'ಜನ ನಾಯಗನ್' ಓಟಿಟಿ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಮಾರಿದ ಕೆವಿಎನ್? ಯಾವುದಕ್ಕೆ ಸೇಲ್.. ಷರತ್ತು ಏನು?

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾವನ್ನು ಸಿನಿಮಾ ಪ್ರಿಯರು ಎದುರು ನೋಡುತ್ತಿದ್ದಾರೆ. ಕಾರಣವೇನೆಂದರೆ, ಈ ಸಿನಿಮಾ ವಿಜಯ್ ಅವರ ಕೊನೆಯ ಚಿತ್ರ. ಮುಂದಿನ ವರ್ಷ ಜನವರಿ 9ನೇ ತಾರೀಕಿನಂದು ಈ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಲಿದೆ. ಈಗಾಗಲೇ ರಿಲೀಸ್‌ಗೆ ಬೇಕಿರುವ ಎಲ್ಲಾ ತಯಾರಿಗಳು ಆರಂಭ ಆಗಿವೆ. ಸಿನಿಮಾದ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ.

'ಜನ ನಾಯಗನ್' ಸಿನಿಮಾ ಬಿಡುಗಡೆ ಇನ್ನೆರಡು ತಿಂಗಳು ಇರುವಾಗಲೇ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ವೇದಿಕೆ ರೆಡಿಯಾಗಿದೆ. ಈ ಸಿನಿಮಾ ನವೆಂಬರ್ 8 ರಂದು ರಿಲೀಸ್ ಆಗಲಿದೆ. ಅಂದರೆ, ಎರಡು ತಿಂಗಳ ಮುನ್ನವೇ ಈ ಸಿನಿಮಾದ ಪ್ರಚಾರವನ್ನು ಆರಂಭಿಸಲಾಗುತ್ತಿದೆ. ಈ ಮಧ್ಯೆ ಸಿನಿಮಾದ ಓಟಿಟಿ ವ್ಯವಹಾರದ ಬಗ್ಗೆ ಭರ್ಜರಿ ಸುದ್ದಿಯೊಂದು ಓಡಾಡುತ್ತಿದೆ.

KVN Productions sold Thalapathy Vijay Movie Jana Nayagan Ott rights to amazon prime video for Rs 121 crore

ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ 'ಜನ ನಾಯಕನ್' ವಿಜಯ್ ಅವರ 69ನೇ ಸಿನಿಮಾ. ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದರಿಂದ ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ನಿರ್ಧರಿಸಿದ್ದಾರೆ. ಹೀಗಾಗಿ ಈ ಸಿನಿಮಾವೇ ಕೊನೆಯ ಸಿನಿಮಾವಾಗಿದೆ. ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಹೆಚ್ ವಿನೋದ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುಬೇಡಿಕೆಯ ಸಂಗೀತ ನಿರ್ದೇಶಕ ಅನಿರುದ್ಧ್ ಟ್ಯೂನ್ ಹಾಕಿದ್ದಾರೆ. ಪೂಜಾ ಹೆಗ್ಡೆ, ಪ್ರಿಯಾ ಮಣಿ ಮತ್ತು ಮಮಿತಾ ಬೈಜು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ದಳಪತಿ ವಿಜಯ್ ಕೊನೆಯ ಸಿನಿಮಾ ಆಗಿದ್ದರಿಂದ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕೆವಿಎನ್ ಪ್ರೊಡಕ್ಷನ್ ಸಿನಿಮಾ ವ್ಯಾಪಾರಕ್ಕೆ ಮುಂದಾಗಿದೆ ಎಂಬ ಸುದ್ದಿ ಓಡಾಡುತ್ತಿದೆ. ಸಿನಿಮಾ ಬಜೆಟ್ ಕೂಡ ದೊಡ್ಡದಿರುವುದರಿಂದ ವ್ಯಾಪಾರ ಕೂಡ ದೊಡ್ಡ ಮಟ್ಟದಲ್ಲಿಯೇ ಆಗುತ್ತಿದೆ ಎಂಬ ಸುದ್ದಿಯಿದೆ. ಅದರಲ್ಲೂ ಓಟಿಟಿ ಹಕ್ಕುಗಳು ಈಗಾಗಲೇ ಮಾರಾಟ ಆಗಿವೆಯಂತೆ. ಈ ಸಿನಿಮಾ ವಿಜಯ್‌ಗೆ ಸಂಭಾವನೆ ರೂಪದಲ್ಲಿ ₹225 ಕೋಟಿ ನೀಡಲಾಗಿದೆ ಎಂಬ ಮಾತು ಕೂಡ ಇದೆ.

