ಅಬ್ಬಬ್ಬಾ.. ಕಮಲ್ ನಟನೆಯ 250 ಕೋಟಿ ರೂ. ಬಜೆಟ್ ಚಿತ್ರ ನೇರವಾಗಿ ಓಟಿಟಿಗೆ?

ದೊಡ್ಡ ಸಿನಿಮಾಗಳನ್ನು ಬೆಳ್ಳಿಪರದೆ ಮೇಲೆ ನೋಡಿದರೆ ಚೆಂದ. ಆ ಅದ್ಭುತ ಅನುಭೂತಿಯನ್ನು ದೊಡ್ಡಪರದೆಯಲ್ಲಿ ಯಾವುದೇ ಅಡಚಣೆ ಇಲ್ಲದೇ ಡಿಟಿಎಸ್ ಸೌಂಡ್‌ನಲ್ಲಿ ಅನುಭವಿಸುವ ಮಜಾನೇ ಬೇರೆ. ಟಿವಿ, ಮೊಬೈಲ್, ಓಟಿಟಿ, ಹೋಮ್ ಹೀಗೆ ಥಿಯೇಟರ್ ಏನೇ ಬಂದಿದ್ದರೂ ಜನ ಇವತ್ತಿಗೂ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಗಳಿಗೆ ಬರ್ತಾರೆ.

ಓಟಿಟಿ ಟ್ರೆಂಡ್ ಶುರುವಾದ ಬಳಿಕ ಚಿತ್ರಮಂದಿರಕ್ಕೆ ಬಂದ ತಿಂಗಳಲ್ಲೇ ದೊಡ್ಡ ಸಿನಿಮಾಗಳು ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗೆ ಲಗ್ಗೆ ಇಡುತ್ತಿವೆ. ಕೆಲವರು ಇದೇ ಕಾರಣಕ್ಕೆ ಚಿತ್ರಮಂದಿರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಕೆಲ ಸಿನಿಮಾಗಳು ನೇರವಾಗಿ ಓಟಿಟಿಗೆ ಬರುವುದನ್ನು ನೋಡಿದ್ದೇವೆ. ಸಣ್ಣ ಬಜೆಟ್‌ನಲ್ಲಿ ನೇರವಾಗಿ ಓಟಿಟಿಗಾಗಿ ಸಿನಿಮಾ, ವೆಬ್ ಸೀರಿಸ್ ಮಾಡುವ ಪ್ರಯತ್ನಗಳು ನಡೆಯುತ್ತಿದೆ.

Kamal haasan s Indian- 3 likely go for Direct OTT release Next year

ಕೋವಿಡ್ ಸಂಕಷ್ಟದ ಸಮಯದಲ್ಲಿ ಚಿತ್ರಮಂದಿರಗಳ ಬಾಗಿಲು ಬಂದ್ ಆಗಿತ್ತು. ಅಂತಹ ಸಮಯದಲ್ಲಿ ಕೆಲ ದೊಡ್ಡ ಸಿನಿಮಾಗಳು ಓಟಿಟಿಗೆ ಬಂದ ಉದಾಹರಣೆಯಿದೆ. ಇದೀಗ ಬರೋಬ್ಬರಿ 250 ಕೋಟಿ ರೂ. ಬಜೆಟ್‌ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎಂದು ಚರ್ಚೆ ಶುರುವಾಗಿದೆ. ಅದು ಕೂಡ ಕಮಲ್ ಹಾಸನ್ ನಟನೆಯ ಸಿನಿಮಾ ಎನ್ನುವುದು ವಿಶೇಷ.

ಈಗಾಗಲೇ ನೇರವಾಗಿ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ನೆಟ್‌ಫ್ಲಿಕ್ಸ್ ಜೊತೆ ಮಾತುಕತೆ ನಡೆಯುತ್ತಿದೆ. ಡೀಲ್ ಕುದುರಿದರೆ ಮುಂದಿನ ವರ್ಷಾರಂಭದಲ್ಲೇ ಸಿನಿಮಾ ಓಟಿಟಿಗೆ ಎಂಟ್ರಿ ಕೊಡಲಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ? ಶಂಕರ್ ನಿರ್ದೇಶನದ 'ಇಂಡಿಯನ್-3'. ಹೌದು. ಕೆಲ ತಿಂಗಳ ಹಿಂದೆ ತೆರೆಗೆ ಬಂದಿದ್ದ 'ಇಂಡಿಯನ್-2' ಸಿನಿಮಾ ಹೀನಾಯವಾಗಿ ಸೋತಿತ್ತು. ಹಾಗಾಗಿ ಸರಣಿಯ ಮುಂದಿನ ಚಿತ್ರವನ್ನು ನೇರವಾಗಿ ಓಟಿಟಿಗೆ ತರುವ ಬಗ್ಗೆ ಚರ್ಚೆ ಶುರುವಾಗಿದೆ.

