Mahashivratri: ದೇಶಾದ್ಯಂತ ಎಲ್ಲಾ ಜ್ಯೋತಿರ್ಲಿಂಗಗಳ 20ಕ್ಕೂ ಹೆಚ್ಚು ಆರತಿಗಳ ನೇರ ಪ್ರಸಾರ: ಎಲ್ಲಿ? ಯಾವಾಗ?

ಮಹಾಶಿವರಾತ್ರಿ ಭಾರತದಾದ್ಯಂತ ಆಚರಿಸುವ ದೈವಿಕ ಹಬ್ಬ. ಶಿವ ಭಕ್ತರು ಜಾಗರಣೆ ಮಾಡುತ್ತಾ ಭೋಲೇನಾಥ ಜಪ ಮಾಡುತ್ತಾರೆ. ದೇಶಾದ್ಯಂತ ವಿವಿಧ ಕಡೆಗಳಲ್ಲಿ ಶಿವನ ಆರಾಧನೆ ಪ್ರತಿ ವರ್ಷ ಜೋರಾಗಿಯೇ ನಡೆಯುತ್ತೆ. ಈ ಬಾರಿ ಶಿವನ ಭಕ್ತರು ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಣೆ ಮಾಡಬಹುದು. ಇಂತಹದ್ದೊಂದು ವಿಶಿಷ್ಟ ವ್ಯವಸ್ಥೆಯನ್ನು ಜಿಯೋ ಹಾಟ್‌ಸ್ಟಾರ್ ಮಾಡಿದೆ.

'ಮಹಾಶಿವರಾತ್ರಿ ಡಿವೈನ್‌ ನೈಟ್' ಅನ್ನೋ ಶೀರ್ಷಿಕೆಯಡಿ ಸುಮಾರು 12 ಗಂಟೆಗಳ ಕಾಲ ವಿಶೇಷವಾದ ನೇರ ಪ್ರಸಾರವನ್ನು ನೀಡುವುದಕ್ಕೆ ಮುಂದಾಗಿದೆ. ಫೆಬ್ರವರಿ 26ರಂದು ಸಂಜೆ 6 ಗಂಟೆಯಿಂದ ನೇರ ಪ್ರಸಾರ ಆರಂಭ ಆಗಲಿದೆ. ದೇಶದ ವಿವಿಧ ಕಡೆಗಳಲ್ಲಿ ನಡೆಯುವ ದೈವಿಕ ಹಬ್ಬದ ನೇರ ಪ್ರಸಾರವನ್ನು ಜಿಯೋಹಾಟ್‌ಸ್ಟಾರ್ ಮಾಡುವುದಕ್ಕೆ ಮುಂದಾಗಿದೆ. ಸುಮಾರು 12 ಗಂಟೆಗಳ ಕಾಲ ನೇರ ಪ್ರಸಾರವನ್ನು ತನ್ನ ವೀಕ್ಷಕರಿಗೆ ನೀಡಲಿದೆ.

JioHotstar is set to innovative live-streaming event Mahashivratri The Divine Night

ಈ ಮೂಲಕ ದೈವೀ ಭಕ್ತರು, ಶಿವನ ಆರಾಧಕರು ಭಕ್ತಿಯ ಮಹಾಸಾಗರದಲ್ಲಿ ಮುಳುಗುವಂತೆ ಮಾಡುತ್ತಿದೆ. ದೇಶದ ಎಲ್ಲಾ ಜ್ಯೋತಿರ್ಲಿಂಗಗಳ 20 ಹೆಚ್ಚು ಆರತಿಗಳನ್ನು ನೇರ ಪ್ರಸಾರ ಮಾಡಲಿದೆ. ಹೀಗಾಗಿ ಮನೆ ಹಾಗೂ ಎಲ್ಲೆಲ್ಲಿ ಇದ್ದಾರೋ ಅಲ್ಲಿಂದಲೇ ತಮ್ಮ ಮೊಬೈಲ್‌ಗಳಿಂದ ಮಹಾಶಿವರಾತ್ರಿಯ ಆಚರಣೆಯನ್ನು ಮಾಡಿ ಶಿವನ ಕೃಪೆಗೆ ಪಾತ್ರರಾಗಬಹುದಾಗಿದೆ.

