ಓಟಿಟಿಯಲ್ಲಿ ಚರಿತ್ರೆ ಸೃಷ್ಟಿಸಲಿರೋ 'ಧುರಂಧರ್ ದಿ ರಿವೇಂಜ್'; ಸ್ಟಾರ್ ಜೊತೆ ಕೂತು ಸಿನಿಮಾ ನೋಡಿ

ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಿನಿಮಾ 'ಧುರಂಧರ್ ದಿ ರಿವೇಂಜ್'. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಥಿಯೇಟರ್‌ಗಳಲ್ಲಿ ಜೋರಾಗಿ ಸದ್ದು ಮಾಡಿದ ಸಿನಿಮಾವೀಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಕ್ಷಣ ಗಣನೆ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಜಿಯೋಹಾಸ್ಟರ್‌ನಲ್ಲಿ 'ಧುರಂಧರ್ ದಿ ರಿವೇಂಜ್' ಸಿನಿಮಾ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ.

ಹಾಗಂತ ಬಾಕ್ಸಾಫೀಸ್‌ ಅನ್ನು ಅಲುಗಾಡಿಸಿದ 'ಧುರಂಧರ್ 2' ಸಿನಿಮಾವನ್ನು ಹಾಗೇ ಸುಮ್ಮನೆ ಸ್ಟ್ರೀಮಿಂಗ್ ಮಾಡುವುದಕ್ಕೆ ಜಿಯೋ ಹಾಟ್‌ಸ್ಟಾರ್ ರೆಡಿಯಿಲ್ಲ. ಈಗಾಗಲೇ ಸೆನ್ಸಾರ್ ಆಗದ ಪ್ರೇಕ್ಷಕರು ನೋಡಿಯೇ ಇರದ ದೃಶ್ಯಗಳನ್ನು ಯತಾವತ್ತಾಗಿ ತೋರಿಸುವುದಕ್ಕೆ ವೇದಿಕೆ ರೆಡಿಯಾಗಿದೆ. ಭಾರತೀಯ ಒಟಿಟಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಂತ ವಿಭಿನ್ನ ಹಾಗೂ ಬೃಹತ್ ಪ್ರಯೋಗವೊಂದು ನಡೆಯುತ್ತಿದೆ.

JioHotstar Grand Digital Premiere of Dhurandhar The Revenge viewers can watch with the Cast

'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಅಂತಹ ಸಿನಿಮಾವನ್ನು ನಿರ್ದೇಶಿಸಿದ್ದ ಆದಿತ್ಯ ಧರ್ ಧುರಂಧರ್‌ಗೆ ಆಕ್ಷನ್ ಕಟ್ ಹೇಳಿದ್ದರು. ಇಷ್ಟೇ ಅಲ್ಲದೇ ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಜೊತೆ ಸೇರಿ ಜಂಟಿಯಾಗಿ ಈ ಬಿಗ್ ಬಜೆಟ್ ಆಕ್ಷನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದೇ 'ಧುರಂಧರ್ ದಿ ರಿವೇಂಜ್'ನ (ರಾ & ಉನ್ ದೇಖಾ)' ಇಂದು ಜೂನ್ 4 ಸಂಜೆ 7 ಗಂಟೆಗೆ ಜಿಯೋಹಾಟ್‌ಸ್ಟಾರ್‌ ನಲ್ಲಿ ಅದ್ಧೂರಿಯಾಗಿ ಪ್ರೀಮಿಯರ್ ಆಗುತ್ತಿದೆ. ಹಾಗಂತ ಇದು ಮಾಮೂಲಿ ಅಲ್ಲ. ಸಿನಿಮಾದ ಸ್ಟಾರ್‌ಗಳ ಜೊತೆ ಕೂತು ಈ ಸಿನಿಮಾವನ್ನು ನೋಡಬಹುದಾಗಿದೆ.

ಘಟಾನುಘಟಿಗಳ ನಟನೆ

'ಧುರಂಧರ್ ದಿ ರಿವೇಂಜ್' ಸಿನಿಮಾದ ಹೈ-ವೋಲ್ಟೇಜ್ ಸ್ಪೈ- ಆಕ್ಷನ್ ಸಿನಿಮಾದಲ್ಲಿ ಬಾಲಿವುಡ್‌ನ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ರಣ್‌ವೀರ್ ಸಿಂಗ್, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್ ಸೇರಿದಂತೆ ಸಿನಿಮಾ ದಿಗ್ಗಜರ ದೊಡ್ಡ ತಂಡವೇ ಇದೆ. ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಗೂಢಾಚಾರಿಗಳಾಗಿ ಸೇವೆ ಸಲ್ಲಿಸುತ್ತಿರುವವ ರೋಮಾಂಚಕ ಕಥೆಯೇ 'ಧುರಂಧರ್'. ಈ ಸಿನಿಮಾವನ್ನು ಈಗಾಗಲೇ ಬಹುತೇಕ ಮಂದಿ ತೆರೆಮೇಲೆ ವೀಕ್ಷಿಸಿದ್ದಾರೆ. ಈಗ ಓಟಿಟಿಯಲ್ಲಿ ಮತ್ತೊಮ್ಮೆ ಸಿನಿಮಾ ನೋಡುವುದಕ್ಕೆ ಸಜ್ಜಾಗಿದ್ದಾರೆ.

