OTT Releases:ಜೂನ್ 20ಕ್ಕೆ 25ಕ್ಕೂ ಹೆಚ್ಚು ಸಿನಿಮಾ, ವೆಬ್ ಸೀರಿಸ್ ರಿಲೀಸ್; ಯಾವುದು ನೋಡ್ತೀರಾ ಯಾವುದು ಬಿಡ್ತೀರಾ?
ವೀಕೆಂಡ್ ಬಂತು ಅಂದರೆ, ಓಟಿಟಿ ವೇದಿಕೆಗಳು ಅಲರ್ಟ್ ಆಗಿಬಿಡುತ್ತವೆ. ತಮ್ಮ ವೀಕ್ಷಕರಿಗೆ ಹೊಚ್ಚ ಹೊಸ ಕಂಟೆಂಟ್‌ಗಳ ಮೂಲಕ ರಂಜಿಸುವುದಕ್ಕೆ ರೆಡಿಯಾಗಿ ಬಿಡುತ್ತೆ. ಓಟಿಟಿಯ ಪ್ರಮುಖ ಫ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ, ವೆಬ್ ಸೀರಿಸ್, ಡಾಕ್ಯೂಮೆಂಟರಿಗಳನ್ನು ರೆಡಿಯಿಟ್ಟುಕೊಂಡಿರುತ್ತೆ. ಈ ವೀಕೆಂಡ್ (ಜೂನ್ 20) ಕೂಡ ಅದ್ಭುತ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ರಿಲೀಸ್‌ಗೆ ರೆಡಿಯಿವೆ.
ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ, ಜಿಯೋ ಹಾಟ್‌ಸ್ಟಾರ್, ಜೀ 5, ಆಹಾ, ಎಂಎಕ್ಸ್ ಪ್ಲೇಯರ್ ಅಂತಹ ಓಟಿಟಿ ವೇದಿಕೆಗಳಲ್ಲಿ ಜೂನ್ 20ರಂದು ಆಕ್ಷನ್, ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹಾಗೇ ಹಾಲಿವುಡ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಿಂದ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

ಇಮ್ರಾನ್ ಹಾಶ್ಮಿ ನಟಿಸಿರುವ 'ಗ್ರೌಂಡ್ ಜೀರೋ' ದಿಂದ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 3'ವರೆಗೂ ಅದ್ಭುತ ಕಂಟೆಂಟ್‌ಗಳು ಈ ವಾರ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಅಂತಹ ಕಂಟೆಂಟ್‌ಗಳ ಲಿಸ್ಟ್ ಇಲ್ಲಿದೆ.
ನೆಟ್‌ಫ್ಲಿಕ್ಸ್
ಬಹು ನಿರೀಕ್ಷಿತ ಕಾಮಿಡಿ ಶೋ 'ದಿ ಕಪಿಲ್ ಶರ್ಮಾ ಶೋ' ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 21ರಿಂದ ಸ್ಟ್ರೀಮಿಂಗ್ ಆಗಲಿದೆ. ಈ ಬಾರಿಯ ವಿಶೇಷ ಅಂದರೆ, ನವ್‌ಜೋತ್ ಸಿಂಗ್ ಸಿಧು ಐದು ವರ್ಷಗಳ ಬಳಿಕ ಮತ್ತೆ ಕಪಿಲ್ ಶರ್ಮಾ ಶೋಗೆ ಮರಳಿದ್ದಾರೆ. ಇವರೊಂದಿಗೆ ಅರ್ಚನಾ ಪೂರನ್ ಸಿಂಗ್, ಸುನೀಲ್ ಗ್ರೋವರ್, ಕಿಕು ಶರ್ದಾ ಸೇರಿದಂತೆ ಹಾಸ್ಯ ದಿಗ್ಗಜರು ಈ ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋ ಜೊತೆ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾದ ಕಂಟೆಂಟ್ ಲಿಸ್ಟ್ ಇಲ್ಲಿದೆ.
ದಿ ವಾಟರ್ ಫ್ರಂಟ್ (ಇಂಗ್ಲಿಷ್)
ಒಲಿಂಪೊ (ಇಂಗ್ಲಿಷ್)
ಅಮೆಜಾನ್ ಪ್ರೈಂ ವಿಡಿಯೋ
ಈ ವಾರು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಸಿನಿಮಾ, ವೆಬ್ ಸೀರಿಸ್‌ಗಳು ರಿಲೀಸ್ ಆಗುತ್ತಿವೆ. ಅದರಲ್ಲಿ ಇಮ್ರಾನ್ ಹಾಶ್ಮಿ ಭಾರತೀಯ ಯೋಧನಾಗಿ ನಟಿಸಿರುವ 'ಗ್ರೌಂಡ್ ಜೀರೋ' ನಿರೀಕ್ಷೆಯ ಸಿನಿಮಾವಾಗಿದೆ. ಈ ಆಕ್ಷನ್, ಥ್ರಿಲ್ಲರ್ ಸಿನಿಮಾದ ಜೊತೆಗೆ ಇನ್ನೂ ಹಲವು ಇಂಟ್ರೆಸ್ಟಿಂಗ್ ಕಂಟೆಂಟ್‌ಗಳು ಇಲ್ಲಿವೆ.

