ಪ್ರಿಯಾಂಕಾ ನಟನೆಯನ್ನು ಹಾಡಿ ಹೊಗಳಿದ ಹಾಲಿವುಡ್ ನಟ; ಓಟಿಟಿಯಲ್ಲಿ ಪಿಗ್ಗಿಯ 'ದಿ ಬ್ಲಫ್' ಕಿಕ್

ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಸಿನಿಮಾಗಳಿಗಿಂತ ಹೆಚ್ಚಾಗಿ ಹಾಲಿವುಡ್‌ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯಾಕೆ ಅನ್ನೋದನ್ನು ನೇರವಾಗಿಯೇ ಹೇಳಿದ್ದಾರೆ. "ಬಾಲಿವುಡ್‌ನಿಂದ ನಾನು ದೂರ ಹೋಗಿಲ್ಲ. ಆದರೆ, ಬಾಲಿವುಡ್ ಮಂದಿ ನನ್ನ ಹೊರ ಹಾಕಿದರು" ಅನ್ನೋ ಸ್ಟ್ರೈಟ್ ಫಾರ್ವರ್ಡ್ ಉತ್ತರ ಸಿನಿಮಾ ಮಂದಿಯ ನೆಮ್ಮದಿ ಕೆಡಿಸಿದೆ.

ಸದ್ಯ ಎಸ್‌ಎಸ್‌ ರಾಜಮೌಳಿ ನಿರ್ದೇಶಿಸುತ್ತಿರುವ 'ವಾರಣಾಸಿ' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲರ ಕಣ್ಣೀಗ ಈ ಸಿನಿಮಾ ಮೇಲಿದೆ. ಆದರೆ, ಅದಕ್ಕೂ ಮುನ್ನ ಇನ್ನೊಂದು ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದುವೇ 'ದಿ ಬ್ಲಫ್'.

Karl Urban Praises Priyanka Chopra Jonas Performance in The Bluff on Prime Video

'ದಿ ಬ್ಲಫ್' ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಆಕ್ಷನ್-ಅಡ್ವೆಂಚರ್ ಸಿನಿಮಾಗೆ ವೀಕ್ಷಕರಿಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಹಾಗೇ ಪ್ರಿಯಾಂಕಾ ಚೋಪ್ರಾ ಅಭಿನಯದ ಬಗ್ಗೆನೂ ಶ್ಪಾಘನೆಗಳು ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಹಾಲಿವುಡ್ ನಟ ಕಾರ್ಲ್ ಅರ್ಬನ್ 'ದಿ ಬ್ಲಫ್' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಸ್ ಅದ್ಭುತ ನಟನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಅಭಿನಯವನ್ನು "ಹ್ಯಾಂಡ್ಸ್ ಡೌನ್ ದ ಬೆಸ್ಟ್" ಎಂದು ಕೊಂಡಾಡಿದ್ದಾರೆ. ಕ್ಯಾಮರಾ ಮುಂದೆ ದೈಹಿಕವಾಗಿ ಬಳಲಿದ ದೃಶ್ಯಗಳನ್ನು ಚಿತ್ರಿಸುವ ಅವರ ಅಭಿನಯ ಕಂಡು ಬೆರಗಾಗಿದ್ದಾರೆ. "ಖಂಡಿತವಾಗಿಯೂ ಅತ್ಯುತ್ತಮ ಅಭಿನಯ" ಎಂದು ಕಾರ್ಲ್ ಅರ್ಬನ್ ಬಣ್ಣಿಸಿದ್ದಾರೆ. ಕಾರ್ಲ್ ಅರ್ಬನ್ 'ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ಫೆಲೋಶಿಪ್ ಆಫ್ ದಿ ರಿಂಗ್' ಮತ್ತು ಜನಪ್ರಿಯ ಸರಣಿ 'ದಿ ಬಾಯ್ಸ್' ನಂತಹ ಗ್ಲೋಬಲ್ ಫ್ರಾಂಚೈಸಿ ಪ್ರಾಜೆಕ್ಟ್‌ಗಲ್ಲಿ ನಟಿಸಿದ್ದಾರೆ.

