ಥಿಯೇಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ.. ಓಟಿಟಿ ಸಿಕ್ಕಾಪಟ್ಟೆ ಖಾರ; 'ಗುಂಟೂರು ಖಾರಂ'ಗೆ ದಾಖಲೆ ರೆಸ್ಪಾನ್ಸ್!
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಹೇಳಿದ್ದರೂ, ತೆಲುಗು ಪ್ರೇಕ್ಷಕರಿಗೆ ಈ ಸಿನಿಮಾ ಯಾಕೋ ಇಷ್ಟ ಆಗಿರಲಿಲ್ಲ. ಮೊದಲ ದಿನವೇ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ವಿಶ್ವದಾದ್ಯಂತ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದ 'ಗುಂಟೂರು ಖಾರಂ' ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಜಾದು ಮಾಡಿಲ್ಲ. ಹೀಗಾಗಿ ಅಂದ್ಕೊಂಡಿದ್ದಕ್ಕಿಂತ ಈ ಸಿನಿಮಾ ಬೇಗನೇ ಓಟಿಟಿಗೆ ಲಗ್ಗೆ ಇಟ್ಟಿತ್ತು. ಥಿಯೇಟರ್‌ನಲ್ಲಿಯೇ ಗೆಲ್ಲದ ಸಿನಿಮಾ ಓಟಿಟಿಯಲ್ಲೂ ಮಿಶ್ರ ಪ್ರತಿಕ್ರಿಯೆ ಸಿಗುತ್ತೆ ಅಂತಲೇ ಕೆಲವಯ ಭವಿಷ್ಯ ನುಡಿದಿದ್ದರು.

ಆದರೆ, 'ಗುಂಟೂರು ಖಾರಂ' ಓಟಿಟಿಗೆ ಲಗ್ಗೆ ಇಡುತ್ತಿದ್ದಂತೆ ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಫೆಬ್ರವರಿ 9 ರಂದು ಈ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿತ್ತು. ಅಲ್ಲಿಂದ ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಟಾಪ್ 10 ಸ್ಥಾನದಲ್ಲಿದೆ. ಹಾಗಿದ್ರೆ, 'ಗುಂಟೂರು ಖಾರಂ'ಗೆ ಓಟಿಟಿಯಲ್ಲಿ ರೆಸ್ಪಾನ್ಸ್ ಹೇಗಿದೆ? ಎಷ್ಟು ವೀವ್ಸ್ ಸಿಕ್ಕಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ' ವಿಶ್ವ ಮಟ್ಟದಲ್ಲಿ 6ನೇ ಸ್ಥಾನದಲ್ಲಿದೆ. ಇದೂವರೆಗೂ ಸುಮಾರು 5.3 ಮಿಲಿಯನ್ ಗಂಟೆಗಳ ಕಾಲ ಸಿನಿಮಾ ವೀಕ್ಷಣೆ ಕಂಡಿದೆ. ಹಾಗೇ ಎರಡು ಮಿಲಿಯನ್ ವೀವ್ಸ್ ಸಿಕ್ಕಿದೆ. ವಿಶೇಷ ಅಂದರೆ, ಹಿಂದಿ ಆಡಿಯನ್ಸ್‌ಗೆ 'ಗುಂಟೂರು ಖಾರಂ' ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ತೆಲುಗು ಭಾಷೆಯಲ್ಲಷ್ಟೇ ಅಲ್ಲ, ಹಿಂದಿ ಭಾಷೆಯಲ್ಲೂ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ.
'ಗುಂಟೂರು ಖಾರಂ' ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ 10ನೇ ಸ್ಥಾನದಲ್ಲಿತ್ತು. ಕೇವಲ ಹಿಂದಿ ವರ್ಷನ್ ಅನ್ನು 2.8 ಮಿಲಿಯನ್ ಗಂಟೆಗಳಿಗೂ ಅಧಿಕ ವೀಕ್ಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ 'ಗುಂಟೂರು ಖಾರಂ' ಹಿಂದಿ ವರ್ಷನ್‌ಗೆ 1.1 ಮಿಲಿಯನ್ ವೀವ್ಸ್ ಬಂದಿದೆ. ಈ ಮೂಲಕ ಉತ್ತರ ಭಾರತದ ಮಂದಿಗೆ 'ಗುಂಟೂರು ಖಾರಂ' ಸಿಕ್ಕಾಪಟ್ಟೆ ಇಷ್ಟ ಆಗಿದೆ ಅನ್ನೋದು ಈ ಮೂಲಕ ಸ್ಪಷ್ಟವಾಗಿದೆ.

ಮಹೇಶ್ ಬಾಬು 'ಗುಂಟೂರು ಖಾರಂ' ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿರಲಿಲ್ಲ. ಹೀಗಿದ್ದರೂ ಪರಭಾಷೆಗೆ ಡಬ್ ಮಾಡಿ ಓಟಿಟಿಯಲ್ಲಿ ರಿಲೀಸ್ ಮಾಡಲಾಗಿತ್ತು. ಹಿಂದಿ ವರ್ಷನ್‌ನಲ್ಲೂ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಆದರೆ, ಓಟಿಟಿಯಲ್ಲಿ ನಿರೀಕ್ಷೆಗಿಂತಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗೆ ತೆರೆಕಂಡಿದ್ದ 'ಹಾಯ್ ನಾನ್ನ' ಸಿನಿಮಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.
'ಗುಂಟೂರು ಖಾರಂ' ಬಳಿಕ ಮಹೇಶ್ ಬಾಬು ಹಾಗೂ ಎಸ್ ಎಸ್ ರಾಜಮೌಳಿ ಕಾಂಬಿನೇಷನ್ ಮೇಲೆ ಎಲ್ಲರ ನಿರೀಕ್ಷೆಯಿದೆ. ಇದು ವಿಶ್ವ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆಯಿದೆ. ಈ ಕಾಂಬಿನೇಷನ್ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವುದರಿಂದ 'ಗುಂಟೂರು ಖಾರಂ' ಸಿನಿಮಾ ಓಟಿಟಿಯಲ್ಲಿ ಹಿಂದಿ ಆಡಿಯನ್ಸ್ ಅನ್ನು ಸೆಳೆದಿದೆ ಎಂದು ಲೆಕ್ಕ ಹಾಕಲಾಗುತ್ತಿದೆ.


Click it and Unblock the Notifications