ಈಗ 'ಜನನಾಯಗನ್' ಸಿನಿಮಾದ ಓಟಿಟಿ ಹಕ್ಕುಗಳ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಈ ಸಿನಿಮಾವನ್ನು ಕೊಂಡುಕೊಳ್ಳುವುದಕ್ಕೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ನಡುವೆ ಪೈಪೋಟಿ ಇತ್ತು. ಕೊನೆಗೂ ಅಮೆಜಾನ್ ಪ್ರೈಮ್ ವಿಡಿಯೋ ₹121 ಕೋಟಿ ಕೊಟ್ಟು ಓಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದು ತಮಿಳು ಚಿತ್ರರಂಗದಲ್ಲಿ ಅತೀ ದೊಡ್ಡ ಮೊತ್ತಕ್ಕೆ ಮಾರಾಟವಾದ ಸಿನಿಮಾ ಎನಿಸಿಕೊಂಡಿದೆ.

KVN Productions sold Thalapathy Vijay Movie Jana Nayagan Ott rights to amazon prime video for Rs 121 crore

ಇನ್ನು ಅಮೆಜಾನ್‌ ಪ್ರೈಂ ವಿಡಿಯೋಗೆ ಕೆವಿಎನ್ ಪ್ರೊಡಕ್ಷನ್ ಒಂದು ಷರತ್ತನ್ನೂ ವಿಧಿಸಿದೆ. 'ಜನ ನಾಯಗನ್' ತೆರೆಕಂಡ 8 ವಾರಗಳ ಬಳಿಕ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಬೇಕೆಂಬ ಒಪ್ಪಂದ ಆಗಿದ್ದು, ಅಲ್ಲಿವರೆಗೂ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುವುದಿಲ್ಲ. ಸದ್ಯ ಓಟಿಟಿ ಹಕ್ಕುಗಳ ಬಗ್ಗೆ ಕಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಕೆವಿಎನ್ ಸಂಸ್ಥೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.

ಜನನಾಯಗನ್ ಸಿನಿಮಾವನ್ನು ಕೆವಿಎನ್ ಸಂಸ್ಥೆ 2026 ಜನವರಿಗೆ ಬಿಡುಗಡೆ ಮಾಡುತ್ತಿದೆ. ಅಲ್ಲಿಂದ ಎಂಟು ವಾರ ಅಂದರೆ, ಎರಡು ತಿಂಗಳು ಬಳಿಕ ಸಿನಿಮಾ ಬಿಡುಗಡೆಯಾಗಲಿದೆ. ಅಂದರೆ, ಮಾರ್ಚ್ ಮೊದಲ ವಾರದಲ್ಲಿ ವಿಜಯ್ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಆ ಬಳಿಕ ವಿಜಯ್ ರಾಜಕೀಯ ಪ್ರಚಾರದಲ್ಲಿ ಬ್ಯುಸಿಯಾಗುವ ಸಾಧ್ಯತೆಯಿದೆ. ವಿಜಯ್‌ ಸಿನಿಮಾ 'ಜನನಾಯಗನ್' ಕೂಡ ರಾಜಕೀಯ ಎಂಟ್ರಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿನಿಮಾ ಗೆದ್ದರೆ, ವಿಜಯ್‌ ರಾಜಕೀಯ ಎಂಟ್ರಿಗೆ ಪ್ಲಸ್ ಪಾಯಿಂಟ್ ಆಗಬಹುದು.

More from Filmibeat

English summary
KVN Productions sold Thalapathy Vijay Movie Jana Nayagan Ott rights to amazon prime video for Rs 121 crore.
Read more about: vijay tamil movie kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X