ಜೂನ್ ತಿಂಗಳಲ್ಲಿ ಓಟಿಟಿಗೆ 20ಕ್ಕೂ ಹೆಚ್ಚು ಸಿನಿಮಾಗಳು ಎಂಟ್ರಿ? ಇದರಲ್ಲಿ ಕನ್ನಡ ಸಿನಿಮಾಗಳೆಷ್ಟು?
ಜೂನ್ 3ಕ್ಕೆ ಐಪಿಎಲ್ (ಆರ್‌ಸಿಬಿ Vs ಪಂಜಾಬ್) ಪಂದ್ಯವಾಳಿ ಮುಗಿದು ಹೋಗುತ್ತೆ. ಥಿಯೇಟರ್‌ಗಳಿಗೆ ಬಿಗ್ ಬಜೆಟ್ ಸಿನಿಮಾಗಳು ಎಂಟ್ರಿ ಕೊಡುವುದಕ್ಕೆ ಮುಹೂರ್ತ ಫಿಕ್ಸ್ ಮಾಡಿ ಕೊಳ್ಳುತ್ತಿವೆ. ಇನ್ನೊಂದು ಕಡೆ ಮುಂಗಾರು ಮಳೆ ಶುರುವಾಗಿದೆ. ತಿಂಗಳಿಗೆ ಒಂದೆರಡು ಸಿನಿಮಾಗಳನ್ನು ನೋಡಿದ್ಮೇಲೆ ಮನರಂಜನೆ ಬೇಕು ಅಂತ ಬಯಸಿದವರಿಗೆ ಸಿನಿಮಾ, ವೆಬ್ ಸೀರಿಸ್‌ಗಳನ್ನು ಕೊಡುವುದಕ್ಕೆ ಓಟಿಟಿ ಪ್ಲಾಟ್‌ಫಾರ್ಮ್‌ಗಳು ರೆಡಿಯಾಗಿದೆ.
ಜೂನ್ ತಿಂಗಳಲ್ಲಿ ಮಳೆ ಆರಂಭ ಆಗುತ್ತಿದ್ದಂತೆ ಸಿನಿಮಾ ನೋಡುವುದಕ್ಕಂತ ಹೊರಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾರೆ. ಇಂತಹವರಿಗಾಗಿ ತಿಂಗಳು ಪೂರ್ತಿ ಮನರಂಜನೆಯನ್ನು ನೀಡುವುದಕ್ಕೆ ಓಟಿಟಿ ಪ್ಲಾಪ್‌ಫಾರ್ಮ್‌ಗಳು ರೆಡಿಯಾಗಿವೆ. ಈ ತಿಂಗಳು ಅಂದಾಜು 20ಕ್ಕೂ ಹೆಚ್ಚು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಬಿಡುಗಡೆಗೆ ವೇದಿಕೆ ರೆಡಿಯಾಗಿದೆ.

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ, ಜೀ 5, ನೆಟ್‌ಫ್ಲಿಕ್ಸ್, ಸನ್ ನೆಕ್ಸ್ಟ್ ಅಂತ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಪೈಪೋಟಿಗೆ ಬಿದ್ದಿವೆ. ಜೂನ್ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳ ಪಟ್ಟಿ ಇಲ್ಲಿದೆ.
ಕನ್ನಡ ಸಿನಿಮಾಗಳ ಲಿಸ್ಟ್
ಕನ್ನಡದಲ್ಲಿ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗುತ್ತಿಲ್ಲ. ಈಗಾಗಲೇ ರಂಗಾಯಣ ರಘು ನಟಿಸಿದ 'ಅಜ್ಞಾತವಾಸಿ', ರವಿ ಬಸ್ರೂರು ಸಿನಿಮಾ 'ವೀರಚಂದ್ರಹಾಸ' ರಿಲೀಸ್ ಆಗಿದೆ. ಈಗ ಮತ್ತೊಂದು ಕನ್ನಡ ಸಿನಿಮಾ 'ನಿಮಿತ್ತ ಮಾತ್ರ' ಹಾಗೂ ಹಾಲಿವುಡ್ ಹಾಗೂ ಕನ್ನಡ ನಟರು ನಟಿಸಿದ 'ಮೈ ಹೀರೊ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ತಿಂಗಳಲ್ಲಿ ಅಜಯ್ ರಾವ್ ನಟಿಸಿರುವ 'ಯುದ್ಧಕಾಂಡ 2' ಜೀ 5ನಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ.

