ಮೈಕ್ರೋ ಸೀರಿಸ್‌ಗಳನ್ನು ನೋಡುವುದಕ್ಕೆ ಹೊಸ ವೇದಿಕೆ: ಜಿಯೋಹಾಟ್‌ಸ್ಟಾರ್‌ನ ತಡ್ಕಾದ ವಿಶೇಷತೆ ಏನು?

ಒಂದು ಕಾಲದಲ್ಲಿ ಮನರಂಜನೆ ಅನ್ನೋದು ಗಂಟೆಗಟ್ಲೇ ಪ್ರದರ್ಶನ ಕಾಣುವ ಸಿನಿಮಾ ಹಾಗೂ ನಾಟಕಗಳಿಗೆ ಸೀಮಿತವಾಗಿತ್ತು. ಬಳಿಕ ವರ್ಷಗಟ್ಲೆ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಸ್ತರಿಸಿತು. ಡಿಜಿಟಲ್ ಕ್ರೇಜ್ ಹೆಚ್ಚಾದ್ಮೇಲೆ ಇದರ ಸ್ವರೂಪಗಳು ಬದಲಾಗಿವೆ. ಈಗ ವೆಬ್ ಸೀರಿಸ್‌ಗಳು ಹೆಚ್ಚು ಜನಪ್ರಿಯತೆಯಲ್ಲಿ ಇವೆ. ಇನ್ನೇನು ಇದೇ ಭವಿಷ್ಯ ಅಂದುಕೊಂಡವರ ಮುಂದೆ ಬಂದಿದ್ದೇ ಮೈಕ್ರೋ ಸೀರಿಸ್.

ಮೊಬೈಲ್‌ನಲ್ಲಿಯೇ ಮುಳುಗಿ ಹೋಗಿರುವ ಜನರನ್ನು ಅರಿತು ಮನರಂಜನೆ ನೀಡುವುದಕ್ಕೆ ಹುಟ್ಟಾಕಿರುವುದೇ ಮೈಕ್ರೋ ಸೀರಿಸ್. ಇದು ವಿದೇಶದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ. ಅದೀಗ ಭಾರತದಲ್ಲಿಯೂ ನಿಧಾನವಾಗಿ ಫೇಮಸ್ ಆಗುತ್ತಿದೆ. ಗಂಟೆಗಟ್ಲೆ ಸಿನಿಮಾ, ವೆಬ್ ಸೀರಿಸ್‌ ಅನ್ನು ನೋಡುವ ತಾಳ್ಮೆ ಈಗ ಜನರಲ್ಲಿ ಇಲ್ಲ. ಹೀಗಾಗಿ ಒಂದು ನಿಮಿಷದ ಅಂತರದಲ್ಲಿ ಒಂದೊಂದು ಎಪಿಸೋಡ್ ಮುಗಿದೇ ಹೋಗುತ್ತೆ.

JioHotstar s Tadka new micro-content offering over 100 punchy short-form shows

ಈಗ ಓಟಿಟಿ ಜಗತ್ತಿನ ದೈತ್ಯಗಳಲ್ಲಿ ಒಂದಾಗಿಯೋ ಜಿಯೋ ಹಾಟ್‌ಸ್ಟಾರ್ ಕೂಡ ಮೈಕ್ರೋ ಸೀರಿಸ್ ಅನ್ನು ಆರಂಭಿಸಿದೆ. ಅದುವೇ 'ತಡ್ಕಾ'. ತನ್ನ ಜಿಯೋ ಹಾಟ್‌ಸ್ಟಾರ್‌ ಆಪ್‌ನಲ್ಲಿಯೇ ತಡ್ಕಾದ ಅನುಭವನನ್ನು ವೀಕ್ಷಕರು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಿದೆ. ಹಾಗಿದ್ದರೆ, ಇದರಲ್ಲಿ ಏನೇನು ವಿಶೇಷತೆಯಿದೆ? ತಡ್ಕಾದ ಮೈಕ್ರೋ ಡ್ರಾಮಗಳನ್ನು ಯಾಕೆ ನೋಡಬೇಕು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಇವತ್ತಿನ ಬ್ಯುಸಿ ಲೈಫ್‌ನಲ್ಲಿ ಗಂಟೆಗಳ ಕಾಲ ಕೂತು ಮನರಂಜನೆಯನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹದ್ದೊಂದು ವರ್ಗವಿದೆ. ಇಂತಹವರು ತಮ್ಮ ಒತ್ತಡದ ದೈನಂದಿನ ಜೀವನದಲ್ಲಿ ಕೆಲವು ನಿಮಿಷಗಳಲ್ಲಿ ಮನರಂಜನೆಯನ್ನು ಪಡೆಯಬಹುದು. 'ತಡ್ಕಾ'ದಲ್ಲಿ ಈಗಾಗಲೇ ಸುಮಾರು 100ಕ್ಕೂ ಅಧಿಕ ಶೋಗಳು ಇವೆ. ಫ್ಯಾಮಿಲಿ, ಸೆಂಟಿಮೆಂಟ್, ಥ್ರಿಲ್ಲರ್ ಕಥೆಯನ್ನು ತಂದಿದ್ದು, ಅವುಗಳನ್ನು ನೋಡಬಹುದಾಗಿದೆ.

