ಬಿಗ್‌ ಸರ್‌ಪ್ರೈಸ್‌; ಇನ್ನು ಕೆಲವೇ ನಿಮಿಷಗಳಲ್ಲಿ 'ಇಂಡಿಯನ್' ಓಟಿಟಿಯಲ್ಲಿ ಸ್ಟ್ರೀಮಿಂಗ್

ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ತೆರೆಗಪ್ಪಳಿಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕಲೆಕ್ಷನ್ ಡಲ್ಲಾಗಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಪ್ರೇಕ್ಷಕರರನ್ನು ರಂಜಿಸುವಲ್ಲಿ ವಿಫಲವಾಗಿದೆ.

ಕಮಲ್ ನಟನೆ, ಒಂದಷ್ಟು ಒಳ್ಳೆ ಸನ್ನಿವೇಶಗಳು ಚಿತ್ರದಲ್ಲಿ ಇದ್ದರೂ ಒಟ್ಟಾರೆಯಾಗಿ ಸಿನಿಮಾ ರುಚಿಸುತ್ತಿಲ್ಲ. 28 ವರ್ಷಗಳ ಬಳಿಕ ಸೀಕ್ವೆಲ್ ಮಾಡಿ ಶಂಕರ್ ಎಡವಿದ್ದಾರೆ. ಇನ್ನು 'ಇಂಡಿಯನ್-3' ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ. ಇಷ್ಟು ವರ್ಷಗಳ ಬಳಿಕ ಎರಡೆರಡು ಸೀಕ್ವೆಲ್ ಮಾಡುವ ಅಗತ್ಯ ಏನಿತ್ತು? ಕೊನೆ ಪಕ್ಷ ಒಂದೇ ಚಿತ್ರದಲ್ಲಿ ಸಂಪೂರ್ಣ ಕಥೆ ಹೇಳಿದ್ದರೂ ಚೆನ್ನಾಗಿತ್ತು ಎಂದು ಕೆಲವರು ಹೇಳುತ್ತಿದ್ದಾರೆ.

Kamal haasan starrer Indian film Remastered 4K Version Streaming from july 15th

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಇಂಡಿಯನ್' ಸೀಕ್ವೆಲ್ ಸಿನಿಮಾಗಳನ್ನು ನಿರ್ಮಿಸಿದೆ. ನಾನ್‌ ಥ್ರಿಯೇಟ್ರಿಕಲ್ ರೈಟ್ಸ್‌ನಿಂದಲೇ ಬಂಡವಾಳ ವಾಪಸ್ ಬಂದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಪಾರ್ಟ್‌-2ಗಿಂತ ಪಾರ್ಟ್-3 ಬಗ್ಗೆ ಚಿತ್ರತಂಡ ಬಹಳ ಭರವಸೆಯಿಂದಿದೆ. ಇನ್ನು ಚಿತ್ರದ ಕಲಾವಿದರ ವಿಭಾಗಕ್ಕೆ ಸಿದ್ದಾರ್ಥ್, ರಕುಲ್ ಪ್ರೀತ್‌ಸಿಂಗ್, ಬಾಬಿ ಸಿಂಹ ಸೇರಿದಂತೆ ಹಲವರು ಸೇರಿಕೊಂಡಿದ್ದಾರೆ.

ಸಾಕಷ್ಟು ಜನ 'ಇಂಡಿಯನ್'-2ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್ ಸೂಪರ್ ಎನ್ನುತ್ತಿದ್ದಾರೆ. ಆ ಸಿನಿಮಾ ಮುಂದೆ ಇದು ಡಲ್ಲಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇನ್ನು 10 ಬಾರಿ 'ಇಂಡಿಯನ್' ನೋಡಬಹುದು. ಸೀಕ್ವೆಲ್ ನೋಡೋಕ್ಕಾಗಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವರು 'ಇಂಡಿಯನ್' ಸಿನಿಮಾ ನೋಡಬೇಕು ಎಂದು ಬಯಸುತ್ತಿದ್ದಾರೆ. ಯಾವುದಾದರೂ ಓಟಿಟಿಯಲ್ಲಿ ಇದ್ಯಾ? ಎಂದು ಹುಡುಕಾಡುತ್ತಿದ್ದಾರೆ.

