ಬಹಳ ದಿನಗಳಿಂದ ನೀವು ಕಾಯುತ್ತಿದ್ದ ಕನ್ನಡ ಚಿತ್ರ ಓಟಿಟಿಗೆ ಬಂದಿದೆ; ಈಗ್ಲೇ ನೋಡಿ

ಕನ್ನಡ ಸಿನಿಮಾಗಳ ಬಗ್ಗೆ ಓಟಿಟಿ ಸಂಸ್ಥೆಗಳ ತಾತ್ಸಾರ ಮುಂದುವರೆದಿದೆ. ಯಾವುದೇ ಸುಳಿವು ನೀಡದೇ ಕನ್ನಡ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಕನ್ನಡ ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಅದು ಕೂಡ ಡಾಲಿ ಧನಂಜಯ್ ಸಿನಿಮಾ ಎನ್ನುವುದು ವಿಶೇಷ.

ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುವುದಕ್ಕಿಂತ ಓಟಿಟಿಯಲ್ಲೇ ಹೆಚ್ಚು ಗಮನ ಸೆಳೆಯುತ್ತಿವೆ. 'ಬ್ಲಿಂಕ್', 'ಶಾಖಾಹಾರಿ', 'ಶೆಫ್ ಚಿದಂಬರ' ಸೇರಿದಂತೆ ಕೆಲ ಸಿನಿಮಾಗಳಿಗೆ ಓಟಿಟಿಯಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಧನಂಜಯ್ ನಟನೆಯ 'ಕೋಟಿ' ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

Latest hit kannada movie now streaming in Ott

ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ 'ಕೋಟಿ' ಸಿನಿಮಾ ಜೂನ್ 14ಕ್ಕೆ ತೆರೆಗೆ ಬಂದಿತ್ತು. ಚಿತ್ರದಲ್ಲಿ ಧನಂಜಯ್ ಜೊತೆ ತಾರಾ, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇನ್ನು ದುನಿಯಾ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹಳ ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿಕೊಡಲಾಗಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ.

ಅದು ಜನತಾ ಸಿಟಿ. ಅಲ್ಲಿ ನಾಯಕ ಕೋಟಿ(ಧನಂಜಯ್) ತನ್ನ ಫ್ಯಾಮಿಲಿ ಜೊತೆ ವಾಸವಾಗಿರುತ್ತಾನೆ. ಮನೆ ಶಿಫ್ಟಿಂಗ್ ಅವನ ಕಾಯಕ. ನಿಯತ್ತಾಗಿ ದುಡಿದು ಕೋಟಿ ರೂಪಾಯಿ ಸಂಪಾದಿಸಬೇಕು ಎನ್ನುವುದು ಅವನ ಕನಸು. ಅದಕ್ಕಾಗಿ ಗ್ಯಾಂಗ್‌ಸ್ಟರ್ ದೀನೂ ಸಾವ್ಕಾರ್ ಬಳಿ ಸಾಲ ಪಡೆದು ಕಾರು ಖರೀದಿಸಿ ಕ್ಯಾಬ್ ಡ್ರೈವರ್ ಆಗುತ್ತಾನೆ. ಆದರೆ ದೀನೂ ಸಾವ್ಕಾರ್ ಇವನಿಗೆ ಒಂದು ಸುಪಾರಿ ಒಪ್ಪಿಸಲು ಮುಂದಾಗುತ್ತಾನೆ. ಅದಕ್ಕೆ ಒಪ್ಪದೇ ಪಡೆದ ಸಾಲದಿಂದ ಕೋಟಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಎನ್ನುವುದೇ ಕಥೆ.

