ಬಿಡುಗಡೆಗೂ ಮುನ್ನವೇ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಅಮೆಜಾನ್‌ಗೆ ಸೇಲ್: ಯಾಕೀ ನಿರ್ಧಾರ?

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ ಮೇಲೆ ಎಲ್ಲರ ಕಣ್ಣು ಇಟ್ಟಿದ್ದರು. ಕೀರ್ತಿ ಸುರೇಶ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಸರ್ಕಾರು ವಾರಿ ಪಾಟ'
ದಕ್ಷಿಣ ಭಾರತದ ಬಹು ನಿರೀಕ್ಷೆಯ ಸಿನಿಮಾಗಳಲ್ಲೊಂದು. ಕಾಮಿಡಿ ಹಾಗೂ ಆಕ್ಷನ್ ಸ್ಟೋರಿ ಹೆಣೆದಿರುವ ನಿರ್ದೇಶಕ ಪರಶುರಾಮ್ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಸಜ್ಜಾಗಿ ನಿಂತಿದೆ. ಅಷ್ಟರಲ್ಲೇ ಒಟಿಟಿಗೆ ದೊಡ್ಡ ಮೊತ್ತಕ್ಕೆ ಮಾರಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮಹೇಶ್ ಬಾಬು ಫ್ಯಾನ್ಸ್ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಥಿಯೇಟರ್‌ನಲ್ಲಿ ಹಬ್ಬ ಮಾಡಬೇಕು ಅಂತ ಕಾದು ಕೂತಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಿ ಇರುವ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಬೇಕು ಅಂತ ಕಾದು ಕೂತಿದ್ದಾರೆ. ಅಷ್ಟರಲ್ಲೇ ನಿರ್ಮಾಣ ಸಂಸ್ಥೆ 'ಸರ್ಕಾರು ವಾರಿ ಪಾಟ' ಸಿನಿಮಾವನ್ನು ಒಟಿಟಿಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದೆ ಎನ್ನಲಾಗಿದೆ. ಇದು ಮಹೇಶ್ ಬಾಬು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.

 'ಸರ್ಕಾರು ವಾರಿ ಪಾಟ'? ಅಮೆಜಾನ್‌ಗೆ ಸೇಲ್

'ಸರ್ಕಾರು ವಾರಿ ಪಾಟ'? ಅಮೆಜಾನ್‌ಗೆ ಸೇಲ್

ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ'ಕ್ಕೆ ಒಟಿಟಿ ರಿಲೀಸ್‌ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ನಿರ್ಮಾಪಕರು ಸಿನಿಮಾವನ್ನು ಈಗಾಗಲೇ ದೊಡ್ಡ ಮೊತ್ತಕ್ಕೆ ಒಟಿಟಿಯಲ್ಲಿ ಸೇಲ್ ಮಾಡಲು ಡೀಲ್ ಮಾಡಿಕೊಂಡಿದ್ದಾರಂತೆ. ಬಾಲಿವುಡ್ ಲೈಫ್ ವರದಿ ಪ್ರಕಾರ, ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಅಮೆಜಾನ್ ಪ್ರೈಮ್‌ಗೆ ಮಾರಾಟ ಆಗಿದೆ. ಕೊರೊನಾ ಕಾಲದಲ್ಲಿ ಅತೀ ದೊಡ್ಡ ಮೊತ್ತಕ್ಕೆ ಸೇಲ್ ಆದ ತೆಲುಗು ಸಿನಿಮಾ ಎಂದು ಹೇಳಲಾಗಿದೆ. ಹೀಗಾಗಿ ಮಹೇಶ್ ಬಾಬು ಸಿನಿಮಾ ಇದೇ ಮೊದಲ ಬಾರಿಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಾ? ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

