ಓಟಿಟಿಯಲ್ಲಿ ನೋಡಬಹುದಾದ ಪರಿಸರ ಕುರಿತಾದ ಸಿನಿಮಾ, ಡಾಕ್ಯೂಮೆಂಟರಿಗಳ ಲಿಸ್ಟ್ ಇಲ್ಲಿದೆ.

ಇಂದು (ಜೂನ್ 5) ವಿಶ್ವ ಪರಿಸರ ದಿನ. ಪ್ರತಿ ವರ್ಷ ಈ ದಿನದಂದು ವಿಶ್ವ ಪರಸರ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಜನರಲ್ಲಿ ಪರಿಸರದ ರಕ್ಷಣೆತ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತೆ. ವಿಶ್ವಸಂಸ್ಥೆ 1972 ರಿಂದ ವಿಶ್ವ ಪರಿಸರ ದಿನವನ್ನು ಆಚರಿಸುತ್ತಾ ಬರುತ್ತಿದೆ. ಪರಿಸರ ರಕ್ಷಣೆ ಮತ್ತು ಅಭಿವೃದ್ಧಿಗೆ ಜನರಲ್ಲಿ ಜಾಗೃತಿ ಮೂಡಿಸುವುದು. ವನ್ಯಜೀವಿ ಸಂರಕ್ಷಣೆ, ಮರ ಗಿಡಗಳನ್ನು ರಕ್ಷಿಸುವುದು, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ ಜೀವನ, ನೀರಿನ ಸಂರಕ್ಷಣೆ, ಶುದ್ಧ ಗಾಳಿಯನ್ನು ನೀಡುವುದು ಪ್ರಮುಖ ಉದ್ದೇಶ.

ವಿಶ್ವದಾದ್ಯಂತ ಇಂದು ಪರಿಸರವನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ವಾತಾವರಣದಲ್ಲಿ ವೈಪರೀತ್ಯ, ಜೈವಿಕ ವೈವಿದ್ಯತೆ, ವಾಯು ಮಾಲಿನ್ಯ, ಕುರಿತು ಜಾಗೃತಿಯನ್ನು ಮೂಡಿಸಬೇಕಾದ ಅನುವಾರ್ಯತೆಯಿದೆ. ಈ ವಿಷಯಗಳ ಕುರಿತು ಈಗಾಗಲೇ ಹಲವು ಸಿನಿಮಾಗಳು ಹಾಗೂ ಡಾಕ್ಯೂಮೆಂಟರಿಗಳು ಬಂದಿವೆ. ಇವು ಒಟಿಟಿಯಲ್ಲಿ ಲಭ್ಯವಿದೆ.

List of movies and documentaries based on Environment in ott platforms

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ಪ್ರಮುಖ ಸಿನಿಮಾ ಹಾಗೂ ಡಾಕ್ಯೂಮೆಂಟರಿಗಳ ಪಟ್ಟಿ ಇಲ್ಲಿದೆ. ಇವುಗಳನ್ನು ವಿಶ್ವ ಪರಿಸರದ ದಿನವಾದ ಇಂದು ನೋಡಬಹುದಾಗಿದೆ.

ಇರಾದಾ - ಜಿಯೋ ಹಾಟ್‌ಸ್ಟಾರ್

ಪರಿಸರದ ಕುರಿತಾದ ಸಿನಿಮಾ 'ಇರಾದಾ'. ಇದು 2017ರಲ್ಲಿ ತೆರೆಕಂಡಿತ್ತು. ನಾಸಿರುದ್ಧೀನ್ ಷಾ, ಅರ್ಷದ್ ವಾರ್ಸಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪಂಜಾನ್‌ನಲ್ಲಿ ನಡೆದ ಕೈಗಾರಿಕೆಗಳಲ್ಲಿ ಭ್ರಷ್ಟಾಚಾರ, ಪರಿಸರ ವಿಕೋಪದ ಕುರಿತು ಚಿತ್ರೀಕರಿಸಲಾಗಿದೆ. ನಿವೃತ್ತ ಸೇನಾಧಿಕಾರಿಯ ಪುತ್ರಿ ಆರೋಗ್ಯ ತಪ್ಪುತ್ತಾಳೆ. ಇಲ್ಲಿಂದ ಟಾಕ್ಸಿಕ್ ಗ್ರೌಂಡ್‌ವಾಟರ್ ಬಗ್ಗೆ ತನಿಖೆ ಶುರುವಾಗುತ್ತೆ. ಔಷಧಿಗಳನ್ನು ತಯಾರಿಸುವ ದೈತ್ಯ ಕಂಪನಿ ರಾಸಾಯನಿಕ ಮಿಶ್ರಿತ ನೀರನ್ನು ಹರಿಬಿಡುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನೇ 'ಇರಾದಾ'ದಲ್ಲಿ ಹೇಳಲಾಗಿದೆ.

