಸ್' ಡಾಕ್ಯೂಮೆಂಟರಿ ಕೂಡ ವೀಕ್ಷಕರಿಗೆ ಇಷ್ಟ ಆಗಬಹುದು. ದೆಹಲಿಯ ನಿವಾಸಿಗಳಾಗಿರುವ ಮೊಹಮ್ಮದ್ ಸೌದ್ ಹಾಗೂ ನದೀಮ್ ಶೆಹಜಾದ ಇಬ್ಬರು ಸಹೋದರರು ಪಕ್ಷಿಗಳ ರಕ್ಷಣೆಗೆ ಪಣ ತೊಡುತ್ತಾರೆ. ದೆಹಲಿ ವಾಯುಮಾಲಿನ್ಯದಿಂದ ಪಕ್ಷಿಗಳು ಭೂಮಿಗೆ ಬೀಳುತ್ತಿದ್ದವು. ಇವುಗಳನ್ನು ರಕ್ಷಣೆ ಮಾಡುವುದಕ್ಕೆ ಈ ಯುವಕರು ಹರಸಾಹಸ ಪಡುವುದನ್ನು ಈ ಡಾಕ್ಯೂಮೆಂಟರಿಯಲ್ಲಿ ತೋರಿಸಲಾಗಿದೆ. 'ಆಲ್‌ ದಟ್ ಬ್ರೀಥ್ಸ್' ಡಾಕ್ಯೂಮೆಂಟರಿ ಪ್ರತಿಷ್ಠಿತ ಆಸ್ಕರ್‌ಗೂ ನಾಮಿನೇಟ್ ಆಗಿತ್ತು. ಇದು ಕೂಡ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

Jio hotstar s documentary-drama The Brown Heart tackles increasing cases of heart attacks in India

ಬಿಕಮಿಂಗ್ ವಾರೆನ್‌ ಬಫೆಟ್

'ಬಿಕಮಿಂಗ್ ವಾರೆನ್ ಬಫೆಟ್' ಹೂಡಿಕೆ ಮಾಡುವವರಿಗೆ, ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದವರಿಗೆ ಇಷ್ಟ ಆಗುತ್ತೆ. ಪೇರ್ ಮಾರುಕಟ್ಟೆಯ ದಿಗ್ಗಜ ವಾರೆನ್ ಬಫೆಟ್ ಅವರ ಬದುಕಿನ ಸಂಪೂರ್ಣ ಚಿತ್ರಣ ಈ ಡಾಕ್ಯೂಮೆಂಟರಿಯಲ್ಲಿದೆ. ಅವರು ಹೇಗೆ ಹೂಡಿಕೆ ಮಾಡುತ್ತಿದ್ದರು? ಅವರ ಬುದ್ಧಿವಂತಿಕೆ, ಸ್ಟೈಲ್, ಪತ್ನಿಯೊಂದಿಗೆ ಕಾಂಪ್ಲೆಕ್ಸ್ ರಿಲೇಷನ್‌ಶಿಪ್ ಅನ್ನು ಈ ಡಾಕ್ಯೂಮೆಂಟರಿಯಲ್ಲಿ ಬಿಂಬಿಸಲಾಗಿದೆ. ಇದು ಕೂಡ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ಬ್ಯಾಕ್ ಟು ಬ್ಲ್ಯಾಕ್

ಜಿಯೋ ಹಾಟ್‌ಸ್ಟಾರ್‌ನಲ್ಲಿರುವ ಇನ್ನೊಂದು ಡಾಕ್ಯೂಮೆಂಟರಿ. ಇದು ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತೆ. ಸಿಂಗರ್ ಆಮಿ ವೈನ್‌ಹೌಸ್ ಕುರಿತಾದ ಡಾಕ್ಯೂಮೆಂಟರಿ ಇದು. ಉತ್ತರ ಲಂಡನ್‌ನಲ್ಲಿ ಬೆಳೆದ ಈ ಗಾಯಕಿ ಗ್ಲೋಬಲ್ ಮ್ಯೂಸಿಕ್ ಸೆನ್ಸೆಷನ್ ಹೇಗೆ ಆದಳು ಅನ್ನೋದನ್ನು ಹೇಳಲಾಗಿದೆ.

ಲೈಫ್ ಎಕಾರ್ಡಿಂಗ್ ಟು ಸ್ಯಾಮ್

ಪ್ರೊಗೇರಿಯಾ ಎಂಬುವ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಸ್ಯಾಮ್ ಬರ್ನ್ಸ್ ಕುರಿತಾದ ಡ್ಯಾಕ್ಯೂಮೆಂಟರಿ 'ಲೈಫ್ ಎಕಾರ್ಡಿಂಗ್ ಟು ಸ್ಯಾಮ್'. ಪ್ರೊಗೇರಿಯಾ ಎಂಬುವ ಅಕಾಲ ವೃದ್ಧಾಪ್ಯ ಉಂಟು ಮಾಡುವ ಖಾಯಿಲೆಯಿಂದ ಬಳಲುತ್ತಿರುವ ಸ್ಯಾಮ್ ಬರ್ನ್ಸ್ ಕಷ್ಟ, ಸಾಮರ್ಥ್ಯಗಳ ಕುರಿತು ಈ ಡಾಕ್ಯೂಮೆಂಟರಿಯನ್ನು ಹೆಣೆಯಲಾಗಿದೆ.

More from Filmibeat

English summary
Jio hotstar's documentary-drama The Brown Heart tackles increasing cases of heart attacks in India. Here are other documentaries which are based on real life stories;
Read more about: documentary series
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X