JioHotstar South Unbound: ಕನ್ನಡ, ತೆಲುಗು, ತಮಿಳು, ಮಲಯಾಳಂ ಕಂಟೆಂಟ್‌ಗಾಗಿ ₹4,000 ಕೋಟಿ ಹೂಡಿಕೆ

ಥಿಯೇಟರ್ ಜೊತೆಗೆ ಓಟಿಟಿ ವೇದಿಕೆಗಳು ಪೈಪೋಟಿಗೆ ಬಿದ್ದು ಜನರಿಗೆ ಮನರಂಜನೆಯನ್ನು ನೀಡುತ್ತಿವೆ. ಇತ್ತ ಜನರು ಓಟಿಟಿಯ ಕಂಟೆಂಟ್‌ಗಳನ್ನೂ ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಓಟಿಟಿ ವೇದಿಕೆಗಳು ಹೆಚ್ಚು ಹೂಡಿಕೆಗಳನ್ನು ಮಾಡುತ್ತಿವೆ. ಇದರಲ್ಲಿ ಜಿಯೋಹಾಟ್‌ಸ್ಟಾರ್ ಕೂಡ ಒಂದು.

ಜಿಯೋಹಾಟ್‌ಸ್ಟಾರ್ ಸಂಸ್ಥೆಯ ಪೋಷಕ ಕಂಪನಿ ಜಿಯೋಸ್ಟಾರ್ ಮುಂದಿನ ಐದು ವರ್ಷಗಳಲ್ಲಿ ದಕ್ಷಿಣ ಭಾರತದ ಕಂಟೆಂಟ್‌ಗಳ ಮೇಲೆ ₹4,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದಕ್ಕೆ 'ಜಿಯೋಹಾಟ್‌ಸ್ಟಾರ್ ಸೌತ್ ಅನ್‌ಬೌಂಡ್' ಎಂಬ ಹೆಸರಿಟ್ಟು, ತಮಿಳುನಾಡಿನ ಗೌರವಾನ್ವಿತ ಉಪ ಮುಖ್ಯಮಂತ್ರಿಗಳಾದ ಶ್ರೀ ಉದಯನಿಧಿ ಸ್ಟಾಲಿನ್ ಹಾಗೂ ದಕ್ಷಿಣ ಭಾರತದ ತಾರೆಯರ ಸಮ್ಮುಖದಲ್ಲಿ ಘೋಷಣೆ ಮಾಡಿದೆ. ಈ ವಿಷಯವಾಗಿ ಜಿಯೋಹಾಟ್‌ಸ್ಟಾರ್ ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾಗಿ ತಿಳಿಸಿದೆ.

JioHotstar South Unbound JioStar unveils regional content in Tamil Telugu Malayalam and Kannada

ಜಿಯೋಹಾಟ್‌ಸ್ಟಾರ್ ಯೋಜನೆ ಮುಂದಿನ ತಲೆಮಾರಿನ ನಿರ್ದೇಶಕರು, ಬರಹಗಾರರು, ಸಂಪಾದಕರು ಮತ್ತು ಡಿಜಿಟಲ್ ಕಥೆಗಾರರನ್ನು ಬೆಳೆಸುವತ್ತ ಕೇಂದ್ರೀಕೃತವಾಗಿರುತ್ತದೆ. ಅದಕ್ಕೆ ಸಾಕ್ಷಿಯಾಗಿ ಜಿಯೋಹಾಟ್‌ಸ್ಟಾರ್ 25 ದಕ್ಷಿಣ ಭಾರತದ ಟೈಟಲ್‌ಗಳ ಅದ್ದೂರಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮದ ಬಗ್ಗೆ ಜಿಯೋಸ್ಟಾರ್‌ನ ಬ್ಯುಸಿನೆಸ್‌ ಹೆಡ್‌ ಹಾಗೂ ಚೀಫ್‌ ಮಾರ್ಕೆಟಿಂಗ್‌ ಆಫೀಸರ್ ಸುಶಾಂತ್ ಶ್ರೀರಾಮ್ ಮಾಹಿತಿ ಹಂಚಿಕೊಂಡಿದ್ದಾರೆ. "ಜಿಯೋಹಾಟ್‌ಸ್ಟಾರ್ ಒಂದು ಕನಸಿನಿಂದ ಆರಂಭವಾಗಿ, ಮುಂದಿನ ಪೀಳಿಗೆ ಮನರಂಜನೆ ನೀಡುವುದಕ್ಕೆ ಅಡಿಪಾಯ ಹಾಕಿದೆ. ನಮ್ಮ ದೇಶದ ಶ್ರೀಮಂತ ಪರಂಪರೆಯನ್ನು, ಕಥೆಯನ್ನು ಅಳಿಯದ ಸಂಸ್ಕೃತಿಯನ್ನು ಅತ್ಯುನ್ನತ ತಂತ್ರಜ್ಞಾನದ ಮೂಲಕ ಮನರಂಜನೆಗೆ ವೇದಿಕೆಯನ್ನು ಕಟ್ಟುವ ಕನಸು ಇದಾಗಿದೆ." ಎಂದಿದ್ದಾರೆ.

