Korean Reality Show: ಕೊರಿಯಾದ ರಿಯಾಲಿಟಿ ಶೋ 'ಜೆನ್ನಿಸ್ ಕಿಚನ್' ಭಾರತಕ್ಕೆ ಎಂಟ್ರಿ.. ಓಟಿಟಿ ಪ್ರಿಯರಿಗೆ ಹಬ್ಬ
ಕೊರಿಯಾದ ಸಿನಿಮಾಗಳು, ರಿಯಾಲಿಟಿ ಶೋಗಳು ಭಾರತಕ್ಕೂ ಲಗ್ಗೆ ಇಡುತ್ತಿವೆ. ನಿಧಾನವಾಗಿ ಭಾರತದಲ್ಲೂ ಜನಪ್ರಿಯವಾಗುತ್ತಿವೆ. ಇದೂವರೆಗೂ ಸಿನಿಮಾ ಮಂದಿಗೆ ಇಲ್ಲವೇ ಸಿನಿಮಾ ಆಸಕ್ತರಲ್ಲಿ ಅಷ್ಟೇ ಓಡಾಡುತ್ತಿದ್ದ ಕೊರಿಯನ್ ಸಿನಿಮಾಗಳು ಓಟಿಟಿ ಮೂಲಕ ಸಾಮಾನ್ಯ ಜನರನ್ನೂ ತಲುಪುತ್ತಿವೆ.
ಕೊರಿಯಾದ ಜನಪ್ರಿಯ ತಾರೆಯರು ಭಾರತದಲ್ಲೂ ಫೇಮಸ್ ಆಗುತ್ತಿದ್ದಾರೆ. ಕೊರಿಯಾದ ಕಂಟೆಂಟ್ ನಮ್ಮವರಿಗೂ ಇಷ್ಟ ಆಗುತ್ತಿದೆ. ಭಾರತದ ಬಿಗ್ ಬಜೆಟ್ ಸಿನಿಮಾಗಳು ಜಪಾನ್, ಕೊರಿಯಾ, ಚೀನಾದಲ್ಲಿ ಸದ್ದು ಮಾಡುತ್ತಿದೆ ಅಂತ ಕೇಳಿದವರು, ಇನ್ಮುಂದೆ ಭಾರತದಲ್ಲಿ ಕೊರಿಯನ್ ಸಿನಿಮಾಗಳು, ವೆಬ್ ಸೀರಿಸ್‌ಗಳದ್ದೇ ದರ್ಬಾರು ಅಂತ ಕೇಳುವ ಸಂದರ್ಭ ಬರಬಂದರೂ ಅಚ್ಚರಿಯಿಲ್ಲ.
ಸದ್ಯ ಭಾರತದಲ್ಲಿ ಕೊರಿಯಾದ ಹೊಸ ರಿಯಾಲಿಟಿ ಶೋ ಸದ್ದು ಮಾಡುತ್ತಿದೆ. ಇಷ್ಟು ದಿನ ಓಟಿಟಿ ವೇದಿಕೆಗಳಲ್ಲಿ ಹೆಚ್ಚಾಗಿ ಕೊರಿಯಾದ ವೆಬ್ ಸೀರಿಸ್‌ಗಳೇ ರಾರಾಜಿಸುತ್ತಿದ್ದವು. ಈಗ ಜನಪ್ರಿಯ ರಿಯಾಲಿಟಿ ಶೋ ಎಂಟ್ರಿ ಕೊಟ್ಟಿದೆ. ಅದುವೇ 'ಜೆನ್ನಿಸ್ ಕಿಚನ್'.
ಕೊರಿಯಾದ ಜನಪ್ರಿಯ ಬಿಟಿಎಸ್ ಸದಸ್ಯರು ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಿಯಾದ ನಟರಾದ ಪಾರ್ಕ್ ಸಿಯೋ ಜೂನ್ ಹಾಗೂ ಚೋಯ್ ವೂ ಶಿಕ್ ಇವರು ಫೇಮಸ್ ನಟರು. ಇವೆಲ್ಲರೂ ಕೊರಿಯಾದ ವಿಭಿನ್ನ ರಿಯಾಲಿಟಿ ಶೋಗಾಗಿ ಒಟ್ಟಿಗೆ ಬಂದಿದ್ದಾರೆ. ಈ ಶೋ ಈಗ ಭಾರತದಲ್ಲೂ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಜೆನ್ನಿಸ್ ಕಿಚನ್ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈಗಾಗಲೇ ಮೊದಲ ಎಪಿಸೋಡ್ ಹೊರಬಿದ್ದಿದೆ. ಉಳಿದಂತೆ ಪ್ರತಿವಾರ ಒಂದೊಂದು ಎಪಿಸೋಡ್ ರಿಲೀಸ್ ಆಗಲಿದೆ. ಹೀಗಾಗಿ ಪ್ರತಿವಾರವೂ ಓಟಿಟಿ ಪ್ರಿಯರು ಕಾದು ಕೂರುವಂತೆ ಮಾಡಿದೆ.
ಜೆನ್ನಿಸ್ ಕಿಚನ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ವಿ ಉರ್ಫ್ ಕಿಮ್ ಟೇಹ್ಯುಂಗ್ ಅತೀ ಕಿರಿಯ ಸೆಲೆಬ್ರೆಟಿ. ವಿ, ಪಾರ್ಕ್ ಸಿಯೋ ಜೂನ್ ಹಾಗೂ ಚೋಯ್ ವೂ ಶಿಕ್ ಇವರು ಮತ್ತೊಂದು ರಿಯಾಲಿಟಿ ಶೋ 'ಇನ್ ದಿ ಸ್ಕೂಪ್: ಫ್ರೆಂಡ್‌ಕೇಷನ್'ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ 'ಜೆನ್ನಿಸ್ ಕಿಚನ್'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚೋಯ್ ವೂ ಶಿಕ್ ಈ ಹಿಂದೆ ಆಸ್ಕರ್ ಪ್ರಶಸ್ತಿ ಗೆದ್ದು ಸಿನಿಮಾ 'ಪ್ಯಾರಾಸೈಟ್' ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಂದ ಚೋಯ್ ವೂ ಶಿಕ್ ವಿಶ್ವದಾದ್ಯಂತ ಜನಪ್ರಿಯ ನಟನಾಗಿ ಹೊರಹೊಮ್ಮಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರೋ ರೊಮ್ಯಾಂಟಿಕ್ ಶೋ 'ಅವರ್ ಬಿಲೋವ್ಸ್ ಸಮ್ಮರ್'ನಲ್ಲಿ ನಟಿಸಿದ್ದರು.
ಇನ್ನು ಪಾರ್ಕ್ ಸಿಯೋ ಜೂನ್ ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 'ದಿ ಮಾರ್ವಲ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದು, ಇದು 2023ಯಲ್ಲಿ ಬಿಡುಗಡೆಯಾಗಲಿದೆ. ಹಾಗೇ 'ಡ್ರೀಮ್' ಅನ್ನೋ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇದು ಕೂಡ ಇದೇ ವರ್ಷ ಬಿಡುಗಡಯಾಗಲಿದೆ. ಹಾಗೇ ನೆಟ್‌ಫ್ಲಿಕ್ಸ್ ಶೋ 'ಜಿಯೋಂಗ್‌ಸಿಯಾಂಗ್'ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಭಾರತದಲ್ಲಿ ಇವರ 'ಜೆನ್ನಿಸ್ ಕಿಚ್ಚನ್' ಸದ್ದು ಮಾಡುವುದಕ್ಕೆ ಆರಂಭಿಸಿದೆ.


Click it and Unblock the Notifications