ಶಂಕರ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್‌ನಲ್ಲಿ 'ಇಂಡಿಯನ್' ಸಿನಿಮಾ ದಶಕಗಳ ಹಿಂದೆ ಸಂಚಲನ ಸೃಷ್ಟಿಸಿತ್ತು. ಭ್ರಷ್ಟಾಚಾರದ ವಿರುದ್ಧ ಸೇನಾಪತಿ ತಾತನ ಹೋರಾಟವನ್ನು ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಮುಂದೆ ಸಿನಿಮಾ ಬಾಲಿವುಡ್‌ನಲ್ಲಿ ರೀಮೆಕ್ ಆಗಿತ್ತು. ಇತ್ತೀಚೆಗೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಮಲ್- ಶಂಕರ್ ಆ ಸಿನಿಮಾ ಸೀಕ್ವೆಲ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು.

Kamal haasan s Indian- 3 likely go for Direct OTT release Next year

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಇಂಡಿಯನ್-2' ಸಿನಿಮಾ ಆರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ 3 ಜನ ಸಾವನ್ನಪ್ಪಿದ್ದರು. ಬಳಿಕ ಚಿತ್ರಕ್ಕೆ ಬ್ರೇಕ್ ಬಿದ್ದಿತ್ತು. ಬಹಳ ದಿನಗಳ ನಂತರ ಮತ್ತೆ ಸಿನಿಮಾ ಟೇಕಾಫ್ ಆಗಿತ್ತು. ಲೈಕಾ ಜೊತೆಗೆ ರೆಡ್ ಜೈಂಟ್ ಸಂಸ್ಥೆ ಕೈ ಜೋಡಿಸಿತ್ತು.

ಚಿತ್ರೀಕರಣ ಮಾಡುತ್ತಾ ಮಾಡುತ್ತಾ 'ಇಂಡಿಯನ್-2' ಸಿನಿಮಾ ಬಜೆಟ್ ಹೆಚ್ಚಾಗಿತ್ತು. ಇಂತಹ ಸಮಯದಲ್ಲೇ ಚಿತ್ರವನ್ನು 2 ಭಾಗಗಳಾಗಿ ಮಾಡುವ ಲೆಕ್ಕಾಚಾರ ಶುರುವಾಗಿತು. ಅಂದಾಜು ತಲಾ 250 ಕೋಟಿ ರೂ. ಬಜೆಟ್‌ನಲ್ಲಿ ಎರಡೂ ಚಿತ್ರಗಳ ನಿರ್ಮಾಣವಾಯಿತು. ಜುಲೈ 12ಕ್ಕೆ ತೆರೆಗಪ್ಪಳಿಸಿದ 'ಇಂಡಿಯನ್-2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಯಾಕೋ ಸಿನಿಮಾ ಮ್ಯಾಜಿಕ್ ಮಾಡಲಿಲ್ಲ. ಹೀನಾಯವಾಗಿ ಸೋಲುಂಡಿತ್ತು.

'ಇಂಡಿಯನ್-2' ಕ್ಲೈಮ್ಯಾಕ್ಸ್‌ನಲ್ಲೇ ಮುಂದಿನ ಸಿನಿಮಾ ಟ್ರೈಲರ್ ಸಹ ಪ್ರದರ್ಶನ ಮಾಡಲಾಗಿತ್ತು. 'ಇಂಡಿಯನ್-3' ಚಿತ್ರದಲ್ಲಿ ಕಮಲ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸೇನಾಪತಿ ಮಾತ್ರವಲ್ಲದೇ ಆತನ ತಂದೆಯ ಪಾತ್ರದಲ್ಲಿ ಕೂಡ ಅಬ್ಬರಿಸಿದ್ದಾರೆ. ಕಾಜಲ್ ಅಗರಲ್‌ವಾಲ್ ಆತನ ಮಡದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಇಂಡಿಯನ್-2' ಸಿನಿಮಾ ಸೋತ ಬಳಿಕ ಪಾರ್ಟ್‌-3 ನೋಡಲು ಜನ ಚಿತ್ರಮಂದಿರಕ್ಕೆ ಬರ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.

'ಇಂಡಿಯನ್-3' ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲ್ಲ. ಹಾಗಾಗಿ ಡೈರೆಕ್ಟ್ ಓಟಿಟಿ ಸ್ಟ್ರೀಮಿಂಗ್‌ಗೆ ಒಳ್ಳೆ ಡೀಲ್ ಕುದುರಿಸುವ ಪ್ರಯತ್ನ ನಡೀತಿದೆಯಂತೆ. ನೆಟ್‌ಫ್ಲಿಕ್ಸ್ ಸಂಸ್ಥೆ 'ಇಂಡಿಯನ್-2' ರೈಟ್ಸ್ ಕೊಂಡುಕೊಂಡು ಸಂಕಷ್ಟ ಎದುರಿಸಿತ್ತು. ಬಳಿಕ ಚೌಕಾಸಿ ಮಾಡಿಕೊಂಡು ಸಿನಿಮಾ ಸ್ಟ್ರೀಮಿಂಗ್ ಮಾಡಿತ್ತು. ಇದೀಗ 'ಇಂಡಿಯನ್-3' ಸಿನಿಮಾ ಡೈರೆಕ್ಟ್ ಸ್ಟ್ರೀಮಿಂಗ್ ರೈಟ್ಸ್ ಬಗ್ಗೆ ಚರ್ಚೆ ನಡೀತಿದೆಯಂತೆ. ಜನವರಿಯಲ್ಲಿ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ.

More from Filmibeat

English summary
Kamal haasan starrer big budget film is in Talks for direct ott streaming;
Read more about: kamal haasan ott kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X