Devara OTT: 41 ದಿನಕ್ಕೆ ಜೂ.ಎನ್‌ಟಿಆರ್ 'ದೇವರ' ಓಟಿಟಿಯಲ್ಲಿ ರಿಲೀಸ್? ಯಾವ ಪ್ಲಾಟ್‌ಫಾರ್ಮ್?
RRR ಸಿನಿಮಾ ಬಳಿಕ ಜೂ.ಎನ್‌ಟಿಆರ್ 'ದೇವರ' ಸಿನಿಮಾದಲ್ಲಿ ನಟಿಸಿದ್ದರು. ಕೊರಟಾಲ ಶಿವ ನಿರ್ದೇಶಿಸಿದ್ದ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಜೋರಾಗಿಯೇ ಸೌಂಡು ಮಾಡಿತ್ತು.
'ದೇವರ ಪಾರ್ಟ್ 1'ನಲ್ಲಿ ಜೂ.ಎನ್‌ಟಿಆರ್ ಜೊತೆ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಿಂದ ಶ್ರೀದೇವಿ ಪುತ್ರಿ ದಕ್ಷಿಣ ಭಾರತದ ಸಿನಿಮಾಗೂ ಎಂಟ್ರಿ ಕೊಟ್ಟಂತಾಗಿತ್ತು. ಇವರೊಂದಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈ ಸಿನಿಮಾದ ಮತ್ತೊಂದು ಹೈಲೈಟ್. ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಈ ಜೋರಾಗಿಯೇ ಅಬ್ಬರಿಸಿತ್ತು.

ಜೂ.ಎನ್‌ಟಿರ್ ಸಿನಿಮಾ 'ದೇವರ' ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಎರಡನೇ ವಾರದ ಹೊತ್ತಿಗೆ ಬಾಕ್ಸಾಫೀಸ್‌ನಲ್ಲಿ ಗಣನೀಯ ಇಳಿಕೆ ಕಂಡಿತ್ತು. ಈಗ ಇದೇ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಸಿನಿಮಾ ಬಿಡುಗಡೆಯಾಗಿ 50 ದಿನ ಕಳೆಯುವುದರೊಳಗೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಚರ್ಚೆಯಾಗುತ್ತಿದೆ. 'ದೇವರ' ಯಾವ ಪ್ಲಾಟ್‌ಫಾರ್ಮ್‌ನಲ್ಲಿ? ಯಾವಾಗ ರಿಲೀಸ್ ಆಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ದೇವರ' ಜೂ.ಎನ್‌ಟಿಆರ್ ವೃತ್ತಿ ಬದುಕಿನಲ್ಲಿ ಪ್ರಮುಖ ಸಿನಿಮಾ ಆಗಿತ್ತು. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಮೂಲಕ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿದ್ದ ಯಂಗ್ ಟೈಗರ್‌ಗೆ ಆ ಫೇಮ್ ಅನ್ನು ಹಾಗೇ ಉಳಿಸಿಕೊಂಡು ಹೋಗಬೇಕಿತ್ತು. ಹೀಗಾಗಿ ಅವರು ನಟಿಸುತ್ತಿದ್ದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋದನ್ನು ಫಿಲ್ಮ್ ಮೇಕರ್ಸ್ ಎದುರು ನೋಡುತ್ತಲೇ ಇದ್ದರು.
300 ಕೋಟಿ ರೂಪಾಯಿ ವೆಚ್ಚದಲ್ಲಿ 'ದೇವರ' ಸಿನಿಮಾವನ್ನು ನಿರ್ಮಾಣ ಮಾಡಿರುವುದಾಗಿ ವರದಿಯಾಗಿತ್ತು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಬೇಕಿತ್ತು. 'ದೇವರ' ಸಿನಿಮಾ ಸುಮಾರು 337 ಕೋಟಿ ರೂಪಾಯಿ ಭಾರತದ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಆಗಿತ್ತು. ಹಾಗೇ ಓವರ್‌ಸೀಸ್ ಬಾಕ್ಸಾಫೀಸ್‌ನಿಂದ ಸುಮಾರು 200 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು 500 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ.
ಇನ್ನೇ ಸಿನಿಮಾ ರಿಲೀಸ್ ಆಗಿ ಮೂರು ವಾರ ಆಗಿವೆ. ಸೆಪ್ಟೆಂಬರ್ 27ಕ್ಕೆ ತೆರೆಕಂಡಿದ್ದ ಈ ಸಿನಿಮಾ, ಇನ್ನೊಂದು ವಾರಕ್ಕೆ ಒಂದು ತಿಂಗಳಿ ಪೂರೈಸಲಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಥಿಯೇಟರ್‌ನಲ್ಲಿ ಆಗಬೇಕಿದ್ದ ಕಲೆಕ್ಷನ್ ಬಹುತೇಕ ಆಗಿದೆ. ಹೀಗಾಗಿ ಮುಂದಿನ ನವೆಂಬರ್ 8ರಂದು ಓಟಿಟಿಗೆ ಲಗ್ಗೆ ಇಡುತ್ತಿದೆ ಎನ್ನಲಾಗಿದೆ. ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆಯುವುದರೊಳಗೆ ಸಿನಿಮಾ ಓಟಿಟಿಯಲ್ಲಿ ಪ್ರದರ್ಶನ ಕಾಣಲಿದೆ. ಮೂಲಗಳ ಪ್ರಕಾರ 'ದೇವರ' ಸಿನಿಮಾದ ಓಟಿಟಿ ರೈಟ್ಸ್ ಅನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ.
ಜೂ.ಎನ್‌ಟಿಆರ್ ಸದ್ಯಕ್ಕೀಗ 'ವಾರ್ 2' ಕಡೆ ಗಮನ ಹರಿಸಿದ್ದಾರೆ. ಹೃತಿಕ್ ರೋಷನ್ ಸಿನಿಮಾದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದಲ್ಲಿನ ತಮ್ಮ ಪೋಷನ್ ಮುಗಿಸಲಿದ್ದಾರೆ. ಆ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಬ್ಯೂಸಿಯಾಗಲಿದ್ದಾರೆ. ಸದ್ಯ ಜೂ.ಎನ್‌ಟಿಆರ್ ಕೈಯಲ್ಲಿ ಒಳ್ಳೊಳ್ಳೆ ಸಿನಿಮಾಗಳಿದ್ದು ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡದಾಗಿಯೇ ಸದ್ದು ಮಾಡಲಿದ್ದಾರೆ.
Disclaimer: ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಓಟಿಟಿ ವೇದಿಕೆ ಅಧಿಕೃತವಾಗಿ ಖಚಿತ ಪಡಿಸಬೇಕಿದೆ.


Click it and Unblock the Notifications











