ಜೂನ್ ಮೊದಲ ವಾರ OTTಯಿಂದ ಭರ್ಜರಿ ಆಫರ್: ಸಿನಿಮಾ, ವೆಬ್ ಸಿರೀಸ್ ಲಿಸ್ಟ್ ಇಲ್ಲಿದೆ

'ಕೆಜಿಎಫ್ 2' ಸಿನಿಮಾ ಬಳಿಕ ಒಟಿಟಿ ಸೈಲೆಂಟ್ ಆಗಿದೆ ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ಅಭಿಪ್ರಾಯ. ಆದರೆ, ಜೂನ್ ಮೊದಲ ವಾರದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಹಾಗೂ ವೆಬ್ ಸಿರೀಸ್ ಲಿಸ್ಟ್‌ ಅನ್ನು ನೋಡಿದರೆ, ಥಿಯೇಟರ್‌ಗೆ ಕಾಂಪಿಟೇಷನ್‌ ಕೊಡುವುದಕ್ಕೆ ಭರ್ಜರಿ ತಯಾರಿ ನಡೆಸಿದೆ. ಜೂನ್ ಮೊದಲ ವಾರದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಲ್ಲದೆ ವೆಬ್‌ ಸಿರೀಸ್‌ಗಳೂ ಕೂಡ ರಿಲೀಸ್ ಆಗುತ್ತಿದ್ದು, ಸಿನಿಮಾ ಪ್ರಿಯರಿಗೆ ಹಬ್ಬವೋ ಹಬ್ಬ.

ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಹಲವು ಸಿನಿಮಾಗಳು ಪ್ರೀಮಿಯರ್ ಆಗಲಿದೆ. ಹಾಗೇ ಇಂಗ್ಲಿಷ್ ಕಂಟೆಂಟ್, ಬೆಂಗಾಲಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾ ಅಥವಾ ವೆಬ್ ಸಿರೀಸ್‌ಗಳನ್ನು ರಿಲೀಸ್ ಮಾಡಲಾಗುತ್ತಿದೆ. ಜೂನ್‌ ಮೊದಲ ವಾರ ರಿಲೀಸ್ ಆಗುತ್ತಿರುವ ಒಟಿಟಿ ರಿಲೀಸ್‌ಗಳ ಪಟ್ಟಿ ಇಲ್ಲಿದೆ.

'ಕೆಜಿಎಫ್ 2'

'ಕೆಜಿಎಫ್ 2'

ಬಾಕ್ಸಾಫೀಸ್ ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಈಗಾಗಲೇ ಒಟಿಟಿಗೆ ಲಗ್ಗೆ ಇಟ್ಟಿದೆ. ಆದರೆ, ಅಮೆಜಾನ್ ಪ್ರೈಂನಲ್ಲಿ ಪೇ ಪರ್‌ ವ್ಯೂ ಲೆಕ್ಕದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೀಗ ಸಿನಿಮಾ 50 ದಿನಗಳನ್ನು ಪೂರೈಸುತ್ತಿರುವ ಬೆನ್ನಲ್ಲೇ ಜೂನ್ 3 ರಿಂದ ಅಮೆಜಾನ್ ಪ್ರೈಂನಲ್ಲಿ ರೆಗ್ಯೂಲರ್ ಆಗಿ ಪ್ರೀಮಿಯರ್ ಆಗಲಿದೆ. ಇನ್ನುಂದೆ ಅಮೆಜಾನ್‌ಗೆ ಸಬ್‌ಸ್ಕ್ರೈಬ್ ಆಗಿರುವವರು ಫ್ರೀಯಾಗಿ ಸಿನಿಮಾ ನೋಡಬಹುದಾಗಿದೆ.

'ಜನಗನಮನ'

'ಜನಗನಮನ'

ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಲಯಾಳಂ ಸಿನಿಮಾ 'ಜನಗನಮನ' ಕೂಡ ಒಟಿಟಿಗೆ ಲಗ್ಗೆ ಇಡುತ್ತಿದೆ. ಕಾನೂನಿಗೆ ಸಂಬಂಧಿಸಿದ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಮಲಯಾಳಂನಲ್ಲಿ ರಿಲೀಸ್ ಆಗಿದೆ. ಪೃಥ್ವಿರಾಜ್ ಸುಕುಮಾರನ್ ಹಾಗೂ ಮಮತಾ ಮೋಹನ್‌ದಾಸ್ ಹಾಗೂ ಸೂರಜ್ ವೆಂಜರಮೂಡು ನಟಿಸಿದ ಈ ಸಿನಿಮಾ ಜೂನ್ 2ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಪ್ರೀಮಿಯರ್ ಆಗಲಿದೆ.

