"ವಿಜಯ್ ವರ್ಮಾ ಜೊತೆ ಚುಂಬಿಸುವುದಕ್ಕಿಂತ ಬೋಲ್ಡ್ ಸೀನ್ ಮಾಡಬಲ್ಲೆ": ತಮನ್ನಾ ಹೇಳಿಕೆ ನೆಟ್ಟಿಗರು ಶಾಕ್

ಥಿಯೇಟರ್‌ಗಳು ಓಟಿಟಿ ಪ್ಲಾಟ್‌ಫಾರ್ಮ್ ಜೊತೆ ಪೈಪೋಟಿಗೆ ಬಿದ್ದಿವೆ. ಸಿನಿಮಾ,ವೆಬ್ ಸೀರಿಸ್ ಅಂತ ತನ್ನತ್ತ ಆಕರ್ಷಣೆ ಮಾಡುತ್ತಿದೆ. ಇನ್ನೊಂದು ಕಂಟೆಂಟ್ ವಿಷಯದಲ್ಲೂ ಸ್ಪರ್ಧೆ ಮಾಡುತ್ತಿದೆ. ಇವೆಲ್ಲವುಗಳ ಜೊತೆ ಬೋಲ್ಡ್ ಕಂಟೆಂಟ್ ಅನ್ನೂ ಬಿಟ್ಟಿಲ್ಲ.

ಸುಮಾರು ಐದು ವರ್ಷಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ಬೋಲ್ಡ್ ಕಂಟೆಂಟ್ ಮೇಲೆ ಎಕ್ಸ್‌ಪೆರಿಮೆಂಟ್ ಮಾಡಲಾಗಿತ್ತು. ಅದುವೇ 'ಲವ್ ಸ್ಟೋರೀಸ್ 2'. ಓಟಿಟಿಯಲ್ಲಿ ಈ ನಾಲ್ಕು ಕಥೆಗಳ ಸಿನಿಮಾ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಪ್ರೀತಿ, ಪ್ರಯಣದಂತ ವಿಷಯಗಳನ್ನು ಮುಕ್ತವಾಗಿ ಚರ್ಚೆ ಮಾಡಲಾಗಿತ್ತು. ಆಗ 'ಲವ್‌ಸ್ಟೋರೀಸ್‌' ಪರ ಹಾಗೂ ವಿರೋಧ ಎರಡೂ ವ್ಯಕ್ತವಾಗಿತ್ತು.

Lust Stories 2: Tamannaah agrees she can do more than kissing scene with Vijay Varma

ಈಗ ಇದರ ಎರಡನೇ ಅತರಣಿಕೆ ರೆಡಿಯಾಗಿದೆ. 'ಲಸ್ಟ್ ಸ್ಟೋರೀಸ್' ನೋಡಿ ಮೆಚ್ಚಿಕೊಂಡವರಿಗೆ 'ಲಸ್ಟ್ ಸ್ಟೋರೀಸ್ 2' ಕಾತುರತೆಯನ್ನು ಹೆಚ್ಚಿಸಿರಬಹುದು. ಆದರೆ, ಇದರ ಜೊತೆ ಮತ್ತೊಂದು ಟ್ರ್ಯಾಕ್‌ನಲ್ಲಿ ತಮನ್ನಾ ಹಾಗೂ ಆಕೆಯ ಬಾಯ್‌ಫ್ರೆಂಡ್ ವಿಜಯ್ ವರ್ಮಾ (ಈ ಸಿನಿಮಾದಲ್ಲಿ ನಟಿಸಿದ್ದಾರೆ) ಬಗ್ಗೆನೂ ಚರ್ಚೆಯಾಗುತ್ತಿದೆ. ಕಿಸ್ಸಿಂಗ್ ಸೀನ್ ಅಷ್ಟೇ ಅಲ್ಲ.. ಬೇರೆ ಸೀನ್‌ಗಳಲ್ಲೂ ನಟಿಸಬಲ್ಲೆ ಅಂತ ತಮನ್ನಾ ಮುಕ್ತಾವಾಗಿ ಮಾತಾಡಿದ್ದಾರೆ. ಹಾಗಿದ್ರೆ, ತಮನ್ನಾ ಮಾತಿನ ಅರ್ಥವೇನು?

'ಲಸ್ಟ್ ಸ್ಟೋರೀಸ್' ಜೊತೆ 'ಕಾಸ್ಟ್ ಸ್ಟೋರಿ'

ತಮನ್ನಾಳನ್ನು ಇಷ್ಟು ಬೋಲ್ಡ್ ಅವತಾರದಲ್ಲಿ ಇದೂವರೆಗೂ ಯಾರೂ ಕಂಡಿದ್ದೇ ಇಲ್ಲ. ಆದ್ರೀಗ ಕಿಸ್ಸಿಂಗ್ ಸೀನ್, ತೀರಾ ಬೋಲ್ಡ್ ಅನಿಸುವಂತಹ ಬೆಡ್‌ ರೂಂ ಸೀನ್‌ಗಳಲ್ಲೆಲ್ಲಾ ಕಾಣಿಸಿಕೊಂಡಿದ್ದಾರೆ.'ಲಸ್ಟ್ ಸ್ಟೋರೀಸ್-2' ಪ್ರಸಾರ ಮಾಡಲು ಸಜ್ಜಾಗಿರುವ ನೆಟ್‌ಫ್ಲಿಕ್ಸ್‌ 'ಕಾಸ್ಟ್ ಸ್ಟೋರಿ' (ಪ್ರಮೋಷನಲ್ ವಿಡಿಯೋ) ಹೊರಬಿಟ್ಟಿದೆ. ಇದರಲ್ಲಿ ತಮನ್ನಾ ಮುಕ್ತವಾಗಿ ಮಾತಾಡಿದ್ದಾರೆ.

