'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಡಲು ಮುಹೂರ್ತ ಫಿಕ್ಸ್: ಕಿಚ್ಚನಿಗೆ ಜೀ 5 ಗಿಫ್ಟ್!
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಇದರಲ್ಲಿ ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಕೂಡ ಒಂದು. ಪ್ರೇಕ್ಷಕರಿಗೆ ವಿಶೇಷ ಅನುಭವವನ್ನು ಕೊಡಲೇ ಬೇಕು ಅಂತ ಪಣತೊಟ್ಟು ಕೂತ್ತಿ ತಂಡಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.
'ಕೆಜಿಎಫ್ 2' ಬಳಿಕ ಬಿಡುಗಡೆಯಾದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿವೆ. ಇದರಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಒಂದು. ಐದು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಭಾರತದಾದ್ಯಂತ ಹವಾ ಎಬ್ಬಿಸಿತ್ತು. ಈಗ ಇದೇ ಸಿನಿಮಾ ಓಟಿಟಿಗೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ.
'ವಿಕ್ರಾಂತ್ ರೋಣ' ಬಿಡುಗಡೆಗೂ ಮುನ್ನವೇ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳ ಉತ್ತಮ ಮೊತ್ತಕ್ಕೆ ಮಾರಾಟ ಆಗಿತ್ತು. ಹೀಗಾಗಿ ಬಿಡುಗಡೆಗೂ ಮುನ್ನವೇ ಉತ್ತಮ ಬ್ಯುಸಿನೆಸ್ ಕಂಡಿತ್ತು. ಥಿಯೇಟರ್‌ನಲ್ಲಿ ಈ ಸಿನಿಮಾಗೆ ಸಖತ್ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ ಬಳಿಕ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಅದೂ ವಿಶೇಷ ದಿನದಂದು. ಹಾಗಿದ್ದರೆ, 'ವಿಕ್ರಾಂತ್ ರೋಣ' ಓಟಿಟಿ ರಿಲೀಸ್ ಆಗೋದು ಯಾವಾಗ? ಆ ವಿಶೇಷ ದಿನ ಯಾವುದು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ವಿಕ್ರಾಂತ್ ರೋಣ' ಓಟಿಟಿ ರಿಲೀಸ್
ಥಿಯೇಟರ್‌ನಲ್ಲಿ ಸೌಂಡ್ ಮಾಡಿದ ಬಳಿಕ 'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಇನ್ನೇನು ಕೆಲವು ದಿನಗಳಲ್ಲೇ ಕಿಚ್ಚ ಸುದೀಪ್ ಸಿನಿಮಾ ಜೀ 5ಗೆ ಲಗ್ಗೆ ಇಡುತ್ತಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದವರು ಮತ್ತೊಮ್ಮೆ ನೋಡೋಕೆ ಅವಕಾಶ ಸಿಗಲಿದೆ. ಇನ್ನೂ ಈ ಸಿನಿಮಾ ನೋಡದವರಿಗೆ ಶೀಘ್ರದಲ್ಲಿಯೇ ಜೀ 5ನಲ್ಲಿ ನೋಡಬಹುದು. ಇನ್ನೊಂದು ವಾರದಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ.

ಸುದೀಪ್ ಹುಟ್ಟುಹಬ್ಬಕ್ಕೆ 'ವಿಕ್ರಾಂತ್ ರೋಣ'
ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಬಂದಿರೋ 'ವಿಕ್ರಾಂತ್ ರೋಣ' ಭಾರತದಲ್ಲಿ ಗಮನ ಸೆಳೆದಿತ್ತು. ಈಗ ಓಟಿಟಿಗೂ ಲಗ್ಗೆ ಇಡುವುದಕ್ಕೂ ಸಜ್ಜಾಗಿದೆ. ಆದರೆ ಅದಕ್ಕೊಂದು ವಿಶೇಷ ದಿನವನ್ನು ನಿಗದಿ ಮಾಡಿದೆ. ಸೆಪ್ಟೆಂಬರ್ 02ರಂದು ಕಿಚ್ಚ ಸುದೀಪ್ 49ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಸೆಪ್ಟೆಂಬರ್ 02ರಂದು ಹುಟ್ಟುಹಬ್ಬದಂದೇ 'ವಿಕ್ರಾಂತ್ ರೋಣ' ಸಿನಿಮಾವನ್ನು ಜೀ 5 ಪ್ರೀಮಿಯರ್ ಮಾಡಲಿದೆ.

'ವಿಕ್ರಾಂತ್ ರೋಣ' ಗಳಿಸಿದ್ದೆಷ್ಟು?
'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾ. ಏಕಾಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದೇ ಹೇಳಿದ್ದಾರೆ. ಮತ್ತೆ ಕೆಲವರು 200 ಕೋಟಿ ರೂ. ಎನ್ನುತ್ತಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ.
Recommended Video

'ರಾ ರಾ ರಕ್ಕಮ್ಮ' ಸೂಪರ್ ಹಿಟ್
'ವಿಕ್ರಾಂತ್ ರೋಣ' ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಇದೇ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸುದೀಪ್ ಹೆಜ್ಜೆ ಹಾಕಿದ್ದರು. ಅದೇ ಸಾಂಗ್ ರಾ ರಾ ರಕ್ಕಮ್ಮ ಸೂಪರ್ ಡೂಪರ್ ಹಿಟ್ ಆಗಿತ್ತು. ಹಾಡಿನ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ಸ್ಪೆಷಲ್ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದರು. ನಿರೂಪ್ ಭಂಡಾರಿ, ನೀತಾ ಅಶೋಕ್, ಮಿಲನ ನಾಗರಾಜ್, ಮಧುಸೂದನ್ ರಾವ್, ರವಿಶಂಕರ್ ಗೌಡ ನಟಿಸಿರೋ ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿದ್ದರು. ವಿಶೇಷ ಅಂದ್ರೆ, ಬಹಳ ದಿನಗಳ ಬಳಿಕ ಕನ್ನಡದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 3 ಡಿಯಲ್ಲಿ ರಿಲೀಸ್ ಆಗಿತ್ತು.


Click it and Unblock the Notifications











