ವೀಕೆಂಡ್ ಬಂತು.. ಈ ವಾರ ಒಟಿಟಿಯಲ್ಲಿ ಭರ್ಜರಿ ಬೇಟೆ: 15 ಹೆಚ್ಚು ಹೊಸ ಸಿನಿಮಾ, ವೆಬ್ ಸಿರೀಸ್ ನೋಡಿ

ವೀಕೆಂಡ್ ಶುರುವಾಗುತ್ತಿದ್ದಂತೆ ಒಟಿಟಿ ಪ್ರಿಯರು ಅಲರ್ಟ್ ಆಗುತ್ತಾರೆ. ವಾರಾಂತ್ಯದಲ್ಲಿ ಎಷ್ಟು ಸಿನಿಮಾ ನೋಡಬಹುದು ಒಂದು ದಿನ ಮುನ್ನವೇ ಸ್ಕೆಚ್ ಹಾಕುತ್ತಾರೆ. ಈ ವಾರ ಕೂಡ ಒಟಿಟಿ ವೇದಿಕೆಗಳು ಸಿಕ್ಕಾ ಪಟ್ಟೆ ಬ್ಯುಸಿಯಾಗಿವೆ. ಒಂದಲ್ಲ ಎರಡಲ್ಲ ಬರೋಬ್ಬರಿ 15 ಸಿನಿಮಾ, ವೆಬ್ ಸಿರೀಸ್ ಬಿಡುಗಡೆಯಾಗಲಿವೆ. ಹೀಗಾಗಿ ಸಿನಿಮಾ ಪ್ರೇಮಿಗಳು ಈ ವಾರ ಒಟಿಟಿಯಲ್ಲಿ ಭರ್ಜರಿ ಬೇಟೆ ಆಡುವುದು ಗ್ಯಾರಂಟಿ.

ವೀಕೆಂಡ್ ಬಂದು ಅಂದರೆ ಸಿನಿಪ್ರಿಯರು ಸಿನಿಮಾ ನೋಡಲು ಮುಗಿಬೀಳುತ್ತಾರೆ. ಅದೇ ರೀತಿ ವಾರಾಂತ್ಯದಲ್ಲಿ ಒಟಿಟಿ ವೇದಿಕೆಗಳೂ ಕೂಡ ಸಿನಿಮಾ, ವೆಬ್‌ ಸಿರೀಸ್ ರಿಲೀಸ್ ಮಾಡಲು ಪೈಪೋಟಿಗೆ ಬೀಳುತ್ತಾರೆ. ಫೆಬ್ರವರಿ 17 ಹಾಗೂ 18ವರೆಗೆ ಈ ಎರಡು ದಿನಗಳಲ್ಲಿ ಸಾಕಷ್ಟು ಸಿನಿಮಾಗಳು, ವೆಬ್‌ ಸಿರೀಸ್‌ಗಳು ರಿಲೀಸ್ ಆಗಿವೆ. ಮನೆಯಲ್ಲೇ ಕೂತು ಇವುಗಳನ್ನೆಲ್ಲಾ ನೋಡಬಹುದುದಾಗಿದೆ. ಹಾಗಿದ್ದರೆ, ಯಾವ್ಯಾವ ಒಟಿಟಿಯಲ್ಲಿ ಯಾವ್ಯಾವ ಸಿನಿಮಾ, ವೆಬ್ ಸಿರೀಸ್ ರಿಲೀಸ್ ಆಗುತ್ತಿದೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಫ್ಯಾಮಿಲಿ ಫ್ಯಾಕ್'

'ಫ್ಯಾಮಿಲಿ ಫ್ಯಾಕ್'

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಸಿನಿಮಾ 'ಫ್ಯಾಮಿಲಿ ಫ್ಯಾಕ್'. ಹೆಸರೇ ಹೇಳುವಂತೆ ಇದೊಂದು ಕೌಟುಂಬಿಕ ಸಿನಿಮಾ. ಒಂದಿಷ್ಟು ಮನರಂಜನೆ, ಆಗಾಗ ಎಮೋಷನ್ಸ್, ಅಲ್ಲಿ ಚಿಕ್ಕ ಪುಟ್ಟ ಟ್ವಿಸ್ಟ್‌ಗಳು ಸಿನಿಮಾದ ಹೈಲೈಟ್. ಲಿಖಿತ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ ಹೀರೊ-ಹೀರೋಯಿನ್ ಆಗಿದ್ದರೆ, ಅಚ್ಯುತ್ ರಾವ್ ಹಾಗೂ ರಂಗಾಯಣ ರಘು ಪಾತ್ರಗಳು ಈ ಸಿನಿಮಾದ ಹೈಲೈಟ್. ಇದು ಫೆಬ್ರವರಿ 17ಕ್ಕೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ.

