IMDb ಟಾಪ್ 10 ಸ್ಟಾರ್‌ಗಳ ಪಟ್ಟಿ ರಿಲೀಸ್.. ವಿಜಯ್ ಸೇತುಪತಿಯನ್ನೇ ಹಿಂದಿಕ್ಕಿದ ಕನ್ನಡತಿ ಯಾರು?
IMDb ಪ್ರತಿವಾರದಂತೆ ಜನಪ್ರಿಯ ತಾರೆಯರ ಪಟ್ಟಿಯನ್ನು ರಿಲೀಸ್ ಮಾಡಿದೆ. ಆಯಾ ವಾರ ಭಾರತೀಯ ಚಿತ್ರರಂಗದ ಜನಪ್ರಿಯರ ನಟ, ನಟಿಯರ ಟಾಪ್ 10 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬಾಕ್ಸಾಫೀಸ್ ಧೂಳೆಬ್ಬಿಸಿದ 'ಜವಾನ್' ಸಿನಿಮಾದ ತಾರೆಯರೇ ಹೆಚ್ಚು ಮಂದಿ ಇದ್ದಾರೆ.
ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ 'ಜವಾನ್' ಸಿನಿಮಾದ ಹೀರೊಯಿನ್ ನಯನತಾರಾ IMDb ಪಟ್ಟಿಯಲ್ಲಿ ನಂ 1 ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ಅನ್ನೂ ಹಿಂದಿಕ್ಕಿ ಟಾಪ್ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ IMDb ನಂ 2 ಸ್ಥಾನದಲ್ಲಿದ್ದಾರೆ.

ಇಂಟರ್ನೆಟ್ ಮೂವಿ ಡಾಟಾಬೇಸ್ (IMDb) ಸರಿಸುಮಾರು 200 ಮಿಲಿಯನ್ ವೆಬ್‌ಸೈಟ್‌ಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ಅಲ್ಲಿ ಸಿಕ್ಕಿದ ಅಂಕಿ ಅಂಶಗಳನ್ನು ಆಧರಿಸಿದ ಸುಮಾರು 10 ಮಂದಿ ಜನಪ್ರಿಯ ತಾರೆಯರ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಐದು ಸ್ಥಾನ 'ಜವಾನ್' ಸಿನಿಮಾದಲ್ಲಿ ನಟಿಸಿದ ತಾರೆಯರೇ ಇದ್ದಾರೆ.
ನಯನತಾರಾ ಟಾಪ್ 1 ಸ್ಥಾನದಲ್ಲಿದ್ದರೆ ಅತ್ತ ಶಾರುಖ್ ಖಾನ್ ಟಾಪ್ 2 ಹಾಗೂ ಅಟ್ಲೀ ಕುಮಾರ್ ಟಾಪ್ 3 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ನೆಟ್‌ಫ್ಲಿಕ್ಸ್‌ನ 'ಫ್ರೈಡೇ ನೈಟ್' ಮೂವಿಯಲ್ಲಿ ನಟಿಸಿದ್ದ ಕನ್ನಡತಿ ಆದ್ಯಾ ಆನಂದ್ IMDb ಟಾಪ್ 10 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
IMDbನಲ್ಲಿ ಕನ್ನಡತಿ ಆದ್ಯಾ ಮೋಡಿ
ಕನ್ನಡತಿ ಆದ್ಯಾ ಆನಂದ್ ಟಾಪ್ 8ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್‌ನ ಅಗ್ರಗಣ್ಯ ತಾರೆಯರ ಸಾಲಿನಲ್ಲಿದ್ದಾರೆ. ಆದ್ಯಾಳ ಬಳಿಕ ಉಳಿದ ಕೊನೆಯ ಎರಡು ಸ್ಥಾನಗಳಲ್ಲಿ ವಿಜಯ್ ಸೇತುಪತಿ ಹಾಗೂ ರಿಧಿ ಡೋಗ್ರಾ ಸ್ಥಾನಪಡೆದಿದ್ದಾರೆ. ಈ ಮೂಲಕ ಗಣ್ಯಾತೀಗಣ್ಯರನ್ನೇ ಹಿಂದಿಕ್ಕಿದ್ದಾರೆ.

ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ತಾರೆಯರ ಅಬ್ಬರಿಸುತ್ತಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಸಿನಿಮಾ ಮಂದಿನೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ಕನ್ನಡದ ಅನೇಕ ನಟಿಯರು ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ಇವರ ಸಾಲಿನಲ್ಲೀಗ ಆದ್ಯಾ ಆನಂದ್ ಕೂಡ ಸೇರಿಕೊಂಡಿದ್ದಾರೆ.
ಆದ್ಯಾ ಆನಂದ್ ಹಿನ್ನೆಲೆಯೇನು?
ಆದ್ಯಾ ಆನಂದ್ ಅತೀ ಸಣ್ಣ ವಯಸ್ಸಿನಲ್ಲೇ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಅಲ್ಲಿನ ಟಾಪ್ ನಟಿಯರನ್ನೇ ಮೀರಿ ಆದ್ಯಾ ಬೆಳೆಯುತ್ತಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ. ಅಂದ್ಹಾಗೆ, ಆದ್ಯಾ ಮಡಿಕೇರಿಯಲ್ಲಿ ಹುಟ್ಟಿದರೂ, ಬೆಳೆದಿದ್ದು ಸಿಂಗಾಪುರದಲ್ಲಿ ಬೆಳೆದಿದ್ದಾರೆ. 2021ರ ಮಾರ್ಚ್‌ನಲ್ಲಿ 'ನೆಟ್‌ಫ್ಲಿಕ್ಸ್'ನ 'ಬಾಂಬೇ ಬೇಗಮ್ಸ್' ವೆಬ್ ಸಿರೀಸ್, 2022ರಲ್ಲಿ 'ಬ್ರೇವ್‌ಹಾರ್ಟ್', 'ಹುಲು ಸಿರೀಸ್, ಅಮೆಜಾನ್ ಮಿನಿ ಟಿವಿಯಲ್ಲಿ ಬಿಡುಗಡೆಯಾದ 'ಕೃಶ್ಡ್' ಸಿರೀಸ್‌ನಲ್ಲಿ ಕಾಣಸಿಕೊಂಡಿದ್ದಾರೆ.
ಆದ್ಯಾ ಆನಂದ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 'ಇಂಡಿಯನ್ ಕ್ರಶ್' ಎಂದೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಆದ್ಯಾ ನಟಿಸಿದ 'ಫ್ರೈಡೇ ನೈಟ್ ಪ್ಲಾನ್' ಸೆಪ್ಟೆಂಬರ್ 1ರಂದು ರಿಲೀಸ್ ಆಗಿತ್ತು. ಇದರಲ್ಲಿ ನಿತ್ಯಾ ಉರ್ಫ್ ನೀತ್ಸ್ ಸಭರ್ವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಹೀರಾತುಗಳಲ್ಲಿ ಬ್ಯುಸಿ
ಆದ್ಯಾ ಆನಂದ್ ಕೇವಲ ಸಿನಿಮಾ, ವೆಬ್ ಸೀರಿಸ್‌ಗಳಲ್ಲಷ್ಟೇ ಅಲ್ಲ. ದುಬಾರಿ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕೋರ್ನೆಟೊ, ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾ, ಸೆನ್ಸೋಡೈನ್, ಟಿವಿಎಸ್ ಜ್ಯುಪಿಟರ್‌ನಂಥ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇ ವೇಳೆ "ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಹೆಸರು ಗಳಿಸಲು ಹಿಂದಿ ಸಿನೇಮಾ ಇಂಡಸ್ಟ್ರಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಚಿರಋಣಿ. ನನ್ನ ಮಾತೃ ಭಾಷೆ ಕನ್ನಡದಲ್ಲೂ ನಟಿಸಬೇಕೆಂಬ ಹಂಬಲವೇನೋ ಇದೆ. ನನಗೆ ಒಪ್ಪುವಂಥ ಸೂಕ್ತ ಕಥೆಗಳು ಸಿಕ್ಕಿಲ್ಲಿ ಖಂಡಿತ ಸ್ಯಾಂಡಲ್‌ವುಡ್‌ನಲ್ಲೂ ನಟಿಸುತ್ತೇನೆ" ಎಂದು ಆದ್ಯಾ ಆನಂದ್ ಹೇಳಿಕೆ ನೀಡಿದ್ದಾರೆ.


Click it and Unblock the Notifications