ದಿ ಐವರಿ ಗೇಮ್- ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಐವರಿ ಗೇಮ್' ಎನ್ನುವ ಜನಪ್ರಿಯ ಡಾಕ್ಯೂಮೆಂಟರಿ ಪರಿಸರದ ಕುರಿತು ಚಿತ್ರಿಸಲಾಗಿದೆ. ಇದು ಅಂತರಾಷ್ಟ್ರೀಯ ಕಳ್ಳ ಸಾಗಣೆಗಳ ನೆಟ್‌ವರ್ಕ್‌ ಅನ್ನು ಬಯಲು ಮಾಡುತ್ತದೆ. ಕಾಡುವ ದೃಶ್ಯಗಳು ಹಾಗೂ ಕಥೆ ಹೇಳುವ ಶೈಲಿ ಪವರ್‌ಫುಲ್ ಆಗಿದೆ. ಜನರ ದುರಾಸೆ, ಬೇಡಿಕೆ ಹಾಗೂ ಭ್ರಷ್ಟಾಚಾರ ಹೇಗೆ ಅಳಿವಿನ ಬಿಕ್ಕಟ್ಟಿಗೆ ಉತ್ತೇಜನ ನೀಡುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಈ ಮೂಲಕ ಪರಿಸರದ ಸಂರಕ್ಷಣೆ ಹಾಗೂ ಉಳಿವಿಗೆ ಜನರು ನಿಲುವುಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದೆ.

ದಿ ಡೇ ದಿ ಅರ್ಥ್‌ ಸ್ಟುಡ್ ಸ್ಟಿಲ್ - ಅಮೆಜಾನ್ ಪ್ರೈಂ ವಿಡಿಯೋ

2008ರಲ್ಲಿ ತೆರೆಕಂಡಿದ್ದ 'ದಿ ಡೇ ದಿ ಅರ್ಥ್‌ ಸ್ಟುಡ್ ಸ್ಟಿಲ್' ಇದೊಂದು ಸೈನ್ಸ್ ಫಿಕ್ಸ್ ಸಿನಿಮಾ. ಈ ಸಿನಿಮಾದಲ್ಲಿ ಅನ್ಯಗ್ರಹದ ಜೀವಿಯೊಂದು ಭೂಮಿಗೆ ರಾಯಬಾರಿಯಾಗಿ ಬಂದು, ಪರಿಸರ ಉಳಿಸುವಿಕೆ ಬಗ್ಗೆ ಎಚ್ಚರಿಸುವ ಕಥೆ. ಪರಿಸರ ನಾಶ ಹಾಗೂ ಹಿಂಸೆಯಿಂದ ಸ್ವಯಂ ವಿನಾಶವನ್ನು ನಿಲ್ಲಿಸಬೇಕು ಎಂದು ಎಚ್ಚರಿಯನ್ನು ನೀಡುತ್ತದೆ. ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

List of movies and documentaries based on Environment in ott platforms

ಜಿಯೋಸ್ಟಾರ್ಮ್- ಜಿಯೋ ಹಾಟ್‌ಸ್ಟಾರ್

ಪರಿಸರ ಕುರಿತಾದ ಮತ್ತೊಂದು 'ಜಿಯೋಸ್ಟಾರ್ಮ್'. ಇದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಹವಾಮಾನ ನಿಯಂತ್ರಣದ ಉಪಗ್ರಹ ಕೆಟ್ಟು ಹೋದಾಗ, ಅದು ಪ್ರಪಂಚದಾದ್ಯಂತ ಏನೆಲ್ಲ ಪರಿಣಾಮವನ್ನು ಬೀರುತ್ತೆ. ಆ ಜಾಗತಿಕ ವಿಪತ್ತನ್ನು ತಡೆಯುವುದು ಹೇಗೆ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಆಕ್ಷನ್ ಹಾಗೂ ಅದ್ಭುತ ದೃಶ್ಯಗಳು ಗಮನ ಸೆಳೆಯುತ್ತವೆ. ಇದೆಲ್ಲಕ್ಕಿಂತ ಹೆಚ್ಚಾಗಿ ತಂತ್ರಜ್ಞಾನವನ್ನು ಅತಿಯಾಗಿ ಅವಲಂಬಿಸುವುದರಿಂದ ಉಂಟಾಗುವ ಅನಿರೀಕ್ಷಿತ ಅಪಾಯಗಳ ಬಗ್ಗೆ ಈ ಸಿನಿಮಾ ಎಚ್ಚರಿಸಿದೆ.

ವಾಲ್ ಇ - ಜಿಯೋ ಹಾಟ್‌ಸ್ಟಾರ್

'ವಾಲ್ ಇ' ಇದೊಂದು ಕಾಲ್ಪನಿಕ ಸಿನಿಮಾ. ಬೆಟ್ಟದಷ್ಟು ತಾಜ್ಯಗಳಿರುವ ಭವಿಷ್ಯದ ಭೂಮಿಯಲ್ಲಿ ವಾಲ್ ಇ ಎನ್ನುವ ರೋಬೋಟ್ ಕುರಿತ ಕಥೆ. ಇದು ಅವ್ಯವಸ್ಥೆಯನ್ನ ಸ್ವಚ್ಚಗೊಳಿಸುವ ರೋಬೋಟ್ ಆಗಿದೆ.

More from Filmibeat

English summary
List of movies and documentaries based on Environment in ott platforms.
Read more about: movies documentary environment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X