OTTಯಲ್ಲಿ ಏನು ನೋಡ್ಬೇಕು ಅಂತ ನಿರ್ಧರಿಸಲು ವರ್ಷಕ್ಕೆ 110 ಗಂಟೆ ವ್ಯಯ; ಎಐ ಮೊರೆ ಹೋದ ಓಟಿಟಿ ಪ್ಲಾಟ್‌ಫಾರ್ಮ್ಸ್

ವಿಶ್ವದಲ್ಲಿ ಎಷ್ಟೊಂದು ಓಟಿಟಿ ವೇದಿಕೆಗಳಿವೆ. ಮನರಂಜನೆಯನ್ನು ಬಯಸುವವರು ಒಂದಿಷ್ಟು ವೇದಿಕೆಗಳನ್ನು ಸಬ್‌ಸ್ಕ್ರೈಬ್ ಮಾಡಿಕೊಂಡಿರುತ್ತಾರೆ. ಆದರೆ, ಓಟಿಟಿ ಫ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಏನು ನೋಡಬೇಕು? ಯಾವುದು ಟ್ರೆಂಡಿಂಗ್‌ನಲ್ಲಿದೆ? ಯಾವ ಕಂಟೆಂಟ್ ಅನ್ನು ನೋಡಬಹುದು? ಹೀಗೆ ಒಂದಿಷ್ಟು ಪ್ರಶ್ನೆಗಳು ಎದುರಾಗುತ್ತವೆ.

ಯುಸರ್ ಟೆಸ್ಟಿಂಗ್ ಅನ್ನುವ ಸರ್ವೆಯ ಪ್ರಕಾರ, ವೀಕ್ಷಕರು ಓಟಿಟಿ ವೇದಿಕೆಗಳಲ್ಲಿ ಏನನ್ನು ನೋಡಬೇಕು ಅಂತ ಹುಡುಕುವುದಕ್ಕೆ ಒಂದು ವರ್ಷಕ್ಕೆ 110 ಗಂಟೆಗಳನ್ನು ವ್ಯಯ ಮಾಡುತ್ತಾರೆ. ಅಂದರೆ, ಸಂಪೂರ್ಣ ಐದು ದಿನಗಳು ಬರೀ ಓಟಿಟಿಯಲ್ಲಿ ಸ್ಕ್ರೋಲ್ ಮಾಡುವುದಕ್ಕೆ ವೀಕ್ಷಕರು ವ್ಯಯ ಮಾಡುತ್ತಿದ್ದಾರೆ. ಕೆಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವೀಕೆಂಡ್‌ನಲ್ಲಿ ಯಾವ ಕಂಟೆಂಟ್ ಅನ್ನು ನೋಡಬೇಕು ಅನ್ನೋ ಬಗ್ಗೆನೇ ಚರ್ಚೆ ಆಗುತ್ತಿರುತ್ತೆ.

JioHotstar bringing ChatGPT-powered conversational discovery experience for content overload

ಎಕ್ಸ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ರೆಡಿಟ್ ಅಂತಹ ವೇದಿಕೆಗಳಲ್ಲಿ ಈ ವೀಕೆಂಡ್ ಓಟಿಟಿಯಲ್ಲಿ ರಿಲೀಸ್ ಆಗಿರುವ ಹೊಸ ಸಿನಿಮಾಗಳ್ಯಾವುವು? ವೆಬ್ ಸೀರಿಸ್ ಯಾವುವು? ಅನ್ನೋ ಪ್ರಶ್ನೆಗಳು ಹರಿದಾಡುತ್ತವೆ. ಇದನ್ನು ಗಮನಿಸಿರೋ ಜಿಯೋಹಾಟ್‌ಸ್ಟಾರ್ (Jiohotstar) ಚಾಟ್‌ಜಿಪಿಟಿಯ ಸಹಯೋಗದೊಂದಿಗೆ ವಾಯ್ಸ್ ಡಿಸ್ಕವರಿಯನ್ನು ಪರಿಚಯಿಸಿದೆ. ಅಷ್ಟಕ್ಕೂ ಏನಿದು? ತಿಳಿಯುವುದಕ್ಕೆ ಮುಂದೆ ಓದಿ.

ಓಟಿಟಿ ವೇದಿಕೆಗಳಲ್ಲಿ ಓವರ್ ಫ್ಲೋ ಆಗಿರುವ ಕಂಟೆಂಟ್‌ ಅನ್ನು ಹುಡುಕುವುದಕ್ಕೆ ವೀಕ್ಷಕರು ಪರದಾಡುತ್ತಿದ್ದಾರೆ. ಹೀಗಾಗಿ ತಮ್ಮಿಷ್ಟದ ಕಂಟೆಂಡ್ ಅನ್ನು ಸುಲಭವಾಗಿ ಹುಡುಕುವುದಕ್ಕೆ ಜಿಯೋಹಾಟ್‌ಸ್ಟಾರ್ ಎಐ ಮೊರೆ ಹೋಗಿದೆ. ಓಪನ್ ಎಐನ ಚಾಟ್‌ಜಿಪಿಟಿಯೊಂದು ಒಡಂಬಡಿಕೆ ಮಾಡಿಕೊಂಡು ವೀಕ್ಷಕರು ತನ್ನ ಕಂಟೆಂಟ್‌ ಅನ್ನು ಸುಲಭವಾಗಿ ಹುಡುಕುವುದಕ್ಕೆ ಅನುವು ಮಾಡಿಕೊಟ್ಟಿದೆ.

