ಮೇ 12 ರಿಂದ ಮೇ 18 ರವರೆಗೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಪಟ್ಟಿ ಇಲ್ಲಿದೆ

ಜನರು ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ನೋಡುವುದಕ್ಕಿಂತ ಹೆಚ್ಚಾಗಿ ಒಟಿಟಿಯಲ್ಲಿ ವೀಕ್ಷಣೆ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ಅದಕ್ಕಾಗಿ ಅಮೆಜಾನ್ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್, ಆಹಾ, ಜಿಯೋ ಹಾಟ್‌ಸ್ಟಾರ್, ಸೋನಿಲಿವ್, ಜೀ 5, ಈ ಟಿವಿ ವಿನ್ ಸೇರಿದಂತೆ ಹಲವು ಒಟಿಟಿ ವೇದಿಕೆಗಳಲ್ಲಿ ಹೊಸ ಹೊಸ ಸಿನಿಮಾಗಳು ಲಗ್ಗೆ ಇಡುವುದಕ್ಕೆ ಮುಂದಾಗಿದೆ. ಕನ್ನಡ, ತೆಲುಗು, ಹಿಂದಿ ಭಾಷೆಯಲ್ಲಿ ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಕನ್ನಡ ಸಿನಿಮಾಗಳು ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದ್ದರೂ, ಸೂಪರ್‌ಸ್ಟಾರ್ ಸಿನಿಮಾಗಳು ಕಡಿಮೆ ಆಗಿವೆ. ಹೀಗಾಗಿ ಒಟಿಟಿಯಲ್ಲಿ ಅಪರೂಪಕ್ಕೆ ಅಂತ ಒಂದೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಕೆಲವು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಕನ್ನಡದ ಜೊತೆಗೆ ತೆಲುಗು, ಹಿಂದಿ ಭಾಷೆಯ ಸಿನಿಮಾಗಳು ಕೂಡ ಮೇ 12 ರಿಂದ 18ರ ಒಳಗೆ ರಿಲೀಸ್ ಆಗುತ್ತಿವೆ.

Kannada Telugu hindi movies releasing in Ott from May 12th to 18th

ಈ ವಾರ ಒಟಿಟಿಗೆ ಯಾವ್ಯಾವ ಭಾಷೆಯಿಂದ ಯಾವೆಲ್ಲ ಸಿನಿಮಾಗಳು ಬರುತ್ತಿವೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಅಜ್ಞಾತವಾಸಿ

ಕನ್ನಡದಲ್ಲಿ ಒಳ್ಳೊಳ್ಳೆ ಕಂಟೆಂಡ್‌ಗಳನ್ನು ಪ್ರಡ್ಯೂಸ್ ಮಾಡುತ್ತಿದ್ದಾರೆ. ಅದರಲ್ಲಿ ಕೆಲವರಿಗೆ ಸಕ್ಸಸ್ ಸಿಗುತ್ತಿದೆ. ಮತ್ತೆ ಕೆಲವರಿಗೆ ಸಿನಿಮಾ ಚೆನ್ನಾಗಿದ್ದರೂ, ಜನರು ಥಿಯೇಟರ್‌ಗೆ ಬಂದು ನೋಡಿಲ್ಲ. ಹಾಗೇ ಗುಲ್ಟು ಸಿನಿಮಾದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿರುವ 'ಅಜ್ಞಾತವಾಸಿ' ಸಿನಿಮಾ ಕೂಡ ಒಂದು. ಹೇಮಂತ್ ಎಂ. ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಅಜ್ಞಾತವಾಸಿ ಸ್ಥಳೀಯ ಜಮೀನ್ದಾರನ ಕೊಲೆಯ ತನಿಖೆಯ ಕಥೆಯನ್ನು ತೆರೆಮೇಲೆ ತರಲಾಗಿದೆ. ಈ ಹತ್ಯೆ ಪ್ರಕರಣ ಹೇಗೆ ಬಗೆ ಹರಿಯುತ್ತೆ ಅನ್ನೋದೇ ಸ್ಟೋರಿ. ಈ ಸಿನಿಮಾದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ, ಪಾವನ ಗೌಡ, ಸಿದ್ದೂ ಮೂಲಿಮನಿ, ರವಿಶಂಕರ್ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಜೀ 5ನಲ್ಲಿ ಮೇ 16ರಂದು ರಿಲೀಸ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

