ಸೆಪ್ಟೆಂಬರ್ 19ರಂದು ಓಟಿಟಿ-ಥಿಯೇಟರ್‌ ಲಗ್ಗೆ ಇಡುತ್ತಿರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ

ಕನ್ನಡ ಚಿತ್ರರಂಗದಲ್ಲಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ ಚಾಪ್ಟರ್ 1' ರಿಲೀಸ್‌ಗೆ ವೇದಿಕೆ ರೆಡಿಯಾಗುತ್ತಿದೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಕನ್ನಡದಲ್ಲಿ ಕೆಲವು ಸಿನಿಮಾಗಳು ಓಟಿಟಿ ಹಾಗೂ ಥಿಯೇಟರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇವುಗಳಲ್ಲಿ ಕೆಲವು ಸಿನಿಮಾಗಳು ಗಮನ ಸೆಳೆಯುತ್ತಿವೆ. ಸೆಂಟಿಮೆಂಟ್, ಥಿಲ್ಲರ್‌ಗಳು ಈ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಈ ವರ್ಷದ ಮೊದಲ ಹಿಟ್ ಸಿನಿಮಾ ಕೂಡ ಇದೇ ವಾರ ಬಿಡುಗಡೆಯಾಗುತ್ತಿದೆ. ಮಾತೊಂದು ಹೇಳುವೆ, ರಾಜವರ್ಧನ್ ಹಾಗೂ ಸಂಗೀತಾ ಭಟ್ ನಟಿಸಿರುವ 'ಕಮಲ ಶ್ರೀದೇವಿ' ನಟಿಸಿರುವ ಸಿನಿಮಾ ರಿಲೀಸ್ ಆಗುತ್ತಿವೆ. ಯಾವ್ಯಾವ ಓಟಿಟಿಯಲ್ಲಿ ಯಾವ್ಯಾವ ಸಿನಿಮಾ ರಿಲೀಸ್ ಆಗುತ್ತಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

Maadeva to Kamal Sridevi Kannada Films releasing on ott and theatre on September 19th 2025

'ಮಾದೇವ' ಓಟಿಟಿ ರಿಲೀಸ್

ಈ ವರ್ಷ ಕನ್ನಡ ಚಿತ್ರರಂಗದ ಮೊದಲ ಹಿಟ್ ಸಿನಿಮಾ 'ಮಾದೇವ'. ವಿನೋದ್ ಪ್ರಭಾಕರ್, ಸೋನಾಲ್ ಮಾಂಟೇಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಸೆಪ್ಟೆಂಬರ್ 19ರಂದು ಓಟಿಟಿಗೆ ಲಗ್ಗೆ ಇಡುತ್ತಿದೆ. ಈ ಸಿನಿಮಾ ಆಗಸ್ಟ್ ತಿಂಗಳಿನಲ್ಲಿಯೇ ಓಟಿಟಿಗೆ ಲಗ್ಗೆ ಇಡಬೇಕಿತ್ತು. ಆದರೆ, ಅಂದುಕೊಂಡ ಡೇಟ್‌ಗೆ ಆಗಿಲ್ಲ. ಹೀಗಾಗಿ 'ಸಿನಿ ಬಜಾರ್' ಓಟಿಟಿ ವೇದಿಕೆಯಲ್ಲಿ 'ಮಾದೇವ' ರಿಲೀಸ್ ಆಗಲಿದೆ.