ತೆಲುಗು ಸಿನಿಮಾಗಳ ಲಿಸ್ಟ್
ತೆಲುಗು ಮಂದಿಗೆ ಜೂನ್ ತಿಂಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗುತ್ತಿವೆ. ಸಮಂತಾ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಸಿನಿಮಾ 'ಶುಭಂ' ಈ ತಿಂಗಳ ಪ್ರಮುಖ ಆಕರ್ಷಣೆ. ಈ ಹಾರರ್ ಕಾಮಿಡಿ ಸಿನಿಮಾ ಜೀ 5ನಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಚಿತ್ರಮಂದಿರಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಓಟಿಟಿಗೆ ಲಗ್ಗೆ ಇಡುತ್ತಿದೆ. ಇನ್ನೊಂದು 'ವೇದಿಕಾ & ಡ್ಯಾನಿ'. ಜಿಯೋ ಸಿನಿಮಾದಲ್ಲಿ ಈ ಸೋಶಿಯಲ್ ಡ್ರಾಮಾ ರಿಲೀಸ್ ಆಗುತ್ತಿದೆ. ರಿಲೀಸ್ ಇನ್ನೂ ರಿವೀಲ್ ಆಗಿಲ್ಲ. ತೆಲುಗು ಸಿನಿಮಾಗಳ ಓಟಿಟಿ ರಿಲೀಸ್ ಪಟ್ಟಿ ಇಲ್ಲಿದೆ.
'ಶುಭಂ'- ಜೀ 5
'ದೇವಿಕಾ & ಡ್ಯಾನಿ'-ಜಿಯೋ ಸಿನಿಮಾ
'ರೋಸಸ್' ವೆಬ್ ಸೀರಿಸ್-ಆಹಾ
'#ಸಿಂಗಲ್'-ಅಮೆಜಾನ್ ಪ್ರೈಂ ವಿಡಿಯೋ
'ಭೈರವ'- ಜೀ5 (ಎಕ್ಸ್‌ಪೆಕ್ಟೆಡ್)
ತಮಿಳು ಸಿನಿಮಾಗಳ ಲಿಸ್ಟ್
ಇನ್ನು ತಮಿಳಿನಲ್ಲೂ ಬಿಗ್ ಬಜೆಟ್ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ರಜನಿಕಾಂತ್, ವಿಜಯ್ ಸೇತುಪತಿ, ಸಂತಾನಂ, ಶಶಿಕುಮಾರ್, ಸಿಮ್ರಾನ್ ನಟಿಸಿದ ಸಿನಿಮಾಗಳು ಓಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿವೆ.
ಲಾಲ್ ಸಲಾಂ- ಸನ್‌ನೆಕ್ಟ್ಸ್ (ಜೂನ್ 6)
ಟೂರಿಸ್ಟ್ ಫ್ಯಾಮಿಲಿ-ಜಿಯೋ ಸಿನಿಮಾ (ಜೂನ್ 2)
ದೇವಿಸ್ ಡಬಲ್-ಜೀ5
ಏಸ್-ಅಮೆಜಾನ್ ಪ್ರೈಂ ವಿಡಿಯೋ
ಮಾಮಂ- ಜೀ5
ಮಲಯಾಳಂ ಸಿನಿಮಾಗಳ ಲಿಸ್ಟ್
ಜೂನ್ ತಿಂಗಳಲ್ಲಿ ಮಲಯಾಳಂ ಚಿತ್ರರಂಗದ ಎರಡು ಸಿನಿಮಾಗಳು ಓಟಿಟಿಗೆ ಲಗ್ಗೆ ಇಡುತ್ತಿವೆ. 'ಅಲಪ್ಪುಳ ಜಿಮ್ಖಾನಾ' ಸಿನಿಮಾ ಸೋನಿಲೈವ್‌ನಲ್ಲಿ ರಿಲೀಸ್ ಆಗುತ್ತಿದೆ. ಜೂನ್ 5ರಂದು ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಪಕ್ಕಾ ಯೂತ್ ಸಿನಿಮಾ. ಇನ್ನು ಎರಡನೆಯದ್ದು ವೆಬ್ ಸೀರಿಸ್ 'ಕೇರಳ ಕ್ರೈಂ ಫೈಲ್ಸ್' ಸೀಸನ್ 2. ಕ್ರೈಂ ಥ್ರಿಲ್ಲರ್ ಇನ್‌ವೆಸ್ಟಿಗೇಷನ್ ವೆಬ್ ಸೀರಿಸ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