'ದೃಶ್ಯ 2'

'ದೃಶ್ಯ 2'

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಿನಿಮಾ 'ದೃಶ್ಯ 2' ಒಟಿಟಿಗೆ ಎಂಟ್ರಿಕೊಟ್ಟಿದೆ. ಫೆಬ್ರವರಿ 18 ರಿಂದ ಜೀ 5ನಲ್ಲಿ 'ದೃಶ್ಯ 2' ಬಿಡುಗಡೆಯಾಗಿದೆ. ಇದು ಮೋಹನ್ ಲಾಲ್ ನಟಿಸಿದ ಮಲಯಾಳಂ ಸಿನಿಮಾ 'ದೃಶ್ಯಂ 2' ರಿಮೇಕ್. ಕನ್ನಡದಲ್ಲಿ 'ದೃಶ್ಯ' ಹಿಟ್ ಆಗಿತ್ತು. ಹೀಗಾಗಿ 'ದೃಶ್ಯಂ 2' ಅನ್ನು ಕನ್ನಡಕ್ಕೆ ತರಲಾಗಿತ್ತು.

'ಎ ಥರ್ಸ್‌ಡೇ'

'ಎ ಥರ್ಸ್‌ಡೇ'

'ಎ ಥರ್ಸ್‌ಡೇ' ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 17ರಂದು ಬಿಡುಗಡೆಯಾಗಿದೆ. 16 ಪುಟ್ಟ ಮಕ್ಕಳು ಬಂಧಿಯಾಗಿಟ್ಟುಕೊಳ್ಳುವ ಶಿಕ್ಷಕಿ ಪೊಲೀಸರ ಮುಂದೆ ಸಾಲು ಸಾಲು ಡಿಮ್ಯಾಂಡ್‌ಗಳನ್ನು ಇಡುತ್ತಾಳೆ. ಇದು ಮುಂಬೈ ಪೊಲೀಸ್ ಹಾಗೂ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತೆ. ಯಾಮಿ ಗೌತಮ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಹಜಾದ್ ಕಂಬಾಟ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

 'ಬೆಸ್ಟ್ ಸೆಲ್ಲರ್'

'ಬೆಸ್ಟ್ ಸೆಲ್ಲರ್'

ಈ ವಾರ ಅಮೆಜಾನ್ ಪ್ರೈಮ್‌ನಲ್ಲಿ ಹೊಸ ವೆಬ್ ಸಿರೀಸ್ ರಿಲೀಸ್ ಆಗಿದೆ. ಅದುವೇ 'ಬೆಸ್ಟ್ ಸೆಲ್ಲರ್'. ಶ್ರುತಿ ಹಾಸನ್ 'ಬೆಸ್ಟ್ ಸೆಲ್ಲರ್' ಮೂಲಕ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಶ್ರುತಿ ಜೊತೆ ಮಿಥುನ್ ಚಕ್ರವರ್ತಿ, ಅರ್ಜುನ್ ಬಾಜ್ವಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 18ರಂದು ವೆಬ್ ಸಿರೀಸ್ ರಿಲೀಸ್ ಆಗಿದೆ.

'ಹೃದಯಂ'

'ಹೃದಯಂ'

ಈ ವರ್ಷ ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚಉ ಸೌಂಡ್ ಮಾಡಿದ ಸಿನಿಮಾ 'ಹೃದಯಂ'. ಮೋಹನ್ ಲಾಲ್ ಪುತ್ರ ಪ್ರನವ್ ಮೋಹನ್ ಲಾಲ್ ಕರಿಯರ್‌ಗೆ ಮೊದಲ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಸಿನಿಮಾವಿದು. ವಿನೀತ್ ಶ್ರೀನಿವಾಸನ್ ನಿರ್ದೇಶಿಸಿದ ಈ ಸಿನಿಮಾ ಇದೂವರೆಗೂ 52 ಕೋಟಿ ಕಲೆ ಹಾಕಿದೆ. ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದ್ದರೂ, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 18ರಂದು ಬಿಡುಗಡೆಯಾಗಿದೆ.