'ಆಶ್ರಮ್ ಸೀಸನ್ 3'

'ಆಶ್ರಮ್ ಸೀಸನ್ 3'

ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವೆಬ್ ಸಿರೀಶ್ 'ಆಶ್ರಮ್ ಸೀಸನ್ 3' ಕೂಡ ಇದೇ ವಾರ ಪ್ರೀಮಿಯರ ಆಗುತ್ತಿದೆ. ಪ್ರಮುಖ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸುತ್ತಿದ್ದು, ಜೂನ್ 03ರಂದು ಎಂಎಕ್ಸ್ ಪ್ಲೇಯರ್‌ನಲ್ಲಿ ರಿಲೀಸ್ ಆಗುತ್ತಿದೆ. ಬಾಬಿ ಡಿಯೊಲ್ ಜೊತೆಗೆ ದರ್ಶನ್ ಕುಮಾರ್, ಇಶಾ ಗುಪ್ತಾ, ತ್ರಿದಾ ಚೌಧರ ಸೇರಿದಂತೆ ಹಲವು ನಟಿಸುತ್ತಿದ್ದಾರೆ.

'ಅಶೋಕ ವಾನಮ್ಲೋ ಅರ್ಜುನ ಕಲ್ಯಾಣಂ'

'ಅಶೋಕ ವಾನಮ್ಲೋ ಅರ್ಜುನ ಕಲ್ಯಾಣಂ'

ಟಾಲಿವುಡ್‌ನ ರೊಮ್ಯಾಂಟಿಕ್ ಸಿನಿಮಾ 'ಅಶೋಕ ವಾನಮ್ಲೋ ಅರ್ಜುನ ಕಲ್ಯಾಣಂ'. ಈ ಸಿನಿಮಾ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ವಿಶ್ವಕ್ ಸೇನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೇ 6ರಂದು ಬಿಡುಗಡೆಯಾಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಹೆಚ್ಚು ಸದ್ದು ಮಾಡದ ಈ ಸಿನಿಮಾ ಆಹಾದಲ್ಲಿ ಜೂನ್ 03ರಂದು ಬಿಡುಗಡೆಯಾಗುತ್ತಿದೆ.

'9 Hours'

'9 Hours'

ಟಾಲಿವುಡ್‌ನಲ್ಲಿ ವೆಬ್ ಸಿರೀಸ್‌ ಒಂದು ನಿರ್ಮಾಣ ಆಗಿದೆ. ಅದುವೇ '9 Hours'. ಈ ವೆಬ್ ಸಿರೀಸ್‌ ಅನ್ನು ಜಾಕೊಬ್ ವರ್ಗೀಸ್ ಹಾಗೂ ನಿರಂಜನ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಅಜಯ್, ವಿನೋದ್ ಕುಮಾರ್, ಮಧು ಶಾಲಿನಿ, ಅಂಕಿತ್ ಕೋಯ್ಯಾ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ.

'ಆಶಿಕಾನಾ'

'ಆಶಿಕಾನಾ'

ಡಿಸ್ನಿ+ ಹಾಟ್‌ಸ್ಟಾರ್‌ ಜೂನ್ 06ರಂದು 'ಆಶಿಕಾನಾ' ಅನ್ನುವ ಸಸ್ಪೆನ್ಸ್, ಥ್ರಿಲ್ಲರ್ ಲವ್‌ ಸ್ಟೋರಿ ಹೊಂದಿರುವ ವೆಬ್ ಸೀರಿಸ್‌ ಒಂದನ್ನು ಬಿಡುಗಡೆ ಮಾಡುತ್ತಿದೆ. ಇಬ್ಬರು ವ್ಯಕ್ತಿಗಳ ಸುತ್ತಸುತ್ತುವ ಕಥೆ ಇದಾಗಿದ್ದು, ತಮ್ಮ ಲಿಮಿಟ್ ಅನ್ನು ಕ್ರಾಸ್ ಮಾಡಿದರೆ ಎನಾಗುತ್ತೆ ಎನ್ನುವುದು 'ಆಶಿಕಾನಾ' ಕಥೆ.

More from Filmibeat

English summary
KGF 2, 9 Hours, Aashram 3, List of Movies and Web Series premiering on OTT this week, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X