Also Read
ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಗಿಸೋ ಕನ್ನಡ ಚಿತ್ರ ಕೂಡ ಇದೆ
ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; ಹೊಟ್ಟೆ ಹುಣ್ಣಾಗುವಂತೆ ನಗಿಸೋ ಕನ್ನಡ ಚಿತ್ರ ಕೂಡ ಇದೆ

ತಡ್ಕಾ ಮೈಕ್ರೋ ಸೀರಿಸ್ ವೇದಿಕೆ ವೀಕ್ಷಕರನ್ನು ಸೆಳೆಯುವ ಕಂಟೆಂಟ್‌ಗಳನ್ನು ಪ್ರೀಮಿಯರ್ ಮಾಡುತ್ತಿದೆ. ಭಾರತದ ಹಲವು ಭಾಷೆಗಳಲ್ಲಿ ಮೈಕ್ರೋ ಕಥೆಗಳನ್ನು ಹೇಳುತ್ತಿದೆ. ಭಾರತದ ಮೂಲೆ ಮೂಲೆಯಲ್ಲಿ ಅತ್ಯುತ್ತಮ ಸ್ಟೋರಿಗಳನ್ನು ಇಲ್ಲಿ ಬಿಂಬಿಸಿದೆ. ಮೊಬೈಲ್ ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ಶುರುವಾಗಿರುವ ಈ ಮೈಕ್ರೋ ಸೀರಿಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

JioHotstar s Tadka new micro-content offering over 100 punchy short-form shows

'ತಡ್ಕಾ'ಗಾಗಿ ಪ್ರತ್ಯೇಕ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಜಿಯೋ ಹಾಟ್‌ಸ್ಟಾರ್ ಆಪ್‌ನಲ್ಲಿಯೇ ತಡ್ಕಾ ಕೂಡ ನೋಡುವುದಕ್ಕೆ ಸಿಗಲಿದೆ. ಕೆಲಸದ ಮಧ್ಯದಲ್ಲಿ ಚಿಕ್ಕದಾಗಿ ಬ್ರೇಕ್ ತೆಗೆದುಕೊಂಡರೇ, ಇಲ್ಲಾ ಸ್ವಲ್ಪ ರಿಲ್ಯಾಕ್ಸ್ ಆಗಬೇಕು ಅಂತ ಅಂದುಕೊಂಡರೆ, ತಡ್ಕಾದಲ್ಲಿ ಲೆಕ್ಕವಿಲ್ಲದಷ್ಟು ಮೈಕ್ರೋ ಸೀರಿಸ್‌ಗಳು ಸಿಗುತ್ತವೆ. ಈಗಾಗಲೇ ಕೆಲವು ಮೈಕ್ರೋ ಸೀರಿಸ್‌ಗಳು ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುತ್ತಿವೆ.

ಜಿಯೋ ಹಾಟ್‌ಸ್ಟಾರ್ ತಂಡವೇ ತಡ್ಕಾವನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದಕ್ಕೆ ಐದು ಕಾರಣಗಳನ್ನು ನೀಡಿದೆ. ಚಿಕ್ಕದಾಗಿ ಬ್ರೇಕ್ ಬೇಕು ಎಂದು ಬಯಸಿದವರಿಗೆ ತಡ್ಕಾ ಉತ್ತಮ ಆಯ್ಕೆ ಎನ್ನುತ್ತಾರೆ. ಇದರಲ್ಲಿ ರೊಮ್ಯಾನ್ಸ್, ಥ್ರಿಲ್ಲರ್ ಹಾಗೂ ಆಕ್ಷನ್ ಮೈಕ್ರೊ ಸೀರಿಸ್‌ಗಳು ಇವೆ. ಇಲ್ಲಿರುವ ಶೋಗಳು ಪ್ರತಿಯೊಬ್ಬ ಭಾರತೀಯನ ರಿಯಲ್ ಲೈಫ್ ಅನ್ನೂ ಬಿಂಬಿಸಲಾಗಿದ್ದು, ಸುಲಭವಾಗಿ ಕನೆಕ್ಟ್ ಆಗುತ್ತೆ. ಇನ್ನು ಈ ಶಾರ್ಟ್ ಸೀರಿಸ್‌ಗಳು ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗುತ್ತವೆ. ಜಿಯೋ ಹಾಟ್‌ಸ್ಟಾರ್‌ ಆಪ್‌ನಲ್ಲಿಯೇ ಇರುವುದರಿಂದ ಸುಲಭವನ್ನು ನೋಡಬಹುದು. ಕೊನೆಯದಾಗಿ ಲೋಕಲ್ ಸ್ಟೋರಿಗಳನ್ನು ಸ್ಥಳೀಯ ಭಾಷೆಗಳಲ್ಲಿಯೇ ನೋಡಬಹುದಾಗಿದೆ.

More from Filmibeat

English summary
JioHotstar’s Tadka new micro-content offering over 100 punchy short-form shows.
Read more about: drama movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X