ಹೊಸ ವರ್ಷಕ್ಕೆ ಕನ್ನಡಿಗರಿಗೆ 'ಫುಲ್ ಮೀಲ್ಸ್'; ಓಟಿಟಿಗೆ ಲಗ್ಗೆ ಇಟ್ಟ ಸ್ಯಾಂಡಲ್‌ವುಡ್ ಸಿನಿಮಾ

ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಮನಸ್ಸು ಇಲ್ಲದೇ ಇದ್ದರೆ.. ಇಲ್ಲಾ ಎಲ್ಲಾ ಸಿನಿಮಾಗಳನ್ನು ನೋಡಿ ಮುಗಿಸಿದ್ದರೆ, ಅಂತಹವರಿಗಾಗಿ ಹೊಸದೊಂದು ಕನ್ನಡ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಫ್ರೀ ಇದ್ದಾಗ ಸಿನಿಮಾ ನೋಡುವ ಖಯಾಲಿ ಇದ್ದವರೂ ಕೂಡ ಈ ಸಿನಿಮಾ ನೋಡಬಹುದು. ಇತ್ತೀಚೆಗೆ ಹೊಸ ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಅಂತಹದ್ರಲ್ಲಿ ಒಂದು ಹೊಸ ಸಿನಿಮಾ ಎಂಟ್ರಿ ಕೊಟ್ಟಿದೆ.

ಯುವ ಪ್ರತಿಭೆ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಸಿನಿಮಾ 'ಫುಲ್‌ ಮೀಲ್ಸ್' ಓಟಿಟಿಗೆ ಎಂಟ್ರಿ ಕೊಟ್ಟಿದೆ. ಯಾರೆಲ್ಲ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದನ್ನು ಮಿಸ್ ಮಾಡಿಕೊಂಡಿದ್ದೀರೋ ಅಂತಹವರು ಓಟಿಟಿಯಲ್ಲಿ ವೀಕ್ಷಿಸಬಹುದು. ಪ್ರೀತಿ, ಪ್ರೇಮದ ಜೊತೆಗೆ ಫ್ಯಾಮಿಲಿಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ ಸಿನಿಮಾವಿದು. ಹೀಗಾಗಿ ಯಾರೆಲ್ಲ ಫ್ಯಾಮಿಲಿ ಸಮೇತ ಸಿನಿಮಾ ನೋಡಿಲ್ಲವೋ ಅವರೂ ಸಿನಿಮಾವನ್ನು ನೋಡಬಹುದು.

Likhith Shetty starrer Full Meals Movie Streaming in Amazon Prime video

ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್‌ನ ಜೀವನ ಪಯಣ, ಕನಸುಗಳು ಮತ್ತು ಕುಟುಂಬದ ಮೌಲ್ಯಗಳನ್ನು ಸಹಜವಾಗಿ ತೆರೆದಿಡುವ ಎಂಗೇಜಿಂಗ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಫುಲ್ ಮೀಲ್ಸ್'. ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ. ಕನ್ನಡ ಸಿನಿಪ್ರಿಯರು ಈ ಸಿನಿಮಾವನ್ನು ಇಲ್ಲಿ ನೋಡಿ ಆನಂದಿಸಬಹುದು. ಅಷ್ಟಕ್ಕೂ 'ಫುಲ್ ಮೀಲ್ಸ್' ಸಿನಿಮಾ ಎಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ? ರೆಸ್ಪಾನ್ಸ್ ಹೇಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಲಿಖಿತ್ ಶೆಟ್ಟಿ ನಾಯಕನಾಗಿ ನಟಿಸಿರುವ 'ಫುಲ್ ಮೀಲ್ಸ್' ಸಿನಿಮಾ 2025ರ ನವೆಂಬರ್ 21ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಂಡಿತ್ತು. ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 25 ದಿನಗಳ ಕಾಲ ಪ್ರದರ್ಶನ ಕಂಡ ಸಿನಿಮಾ ಇದೀಗ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ.

'ಫುಲ್ ಮೀಲ್ಸ್' ಸಿನಿಮಾ ನಟ ಲಿಖಿತ್ ಶೆಟ್ಟಿ ಕೇವಲ ಹೀರೋ ಆಗಿ ಅಷ್ಟೇ ಅಲ್ಲ. ನಿರ್ಮಾಪಕ ಕೂಡ ಹೌದು. 'ಫುಲ್ ಮೀಲ್ಸ್‌'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಇನ್ನೂ ಹೆಚ್ಚು ಮಂದಿ ಬಂದು ಥಿಯೇಟರ್‌ನಲ್ಲಿಯೇ ಸಿನಿಮಾ ನೋಡಬೇಕಿತ್ತು. ಹೀಗಾಗಿ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಕನ್ನಡಿಗರು ಈ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಅಂದ್ಹಾಗೆ ಎನ್. ವಿನಾಯಕ ಈ 'ಫುಲ್ ಮೀಲ್ಸ್' ಸಿನಿಮಾದ ನಿರ್ದೇಶಕ. ಇನ್ನು ಲಿಖಿತ್ ಶೆಟ್ಟಿ ಜೊತೆ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Likhith Shetty starrer Full Meals Movie Streaming in Amazon Prime video

ಹೊಸ ವರ್ಷಕ್ಕೆ 'ಫುಲ್‌ ಮೀಲ್ಸ್' ಸಿನಿಮಾವನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡುವವುದಕ್ಕೆ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಕುಟುಂಬ ಸಮೇತರಾಗಿ ಸಿನಿಮಾ ನೋಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ 'ಸಂಕಷ್ಟಕರ ಗಣಪತಿ', 'ಅಬ್ಬಬ್ಬ', 'ಫ್ಯಾಮಿಲಿ ಪ್ಯಾಕ್' ಅಂತಹ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ತಮ್ಮ ನಟನೆ ಹಾಗೂ ಆ್ಯಕ್ಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರೆ.

ಇನ್ನು ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಗಮನ ಸೆಳೆದಿದ್ದರೆ. ಈ ಹಿಂದೆ ಕಿರುಚಿತ್ರಗಳು, ಡಾಕ್ಯುಮೆಂಟರಿಗಳು ಮತ್ತು ಆಲ್ಬಮ್ ಸಾಂಗ್‌ಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು. ಈಗ 'ಫುಲ್ ಮೀಲ್ಸ್' ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಹಾಗೇ ಈ ಸಿನಿಮಾದಲ್ಲಿ ರಂಗಾಯಣ ರಘು, ಸೂರಜ್‌ ಲೋಕ್ರೆ, ವಿಜಯ್‌ ಚಂಡೂರ್‌, ರವಿಶಂಕರ್‌ ಗೌಡ, ರಾಜೇಶ್‌ ನಟರಂಗ, ಸುಜಯ್‌ ಶಾಸ್ತ್ರಿ, ಚಂದ್ರಕಲಾ ಮೋಹನ್‌, ಹೊನ್ನವಳ್ಳಿ ಕೃಷ್ಣ, ರಮೇಶ್‌ ಪಂಡಿತ್‌, ಚೇತನ್‌ ದುರ್ಗ, ನಾಗೇಂದ್ರ ಅರಸ್‌, ಮೂಗು ಸುರೇಶ್‌, ಗಣೇಶ್ ರಾವ್, ಕೋಟೆ ಪ್ರಭಾಕರ್‌ ಸೇರಿದಂತೆ ಕನ್ನಡದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೇ ಗುರುಕಿರಣ್ ಸಂಗೀತ ನೀಡಿದ್ದು, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ.

More from Filmibeat

English summary
Likhith Shetty starrer Full Meals Movie Streaming in Amazon Prime video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X