ದೇಶದ ಹಲವು ಭಾಗಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಎಲ್ಲಾ ಜ್ಯೋತಿರ್ಲಿಂಗಗಳ 20 ಆರತಿಗಳನ್ನು ಅದೇ ಸಮಯದಲ್ಲೇ ವೀಕ್ಷಕರು ವೀಕ್ಷಿಸಬಹುದೆಂದು ಜಿಯೋಹಾಟ್‌ಸ್ಟಾರ್ ಹೇಳಿದೆ. ಈ ನೇರ ಪ್ರಸಾರದಲ್ಲಿ ವೀಕ್ಷಕರಿಗೆ ಆರತಿಗಳ ಮಹತ್ವ ಹಾಗೂ ಆಚರಣೆಗಳನ್ನು ತಮ್ಮ ಮೊಬೈಲ್ ಹಾಗೂ ಟಿವಿಗಳಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಅಂದ್ಹಾಗೆ ಪ್ರಮುಖವಾಗಿ ಎಲ್ಲೆಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಜಿಯೋ ಹಾಟ್‌ಸ್ಟಾರ್ ಪ್ರಸಾರ ಮಾಡುತ್ತಿದೆ ಅನ್ನೋದನ್ನು ರಿವೀಲ್ ಮಾಡಿದೆ.

ಪ್ರತಿ ವರ್ಷ ಶಿವರಾತ್ರಿ ಹಬ್ಬಕ್ಕೆ ವಿಶ್ವದ ಮೂಲೆ ಮೂಲೆಯಿಂದ ಈಶ ಫೌಂಡೇಷನ್ ಭಕ್ತರನ್ನು ಸೆಳೆಯುತ್ತೆ. ಇಲ್ಲಿ ನಡೆಯುವ ಶಿವರಾತ್ರಿ ಆಚರಣೆಯನ್ನು ಜಿಯೋ ಹಾಟ್‌ಸ್ಟಾರ್ ಪ್ರಸಾರ ಮಾಡಲಿದೆ. ಸಾಮಾನ್ಯವಾಗಿ ಗಾಯಕರು, ಸಂಗೀತಕಾರರಿಂದ ಕಾರ್ಯಕ್ರಮಗಳು ನಡೆಯುತ್ತವೆ. ಹಾಗೇ ಸದ್ಗುರು ಅವರ ಧ್ಯಾನ ಮತ್ತು ಪ್ರವಚನಗಳು ಕೂಡ ಇರುತ್ತೆ. ಈ ಬಾರಿ ಖ್ಯಾತ ಗಾಯಕಿ, ಸಾಹಿತಿ ಹಾಗೂ ಸಂಗೀತ ಸಂಯೋಜಕಿ ಸೋನಾ ಮೊಹಾಪಾತ್ರ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇದೆಲ್ಲವನ್ನೂ ಈ ಒಟಿಟಿ ವೇದಿಕೆ ಪ್ರಸಾರ ಮಾಡಲಿದೆ.

ಈಶ ಫೌಂಡೇಷನ್‌ ಅಂತೆಯೇ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆಯುವ ಕಾರ್ಯಕ್ರಮಗಳು ಕೂಡ ಇಲ್ಲಿ ಪ್ರಸಾರಗೊಳ್ಳಲಿವೆ. ಅಲ್ಲಿ ನಡೆಯುವ ಧ್ಯಾನ, ಪ್ರವಚನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು. ಹಾಗೇ 'ದೇವೊಂ ಕೆ ದೇವ್.. ಮಹಾದೇವ್' ಎಂಬ ಶಿವ ಹಾಗೂ ಪಾರ್ವತಿಯ ಮೂರು ಗಂಟೆಗಳ ವಿಶೇಷ ಸರಣಿಯನ್ನು ವೀಕ್ಷಣೆ ಮಾಡಬಹುದಾಗಿದೆ.

ಈ ಬಾರಿ ಶಿವನ ಭಕ್ತರು ಜಿಯೋ ಹಾಟ್‌ಸ್ಟಾರ್‌ ಒಟಿಟಿ ವೇದಿಕೆಯಿಂದ ಭಕ್ತಿ ಸಾಗರದಲ್ಲಿ ಮುಳುಗಿ ಏಳಬಹುದಾಗಿದೆ. ಫೆಬ್ರವರಿ 26 ಸಂಜೆ 6 ಗಂಟೆಯಿಂದಲೇ ನೇರ ಪ್ರಸಾರ ಆರಂಭ ಆಗಲಿದ್ದು, ಬೆಳಗ್ಗೆ 6 ಗಂಟೆಯವರೆಗೂ ಈ ನೇರ ಪ್ರಸಾರ ಇರುತ್ತೆ. ಮಹಾಶಿವರಾತ್ರಿಯನ್ನು ಸುಮಾರು 12 ಗಂಟೆಗಳ ನಿರಂತರ ಪ್ರಸಾರ ಮಾಡುತ್ತಿದೆ.

More from Filmibeat

English summary
JioHotstar is set to innovative live-streaming event Mahashivratri: The Divine Night
Read more about: mahashivaratri festival
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X