Latest hit kannada movie now streaming in Ott

ತಮ್ಮ ಕೋಟಿ ಸಿನಿಮಾ ಓಟಿಟಿಗೆ ಬಂದಿರುವ ಬಗ್ಗೆ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ಯಾರೂ ಕೇಳದಿದ್ದಾಗಲೂ ಬರೆಯುವುದಕ್ಕಾಗಬೇಕು ಅಂತ ಯಾವಾಗಲೂ ಅನಿಸುತ್ತಿರುತ್ತದೆ. ಹೀಗಿದ್ದರೂ ಬರೆದಿದ್ದನ್ನು ಜನರಿಗೆ ತಲುಪಿಸುವ ವೇದಿಕೆ ಸಿಕ್ಕಿಬಿಟ್ಟಾಗ ಏನೋ ಒಂದು ಕೃತಜ್ಞತೆಯ ಫೀಲಿಂಗ್"

'ಕ್ರೆಡಿಟ್ ಕುಮಾರ'ನಿಗೆ ತಾರಾಬಲ; ಪತ್ರಕರ್ತ ಹರೀಶ್ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ

"ಇಷ್ಟು ವರ್ಷಗಳಲ್ಲಿ ಬರೆದಿರುವ ಕತೆಗಳಿಗೆಲ್ಲಾ ಒಂದಲ್ಲಾ ಒಂದು ವೇದಿಕೆ ಸಿಕ್ಕಿರೋದಕ್ಕೆ ಒಂದು ಥ್ಯಾಂಕ್ಯೂ. ಅಂದುಕೊಂಡಿರೋ ಕತೆಗಳನ್ನು ಸೀರಿಯಲ್‌ ಮಾಡಿ ತೋರಿಸುವ ಅವಕಾಶ ಸಿಕ್ಕಿದ್ದಕ್ಕೆ ಇನ್ನೊಂದು ಥ್ಯಾಂಕ್ಯೂ. ಅಂದುಕೊಂಡ ಶೋಗಳನ್ನು ಟೀವಿಯಲ್ಲಿ, ಓಟಿಟಿಯಲ್ಲಿ ಮಾಡಿ ತೋರಿಸಲು ಅವಕಾಶ ಆಗಿದ್ದಕ್ಕೆ ಮತ್ತೂ ಒಂದು ಥ್ಯಾಂಕ್ಯೂ"

"ಸಿನಿಮಾ ಪ್ರಯಾಣದ ನನ್ನ ಪುಟ್ಟ ಪ್ರಯತ್ನ ಕೋಟಿಗೆ ಅಮೆಜಾನ್‌ ಪ್ರೈಮಲ್ಲೊಂದು ಅವಕಾಶ ಸಿಕ್ಕಿದೆ. ಥ್ಯಾಂಕ್ಯೂ. ನೋಡಿ. ಜೊತೆಗೆ ಜೊತೆಯಲ್ಲಿರೋರೊಂದಿಗೆ ಹಂಚಿಕೊಳ್ಳಿ" ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಕೆಲವರು ಓಟಿಟಿಯಲ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮೋಕ್ಷಾ ಕೌಶಲ್ 'ಕೋಟಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ದೀನೂ ಸಾವ್ಕಾರ್ ಆಗಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಸರ್ದಾರ್ ಸತ್ಯಾ, ಅಭಿಷೇಕ್ ಶ್ರೀಕಾಂತ್ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿದ್ದಾರೆ. ಅರುಣ್ ಬರಮ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿದೆ. ನೌಬಿನ್ ಪೌಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಪೇ ಪಾರ್ ವೀವ್ ಪದ್ಧತಿಯಲ್ಲೇ ಪ್ರೈಂ ವೀಡಿಯೋ 'ಕೋಟಿ' ಸಿನಿಮಾ ಸ್ಟ್ರೀಮಿಂಗ್ ರೈಟ್ಸ್ ಕೊಂಡುಕೊಂಡಿದೆ. ಕನ್ನಡ ಸಿನಿಮಾಗಳು ಓಟಿಟಿಗೆ ಬರೋದೇ ಕಮ್ಮಿ. ನೀವು ಮಿಸ್ ಮಾಡದೇ ಮನೆಯಲ್ಲೇ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಿ.

More from Filmibeat

English summary
Dont miss This kannada Latest hit movie in Ott;
Read more about: dhananjay sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X