Kannada Telugu hindi movies releasing in Ott from May 12th to 18th

ಕನ್ನಡದಲ್ಲಿ ಮಲಯಾಳಂ ಸಿನಿಮಾ ರಿಲೀಸ್

ಮಲಯಾಳಂ ಬ್ಲ್ಯಾಕ್ ಕಾಮಿಡಿ ಸಿನಿಮಾ 'ಮಾರನಮಸ್' ಇದೇ ವಾರ ಓಟಿಟಿಗೆ ಲಗ್ಗೆ ಇಡುತ್ತಿದೆ. ಮಲಯಾಳಂ ನಟ ಬೇಸಿಲ್ ಜೋಸೆಫ್ ಈ ಸಿನಿಮಾದ ಹೀರೋ. ಇವರೊಂದಿಗೆ ಅನಿಶ್ಮಾ ಅನಿಲ್ ಕುಮಾರ್, ರಾಜೇಶ್ ಮಾಧವನ್, ಬಾಬು ಅಂಟೋನಿ, ಸುರೇಶ್ ಕೃಷ್ಣ ಹಾಗೂ ಸಿಜು ಸನ್ನಿ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ಈ ಸಿನಿಮಾವನ್ನು ಟೊವಿನೋ ಥಾಮಸ್ ನಿರ್ಮಾಣ ಮಾಡಿದ್ದಾರೆ. ರಾತ್ರಿ ವೇಳೆ ಒಂದು ಬಸ್‌ನಲ್ಲಿ ನಡೆಯುವ ಕಥೆಯಿದು. ಹಿರಿಯ ನಾಗರೀಕರನ್ನೇ ಹುಡುಕಿ ಕೊಲ್ಲುವ ಸೀರಿಯಲ್ ಕಿಲ್ಲರ್ ಕತೆಯನ್ನು ಈ ಸಿನಿಮಾಗೆ ಥ್ರಿಲ್ಲರ್ ಟಚ್ ಕೊಡಲಾಗಿದೆ. ಇದರ ಕನ್ನಡ ಅವತರಣಿಕೆ ಮೇ 15ರಂದು, ಸೋನಿ ಲಿವ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಹಿಂದಿಯಲ್ಲಿ ಯಾವ್ಯಾವ ಸಿನಿಮಾ ರಿಲೀಸ್

ಮೇ 12 ರಿಂದ 18ರವರೆಗೆ ಹಿಂದಿಯಲ್ಲೂ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್ ಆಗುತ್ತಿದೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ. ರಾಜ್‌ಕುಮಾರ್ ರಾವ್, ವಾಮಿಕಾ ಗಬ್ಬಿ, ಸಂಜಯ್ ಮಿಶ್ರ ನಟಿಸಿರುವ 'ಭೂಲ್ ಚುಕ್ ಮಾಫ್' ಅಮೆಜಾನ್ ಪ್ರೈ ವಿಡಿಯೋದಲ್ಲಿ ಮೇ 16ರಂದು ಸ್ಟ್ರೀಮಿಂಗ್ ಆಗುತ್ತಿದೆ. ಹಾಗೇ 'ಹೈ ಜುನೂನ್' ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮೇ 16 ರಿಂದ ಪ್ರಸಾರ ಆಗಲಿದೆ.

Take a Poll

ತೆಲುಗಿನಲ್ಲಿ 'ರಾಬಿನ್ ಹುಡ್'

ಈ ವಾರ ತೆಲುಗಿನಲ್ಲಿ ಒಂದು ಸಿನಿಮಾ ರಿಲೀಸ್ ಆಗುತ್ತಿದೆ. ತೆಲುಗು ನಟ ನಿತಿನ್ ಹಾಗೂ ಶ್ರೀಲೀಲಾ ನಟಿಸಿರುವ 'ರಾಬಿನ್ ಹುಡ್' ಮಾರ್ಚ್ 18ಕ್ಕೆ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಈ ಸಿನಿಮಾ ಮೇ 10ರಂದು ಜೀ 5ನಲ್ಲಿ ಬಿಡುಗಡೆಯಾಗುತ್ತಿದೆ.

More from Filmibeat

English summary
Kannada, Telugu, hindi movies releasing in Ott from May 12th to 18th;
Read more about: kannada telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X