ಸಂಕ್ರಾಂತಿಗೆ OTTಯಲ್ಲಿ ಸಿನಿಮಾ ಹಬ್ಬ: ಎಲ್ಲೆಲ್ಲಿ ಯಾವ್ಯಾವ ಮೂವಿ ರಿಲೀಸ್

ಕೊರೊನಾ ಹಾವಳಿ ಇಡುವುದಕ್ಕೆ ಶುರುವಾಗುತ್ತಿದ್ದಂತೆ ಚಿತ್ರರಂಗದಲ್ಲಿ ಓಟಿಟಿಗೆ ಭಾರಿ ಬೇಡಿಕೆ ಬರುತ್ತಿದೆ. ನಿರ್ಮಾಪಕರು ಓಟಿಟಿನಾ? ಚಿತ್ರಮಂದಿರನಾ? ಅನ್ನುವ ಗೊಂದಲಕ್ಕೆ ಬಿದ್ದಿರುವಂತೂ ನಿಜ. ಇನ್ನು ಕೆಲವರು ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಕಾದು ಕಾದು ಸುಸ್ತಾದ ನಿರ್ಮಾಪಕರು ಓಟಿಟಿಗೆ ಸಿನಿಮಾ ಕೊಟ್ಟು ಕೈ ತೊಳೆದು ಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾ ಮಂದಿಗೆ ಓಟಿಟಿ ಸಂಜೀವಿನಿಯಾಗಿ ಕಂಡಿರುವುದಂತೂ ಸತ್ಯ.

ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಥಿಯೇಟರ್‌ಗಳಲ್ಲಿ ಅಬ್ಬರಿಸಬೇಕು ಅಂತಿದ್ದ ಸೂಪರ್‌ಸ್ಟಾರ್‌ಗಳಿಗೆ ಮತ್ತೆ ನಿರಾಸೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಸಿನಿಪ್ರಿಯರು ಓಟಿಟಿ ಮೊರೆ ಹೋಗೇ ಬೇಕಾಗಿದೆ. ಈ ಕಾರಣಕ್ಕಾಗಿಯೇ ಓಟಿಟಿ ಸಂಸ್ಥೆಗಳು ತನ್ನ ವೀಕ್ಷಕರಿಗೆ ಸಂಕ್ರಾಂತಿಗೆ ಒಂದೊಂದು ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿವೆ. ಸುಗ್ಗಿ ಹಬ್ಬಕ್ಕೆ ಸಖತ್ ಸಿನಿಮಾಗಳನ್ನು ನೀಡಿ, ಹಬ್ಬ ಮಾಡುವುದಕ್ಕೆ ಸಜ್ಜಾಗಿದೆ. ಹಾಗಿದ್ದರೆ, ಯಾವ್ಯಾವ ಓಟಿಟಿಯಲ್ಲಿ ಯಾವ ಸಿನಿಮಾ ಬಿಡುಗಡೆಯಾಗುತ್ತಿದೆ. ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಜೀ 5ನಲ್ಲಿ 'ಗರುಡ ಗಮನ ವೃಷಭ ವಾಹನ'

ಜೀ 5ನಲ್ಲಿ 'ಗರುಡ ಗಮನ ವೃಷಭ ವಾಹನ'

2021ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೆಟ್‌ ಮಾಡಿದ ಸಿನಿಮಾ ಗರುಡ 'ಗಮನ ವೃಷಭ ವಾಹನ'. ರಾಜ್‌ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿದ್ದ ಚಿತ್ರಕ್ಕೆ ಸಿನಿಮಾ ದಿಗ್ಗಜರು ಭೇಷ್ ಅಂದಿದ್ದರು. ಥಿಯೇಟರ್‌ನಲ್ಲಿ ಸದ್ದು ಮಾಡಿದ ಬಳಿಕ ಈಗ ಓಟಿಟಿಯಲ್ಲಿ ತನ್ನ ಪ್ರತಾಪ ತೋರಿಸುವುದಕ್ಕೆ ಸಜ್ಜಾಗುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಮಂಗಳಾದೇವಿಯ ರಕ್ತಚರಿತ್ರೆಯನ್ನು ವೀಕ್ಷಕರಿಗೆ ಹೇಳಲು ಹೊರಟಿದೆ. 'ಭಜರಂಗಿ 2' ಭರ್ಜರಿ ಯಶಸ್ಸಿನ ಬಳಿಕ ಜನವರಿ 13ರಿಂದ ಜೀ 5 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಪ್ರಿಮಿಯರ್ ಮಾಡುತ್ತಿದೆ.

ನೆಟ್‌ಫ್ಲಿಕ್ಸ್‌ನಲ್ಲಿ 'ಸಖತ್'

ನೆಟ್‌ಫ್ಲಿಕ್ಸ್‌ನಲ್ಲಿ 'ಸಖತ್'

ನೆಟ್‌ಫ್ಲಿಕ್ಸ್ ಕೂಡ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆ 'ಸಖತ್' ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ಆದರೆ, ಯಾವ ದಿನ ಬಿಡುಗಡೆ ಆಗುತ್ತೆ ಅನ್ನುವುದು ಇನ್ನೂ ನಿರ್ಧಾರ ಆಗಿಲ್ಲ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲು ಇಡೀ ತಂಡ ಶತಪ್ರಯತ್ನ ನಡೆಸುತ್ತಿದೆ.