ಇನ್ನು 'ಇಂಡಿಯನ್' ಸಿನಿಮಾ ನೋಡದವರು ನೋಡಲು ಬಯಸುತ್ತಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಜುಲೈ 14ರಿಂದ ಅಂದ್ರೆ ಇಂದು ರಾತ್ರಿಯಿಂದಲೇ 'ಇಂಡಿಯನ್' ಸಿನಿಮಾ ರಿಲೀಸ್ ಆಗಲಿದೆ. ರೀ ಮಾಸ್ಟರ್ಸ್‌ 4K ವರ್ಷನ್‌ ನೋಡಲು ಸಿಗಲಿದೆ. 1996ರಲ್ಲಿ ಈ ಆಕ್ಷನ್ ಥ್ರಿಲ್ಲರ್ ತೆರೆಗೆ ಬಂದಿತ್ತು. ಸೇನಾಪತಿ ಹಾಗೂ ಮಗ ಚಂದ್ರಬೋಸ್ ಆಗಿ ಡಬಲ್ ರೋಲ್‌ನಲ್ಲಿ ಕಮಲ್ ಹಾಸನ್ ನಟಿಸಿದ್ದರು.

Kamal haasan starrer Indian film Remastered 4K Version Streaming from july 15th

ದೇಶದಲ್ಲಿರುವ ಭ್ರಷ್ಟಾಚಾರ ಕಂಡು ರೋಸಿ ಹೋಗುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಅಖಾಡಕ್ಕಿಳಿಯುತ್ತಾನೆ. ಹಿಂಸಾತ್ಮಕ ಮಾರ್ಗದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದುಕೊಳ್ಳುತ್ತಾನೆ. ಕೆಲ ಭ್ರಷ್ಟರನ್ನು ಕೊಂದು ಉಳಿದವರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತಾನೆ. ಖುದ್ದು ತನ್ನ ಮಗ ಕೂಡ ಭ್ರಷ್ಟ ಎಂದು ಗೊತ್ತಾದಾಗ ಆತನನ್ನು ಕೊಂದುಬಿಡುವ ಕಥೆ ಚಿತ್ರದಲ್ಲಿತ್ತು.

ಆಕ್ಷನ್ ಜೊತೆಗೆ ಎಮೋಷನಲ್ ಅಂಶಗಳನ್ನು ಸೇರಿಸಿ ಶಂಕರ್ ಸಿನಿಮಾ ಕಟ್ಟಿಕೊಟ್ಟಿದ್ದರು. ಇಂಡಿಯನ್ ನ್ಯಾಷನಲ್ ಆರ್ಮಿಯ ಸದಸ್ಯನಾಗಿ(ಕಾಲ್ಪನಿಕ ಕಥೆ) ಸೇನಾಪತಿ ಸ್ವಾತಂತ್ರಕ್ಕಾಗಿ ಹೋರಾಡಿದ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಇನ್ನು ಸೇನಾಪತಿಯ ವರ್ಮ ಕಲೆ ನೋಡುಗರಿಗೆ ಬೆರಗು ಮೂಡಿಸಿತ್ತು. ಸಿನಿಮಾ ಹಿಂದಿ, ತೆಲುಗಿಗೂ ಡಬ್ ಆಗಿ ಹಿಟ್ ಆಗಿತ್ತು.

ಸತತ ಸೋಲುಗಳಿಂದ ಕಂಗೆಟ್ಟಿದ್ದ ನಿರ್ದೇಶಕ ಶಂಕರ್ ತಮ್ಮದೇ ಹಿಟ್ ಸಿನಿಮಾ ಸೀಕ್ವೆಲ್ ಮಾಡಿ ಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಅದರಲ್ಲಿ ಸಂಪೂರ್ಣವಾಗಿ ಸಕ್ಸಸ್ ಕಂಡಿಲ್ಲ ಎನ್ನುವುದು ಇದೀಗ ಗೊತ್ತಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 'ಇಂಡಿಯನ್-2' ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಆಗಸ್ಟ್ 15ಕ್ಕೆ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.

More from Filmibeat

English summary
Shankar directional Indian film ready to ott Streaming;
Read more about: kamal haasan ott shankar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X