Also Read
ಅಯ್ಯೋ,ಆದಿತ್ಯ ಧರ್ ಆಫೀಸ್ ಇಷ್ಟೊಂದು ಚಿಕ್ಕದಾ?₹1,987 ಕೋಟಿ ದೋಚಿದ ಬಾಲಿವುಡ್ 'ಧುರಂಧರ್' ಬಳಿ ಕೆಲಸಕ್ಕಿರೋದು ಕೇವಲ 7 ಜನ ಮಾತ್ರ
ಅಯ್ಯೋ,ಆದಿತ್ಯ ಧರ್ ಆಫೀಸ್ ಇಷ್ಟೊಂದು ಚಿಕ್ಕದಾ?₹1,987 ಕೋಟಿ ದೋಚಿದ ಬಾಲಿವುಡ್ 'ಧುರಂಧರ್' ಬಳಿ ಕೆಲಸಕ್ಕಿರೋದು ಕೇವಲ 7 ಜನ ಮಾತ್ರ

'ಧುರಂಧರ್ ದಿ ರಿವೇಂಜ್'- ರಾ ವರ್ಷನ್

ಥಿಯೇಟರ್‌ಗಳಲ್ಲಿ ಸೆನ್ಸಾರ್ ಆದ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಓಟಿಟಿಯಲ್ಲಿ ಸೆನ್ಸಾರ್ ಆಗ ರಾ ವರ್ಷನ್ ಅನ್ನು ಪ್ರೇಕ್ಷಕರಿಗೆ ತೋರಿಸುವುದಕ್ಕೆ ಜಿಯೋಹಾಟ್‌ಸ್ಟಾರ್ ಮುಂದಾಗಿದೆ. ರಾ ಆಕ್ಷನ್ ಸೀನ್‌ಗಳನ್ನು ಇಲ್ಲಿ ವೀಕ್ಷಣೆ ಮಾಡಬಹುದು. ಹೀಗಾಗಿ ಸಿನಿಮಾದ ರನ್‌ ಟೈಮ್ ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಸಂಜೆ 7 ಗಂಟೆಯಿಂದ ಆಗುತ್ತಿರುವ ಗ್ರ್ಯಾಂಡ್ ಪ್ರೀಮಿಯರ್‌ಗೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.

JioHotstar Grand Digital Premiere of Dhurandhar The Revenge viewers can watch with the Cast

ಭಾರತದ ಮೊದಲ ಲೈವ್ 'ವಾಚ್ ಪಾರ್ಟಿ

'ಧುರಂಧರ್ ದಿ ರಿವೇಂಜ್' ಈ ಗ್ರ್ಯಾಂಡ್ ಪ್ರೀಮಿಯರ್‌ನ ಪ್ರಮುಖ ಆಕರ್ಷಣೆಯೆಂದರೆ 'ಡಿಜಿಟಲ್ ವಾಚ್ ಪಾರ್ಟಿ' (Watch Party). ಅಂದರೆ, ಇಲ್ಲಿ ವೀಕ್ಷಕರು ಕೇವಲ ಸಿನಿಮಾವನ್ನು ನೋಡುವುದು ಮಾತ್ರವಲ್ಲದೆ, ಸಿನಿಮಾದಲ್ಲಿ ನಟಿಸಿರುವ ಪ್ರಮುಖ ತಾರೆಯರೊಂದಿಗೆ ಲೈವ್ ಆಗಿ ಸಂವಾದ ನಡೆಸುತ್ತಾ ಒಟ್ಟಿಗೆ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಈ ಅಪರೂಪದ ತಾಂತ್ರಿಕ ಸೌಲಭ್ಯವನ್ನು ಜಿಯೋಹಾಟ್‌ಸ್ಟಾರ್ ಕಲ್ಪಿಸಿಕೊಡಲಾಗಿದೆ.

ಓಟಿಟಿಯಲ್ಲಿ ಹೊಸ ಕ್ರಾಂತಿ

ಭಾರತದ ಅತಿ ದೊಡ್ಡ ಡಿಜಿಟಲ್ ನೆಟ್‌ವರ್ಕ್ ಆಗಿರುವ'ಜಿಯೋಹಾಟ್‌ಸ್ಟಾರ್' ಈ ಸಿನಿಮಾದ ಮೂಲಕ ಭಾರತದ ಡಿಜಿಟಲ್ ಪ್ರೀಮಿಯರ್ ಶೈಲಿಯನ್ನೇ ಬದಲಾಯಿಸುತ್ತಿದೆ. "ದೇಶ್ ರುಕೇಗಾ, ಧುರಂಧರ್ ದೇಖೇಗಾ" ಎಂಬ ಟ್ಯಾಗ್‌ಲೈನ್‌ನಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ಟ್ರೆಂಡ್ ಅನ್ನು ಸೃಷ್ಟಿಸಿದೆ. 'ಧುರಂಧರ್ ದಿ ರಿವೇಂಜ್' ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು, ಚಿತ್ರತಂಡದೊಂದಿಗೆ ನೇರವಾಗಿ ಭಾಗಿಯಾಗಲು ಇಂದು (ಜೂನ್ 4) ಸಂಜೆ 7 ಗಂಟೆಗೆ ನಿಮ್ಮ ಜಿಯೋಹಾಟ್‌ಸ್ಟಾರ್‌ ಆಪ್‌ಗೆ ಲಾಗ್-ಇನ್ ಆಗಿ.

English summary
JioHotstar Announces the Grand Digital Premiere of Ranveer Singh starrer Dhurandhar The Revenge (Raw & Undekha) where viewers can watch together with the Cast.
Read more about: ranveer singh movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X