ಈ ಪ್ರಮೋಷನ್ ವಿಡಿಯೋದಲ್ಲಿ ಮಿಲ್ಕಿ ಬ್ಯೂಟಿಯ ಬೋಲ್ಡ್ ಮಾತುಗಳು ನೆಟ್ಟಿಗರಿಗೆ ಚಮಕ್ ಕೊಟ್ಟಿದೆ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಬಗ್ಗೆ ತಮನ್ನಾ ಓಪನ್ ಆಗಿಯೇ ಮಾತಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ವಿಜಯ್ ವರ್ಮಾ ಬೋಲ್ಡ್ ಸೀನ್ ಮಾಡಬಲ್ಲೆ

ತಮನ್ನಾ ಹಾಗೂ ಬಾಯ್‌ಫ್ರೆಂಡ್ ವಿಜಯ್ ವರ್ಮಾ 'ಲಸ್ಟ್ ಸ್ಟೋರೀಸ್-2'ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ರೀಲ್‌ನಲ್ಲೂ ಪ್ರೇಮಿಗಳಾಗಿ ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ತಮನ್ನಾ ಓಪನ್ ಆಗಿ ಮಾತಾಡಿದ್ದು, "ಅವರೊಂದಿಗೆ ಕಿಸ್ಸಿಂಗ್ ಸೀನ್‌ಗಳಿಗೂ ಮಿಗಿಲಾದ ದೃಶ್ಯಗಳಲ್ಲಿ ನಟಿಸಬಲ್ಲೆ" ಎಂದು ಹೇಳಿದ್ದಾರೆ.

ತಮನ್ನಾ ಕೊಟ್ಟ ಈ ಬೋಲ್ಡ್ ಹೇಳಿಕೆಗಳನ್ನು ಕೇಳಿ ಆಕೆಯ ಫ್ಯಾನ್ಸ್ ಕಂಗಾಲಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಮನ್ನಾ ತಮ್ಮ ಲವ್ ಸ್ಟೋರಿಯನ್ನು ಬಹಿರಂಗ ಪಡಿಸಿದ್ದರು. ವಿಜಯ್ ವರ್ಮಾ ಜೊತೆ ಡೇಟಿಂಗ್ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದರು.

'ಲಸ್ಟ್ ಸ್ಟೋರೀಸ್-2' ಸಿಕ್ಕಾಪಟ್ಟೆ ಬೋಲ್ಡ್?

'ಲಸ್ಟ್ ಸ್ಟೋರೀಸ್'ಗೆ ಹೋಲಿಸಿದ 'ಲಸ್ಟ್ ಸ್ಟೋರೀಸ್-2' ಅಷ್ಟೊಂದು ಬೋಲ್ಡ್ ಇಲ್ಲ ಅಂತ ಅನಿಸುತ್ತಿದೆ. ಆದರೆ, ನೀನಾ ಗುಪ್ತಾ ಡೈಲಾಗ್‌ಗಳು ತಮನ್ನಾ ಹಾಗೂ ವಿಜಯ್ ವರ್ಮಾ ಕ್ಯಾರೆಕ್ಟರ್‌ಗಳು ಬೋಲ್ಡ್ ಆಗಿವೆ ಅನ್ನೋ ಸುಳಿವು ಸಿಕ್ಕಿದೆ. ಜೊತೆ ಮೃಣಾಲ್ ಠಾಕೂರ್, ಕಾಜೋಲ್ ಅಂತ ನಟಿಯರು ಹೇಗೆ ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲವಿದೆ.

'ಲಸ್ಟ್ ಸ್ಟೋರೀಸ್-2' ಇದೇ ಜೂನ್ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದೂ ಕೂಡ ನಾಲ್ಕು ಕಥೆಗಳ ಸಿನಿಮಾ. ಸುಜೋಯ್ ಘೋಷ್, ಆರ್.ಬಾಲ್ಕಿ, ನಟಿ ಕೊಂಕಣ್ ಸೇನ್ ಶರ್ಮಾ ಮತ್ತು ಅಮಿತ್ ರವೀಂದ್ರನಾಥ್ ಶರ್ಮಾ ಡೈರೆಕ್ಟ್ ಮಾಡಿದ್ದಾರೆ.

More from Filmibeat

English summary
After Lust Stories 2 trailer Tamannaah and Vijay Varma love story discussion is going on. Mean while Tamannaah agrees do more than kissing scene with Vijay Varma, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X