ಫೈನಲ್ ಡೆಸ್ಟಿನೇಷನ್ ಬ್ಲಡ್‌ಲೈನ್ (ಇಂಗ್ಲಿಷ್)
ಸಿಸ್ಟರ್ ಮಿಡ್‌ನೈಟ್ (ಇಂಗ್ಲಿಷ್)
ಕಾಪ್ ಅಂಡ್ ಎ ಹಾಫ್(ಇಂಗ್ಲಿಷ್)
ಆಕ್ಷನ್ (ಫ್ರೆಂಚ್)
ಜೈ ಗಂಗಾಜಲ್ (ಹಿಂದಿ)
ವೆಲ್‌ಕಮ್ ಹೋಮ್ (ಮರಾಠಿ)
ವಿ ವರ್ ಲಯರ್ಸ್ ( ಇಂಗ್ಲಿಷ್ ವೆಬ್ ಸೀರಿಸ್)
ರಾಜಪುಥಿರನ್(ತಮಿಳು)
ಏಸ್(ತಮಿಳು)
ಜೋರಾ ಕೈಯಾ ತಟ್ಟುಂಗ (ತಮಿಳು)
ಸಿಕ್ಸ್ ಈಚ್ (ಪಂಜಾಬಿ)
ಜೀ 5
ಈ ವಾರ ಅಮೆಜಾನ್ ಪ್ರೈಂ ವಿಡಿಯೋಗೆ ಕಾಂಪಿಟೇಷನ್ ಕೊಡುತ್ತಿರೋದು ಜೀ 5. ಈ ವೇದಿಕೆಯಲ್ಲೂ ಎರಡು ಬಹು ನಿರೀಕ್ಷೆಯ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅವುಗಳ ಪಟ್ಟಿ ಇಲ್ಲಿದೆ.
ಪ್ರಿನ್ಸ್ ಅಂಡ್ ಫ್ಯಾಮಿಲಿ (ಮಲಯಾಳಂ)
ಡಿಟೆಕ್ಟಿವ್ ಶೆರ್ದಿಲ್ (ಹಿಂದಿ)
ಜಿಯೋ ಹಾಟ್‌ಸ್ಟಾರ್
ಕೇರಳ ಕ್ರೈಂ ಫೈಲ್ಸ್ ಸೀಸನ್ 2 (ಮಲಯಾಳಂ ವೆಬ್ ಸೀರಿಸ್)
ಪ್ಯಾರಲೆಲ್ ( ಇಂಗ್ಲಿಷ್)
ಇತರೆ ಓಟಿಟಿ ವೇದಿಕೆ ಗಳಲ್ಲಿ..
ಭಾರತದಲ್ಲಿ ಪ್ರಮುಖ ಓಟಿಟಿ ವೇದಿಕೆಗಳ ಜೊತೆ ಇನ್ನೂ ಕೆಲವು ಪ್ಲಾಟ್‌ಫಾರ್ಮ್‌ಗಳಲ್ಲೂ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ರಿಲೀಸ್ ಆಗುತ್ತಿವೆ. ಆಹಾ, ಸನ್ ನೆಕ್ಸ್ಟ್, ಈಟಿವಿ ವಿನ್, ಸಿಂಪ್ಲಿ ಸೌತ್, ಎಂಎಕ್ಸ್ ಪ್ಲೇಯರ್‌ಗಳಲ್ಲಿ ಒಳ್ಳೊಳ್ಳೆ ಕಂಟೆಂಟ್ ರಿಲೀಸ್ ಆಗುತ್ತಿವೆ. ಅವುಗಳ ಲಿಸ್ಟ್ ಇಲ್ಲಿದೆ.
ಜಿನ್ (ತಮಿಳು - ಸನ್ ನೆಕ್ಸ್ಟ್)
ಕೊಲ್ಲಾ (ತೆಲುಗು - ಈಟಿವಿ ವಿನ್)
ಕಲಿಯುಗಂ (ತಮಿಳು- ಸಿಂಪ್ಲಿ ಸೌತ್)
ಸೇವ್ ನಲ್ಲ ಪಸಂಗ (ತಮಿಳು-ಆಹಾ)
ಯುಗಿ (ತಮಿಳು-ಆಹಾ)
ಎಲ್ಲಂ ಸೆಟ್ಟನು(ಮಲಯಾಳಂ- ಸಿಂಪ್ಲಿ ಸೌತ್)
ಫಸ್ಟ್ ಕಾಪಿ (ಹಿಂದಿ ಎಂಎಕ್ಸ್ ಪ್ಲೇಯರ್)


Click it and Unblock the Notifications