 ಸಿನಿಮಾ ಥಿಯೇಟರ್‌ನಲ್ಲೂ ರಿಲೀಸ್

ಸಿನಿಮಾ ಥಿಯೇಟರ್‌ನಲ್ಲೂ ರಿಲೀಸ್

ಅಮೆಜಾನ್ ಪ್ರೈಮ್‌ಗೆ 'ಸರ್ಕಾರು ವಾರಿ ಪಾಟ' ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಸೇಲ್ ಮಾಡಿದ್ದರಿಂದ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದಿಲ್ಲವಾ? ಅನ್ನುವ ಪ್ರಶ್ನೆ ಎದ್ದಿದೆ. ಮಹೇಶ್ ಬಾಬು ಸಿನಿಮಾ ಥಿಯೇಟರ್‌ಗಳಲ್ಲೂ ಬಿಡುಗಡೆಯಾಗಲಿದೆ. ಆದರೆ, ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುವುದಿಲ್ಲ ಎನ್ನಲಾಗಿದೆ. ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದರಿಂದ ಬೇಗ ಒಟಿಟಿಯಲ್ಲಿ ನೋಡುವುದಕ್ಕೆ ಸಿಗುತ್ತೆ ಎನ್ನಲಾಗಿದೆ. ಇದರಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರಾ? ಅನ್ನುವುದು ಫ್ಯಾನ್ಸ್ ಆತಂಕ.

 'ಸರ್ಕಾರು ವಾರಿ ಪಾಟ' ರಿಲೀಸ್ ಯಾವಾಗ?

'ಸರ್ಕಾರು ವಾರಿ ಪಾಟ' ರಿಲೀಸ್ ಯಾವಾಗ?

ಈಗಾಗಲೇ ಮಹೇಶ್ ಬಾಬು ಪ್ರೊಡಕ್ಷನ್ ಹೌಸ್, ಜಿಎಂಬಿ ಎಂಟರ್‌ಟೈನ್ಮೆಂಟ್ ಸಂಸ್ಥೆ 'ಸರ್ಕಾರು ವಾರಿ ಪಾಟ' ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಶ್ವದಾದ್ಯಂತ ಮೇ 12 ರಂದು 'ಸರ್ಕಾರು ವಾರಿ ಪಾಟ' ಬಿಡುಗಡೆಯಾಗಲಿದೆ ಎಂದು ಹೇಳಿದೆ. ಹೀಗಾಗಿ ಮಹೇಶ್ ಬಾಬು ಫ್ಯಾನ್ಸ್ ಹಾಗೂ ತೆಲುಗು ಪ್ರೇಕ್ಷಕರು ಈ ಸಿನಿಮಾವನ್ನು ಥಿಯೇಟರ್‌ನಲ್ಲೂ ನೋಡಲು ಸಿದ್ದರಾಗಿದ್ದಾರೆ.

 ಫೆ.14ಕ್ಕೆ ಮೆಲೋಡಿ ಸಾಂಗ್ ರಿಲೀಸ್

ಫೆ.14ಕ್ಕೆ ಮೆಲೋಡಿ ಸಾಂಗ್ ರಿಲೀಸ್

ಇವೆಲ್ಲ ಗೊಂದಲಗಳ ನಡುವೆಯೇ 'ಸರ್ಕಾರು ವಾರಿ ಪಾಟ' ಸಿನಿಮಾದ ಮೊದಲ ಹಾಡು ಬಿಡುಗಡೆಗೂ ಮುಹೂರ್ತ ಫಿಕ್ಸ್ ಆಗಿದೆ. ಮಹೇಶ್ ಬಾಬು ಸಿನಿಮಾದ ಮೊದಲ ಹಾಡನ್ನು ಫೆಬ್ರವರಿ 14ರಂದು ರಿಲೀಸ್ ಮಾಡಲಿದೆ. ಇದನ್ನು 'ಮೆಲೋಡಿ ಆಫ್ ದಿ ಇಯರ್' ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಹೀಗಾಗಿ ಸಿನಿಮಾಗಿಂತ ಮೊದಲು ಹಾಡುಗಳನ್ನು ಕಣ್ತುಂಬಿಕೊಳ್ಳಲು ಟಾಲಿವುಡ್ ಸೂಪರ್‌ಸ್ಟಾರ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

More from Filmibeat

English summary
Mahesh Babu Starrer Sarkaru Vaari Paata Sold To Prime Video for big Amount. Mahesh and Keerthy Suresh starrer is yet to release in theater, it is being said that already producer planning its OTT release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X