'ಮೆಪ್ಪಡಿಯಾನ್'

'ಮೆಪ್ಪಡಿಯಾನ್'

ಮಲಯಾಳಂ ಸಿನಿಪ್ರಿಯರಿಗೆ ಮತ್ತೊಂದು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅದೇ 'ಮೆಪ್ಪಡಿಯಾನ್'. ಉನ್ನಿ ಮುಕುಂದನ್ ನಟಿಸಿ, ನಿರ್ಮಿಸಿರುವ ಈ ಸಿನಿಮಾಗೆ ಜನವರು 14ರಂದು ಬಿಡುಗಡೆಯಾಗಿದ್ದು, ಫೆಬ್ರವರಿ 18ರಿಂದ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ.

'ಮಿಥ್ಯ'

'ಮಿಥ್ಯ'

'ಮಿಥ್ಯ' ಹಿಂದಿ ವೆಬ್ ಸಿರೀಸ್ ಕೂಡ ಫೆಬ್ರವರಿ 18ರಂದು ರಿಲೀಸ್ ಆಗಿದೆ. ಹುಮಾ ಖರೇಶಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್ ನಟಿ ಭಾಗ್ಯಶ್ರೀ ಪುತ್ರಿ ಅವಂತಿಕಾ ದಸಾನಿ ಎಂಟ್ರಿಕೊಟ್ಟಿದ್ದಾರೆ. ರೋಹನ್ ಸಿಪ್ಪಿ ನಿರ್ದೇಶಿಸಿದ ಈ ವೆಬ್ ಸಿರೀಸ್ ಜೀ 5 ನಲ್ಲಿ ರಿಲೀಸ್ ಆಗಿದೆ.

ವಿಲಂಗು, ಎಮಿನಿ, ಇರೈ

ವಿಲಂಗು, ಎಮಿನಿ, ಇರೈ

ತಮಿಳಿನಲ್ಲಿ ಒಂದು ಸಿನಿಮಾ ಹಾಗೂ ಎರಡು ವೆಬ್ ಸಿರೀಸ್ ಈ ವೀಕೆಂಡ್‌ನಲ್ಲಿ ರಿಲೀಸ್ ಆಗಿದೆ. ಜೀ 5ನಲ್ಲಿ ವಿಲಂಗು ವೆಬ್ ಸಿರೀಸ್, ಸೋನಿ ಲೈವ್‌ನಲ್ಲಿ ಎನಿಮಿ ಹಾಗೂ ಆಹಾದಲ್ಲಿ ಇರೈ ಬಿಡುಗಡೆಯಾಗಿದೆ.

'ಬಂಗಾರ್‌ರಾಜು'

'ಬಂಗಾರ್‌ರಾಜು'

ನಾಗಾರ್ಜುನಾ ಹಾಗೂ ಪುತ್ರ ನಾಗಚೈತನ್ಯ ಅಭಿನಯದ 'ಬಂಗಾರ್‌ರಾಜು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್‌ಹಿಟ್ ಆಗಿದೆ. ಥಿಯೇಟರ್‌ ಜರ್ನಿ ಮುಗಿಸಿದ ಬಳಿಕ 'ಬಂಗಾರ್‌ರಾಜು' ಜೀ 5ನಲ್ಲಿ ರಿಲೀಸ್ ಆಗಿದೆ.

'83'

'83'

ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ '83' ಬಾಕ್ಸಾಫೀಸ್‌ನಲ್ಲಿ ನೆಲಕ್ಕಚ್ಚಿದ ಬಳಿಕ ಒಟಿಟಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಫೆಬ್ರವರಿ 18ರಂದು '83' ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ಹಾಗೂ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ.

More from Filmibeat

English summary
List of ott releases of the week in Amazon Prime, Netflix, Disney Hotstar, Zee5 and Aha. Including 2 Kannada movies there is Hindi, Telugu, Tamil, Malayalam and Bengali movies also releasing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X