ಅಮೆಜಾನ್‌ನಲ್ಲಿ 'ಪುಷ್ಪ'

ಅಮೆಜಾನ್‌ನಲ್ಲಿ 'ಪುಷ್ಪ'

2021ರಲ್ಲಿ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿದ ಸಿನಿಮಾ 'ಪುಷ್ಪ'. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ್ ನಟಿಸಿದ ಸಿನಿಮಾಗೆ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿತ್ತು. ಥಿಯೇಟರ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದ್ದರೂ ಓಟಿಟಿ ಜೊತೆಗಿನ ಒಪ್ಪಂದದಂತೆ ಜನವರಿ 7ರಂದು 'ಪುಷ್ಪ' ರಿಲೀಸ್ ಆಗಿದೆ. ಆದರೆ, 'ಪುಷ್ಪ' ಹಿಂದಿ ಅವತರಣಿಕೆ ಮಾತ್ರ ಬಿಡುಗಡೆಯಾಗಿರಲಿಲ್ಲ. ಸಂಕ್ರಾಂತಿ ಹಬ್ಬಕ್ಕೆ ಜನವರಿ 14ರಂದು ಪ್ರದರ್ಶನ ಮಾಡಲು ಅಮೆಜಾನ್ ಪ್ರೈಮ್‌ ಸಿದ್ಧತೆ ಮಾಡಿಕೊಂಡಿದೆ.

ಸಂಕ್ರಾಂತಿಗೆ ನಿತ್ಯಾ ಮೆನನ್ 'ಸ್ಕೈ ಲ್ಯಾಬ್'

ಸಂಕ್ರಾಂತಿಗೆ ನಿತ್ಯಾ ಮೆನನ್ 'ಸ್ಕೈ ಲ್ಯಾಬ್'

ಕನ್ನಡದ ನಟಿ ನಿತ್ಯಾ ಮೆನನ್ ಅಭಿನಯದ 'ಸ್ಕೈ ಲ್ಯಾಬ್' ಓಟಿಟಿಯಲ್ಲಿ ಬಿಡುಗಡೆ ಸಜ್ಜಾಗಿದೆ. ಇದೊಂದು ಹಾಸ್ಯ ಪ್ರಧಾನ ಸಿನಿಮಾ ಆಗಿದ್ದು, ತೆಲಂಗಾಣ ಕರೀಂ ನಗರದ ಬಂಡಲಿಂಗಂಪಲ್ಲಿ ಎಂಬ ಗ್ರಾಮದ ಮೇಲೆ ಬಾಹ್ಯಕಾಶ ನೌಕೆ ಅಪ್ಪಳಿಸಲಿದೆ ಎಂಬ ಸುದ್ದಿ ಹರಡುತ್ತೆ. ಆಗ ಆ ಹಳ್ಳಿಯಲ್ಲಿನ ನಾಲ್ಕು ಮಂದಿ ಅದನ್ನು ತಡೆಯಲು ಏನು ಮಾಡುತ್ತಾರೆ ಎನ್ನುವುದು ಕಥೆ. ನಿತ್ಯಾ ಮೆನನ್ ಹಾಗೂ ಸತ್ಯದೇವ್ ನಟನೆಯ ಈ ಸಿನಿಮಾ ಸೋನಿ ಲೈವ್‌ನಲ್ಲಿ ಜನವರಿ 14ರಂದು ರಿಲೀಸ್ ಆಗುತ್ತಿದೆ.

ಹಾಟ್‌ಸ್ಟಾರ್‌ನಲ್ಲಿ ಬಾಲಕೃಷ್ಣ 'ಅಖಂಡ'

ಹಾಟ್‌ಸ್ಟಾರ್‌ನಲ್ಲಿ ಬಾಲಕೃಷ್ಣ 'ಅಖಂಡ'

ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ಅಭಿನಯದ 'ಅಖಂಡ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅದೆಷ್ಟು ಸದ್ದು ಮಾಡಿತ್ತು ಅನ್ನೋದು ಗೊತ್ತೇ ಇದೆ. ನಿರ್ದೇಶಕ ಬೋಯಪಟ್ಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್ ಸಿನಿಮಾ ತೆಲುಗು ಚಿತ್ರರಂಗ ಜೈ ಹಾಕಾರ ಹಾಕಿತ್ತು. ಈ ಸಿನಿಮಾ ಕೂಡ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಆದರೆ, ಸಂಕ್ರಾಂತಿ ಹಬ್ಬ ಮುಗಿದು ಒಂದು ವಾರದ ಬಳಿಕ ಜನವರಿ 21ಕ್ಕೆ ಡಿಜ್ನಿ ಹಾಟ್‌ಸ್ಟಾರ್ ಸಿನಿಮಾ ರಿಲೀಸ್‌ಗೆ ಸ್ಕೆಚ್ ಹಾಕಿದೆ.

More from Filmibeat

English summary
List of films lined up for release in OTT on Sankranti 2022. In Kannada Garuda Gamana Vrushabha Vahana, Sakkath, Pushpa Hindi, Akhanda, Sky Lab is going to release on the occasion of Sankranti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X