ಹಾಗೇ ಜಿಯೋಸ್ಟಾರ್‌ ಎಂಟರ್‌ಟೈನ್ಮೆಂಟ್‌ ಸೌತ್‌ ವಿಭಾಗದ ಹೆಡ್‌ ಶ್ರೀ ಕೃಷ್ಣನ್ ಕುಟ್ಟಿ ಈ ಯೋಜನೆ ಬಗ್ಗೆ ಮಾತಾಡಿದ್ದಾರೆ. "ದಕ್ಷಿಣ ಭಾರತ ಯಾವಾಗಲೂ ಸೃಜನಾತ್ಮಕತೆಯ ಮಹಾಶಕ್ತಿ. ಭಾರತ ಪರಂಪರಿಕ ಕಥೆಯನ್ನು ಹೇಳುವ ಮುಂದಿನ ಯುಗವನ್ನು ಬೆಂಬಲಿಸುತ್ತಿರುವುದಕ್ಕೆ ನಮಗೆ ಹೆಮ್ಮೆ. ದೇಶದ ಬೇರೆ ಭಾಗಕ್ಕೆ ಹೋಲಿಸಿದೆ, ಇಲ್ಲಿನ ವೀಕ್ಷಕರು ಇಲ್ಲಿ ಹುಟ್ಟುವ ಕಥೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ." ಎಂದಿದ್ದಾರೆ.

ಇದೇ ವೇದಿಕೆ ಮೇಲೆ ಜಿಯೋಹಾಟ್‌ಸ್ಟಾರ್ ಸಾಲು ಸಾಲು ಹೊಸ ಕಂಟೆಂಟ್‌ಗಳನ್ನು ಅನೌನ್ಸ್ ಮಾಡಿದೆ. ಬಿಗ್ ಬಾಸ್ ಯಶಸ್ಸಿನಿಂದ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಜಿಯೋಹಾಟ್‌ಸ್ಟಾರ್ ವಿಭಿನ್ನ ಕಂಟೆಂಟ್‌ಗಳನ್ನು ಜನರು ನೀಡುವುದಕ್ಕೆ ಮುಂದಾಗಿದೆ.

'JIOHOTSTAR SOUTH UNBOUND 2025' ಕಾರ್ಯಕ್ರಮದಲ್ಲಿ ಅನೌನ್ಸ್ ಆದ 25 ಶೀರ್ಷಿಕೆಗಳ ಪೂರ್ಣ ಪಟ್ಟಿ ಹೀಗಿದೆ.

ಕನ್ನಡ:

* ಬಿಗ್ ಬಾಸ್ ಕನ್ನಡ (ರಿಯಾಲಿಟಿ ಶೋ)
- ನಿರೂಪಣೆ: ಕಿಚ್ಚ ಸುದೀಪ್

ತಮಿಳು:

