ಜಿಯೋ-ಡಿಸ್ನಿ+ಹಾಟ್‌ಸ್ಟಾರ್ ವಿಲೀನದ ಬಳಿಕ 100 ಮಿಲಿಯನ್ ಗಡಿದಾಟಿದ ಜಿಯೋಹಾಟ್‌ಸ್ಟಾರ್

ಮುಕೇಶ್ ಅಂಬಾನಿ ಒಡೆತನ ಜಿಯೋ ಸಿನಿಮಾ ಹಾಗೂ ಡಿಸ್ನಿ+ಹಾಟ್‌ಸ್ಟಾರ್ ಓಟಿಟಿ ಪ್ಲಾಟ್‌ಫಾರ್ಮ್‌ಗಳು ವಿಲೀನಗೊಂಡಿದ್ದವು. ಎರಡು ದೈತ್ಯಗಳ ವಿಲೀನದ ಬಳಿಕ ಜಿಯೋ ಹಾಟ್‌ಸ್ಟಾರ್‌ ಆಗಿ ಹೊಸ ರೂಪ ಪಡೆದುಕೊಂಡು ಆಕರ್ಷಕವಾಗಿ ಎಂಟ್ರಿ ಕೊಟ್ಟಿತ್ತು. ಹೊಸ ಪ್ಲಾನ್‌ಗಳೊಂದಿಗೆ, ಹೊಸ ಶೋಗಳೊಂದು ಕ್ರೀಡೆಗಳ ನೇರ ಪ್ರಸಾರದೊಂದಿಗೆ ವೀಕ್ಷಕ ಮುಂದೆ ಬಂದಿದ್ದ ಜಿಯೋಹಾಟ್‌ಸ್ಟಾರ್ 100 ಮಿಲಿಯನ್ ಸಬ್‌ಸ್ಕ್ರೈಬರ್‌ ಮೈಲಗಲ್ಲನ್ನು ತಲುಪಿದೆ.

ಟಿವಿ ಹಾಗೂ ಓಟಿಟಿ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯಾಗಿತ್ತು. ಡಿಸ್ನಿ ಒಡೆತನದ ಸ್ಟಾರ್ ಇಂಡಿಯಾ ಕಂಪನಿ ಮುಕೇಶ್ ಅಂಬಾನಿ ಒಡೆತನದ ವಾಯಾಕಾಮ್ 18 ಜೊತೆ ವಿಲೀನಗೊಂಡಿತ್ತು. 2024 ಫೆಬ್ರವರಿಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಸ್ಟಾರ್ ಇಂಡಿಯಾ ಹಾಗೂ ವಯಾಕಾಮ್ 18 ಜಂಟಿಯಾಗಿ ಕೆಲಸ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಓಟಿಟಿ ಕ್ಷೇತ್ರದಲ್ಲಿ ಡಿಸ್ನಿ ಹಾಟ್‌ಸ್ಟಾರ್ ಹಾಗೂ ಜಿಯೋ ಸಿನಿಮಾದ ವಿಲೀನವಾಗಿ ಜಿಯೋ ಹಾಟ್‌ಸ್ಟಾರ್ ಆಗಿತ್ತು.

jiohotstar 100 million paid subscribers

ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನಿತಾ ಮುಕೇಶ್ ಅಂಬಾನಿ ರಿಲಯನ್ಸ್ ಹಾಗೂ ಡಿಸ್ನಿ ಸಹಭಾಗಿತ್ವಕ್ಕೆ ಛೇರ್‌ಪರ್ಸನ್ ಆಗಿದ್ದರು. ಇವರ ಮುಂದಾಳತ್ವದಲ್ಲಿ ಜಿಯೋಹಾಟ್‌ಸ್ಟಾರ್ ಪ್ರಸಾರವನ್ನು ಆರಂಭಿಸಿದೆ. ಈಗಾಗಲೇ ಭಾರತದಲ್ಲಿ ಗಟ್ಟಿಯಲ್ಲಿ ನೆಲೆಯೂರಿರುವ ಓಟಿಟಿ ವೇದಿಕೆಗಳಿಗೆ ಟಫ್ ಕಾಂಪಿಟೇಷನ್ ಕೊಡುವುದಕ್ಕೆ ಆಕರ್ಷಕ ಕಂಟೆಂಟ್‌ಗಳನ್ನು ಪ್ರಡ್ಯೂಸ್ ಮಾಡುತ್ತಿದ್ದಾರೆ.