ಕಾರ್ಲ್ ಅರ್ಬನ್ ಹೈ ವೋಲ್ಟೇಜ್ ಆಕ್ಷನ್ ಸೀನ್‌ಗಳು ಹೊಸದೇನೂ ಅಲ್ಲ. 'ದಿ ಬ್ಲಫ್' ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಿದ ಎರ್ಸೆಲ್ ಬಾಡೆನ್ ಅಲಿಯಾಸ್ "ಬ್ಲಡಿ ಮೇರಿ" ಪಾತ್ರದ ಜೊತೆ ಪವರ್‌ಫುಲ್ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಮುಖಾಮುಖಿಯಾಗಿದ್ದಾರೆ. 'ದಿ ಬ್ಲಫ್' ಬಗ್ಗೆ ಮಾತಾಡುವಾಗ ಪ್ರಿಯಾಂಕಾ ಚೋಪ್ರಾ ನಟನೆ ಬಗ್ಗೆ ರಿವೀಲ್ ಮಾಡಿದ್ದಾರೆ.

Karl Urban Praises Priyanka Chopra Jonas Performance in The Bluff on Prime Video

"ಪ್ರಿಯಾಂಕಾ ಅವರೊಂದಿಗೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ ಎಂದಿದ್ದಾರೆ. "ಪ್ರಿಯಾಂಕಾ ಚೋಪ್ರಾ ತಮ್ಮ ಪಾತ್ರಕ್ಕೆ ತೋರಿದ ಉತ್ಸಾಹ ಹಾಗೂ ಬದ್ಧತೆಗೆ ನಾನು ಥ್ರಿಲ್ ಆಗಿದ್ದೇನೆ. ಬ್ಲಡಿ ಮೇರಿ ಪಾತ್ರದಲ್ಲಿ ಪ್ರಿಯಾಂಕಾ ಅವರ ದೈಹಿಕ ಸಾಮರ್ಥ್ಯ ಅಸಾಮಾನ್ಯ. ದೃಶ್ಯವೊಂದರಲ್ಲಿ ಕಿಟಕಿಯಿಂದ ಎಸೆಯಲ್ಪಟ್ಟ ನಂತರ ಬಳಲಿದಂತೆ ನಟಿಸುವ ದೃಶ್ಯವೊಂದಿದೆ. ಅದು ನಾನು ನೋಡಿದ ಅತ್ಯುತ್ತಮ ದೃಶ್ಯ. ಒಮ್ಮೆ ಉಸಿರು ಎಳೆದು ಕೊಳ್ಳುವ ನಟನೆ" ಎಂದು ಕಾರ್ಲ್ ಅರ್ಬನ್ ಮೆಚ್ಚುಗೆ ಸೂಚಿಸಿದರು.

ಇನ್ನು 'ದಿ ಬ್ಲಫ್' ಸಿನಿಮಾವನ್ನು ಫ್ರಾಂಕ್ ಇ. ಫ್ಲವರ್ಸ್ ನಿರ್ದೇಶನ ಮಾಡಿದ್ದಾರೆ. ಜೋ ಬಲ್ಲಾರಿನಿ ಮತ್ತು ಫ್ಲವರ್ಸ್ ಕತೆಯನ್ನು ರಚಿಸಿದ್ದಾರೆ. ಜೋ ರುಸ್ಸೋ, ಆಂಥೋನಿ ರುಸ್ಸೋ, ಏಂಜೆಲಾ ರುಸ್ಸೋ-ಓಟ್‍ಸ್ಟಾಟ್, ಮೈಕೆಲ್ ಡಿಸ್ಕೋ, ಸಿಸೆಲಿ ಸಲ್ಡಾನಾ, ಮರಿಯಲ್ ಸಲ್ಡಾನಾ ಹಾಗೂ ಪ್ರಿಯಾಂಕಾ ಚೋಪ್ರಾ ಜೋನಸ್ ಸಹ ನಿರ್ಮಾಪಕರಾಗಿದ್ದಾರೆ. ಪ್ರಿಯಾಂಕಾ ಜೊತೆ ಸಫಿಯಾ ಓಕ್ಲೆ-ಗ್ರೀನ್, ವೇದಂತನ್ ನಾಯ್ದೂ, ಟೆಮೊರಾ ಮಾರಿಸನ್ ಮತ್ತು ಇಸ್ಮಾಯಿಲ್ ಕ್ರೂಜ್ ಕಾರ್ಡೋವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಆಕ್ಷನ್-ಅಡ್ವೆಂಚರ್ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಇಂಗ್ಲಿಷ್ ಸೇರಿದಂತೆ, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ.

More from Filmibeat

English summary
Karl Urban Praises Priyanka Chopra Jonas’ Performance in The Bluff on Prime Video.
Read more about: priyanka chopra actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X