* ಬಿಗ್ ಬಾಸ್ ತಮಿಳು (ರಿಯಾಲಿಟಿ ಶೋ)
- ನಿರೂಪಣೆ: ವಿಜಯ್ ಸೇತುಪತಿ

* ಗುಡ್‌ ವೈಫ್ Season S2 (ಫಿಕ್ಷನ್)
- ತಾರಾಗಣ: Priyamani, Sampath Raj, Aari Arujunan

* LBW - Love Beyond Wicket (ಫಿಕ್ಷನ್)
- ತಾರಾಗಣ : Vikranth, Niyathi Kadambi

* Lucky The Superstar (ಫಿಕ್ಷನ್)
]: GV Prakash, Anaswara Rajan, Meghna Sumesh

* Resort (ಫಿಕ್ಷನ್)
- ತಾರಾಗಣ :: Vijay Kumar Rajendran, Thalaivasal Vijay

* Heartbeat S3 (ಫಿಕ್ಷನ್)
- ತಾರಾಗಣ : Anumol, Karthik Kumar, Deepa Balu

* Lingam (ಫಿಕ್ಷನ್)
- ತಾರಾಗಣ :: Kathir, Divya Bharathi

* Love Always (ಫಿಕ್ಷನ್)
- ತಾರಾಗಣ : Jaya Prakash, Jayasudha, Gauri Kishan, Ramsan

* Kaattaan (ಫಿಕ್ಷನ್)
- ತಾರಾಗಣ :: Vijay Sethupathi, Milind Soman

* Second Love (ನಾನ್-ಫಿಕ್ಷನ್)

ತೆಲುಗು:

* Bigg Boss Telugu (ರಿಯಾಲಿಟಿ)
- ನಿರೂಪಣೆ: Nagarjuna

* Moodu Lantharlu (ಫಿಕ್ಷನ್)
- ತಾರಾಗಣ : Aishwarya Rajesh

* Vikram On Duty (ಫಿಕ್ಷನ್)

* Vishakha (ಫಿಕ್ಷನ್)
- ತಾರಾಗಣ : Kajal Aggarwal

* Varam (ಫಿಕ್ಷನ್)
- ತಾರಾಗಣ :: VishwaDev Rachakonda, Shivathmika Rajashekar, Srinivas Avasarala

* Batchmates (ಫಿಕ್ಷನ್)

* Save The Tiger S3 (ಫಿಕ್ಷನ್)
- ತಾರಾಗಣ :: Chaitanya Krishna, Priyadarshi Pulikonda, Abhinav Gomatam

* Mad for Each Other (ನಾನ್-ಫಿಕ್ಷನ್)
- ನಿರೂಪಣೆ/ಪ್ರಮುಖರು: Radha Nair, Sreemukhi

* Roadies (ನಾನ್-ಫಿಕ್ಷನ್)

ಮಲಯಾಳಂ:

* Bigg Boss Malayalam (ರಿಯಾಲಿಟಿ)

- ನಿರೂಪಣೆ: Mohanlal

* Kerala Crime Files S3 (ಫಿಕ್ಷನ್)
- ನಟೀ ನಟರು: Aju Varghese, Lal, Arjun Radhakrishnan

* Cousins And Kalyanams (ಫಿಕ್ಷನ್)

* Secret Stories: ROSLIN (ಫಿಕ್ಷನ್)
- ನಟೀ ನಟರು: Meena, Vineeth, Hakim

* Anali (ಫಿಕ್ಷನ್)
- ನಟೀ ನಟರು: Leona Lishoy, Nikhila Vimal

* 1000 Babies S2 (ಫಿಕ್ಷನ್)
- ನಟೀ ನಟರು: Neena Gupta, Rahman

* Pharma (ಫಿಕ್ಷನ್)
- ನಟೀ ನಟರು: Nivin Pauly, Rajit Kapur, Shruti Ramachandran

* Comedy Cooks (ನಾನ್-ಫಿಕ್ಷನ್)

ನಾಗಾರ್ಜುನ, ಮೋಹನ್ ಲಾಲ್, ವಿಜಯ್ ಸೇತುಪತಿ, ಪದ್ಮಶ್ರೀ ಕಮಲ್ ಹಾಸನ್ ಸೇರಿದಂತೆ ದಕ್ಷಿಣ ಭಾರತದ ಹಲವು ಗಣ್ಯ ಕಲಾವಿದರು ಮತ್ತು ತಂತ್ರಜ್ಞರು ಈ ಅದ್ದೂರಿ ಸಮಾರಂಭದಲ್ಲಿ ಹಾಜರಿದ್ದರು.

More from Filmibeat

English summary
JioHotstar South Unbound: JioStar unveils regional content in Tamil, Telugu, Malayalam and Kannada.
Read more about: series movies kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X