ಎರಡು ಓಟಿಟಿ ದೈತ್ಯಗಳು ವಿಲೀನಗೊಂಡ ಕೆಲವೇ ದಿನಗಳಲ್ಲಿಯೇ ಜಿಯೋ ಹಾಟ್‌ಸ್ಟಾರ್ ಅಭೂತಪೂರ್ವ ಯಶಸ್ಸು ಕಂಡಿದೆ. ಕೆಲವೇ ತಿಂಗಳುಗಳಲ್ಲಿ ಜಿಯೋಹಾಟ್‌ಸ್ಟಾರ್ 100 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಈಗಾಗಲೇ ಭಾರತದಲ್ಲಿ ಟಾಪ್‌ನಲ್ಲಿರುವ ನೆಟ್‌ಫ್ಲಿಕ್ಸ್ ಹಾಗೂ ಪ್ರೈಮ್‌ ವಿಡಿಯೋ ಒಟಿಟಿ ಪ್ಲಾಟ್‌ಫಾರ್ಮ್‌ಗಿಂತ ಸಿಕ್ಕಾಪಟ್ಟೆ ಮುಂದಕ್ಕೆ ಹೋಗಿದೆ.

jiohotstar 100 million paid subscribers

"ವಿಶ್ವ ದರ್ಜೆಯ ಎಂಟರ್‌ಟೈನ್ಮೆಂಟ್‌ ಎಲ್ಲರಿಗೂ ತಲುಪಬೇಕು ಅನ್ನೋದು ನಮ್ಮ ನಂಬಿಕೆ. 100 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಪಡೆದಿರುವುದು ನಮ್ಮ ಗುರಿಯೇನು ಅಂತ ಹೇಳುವುದಕ್ಕೊಂದು ಉದಾಹರಣೆ. ಕೇವಲ ಕೆಲವೇ ದಿನಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ಭಾರತದ ಲಿಮಿಟ್‌ ಇಲ್ಲದ ಸಾಮರ್ಥ್ಯವನ್ನು ಹೇಳುತ್ತಿದೆ. ಹಾಗೇ ಇದು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮುಂದಿನ ಗುರಿ ಬಿಲಿಯನ್ ಸ್ಕ್ರೀನ್‌ಗಳಲ್ಲಿ ಕಂಟೆಂಟ್‌ಗಳು ಸ್ಟ್ರೀಮಿಂಗ್ ಆಗುವುದರತ್ತ ಇದೆ" ಎಂದು ಜಿಯೋಸ್ಟಾರ್‌ನ ಸಿಇಓ ಕಿರಣ್ ಮಣಿ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಜಿಯೋಹಾಟ್‌ಸ್ಟಾರ್ ಈಗ ಭಾರತದಲ್ಲಿ ಅತೀ ಹೆಚ್ಚು ಸಬ್‌ಸ್ಕ್ರೈಬರ್ ಅನ್ನು ಹೊಂದಿರುವ ಓಟಿಟಿ ವೇದಿಯಾಗಿದೆ. ಜಿಯೋ ಹಾಟ್‌ಸ್ಟಾರ್ ಪ್ರತಿಸ್ಪರ್ಧಿಗಳಾದ ನೆಟ್‌ಫ್ಲಿಕ್ಸ್ ಹಾಗೂ ಪ್ರೈಂ ವಿಡಿಯೋಗೆ ಹೋಲಿಕೆ ಮಾಡಿದರೆ, ನಾಲ್ಕೈದು ಪಟ್ಟು ದೊಡ್ಡದಾಗಿದೆ. ಜಿಯೋಹಾಟ್‌ಸ್ಟಾರ್ ವಿಲೀನದ ಬಳಿಕ ನೆಟ್‌ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋ ಕಷ್ಟ ಪಡೆಬೇಕಾಗಿದೆ ಎಂದು ಓಟಿಟಿ ಎಕ್ಸ್‌ಪರ್ಟ್ ಅಭಿಪ್ರಾಯ ಮಟ್ಟಿದ್ದಾರೆ.

ಇಂಡಸ್ಟ್ರೀ ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ಓಟಿಟಿ ವೇದಿಕೆ ಸುಮಾರು 15 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದರೆ, ಪ್ರೈಂ ವಿಡಿಯೋ 18 ಮಿಲಿಯನ್‌ ಸಬ್‌ಸ್ಕ್ರೈಬರ್ ಅನ್ನು ಹೊಂದಿದೆ. ಜಿಯೋ ಸಿನಿಮಾ ಹಾಗೂ ಡಿಸ್ನಿ+ಹಾಟ್‌ಸ್ಟಾರ್ ಸ್ಮಾಲ್ ಬಜೆಟ್‌, ಸಾಧಾರಾಣ ಕಂಟೆಂಟ್ ಅನ್ನಷ್ಟೇ ಖರೀದಿ ಮಾಡುತ್ತಿದ್ದರು. ಈಗ ಎರಡೂ ವೀಲಿನಗೊಂಡಿದ್ದರಿಂದ ನೆಟ್‌ಫ್ಲಿಕ್ಸ್ ಹಾಗೂ ಪ್ರೈಂ ವಿಡಿಯೋ ತೀವ್ರವಾದ ಕಾಂಪಿಟೇಷನ್‌ ಅನ್ನು ಎದುರಿಸಬೇಕಿದೆ.

More from Filmibeat

English summary
JioHotstar has surpassed 100 million paid subscribers following the merger of Disney+ Hotstar and JioCinema, marking a significant milestone:
Read more about: news movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X