ಜಿಯೋಹಾಟ್‌ಸ್ಟಾರ್‌ನಲ್ಲಿರುವ ವಾಯ್ಸ್ ಡಿಸ್ಕವರಿಯ ಮೂಲಕ ವೀಕ್ಷಕರ ಅಭಿರುಚಿಗೆ ಅನುಗುಣವಾಗಿ ಕಂಟೆಂಟ್ ಅನ್ನು ಹುಡುಕಿಕೊಡುತ್ತೆ. ಉದಾಹರಣೆಗೆ "ಲೈಟ್ ಹಾಗೂ ಫನ್ನಿಯಾಗಿರುವ ಕಂಟೆಂಟ್ ಅನ್ನು ಹುಡುಕು" ಎಂದು ಹೇಳಿದರೆ, ಅಂತಹ ಕಂಟೆಂಟ್‌ ಅನ್ನು ಹುಡುಕಿ ವೀಕ್ಷಕರ ಮುಂದೆ ಇಡುತ್ತೆ. "ಕನ್ನಡದ ಥ್ರಿಲ್ಲರ್ ಸಿನಿಮಾಗಳನ್ನು ತೋರಿಸು", " ಕೇವಲ ಅರ್ಧ ಗಂಟೆಯಲ್ಲಿ ನೋಡಬಹುದಾದ ಕಂಟೆಂಟ್ ಹುಡುಕು", "ಇಡಿ ಕುಟುಂಬ ನೋಡಬಹುದಾದ ಕಂಟೆಂಟ್ ತೋರಿಸು" ಎಂದು ವಾಯ್ಸ್ ಮೂಲಕ ಕೇಳಿಬಹುದು. ಎಐ ಅಂತಹ ಕಂಟೆಂಟ್ ಅನ್ನು ಹುಡುಕಿ ವೀಕ್ಷಕರ ಮುಂದೆ ಇಡುತ್ತಿದೆ.

ಹಾಗಂತ ಜಿಯೋಹಾಟ್‌ಸ್ಟಾರ್‌ನ ಸಿವಿಡಿ (conversational voice discovery) ಕೇವಲ ಟೈಟಲ್ ಅನ್ನು ಅಷ್ಟೇ ತೋರಿಸುವುದಿಲ್ಲ. ಜನರ ಮೂಡ್, ಉದ್ದೇಶ ಹಾಗೂ ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ಕೆಲವೇ ಸೆಕೆಂಡುಗಳಲ್ಲಿ ಕಂಟೆಂಟ್ ಅನ್ನು ನಿಮ್ಮ ಮುಂದೆ ಇಡಲಿದೆ. ಇದರಿಂದ ವೀಕ್ಷಕರು ಕಂಟೆಂಟ್ ಹುಡುಕುವುದಕ್ಕೆ ವ್ಯಯ ಮಾಡುತ್ತಿರುವ ಸಮಯ ಉಳಿಯುತ್ತೆ. ಹಾಗೇ, ಅರ್ಥಪೂರ್ಣವಾದ ಸಲಹೆಯನ್ನು ನೀಡುತ್ತಿದೆ.

ಹಾಗಂತ ಇದು ಕೇವಲ ಸಿನಿಮಾ, ವೆಬ್ ಸೀರಿಸ್ ಹುಡುಕಾಟಕ್ಕೆ ಅಷ್ಟೇ ಅಲ್ಲ. ಲೈವ್ ಮ್ಯಾಚ್‌ಗಳನ್ನು ನೋಡುವಾಗಲೂ ಬಳಸಬಹುದು. ಉದಾಹರಣೆಗೆ ಆರ್‌ಸಿಬಿ ಪಂದ್ಯ ವೀಕ್ಷಿಸುವಾಗ ಏನಾದರೂ ಮಿಸ್ ಮಾಡಿಕೊಂಡರೆ, "ನಾನು ಏನನ್ನು ಮಿಸ್ ಮಾಡಿಕೊಂಡೆ?" ಎಂದು ಪ್ರಶ್ನೆ ಮಾಡಿದರೆ, ಅದು ಹುಡುಕಿಕೊಂಡುತ್ತೆ. "ಈಗ ತಾನೆ ಔಟ್ ಆಗಿದ್ದನ್ನು ಮತ್ತೆ ತೋರಿಸು", "ಸದ್ಯಕ್ಕೀಗ ಯಾರು ಟಾಪ್ ಸ್ಕೋರ್ ಮಾಡಿದ್ದಾರೆ?" ಇಂತಹ ಪ್ರಶ್ನೆಗಳನ್ನು ಪಂದ್ಯಗಳನ್ನು ನೋಡುವಾಗಲೇ ಕೇಳಬಹುದು. ಜಿಯೋಹಾಟ್‌ಸ್ಟಾರ್ ತನ್ನ ವೀಕ್ಷಕರಿಗೆ ಎಐ ಬಳಸಿ ವಿಶಿಷ್ಠವಾದ ಅನುಭವನ್ನು ನೀಡುತ್ತಿದೆ.

English summary
JioHotstar bringing ChatGPT-powered conversational discovery experience for content overload.
Read more about: movies web series
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X