ಮಾತೊಂದ ಹೇಳುವೆ

'ಮಾತೊಂದು ಹೇಳುವೆ' ಇದೊಂದು ಹಾರ್ಟ್ ಟಚಿಂಗ್ ಲವ್ ಸ್ಟೋರಿ. ಆರ್‌ಜೆ ಆಗಿದ್ದ ಮಯೂರ್ ಉತ್ತರ ಕರ್ನಾಟಕದಲ್ಲಿ ಹುಟ್ಟಿಕೊಳ್ಳುವ ಲವ್‌ ಸ್ಟೋರಿಯನ್ನು ತೆರೆಮೇಲೆ ತಂದಿದ್ದಾರೆ. ಈ ಸಿನಿಮಾ ಮಯೂರ್ ಆರ್‌ಜೆಯಾಗಿ, ಬಳಿಕ ಡೇಟಿಂಗ್ ಅಡ್ವೈಸರ್ ಆಗಿ ನಟಿಸಿದ್ದಾರೆ. ಒಮ್ಮೆ ಮೈಸೂರಿನ ಯುವತಿ ಖುಷಿಯನ್ನು ಭೇಟಿ ಮಾಡಿ, ಆಕೆಯ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಆಕೆ ಇದ್ದಕ್ಕಿಂತ ಕಾಣೆಯಾಗುತ್ತಾಳೆ. ಅವಳನ್ನು ಹುಡುಕಿಕೊಂಡು ಹೋಗುವುದೇ ಸಿನಿಮಾ. ಇದು ಸನ್‌ ನೆಕ್ಸ್ಟ್‌ನಲ್ಲಿ ಸೆಪ್ಟೆಂಬರ್ 19ರಿಂದ ಸ್ಟ್ರೀಮಿಂಗ್ ಆಗಲಿದೆ.

Maadeva to Kamal Sridevi Kannada Films releasing on ott and theatre on September 19th 2025

'ಕಮಲ್ ಶ್ರಿದೇವಿ'

ಇನ್ನು ಈ ವಾರ ಚಿತ್ರಮಂದಿರಲ್ಲಿ 'ಕಮಲ್ ಶ್ರೀದೇವಿ' ಸಿನಿಮಾವನ್ನು ನೋಡಬಹುದು. ಸಚಿನ್ ಚೆಲುವರಾಯ ಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ, ಮಿತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀದೇವಿ ಎಂಬ ಯುವ ಮರ್ಡರ್ ಮಿಸ್ಟರಿಯನ್ನು ಭೇದಿಸುವ ಸಿನಿಮಾವಿದು. 7 ಪ್ರಮುಖ ಪಾತ್ರಗಳನ್ನು ಇಟ್ಕೊಂಡು ಈ ಕತೆಯನ್ನು ಹೆಣೆಯಲಾಗಿದೆ. ಪ್ರತಿಯೊಂದು ಪಾತ್ರವೂ ಆಗಾಗ ಬೇರೆ ಬೇರೆ ಟ್ವಿಸ್ಟ್ ಅನ್ನು ನೀಡುತ್ತಾ ಹೋಗುತ್ತೆ. ಇದು ಸೆಪ್ಟೆಂಬರ್ 19ರಂದು ರಿಲೀಸ್ ಆಗುತ್ತಿದೆ.

ರೂಮ್ ನಂ 111

ಧರ್ಮ ಕೀರ್ತಿರಾಜ್, ಅಪೂರ್ವ, ಗರಿಮಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ರೂಮ್ ನಂ 111'. ಈ ಸಿನಿಮಾ ಸೆಪ್ಟೆಂಬರ್ 19ರಂದು ರಿಲೀಸ್ ಆಗುತ್ತಿದೆ. ಕಾರ್ತಿಕ್, ದಿವ್ಯಾ ಹಾಗೂ ಅವರ ಮಗು ಸಿನಿಮಾದ ಪ್ರಮುಖ ಪಾತ್ರಗಳು. ಒಂದು ಅಪಘಾತದಲ್ಲಿ ಕಾರ್ತಿಕ್ ಹಾಗೂ ಮಗು ಸಾವನ್ನಪ್ಪುತ್ತಾರೆ. ಆದರೆ, ಆಕ್ಸಿಡೆಂಡ್ ಅಷ್ಟೇ ಅಲ್ಲ ಅನ್ನೋದನ್ನು ಅರಿತ ದಿವ್ಯಾ ರಹಸ್ಯವನ್ನು ಭೇದಿಸುವುದಕ್ಕೆ ಹೊರಡುತ್ತಾಳೆ. ಇದು ಸಿನಿಮಾ ಒಂದೆಳೆ ಕಥೆ.

More from Filmibeat

English summary
Maadeva to Kamal Sridevi Kannada Films releasing on ott and theatre on September 19th 2025
Read more about: kannada movies sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X